- Kannada News Photo gallery Cricket photos PCB doesn’t want the Pakistan team to win the World Cup said senior Pakistan cricketer
ವಿಶ್ವಕಪ್‌ನಲ್ಲಿ ಪಾಕಿಸ್ತಾನ ಸೋಲಬೇಕೆಂದು ಸ್ವತಃ ಪಾಕ್ ಮಂಡಳಿಯೇ ಬಯಸಿದೆ: ಮಾಜಿ ಆಟಗಾರನ ಶಾಕಿಂಗ್ ಹೇಳಿಕೆ
Pakistan, ICC Cricket World Cup 2023: ಭಾರತದಲ್ಲಿ ನಡೆಯುತ್ತಿರುವ ಐಸಿಸಿ ಪುರುಷರ ಏಕದಿನ ವಿಶ್ವಕಪ್ 2023 ರಲ್ಲಿ ಪಾಕಿಸ್ತಾನ ತಂಡವು ಕಳಪೆ ಪ್ರದರ್ಶನ ನೀಡಿ ಸೋಲುಬೇಕೆಂದು ಸ್ವತಃ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಬಯಸಿದೆ ಎಂದು ಪಾಕಿಸ್ತಾನದ ಹಿರಿಯ ಪುರುಷರ ಕ್ರಿಕೆಟ್ ತಂಡದ ಆಟಗಾರರೊಬ್ಬರು ಹೇಳಿಕೆ ನೀಡಿದ್ದಾರೆ.
Updated on: Oct 31, 2023 | 12:40 PM

ಐಸಿಸಿ ಏಕದಿನ ವಿಶ್ವಕಪ್-2023 ರಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡ ತೀರಾ ಕಳಪೆ ಪ್ರದರ್ಶನ ತೋರುತ್ತಿದೆ. ಇದರಿಂದ ಪಾಕ್ ತಂಡ ಸಾಕಷ್ಟು ಟೀಕೆಗಳಿಗೆ ಒಳಗಾಗಿದೆ. ಇದರ ನಡುವೆಯೇ ಪಾಕಿಸ್ತಾನದ ಮುಖ್ಯ ಆಯ್ಕೆಗಾರ ಇಂಜಮಾಮ್ ಉಲ್ ಹಕ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಈ ಬಾರಿಯ ವಿಶ್ವಕಪ್‌ನಲ್ಲಿ ಬಾಬರ್ ಅಝಂ ತಂಡದ ಪ್ರದರ್ಶನ ತೀರಾ ಕಳಪೆಯಾಗಿತ್ತು. 6 ಪಂದ್ಯಗಳನ್ನು ಆಡಿರುವ ತಂಡ ಕೇವಲ 2 ಪಂದ್ಯಗಳನ್ನು ಗೆದ್ದಿದೆ. ಕಳೆದ 4 ಪಂದ್ಯಗಳಲ್ಲಿ ಸೋತಿದ್ದಾರೆ. ಪಾಕ್ ತಂಡ ಮಂಗಳವಾರ ಬಾಂಗ್ಲಾದೇಶದೊಂದಿಗೆ ಪಂದ್ಯವನ್ನು ಆಡಲಿದೆ. ಈ ಪಂದ್ಯದಲ್ಲಿ ಸೋತರೆ ಸೆಮಿಫೈನಲ್ ರೇಸ್‌ನಿಂದ ಹೊರಗುಳಿಯಲಿದ್ದಾರೆ.

ಇವೆಲ್ಲದರ ನಡುವೆ ಮತ್ತೊಂದು ಶಾಕಿಂಗ್ ಸುದ್ದಿ ಹೊರಬಿದ್ದಿದೆ. ಭಾರತದಲ್ಲಿ ನಡೆಯುತ್ತಿರುವ ಐಸಿಸಿ ಪುರುಷರ ಏಕದಿನ ವಿಶ್ವಕಪ್ 2023 ರಲ್ಲಿ ಪಾಕಿಸ್ತಾನ ತಂಡವು ಕಳಪೆ ಪ್ರದರ್ಶನ ನೀಡಿ ಸೋಲುಬೇಕೆಂದು ಸ್ವತಃ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಬಯಸಿದೆ ಎಂದು ಪಾಕಿಸ್ತಾನದ ಹಿರಿಯ ಪುರುಷರ ಕ್ರಿಕೆಟ್ ತಂಡದ ಆಟಗಾರರೊಬ್ಬರು ಹೇಳಿಕೆ ನೀಡಿದ್ದಾರೆ.

ತನ್ನ ಗುರುತನ್ನು ಬಹಿರಂಗಪಡಿಸದ ಕ್ರಿಕೆಟಿಗ, ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ತನ್ನದೇ ಆದ ರಾಜಕೀಯದಲ್ಲಿ ನಿರತವಾಗಿದೆ. ವಿಶ್ವಕಪ್‌ನಲ್ಲಿ ಪಾಕ್ ವಿಫಲವಾಗಬೇಕೆಂದು ಬಯಸುತ್ತಿದೆ ಎಂದು ಕ್ರಿಕ್‌ಬಜ್‌ಗೆ ತಿಳಿಸಿದ್ದಾರೆ.

ಹೀಗೆ ಆದರೆ ಮುಂದೆ ಪಿಸಿಬಿ ತಮ್ಮ ಇಚ್ಛೆಗೆ ಅನುಗುಣವಾಗಿ ಬದಲಾವಣೆಗಳನ್ನು ಮಾಡಬಹುದು ಮತ್ತು ನಿಯಂತ್ರಣವನ್ನು ಪಡೆದುಕೊಳ್ಳುತ್ತಾರೆ. ಯಾರು ತಂಡವನ್ನು ಮುನ್ನಡೆಸಬೇಕು ಮತ್ತು ತಂಡದಲ್ಲಿ ಯಾರಿಗೆ ಸ್ಥಾನವನ್ನು ನೀಡಬೇಕು ಎಂಬ ನಿರ್ಧಾರ ಅವರದ್ದೇ ಆಗಿರುತ್ತದೆ ಎಂದು ಹೇಳಿದ್ದಾರೆ.

ಏಷ್ಯಾಕಪ್ 2023 ರಲ್ಲಿ ಪಾಕಿಸ್ತಾನ ಕಳಪೆ ಪ್ರದರ್ಶನ ನೀಡಿದ ನಂತರ ಡ್ರೆಸ್ಸಿಂಗ್ ರೂಮ್‌ನಲ್ಲಿ ಆಟಗಾರರ ನಡುವಿನ ಜಗಳದ ಉದಾಹರಣೆಯನ್ನು ಉಲ್ಲೇಖಿಸಿದ ಅವರು, ಈರೀತಿಯ ಕೆಟ್ಟ ವಾತಾವರಣವನ್ನು ಸೃಷ್ಟಿಸಲು ಮಂಡಳಿಯು ಡ್ರೆಸ್ಸಿಂಗ್ ರೂಮ್ ಟಾಕ್ ಅನ್ನು ಸಾರ್ವಜನಿಕವಾಗಿ ಸೋರಿಕೆ ಮಾಡಿದೆ ಎಂದು ಆರೋಪಿಸಿದರು.

ಇತ್ತೀಚೆಗೆ, ಮಾಜಿ ನಾಯಕ ರಶೀದ್ ಲತೀಫ್ ಅವರು ಪಿಸಿಬಿ ಮುಖ್ಯಸ್ಥ ಝಾಕಾ ಅಶ್ರಫ್ ಅವರು ಬಾಬರ್ ಅಜಮ್ ಅವರ ಕರೆಗಳನ್ನು ಮತ್ತು ಸಂದೇಶಗಳಿಗೆ ಪ್ರತಿಕ್ರಿಯಿಸುತ್ತಿಲ್ಲ ಎಂಬ ಸುದ್ದಿ ಹರಿದಾಡಿತು. ಜೊತೆಗೆ ಪಾಕಿಸ್ತಾನದ ನಾಯಕನ ವಾಟ್ಸ್ಆ್ಯಪ್ ಚಾಟ್ ಸೋರಿಕೆಯಾಗಿತ್ತು. ಈ ಎಲ್ಲ ಬೆಳವಣಿಗೆಯ ಬೆನ್ನಲ್ಲೇ ಮುಖ್ಯ ಆಯ್ಕೆಗಾರ ಇಂಜಮಾಮ್-ಉಲ್-ಹಕ್ ಅವರು ತಮ್ಮ ಹುದ್ದೆಯಿಂದ ಕೆಳಗಿಳಿದಿದ್ದಾರೆ.



















