ಒಂದೇ ಓವರ್‌ನಲ್ಲಿ ಅಂದರೆ ಆರು ಎಸೆತಗಳಲ್ಲಿ ಆರು ಸಿಕ್ಸರ್ (6 Six) ಬಾರಿಸುವುದು ಸುಲಭದ ಮಾತಲ್ಲ. ಕ್ರಿಕೆಟ್ ಲೋಕದಲ್ಲಿ ಈ ರೀತಿಯ ದಾಖಲೆ ಸೃಷ್ಟಿಸಿಯಾಗಿರುವುದು ತೀರಾ ಕಡಿಮೆ, ಅಂತರರಾಷ್ಟ್ರೀಮ ಮಟ್ಟದಲ್ಲಿ ಹರ್ಷಲ್ ಗಿಬ್ಸ್, ಯುವರಾಜ್ ಸಿಂಗ್, ಕೀರೊನ್ ಪೊಲಾರ್ಡ್ಸ್ ಈ ಸಾಧನೆ ಮಾಡಿದ್ದಾರಷ್ಟೆ. ಒಟ್ಟಾರೆಯಾಗಿ ಕ್ರಿಕೆಟ್ ಜಗತ್ತಿನಲ್ಲಿ ಆರು ಬಾಲ್ಗೆ ಆರು ಸಿಕ್ಸರ್ ಬಾರಿಸಿದ ಆಟಗಾರರು ಬೆರಳಣಿಕೆಯಷ್ಟು ಮಾತ್ರ. ಆದರೆ, 15 ವರ್ಷದ ಬಾಲಕ ಈ ರೀತಿಯ ಸಾಧನೆ ಮಾಡಿ ಇದೀಗ ಇಡೀ ಕ್ರಿಕೆಟ್ ಲೋಕಕ್ಕೆ ಅಚ್ಚರಿ ಮೂಡಿಸಿದ್ದಾನೆ. ಹೌದು, ಪುದುಚೇರಿಯಲ್ಲಿ ಸಾಗುತ್ತಿರುವ ಪುದುಚೇರಿ ಟಿ10 ಲೀಗ್ (Pondicherry T10 Tournament) ಕೂಟದಲ್ಲಿ ಪ್ಯಾಟ್ರಿಯಟ್ಸ್ ತಂಡದ ಕೃಷ್ಣ ಪಾಂಡೆ (Krishna Pandey) ಓವರೊಂದರಲ್ಲಿ ಆರು ಸಿಕ್ಸರ್ ಬಾರಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ವೈರಲ್ ಆಗುತ್ತಿದೆ.
ಪುದುಚೇರಿ ಸೀಚೆಮ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ರಾಯಲ್ಸ್ ತಂಡ 10 ಓವರ್‌ಗಳಲ್ಲಿ ಮೂರು ವಿಕೆಟಿಗೆ 157 ರನ್ ಗಳಿಸಿತ್ತು. ಇದಕ್ಕುತ್ತರವಾಗಿ ಬ್ಯಾಟಿಂಗ್ ಮಾಡಿದ ಪ್ಯಾಟ್ರಿಯಟ್ಸ್ ತಂಡ ಸೋಲು ಕಂಡಿತಾದರೂ ಕೃಷ್ಣ ಪಾಂಡೆ ಅವರ ಸ್ಫೋಟಕ ಆಟ ಎಲ್ಲರ ಗಮನ ಸೆಳೆಯಿತು. ಪೇಟ್ರಿಯಾಟ್ಸ್ ಇನ್ನಿಂಗ್ಸ್ನ ಆರನೇ ಓವರ್ನ ನಿತೀಶ್ ಠಾಕುರ್ ಬೌಲಿಂಗ್ನಲ್ಲಿ ಕೃಷ್ಣ ಆರು ಎಸೆತಗಳಲ್ಲಿ ಸತತ ಆರು ಸಿಕ್ಸರ್ ಸಿಡಿಸಿದರು ನೂತನ ದಾಖಲೆ ಬರೆದರು.
6️⃣6️⃣6️⃣6️⃣6️⃣6️⃣
He has done the unthinkable! #KrishnaPandey shows what’s possible with his heart-stirring hits!
Watch the Pondicherry T10 Highlights, exclusively on #FanCode ? https://t.co/GMKvSZqfrR pic.twitter.com/jfafcU8qRW
— FanCode (@FanCode) June 4, 2022
ಪಾಂಡೆ ಕೇವಲ 19 ಎಸೆತಗಳಲ್ಲಿ 12 ಸಿಕ್ಸರ್ ಮತ್ತು 2 ಬೌಂಡರಿಗಳ ನೆರವಿನಿಂದ 83 ರನ್ ಗಳಿಸಿದರು. ಈ ಮೂಲಕ 15 ವರ್ಷದ ಕೃಷ್ಣ ಪಾಂಡೆ ಅವರು ಯುವರಾಜ್ ಸಿಂಗ್, ರವಿಶಾಸ್ತ್ರಿ, ಕೀರೊನ್ ಪೊಲಾರ್ಡ್‌ರನ್ನು ಅನುಕರಿಸಿದ್ದಾರೆ. ಯುವರಾಜ್ 2007ರ ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಮೊದಲ ಬಾರಿಗೆ ಈ ಸಾಧನೆ ಮಾಡಿದ್ದರು. 2021 ರಲ್ಲಿ ಶ್ರೀಲಂಕಾ ವಿರುದ್ಧದ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಮಾಜಿ ನಾಯಕ ಪೊಲಾರ್ಡ್ ಕೂಡ ಈ ಅಪರೂಪದ ಸಾಧನೆ ಮಾಡಿದ್ದಾರೆ. ಆದರೆ ಟಿ10 ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾಂಡೆ ಪಾತ್ರರಾಗಿದ್ದಾರೆ.
Deepak Chahar: ದೀಪಕ್ ಚಹರ್ ಮದುವೆಯಲ್ಲಿ ಪಾಕಿಸ್ತಾನ ಸ್ಟಾರ್ ಕ್ರಿಕೆಟಿಗ?: ವೈರಲ್ ಆಗುತ್ತಿದೆ ಫೋಟೋ
ಒಂದು ಓವರ್‌ನಲ್ಲಿ ಆರು ಸಿಕ್ಸರ್‌ಗಳನ್ನು ಹೊಡೆದ ಮೊದಲ ಬ್ಯಾಟ್ಸ್‌ಮನ್ ಹರ್ಷಲ್ ಗಿಬ್ಸ್ ಆಗಿದ್ದಾರೆ. ಇವರು 2007 ರಲ್ಲಿ ನೆದರ್ಲೆಂಡ್ಸ್ ವಿರುದ್ಧದ 50 ಓವರ್‌ಗಳ ವಿಶ್ವಕಪ್ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದರು. ವೆಸ್ಟ್ ಇಂಡೀಸ್ ದಂತಕಥೆ ಸರ್ ಗಾರ್ಫೀಲ್ಡ್ ಸೋಬರ್ಸ್ ಅವರು 1968 ರಲ್ಲಿ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಗ್ಲಾಮೊರ್ಗನ್ ವಿರುದ್ಧ ನಾಟಿಂಗ್‌ಹ್ಯಾಮ್‌ಶೈರ್ ಪರ ಆಡುವ ಮೂಲಕ ಈ ಸಾಧನೆ ಮಾಡಿದ ಮೊದಲ ಕ್ರಿಕೆಟಿಗರಾಗಿದ್ದರು. ಭಾರತದ ಮಾಜಿ ಆಲ್‌ರೌಂಡರ್ ರವಿಶಾಸ್ತ್ರಿ ಕೂಡ ಬರೋಡಾ ವಿರುದ್ಧ ಒಂದು ಓವರ್‌ನಲ್ಲಿ 36 ರನ್ ಗಳಿಸಿದ ಸಾಧನೆ ಮಾಡಿದ್ದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು.
ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.