French Open 2022 Mens Final: ಗುರು ಶಿಷ್ಯರ ನಡುವೆ ಫೈನಲ್ ಕಾಳಗ! ಪಂದ್ಯದ ಬಗ್ಗೆ ಪೂರ್ಣ ವಿವರ ಇಲ್ಲಿದೆ

French Open 2022 Mens Final live streaming: ಸ್ಪೇನ್‌ನಲ್ಲಿರುವ ನಡಾಲ್‌ನ ಟೆನಿಸ್ ಅಕಾಡೆಮಿಯಲ್ಲಿ ರೂಡ್ ತರಬೇತಿ ಪಡೆಯುತ್ತಿದ್ದು, ನಡಾಲ್ ನನ್ನ ರೋಲ್ ಮಾಡೆಲ್ ಎಂದು ಕ್ಯಾಸ್ಪರ್ ರೂಡ್ ಹೇಳಿಕೊಂಡಿದ್ದಾರೆ.

French Open 2022 Mens Final: ಗುರು ಶಿಷ್ಯರ ನಡುವೆ ಫೈನಲ್ ಕಾಳಗ! ಪಂದ್ಯದ ಬಗ್ಗೆ ಪೂರ್ಣ ವಿವರ ಇಲ್ಲಿದೆ
ರಾಫೆಲ್ ನಡಾಲ್, ಕ್ಯಾಸ್ಪರ್ ರೂಡ್
Follow us
TV9 Web
| Updated By: ಪೃಥ್ವಿಶಂಕರ

Updated on: Jun 05, 2022 | 7:00 AM

ಕ್ಲೇ ಕೋರ್ಟ್ ಕಿಂಗ್ ರಾಫೆಲ್ ನಡಾಲ್ (Rafael Nadal) 14ನೇ ಬಾರಿಗೆ ಫ್ರೆಂಚ್ ಓಪನ್‌ನಲ್ಲಿ ಫೈನಲ್ (French Open 2022) ತಲುಪಿದ್ದಾರೆ. ಪುರುಷರ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಅವರು ಜರ್ಮನಿಯ ಅಲೆಕ್ಸಾಂಡರ್ ಜೆರೆವ್ (Alexander Zverev) ವಿರುದ್ಧ ವಾಕ್‌ಓವರ್ ಪಡೆದರು. ಸುಮಾರು ಮೂರು ಗಂಟೆಗಳ ಕಾಲ ನಡೆದ ಆಟದ ನಂತರ, ಜೆರೆವ್ ಇಂಜುರಿಗೊಂಡಿದ್ದರಿಂದ ಅವರಿಗೆ ಆಟವನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ. ಬಳಿಕ ಊರುಗೋಲಿನ ಸಹಾಯದಿಂದ ಕೋರ್ಟ್‌ಗೆ ತೆರಳಿ ಅಭಿಮಾನಿಗಳ ಶುಭಾಶಯಗಳನ್ನು ಸ್ವೀಕರಿಸಿದರು. ಈಗ ನಡಾಲ್​ಗೆ 22ನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗೆಲ್ಲುವ ಅವಕಾಶವಿದ್ದು, ಇದಕ್ಕಾಗಿ ಅವರು ಕ್ಯಾಸ್ಪರ್ ರೂಡ್ ಅವರನ್ನು ಎದುರಿಸಬೇಕಾಗಿದೆ. ಇನ್ನೊಂದು ಆಶ್ಚರ್ಯಕಾರಿ ಸಂಗತಿಯೆಂದರೆ ಕ್ಯಾಸ್ಪರ್ ರೂಡ್, ಸ್ವತಃ ನಡಾಲ್ ಅವರ ಅಕಾಡೆಮಿಯಲ್ಲಿ ತರಬೇತಿ ಪಡೆದ ಆಟಗಾರನಾಗಿದ್ದಾರೆ.

ಕ್ಯಾಸ್ಪರ್ ರೂಡ್ ಅವರು ಫ್ರೆಂಚ್ ಓಪನ್ ಸೆಮಿಫೈನಲ್‌ನಲ್ಲಿ 2014 ರ ಯುಎಸ್ ಓಪನ್ ಚಾಂಪಿಯನ್ ಮರಿನ್ ಚಿಲಿಚ್ ಅವರನ್ನು 3-6, 6-4, 6-2, 6-2 ಸೆಟ್‌ಗಳಿಂದ ಸೋಲಿಸಿ ಗ್ರ್ಯಾಂಡ್ ಸ್ಲಾಮ್ ಫೈನಲ್ ತಲುಪಿದ ಮೊದಲ ನಾರ್ವೇಜಿಯನ್ ಆಟಗಾರರಾದರು. ಎಂಟನೇ ಶ್ರೇಯಾಂಕದ ರೂಡ್ ಅವರ ತಂದೆ 1991 ರಿಂದ 2001 ರವರೆಗೆ ವೃತ್ತಿಪರ ಟೆನಿಸ್ ಆಟಗಾರರಾಗಿದ್ದರು.

ನಡಾಲ್ ನನ್ನ ರೋಲ್ ಮಾಡೆಲ್- ಕ್ಯಾಸ್ಪರ್ ರೂಡ್

ಇದನ್ನೂ ಓದಿ
Image
IND vs SA: ಭಾರತ- ಆಫ್ರಿಕಾ ಟಿ20 ಪಂದ್ಯದ ಟಿಕೆಟ್ ನಾಳೆಯಿಂದ ಲಭ್ಯ! ಟಿಕೆಟ್ ಬುಕ್ ಮಾಡುವುದು ಹೇಗೆ?
Image
T20 Blast: 63 ರನ್‌, 9 ವಿಕೆಟ್! ಟಿ20 ಬ್ಲಾಸ್ಟ್​ನಲ್ಲಿ ಮಿಂಚಿದ ರಾಜಸ್ಥಾನ್ ರಾಯಲ್ಸ್‌ ಬೌಲರ್

ರೂಡ್ 2020 ರ ಆರಂಭದಿಂದಲೂ ಕ್ಲೇಕೋರ್ಟ್‌ನಲ್ಲಿ 66 ಪಂದ್ಯಗಳು ಮತ್ತು ಏಳು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಭಾನುವಾರದ ಫೈನಲ್‌ನಲ್ಲಿ ಅವರು 13 ಬಾರಿ ಫ್ರೆಂಚ್ ಓಪನ್ ಚಾಂಪಿಯನ್ ರಾಫೆಲ್ ನಡಾಲ್ ಅವರನ್ನು ಎದುರಿಸಲಿರುವುದರಿಂದ ಅವರು ಈಗ ತಮ್ಮ ವೃತ್ತಿಜೀವನದ ಕಠಿಣ ಸವಾಲನ್ನು ಎದುರಿಸುತ್ತಿದ್ದಾರೆ. ಸ್ಪೇನ್‌ನಲ್ಲಿರುವ ನಡಾಲ್‌ನ ಟೆನಿಸ್ ಅಕಾಡೆಮಿಯಲ್ಲಿ ರೂಡ್ ತರಬೇತಿ ಪಡೆಯುತ್ತಿದ್ದು, ನಡಾಲ್ ನನ್ನ ರೋಲ್ ಮಾಡೆಲ್ ಎಂದು ಕ್ಯಾಸ್ಪರ್ ರೂಡ್ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ:Rafael Nadal Birthday: 36 ನೇ ವರ್ಷಕ್ಕೆ ಕಾಲಿಟ್ಟ ನಡಾಲ್; ಕಿಂಗ್ ಆಫ್ ಕ್ಲೇ ಜೀವನದ ಬಗ್ಗೆ ಕೆಲವು ಆಸಕ್ತಿದಾಯಕ ಸಂಗತಿಗಳು ಇಲ್ಲಿವೆ

ಫೈನಲ್ ಪಂದ್ಯದ ಬಗ್ಗೆ ಇಲ್ಲಿದೆ ಮಾಹಿತಿ

ರಾಫೆಲ್ ನಡಾಲ್ ಮತ್ತು ಕ್ಯಾಸ್ಪರ್ ರೂಡ್ ನಡುವಿನ ಫ್ರೆಂಚ್ ಓಪನ್ ಪುರುಷರ ಸಿಂಗಲ್ಸ್ ಫೈನಲ್ ಯಾವಾಗ ನಡೆಯಲಿದೆ?

ರಫೆಲ್ ನಡಾಲ್ ಮತ್ತು ಕ್ಯಾಸ್ಪರ್ ರೂಡ್ ನಡುವೆ ಫ್ರೆಂಚ್ ಓಪನ್‌ನ ಪುರುಷರ ಸಿಂಗಲ್ಸ್ ಫೈನಲ್ ಭಾನುವಾರ (ಜೂನ್ 5) ಸಂಜೆ 6.30 ಕ್ಕೆ ನಡೆಯಲಿದೆ.

ರಾಫೆಲ್ ನಡಾಲ್ ಮತ್ತು ಕ್ಯಾಸ್ಪರ್ ರೂಡ್ ನಡುವಿನ ಫ್ರೆಂಚ್ ಓಪನ್ ಪುರುಷರ ಸಿಂಗಲ್ಸ್ ಫೈನಲ್ ಎಲ್ಲಿ ನಡೆಯಲಿದೆ?

ಫ್ರೆಂಚ್ ಓಪನ್ ಪುರುಷರ ಸಿಂಗಲ್ಸ್ ಫೈನಲ್ ಪಂದ್ಯವು ರಾಫೆಲ್ ನಡಾಲ್ ಮತ್ತು ಕ್ಯಾಸ್ಪರ್ ರೂಡ್ ನಡುವೆ ರೋಲ್ಯಾಂಡ್ ಗ್ಯಾರೋಸ್‌ನಲ್ಲಿರುವ ಕೋರ್ಟ್ ಫಿಲಿಪ್ ಚಾಟ್ರಿಯರ್‌ನಲ್ಲಿ ನಡೆಯಲಿದೆ.

ರಾಫೆಲ್ ನಡಾಲ್ ಮತ್ತು ಕ್ಯಾಸ್ಪರ್ ರೂಡ್ ನಡುವಿನ ಫ್ರೆಂಚ್ ಓಪನ್ ಪುರುಷರ ಸಿಂಗಲ್ಸ್ ಫೈನಲ್ ಅನ್ನು ಎಲ್ಲಿ ಲೈವ್ ಸ್ಟ್ರೀಮ್ ಮಾಡಲಾಗುತ್ತದೆ?

ರಾಫೆಲ್ ನಡಾಲ್ ಮತ್ತು ಕ್ಯಾಸ್ಪರ್ ರೂಡ್ ನಡುವಿನ ಫ್ರೆಂಚ್ ಓಪನ್ ಪುರುಷರ ಸಿಂಗಲ್ಸ್ ಫೈನಲ್ ಪಂದ್ಯವನ್ನು ಸೋನಿ ಲಿವ್ ಅಪ್ಲಿಕೇಶನ್‌ನಲ್ಲಿ ಲೈವ್ ಸ್ಟ್ರೀಮ್ ಮಾಡಲಾಗುತ್ತದೆ.

ರಾಫೆಲ್ ನಡಾಲ್ ಮತ್ತು ಕ್ಯಾಸ್ಪರ್ ರೂಡ್ ನಡುವಿನ ಫ್ರೆಂಚ್ ಓಪನ್ ಪುರುಷರ ಸಿಂಗಲ್ಸ್ ಫೈನಲ್ ಅನ್ನು ಎಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ?

ರಾಫೆಲ್ ನಡಾಲ್ ಮತ್ತು ಕ್ಯಾಸ್ಪರ್ ರೂಡ್ ನಡುವಿನ ಫ್ರೆಂಚ್ ಓಪನ್ ಪುರುಷರ ಸಿಂಗಲ್ಸ್ ಫೈನಲ್ ಸೋನಿ TEN 2, Sony TEN 3, Sony SIX ಮತ್ತು Sony TEN 4 ನಲ್ಲಿ ನೇರ ಪ್ರಸಾರವಾಗಲಿದೆ.

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್