French Open 2022: ಫ್ರೆಂಚ್ ಓಪನ್ ಮಹಿಳಾ ಸಿಂಗಲ್ಸ್ ಪ್ರಶಸ್ತಿ ಗೆದ್ದ ಪೋಲೆಂಡ್‌ನ ಇಗಾ ಸ್ವಿಟೆಕ್..!
French Open 2022: ಪೋಲೆಂಡ್‌ನ ಸೂಪರ್‌ಸ್ಟಾರ್ ಇಗಾ ಸ್ವಿಟೆಕ್ ಫ್ರೆಂಚ್ ಓಪನ್ 2022 ರ ಮಹಿಳಾ ಸಿಂಗಲ್ಸ್ ಪ್ರಶಸ್ತಿ ಗೆದ್ದು ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ವಿಶ್ವ ನಂಬರ್ ಒನ್ ಮಹಿಳಾ ಸಿಂಗಲ್ಸ್ ಆಟಗಾರ್ತಿ ಇಗಾ ಸ್ವಿಟೆಕ್ ಶನಿವಾರ ತಮ್ಮ ಎರಡನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ಗೆದ್ದರು.
ಪೋಲೆಂಡ್‌ನ ಸೂಪರ್‌ಸ್ಟಾರ್ ಇಗಾ ಸ್ವಿಟೆಕ್ (Iga Swiatek) ಫ್ರೆಂಚ್ ಓಪನ್ 2022 (French Open 2022)ರ ಮಹಿಳಾ ಸಿಂಗಲ್ಸ್ ಪ್ರಶಸ್ತಿ ಗೆದ್ದು ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ವಿಶ್ವ ನಂಬರ್ ಒನ್ ಮಹಿಳಾ ಸಿಂಗಲ್ಸ್ ಆಟಗಾರ್ತಿ ಇಗಾ ಸ್ವಿಟೆಕ್ ಶನಿವಾರ ತಮ್ಮ ಎರಡನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ಗೆದ್ದರು. ಅಮೆರಿಕದ ಯುವ ಆಟಗಾರ್ತಿ ಕೊಕೊ ಗಾಫ್ ಅವರನ್ನು ಫೈನಲ್‌ನಲ್ಲಿ ಸೋಲಿಸುವ ಮೂಲಕ ಚಾಂಪಿಯನ್ ಕಿರೀಟ ತೊಟ್ಟರು. ಇಗಾ ಸ್ವಿಟೆಕ್ ಸುಮಾರು ಒಂದು ಗಂಟೆಯಲ್ಲಿ ಗೋಫ್ ಅವರನ್ನು 6-1 6-3 ನೇರ ಸೆಟ್‌ಗಳಿಂದ ಸೋಲಿಸುವ ಮೂಲಕ ಪಂದ್ಯಾವಳಿಯಲ್ಲಿ ಪ್ರಾಬಲ್ಯವನ್ನು ಮುಂದುವರೆಸಿದರು. ಇಗಾ ಸ್ವಿಟೆಕ್ ಪಂದ್ಯಾವಳಿಯ ಉದ್ದಕ್ಕೂ ಕೇವಲ ಒಂದು ಸೆಟ್ ಅನ್ನು ಸೋತು, 6-2 ರ ಸರಾಸರಿ ಸ್ಕೋರ್‌ಲೈನ್‌ನೊಂದಿಗೆ ಹೆಚ್ಚಿನ ಸಂದರ್ಭಗಳಲ್ಲಿ ಸೆಟ್‌ಗಳನ್ನು ಗೆದ್ದರು. ಇಂಗಾ ಎರಡು ವರ್ಷಗಳ ಹಿಂದೆ ಮೊದಲ ಪ್ರಶಸ್ತಿಯನ್ನು ಫ್ರೆಂಚ್ ಓಪನ್‌ನಲ್ಲಿ ಗೆದ್ದಿದ್ದರು. ಈಗ ಕಾಕತಾಳೀಯವಾಗಿ ಅವರು ಫ್ರೆಂಚ್ ಓಪನ್‌ನಲ್ಲಿ ಎರಡನೇ ಪ್ರಶಸ್ತಿ ಗೆದ್ದಿದ್ದಾರೆ.
Together again ?#RolandGarros | @iga_swiatek pic.twitter.com/KEgxf2pr45
ಇದನ್ನೂ ಓದಿ— Roland-Garros (@rolandgarros) June 4, 2022
ಇದು ಇಗಾ ಸ್ವಿಟೆಕ್ ಅವರ ಎರಡನೇ ಗ್ರ್ಯಾಂಡ್ ಸ್ಲಾಮ್ ಫೈನಲ್ ಆಗಿತ್ತು. ರಾಫೆಲ್ ನಡಾಲ್ ಅವರ ಕಟ್ಟಾ ಅಭಿಮಾನಿ ಎಂದು ಬಣ್ಣಿಸಿಕೊಳ್ಳುವ ಇಗಾ, ಸ್ಪೇನ್ ಸೂಪರ್ ಸ್ಟಾರ್ನಂತೆ ಕೆಂಪು ಕೋರ್ಟ್ ಮೇಲೆ ತನ್ನ ಅಧಿಪತ್ಯ ಸ್ಥಾಪಿಸಿದ್ದಾರೆ. ಫೈನಲ್‌ನಲ್ಲಿ ಅವರ ಮುಂದೆ ಮೊದಲ ಬಾರಿಗೆ ಸ್ಲಾಮ್‌ನ ಫೈನಲ್ ತಲುಪಿದ 18 ವರ್ಷದ ಕೊಕೊ ಗೌಫ್ ಇದ್ದರು. ಅನೇಕ ಅನುಭವಿ ಆಟಗಾರರನ್ನು ದಂಗುಬಡಿಸಿರುವ ಇಗಾಗೆ ಕೊಕೊ ಅವರ ಸವಾಲು ಅಷ್ಟೇನು ಕಷ್ಟಕರವಾಗಿರಲಿಲ್ಲ. ಮೊದಲ ಸೆಟ್‌ನಲ್ಲಿ ಇಗಾ ಯಾವುದೇ ತೊಂದರೆಯಿಲ್ಲದೆ ಗೆದ್ದರು, ಆದರೆ ಎರಡನೇ ಸೆಟ್‌ನಲ್ಲಿ ಕೊಕೊ ಪುನರಾಗಮನಕ್ಕೆ ಪ್ರಯತ್ನಿಸಿದರು. ಅಮೆರಿಕದ ಆಟಗಾರ್ತಿ 2-0 ಮುನ್ನಡೆ ಸಾಧಿಸಲು ಸೆಟ್‌ನಲ್ಲಿ ಮೊದಲ ಎರಡು ಗೇಮ್‌ಗಳನ್ನು ಗೆದ್ದಿದ್ದರು. ಆದರೆ ನಂತರ ಇಗಾ ತಮ್ಮ ಸಾಮರ್ಥ್ಯವನ್ನು ತೋರಿಸಿ 6-1, 6-3 ಪಂದ್ಯಗಳೊಂದಿಗೆ, ಎದುರಾಳಿಗೆ ಪ್ರಶಸ್ತಿಯನ್ನು ಗೆಲ್ಲುವ ಎಲ್ಲಾ ಭರವಸೆಗಳನ್ನು ಛಿದ್ರಗೊಳಿಸಿದರು.
2022ರಲ್ಲಿ ಸಿಗುತ್ತಾ ಯಶಸ್ಸು?
ಪೋಲೆಂಡ್ ತಾರೆಗೆ ಈ ವರ್ಷ ಉತ್ತಮ ವರ್ಷ ಎಂದು ಸಾಬೀತಾಗಿದೆ. ಆಸ್ಟ್ರೇಲಿಯನ್ ಓಪನ್‌ನ ನಿರಾಸೆಯ ನಂತರ, ಇಗಾ ಸತತವಾಗಿ ಪಂದ್ಯಗಳನ್ನು ಗೆಲ್ಲುತ್ತಾ ಬಂದಿದ್ದಾರೆ ಅವರ ಮುಂದೆ ಯಾವುದೇ ಆಟಗಾರ್ತಿಗೆ ನಿಲ್ಲಲು ಸಹ ಸಾಧ್ಯವಾಗಲಿಲ್ಲ. ಏತನ್ಮಧ್ಯೆ, ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಆಶ್ಲೀ ಬಾರ್ಟಿ ಅವರ ಹಠಾತ್ ನಿವೃತ್ತಿಯ ನಂತರ ಇಗಾ ಏಪ್ರಿಲ್‌ನಲ್ಲಿ WTA ಶ್ರೇಯಾಂಕದಲ್ಲಿ ಮೊದಲ ಸ್ಥಾನವನ್ನು ಪಡೆದರು. ಇತ್ತೀಚಿನ ಯಶಸ್ಸಿನ ನಂತರ, ಸದ್ಯಕ್ಕೆ ಅವರನ್ನು ಅಲ್ಲಿಂದ ಕೆಳಗಿಳಿಸುವುದು ಸುಲಭವಲ್ಲ. ಈ ಪ್ರಶಸ್ತಿಯ ನಂತರ, ಇಗಾ ಅವರ ಕಣ್ಣುಗಳು ಈ ತಿಂಗಳು ನಡೆಯಲಿರುವ ವರ್ಷದ ಮೂರನೇ ಮತ್ತು ಅತ್ಯಂತ ಪ್ರತಿಷ್ಠಿತ ಗ್ರ್ಯಾಂಡ್ ಸ್ಲಾಮ್ ವಿಂಬಲ್ಡನ್ ಮೇಲೆ ಇರುತ್ತದೆ.
Published On - 8:17 pm, Sat, 4 June 22