IND vs SA: ಭಾರತ- ಆಫ್ರಿಕಾ ಟಿ20 ಪಂದ್ಯದ ಟಿಕೆಟ್ ನಾಳೆಯಿಂದ ಲಭ್ಯ! ಟಿಕೆಟ್ ಬುಕ್ ಮಾಡುವುದು ಹೇಗೆ?
IND vs SA: ಕನಿಷ್ಠ ಟಿಕೆಟ್ ದರ 600 ರಿಂದ 6,000 ರೂ. ಆಗಿದೆ. ಪಂದ್ಯದ ಹಿಂದಿನ ದಿನವಾದ ಜೂನ್ 8 ರಂದು ವಿಶಾಖಪಟ್ಟಣಂನ ಎಲ್ಲಾ 3 ಕೇಂದ್ರಗಳಲ್ಲಿ ಪಂದ್ಯದ ಟಿಕೆಟ್‌ಗಳನ್ನು ಆಫ್‌ಲೈನ್‌ನಲ್ಲಿ ಮಾರಾಟ ಮಾಡಲಾಗುತ್ತದೆ.
15ನೇ ಆವೃತ್ತಿಯ ಐಪಿಎಲ್ (IPL 2022) ಲೀಗ್ ಮುಗಿದಿದೆ. ಇದರೊಂದಿಗೆ ಟೀಂ ಇಂಡಿಯಾ ಕ್ರಿಕೆಟಿಗರು ಭಾರತದ ಜೆರ್ಸಿಯೊಂದಿಗೆ ಮತ್ತೆ ಕಣಕ್ಕೆ ಇಳಿಯಲು ಸಿದ್ಧತೆ ನಡೆಸಿದ್ದಾರೆ. ತವರಿನಲ್ಲಿ ಐದು ಪಂದ್ಯಗಳ ಟಿ20ಐ ಸರಣಿಯಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ಜೂನ್ 9 ರಂದು ಸರಣಿ (IND vs SA) ಆರಂಭವಾಗಲಿದ್ದು, ಸರಣಿಯ ಮೂರನೇ ಟಿ20 ಪಂದ್ಯ ಇದೇ ತಿಂಗಳ 14 ರಂದು ವಿಶಾಖಪಟ್ಟಣದ ವೈಎಸ್ಸಾರ್ ಎಸಿಎ ವಿಡಿಸಿಎ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ. ಆಂಧ್ರ ಕ್ರಿಕೆಟ್ ಸಂಸ್ಥೆ (ACA) ಈಗಾಗಲೇ ಈ ನಿಟ್ಟಿನಲ್ಲಿ ಸಕ್ರಿಯ ವ್ಯವಸ್ಥೆಗಳನ್ನು ಮಾಡುತ್ತಿದೆ. ಪಂದ್ಯದ ಟಿಕೆಟ್‌ಗಳು ನಾಳೆಯಿಂದ (ಜೂನ್ 5) ಮಾರಾಟವಾಗಲಿವ. ಭಾನುವಾರ ಬೆಳಗ್ಗೆ 11.30ರಿಂದ ಆನ್‌ಲೈನ್‌ನಲ್ಲಿ ಟಿಕೆಟ್ ಲಭ್ಯವಿರುತ್ತದೆ ಎಂದು ಆಂಧ್ರ ಕ್ರಿಕೆಟ್ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಟಿಕೆಟ್ ಬುಕ್ ಮಾಡುವುದು ಹೇಗೆ?
27,251 ಆಸನ ಸಾಮರ್ಥ್ಯ ಹೊಂದಿರುವ ವಿಶಾಖಪಟ್ಟಣಂ ಮೈದಾನದಲ್ಲಿ ಸ್ಥಳೀಯ ಕ್ರಿಕೆಟ್ ಕ್ಲಬ್‌ಗಳಿಗೆ ಕೆಲವು ಟಿಕೆಟ್‌ಗಳನ್ನು ಹಂಚಲಾಗುತ್ತದೆ. ಉಳಿದ ಟಿಕೆಟ್‌ಗಳನ್ನು Paytm ಅಪ್ಲಿಕೇಶನ್ ಪ್ಲಾಟ್‌ಫಾರ್ಮ್‌ನಲ್ಲಿ ಇರಿಸಲಾಗುತ್ತದೆ. ಕನಿಷ್ಠ ಟಿಕೆಟ್ ದರ 600 ರಿಂದ 6,000 ರೂ. ಆಗಿದೆ. ಪಂದ್ಯದ ಹಿಂದಿನ ದಿನವಾದ ಜೂನ್ 8 ರಂದು ವಿಶಾಖಪಟ್ಟಣಂನ ಎಲ್ಲಾ 3 ಕೇಂದ್ರಗಳಲ್ಲಿ ಪಂದ್ಯದ ಟಿಕೆಟ್‌ಗಳನ್ನು ಆಫ್‌ಲೈನ್‌ನಲ್ಲಿ ಮಾರಾಟ ಮಾಡಲಾಗುತ್ತದೆ. ವಿಶಾಖಪಟ್ಟಣಂ ಮತ್ತು ವಿಜಯವಾಡ ಮತ್ತು ಹೈದರಾಬಾದ್‌ನಿಂದ ಟಿಕೆಟ್ ಕಾಯ್ದಿರಿಸಿದವರಿಗೆ ಕೊರಿಯರ್ ಸೇವೆಗಳ ಮೂಲಕ ಟಿಕೆಟ್ ಕಳುಹಿಸಲಾಗುತ್ತದೆ.
ಇದನ್ನೂ ಓದಿ:ದೀಪಕ್ ಚಹಾರ್ ಆರತಕ್ಷತೆಯಲ್ಲಿ ಕುಟುಂಬಸ್ಥರೊಂದಿಗೆ ಮಿಂಚಿದ ಟೀಂ ಇಂಡಿಯಾ ಕ್ರಿಕೆಟಿಗರು; ಫೋಟೋ ನೋಡಿ
ಭಾರತ-ದಕ್ಷಿಣ ಆಫ್ರಿಕಾ T20 ಸರಣಿ ವೇಳಾಪಟ್ಟಿ
ದಕ್ಷಿಣ ಆಫ್ರಿಕಾ ಮತ್ತು ಭಾರತ ನಡುವಿನ ಮೊದಲ ಟಿ20 ಪಂದ್ಯ ಜೂನ್ 9 ರಂದು ನಡೆಯಲಿದೆ. ಇದಾದ ನಂತರ ಜೂನ್ 12, ಜೂನ್ 14, ಜೂನ್ 17 ಮತ್ತು ಜೂನ್ 19 ರಂದು ಪಂದ್ಯಗಳು ನಡೆಯಲಿದ್ದು, ದೆಹಲಿ, ಕಟಕ್, ವೈಜಾಗ್, ರಾಜ್ ಕೋಟ್ ಮತ್ತು ಬೆಂಗಳೂರಿನಲ್ಲಿ ಪಂದ್ಯಗಳು ನಡೆಯಲಿವೆ. ಈ ಸರಣಿಯಲ್ಲಿ ಭಾರತ ತಂಡದ ಹಲವು ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಬಹುದು. ಅದೇ ಸಮಯದಲ್ಲಿ, ಅನೇಕ ಯುವ ಮುಖಗಳು ತಮ್ಮ ಚೊಚ್ಚಲ ಪ್ರವೇಶವನ್ನು ಮಾಡಬಹುದು.
ಟಿ20 ಸರಣಿಗೆ ದಕ್ಷಿಣ ಆಫ್ರಿಕಾ ತಂಡ: ತೆಂಬಾ ಬವುಮಾ, ಕ್ವಿಂಟನ್ ಡಿ ಕಾಕ್, ರೀಜಾ ಹೆಂಡ್ರಿಕ್ಸ್, ಹೆನ್ರಿಕ್ ಕ್ಲಾಸೆನ್, ಕೇಶವ್ ಮಹಾರಾಜ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಲುಂಗಿ ಎನ್‌ಗಿಡಿ, ಅನ್ರಿಕ್ ನಾರ್ಖಿಯಾ, ವೇಯ್ನ್ ಪಾರ್ನೆಲ್, ಡ್ವೇನ್ ಪ್ರಿಟೋರಿಯಸ್, ಕಗಿಸೋ ರಬಾಡ, ತಬ್ರೈಜ್ ಶಮ್ಸಿ, ಟ್ವೈನ್ ಪ್ರಿಟೋರಿಯಸ್, ವೇಯ್ನ್ ಡಾರ್ ಡುಸನ್, ಮಾರ್ಕೊ ಯಾನ್ಸನ್.
ಭಾರತ ತಂಡ: ಕೆಎಲ್ ರಾಹುಲ್ (ನಾಯಕ), ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ದೀಪಕ್ ಹೂಡಾ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ಉಪ ನಾಯಕ/ ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ವೆಂಕಟೇಶ್ ಅಯ್ಯರ್, ಯುಜ್ವೇಂದ್ರ ಚಹಲ್, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಭುವನೇಶ್ವರ್, ಹರ್ಷಲ್ ಪಟೇಲ್, ಅವೇಶ್ ಖಾನ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್.
Published On - 7:36 pm, Sat, 4 June 22