Deepak Chahar: ದೀಪಕ್ ಚಹರ್ ಮದುವೆಯಲ್ಲಿ ಪಾಕಿಸ್ತಾನ ಸ್ಟಾರ್ ಕ್ರಿಕೆಟಿಗ?: ವೈರಲ್ ಆಗುತ್ತಿದೆ ಫೋಟೋ

Deepak Chahar Wedding: ಪಾಕಿಸ್ತಾನ ಸ್ಟಾರ್ ಕ್ರಿಕೆಟಿಗ ಹಸನ್ ಅಲಿ ಕೂಡ ದೀಪಕ್ ಚಹರ್ ಜಯಾ ಭಾರದ್ಬಾಜ್ ಆರತಕ್ಷತೆ ಕಾರ್ಯಕ್ರಮದಲ್ಲಿ ಪಾಲ್ದೊಂಡಿದ್ದರಾ ಎಂಬ ಅನುಮಾನ ಮೂಡಿದೆ. ಇದಕ್ಕೆ ಸಾಕ್ಷಿ ಎಂಬಂತೆ ಫೋಟೋ ಒಂದು ವೈರಲ್ ಆಗುತ್ತಿದೆ.

Deepak Chahar: ದೀಪಕ್ ಚಹರ್ ಮದುವೆಯಲ್ಲಿ ಪಾಕಿಸ್ತಾನ ಸ್ಟಾರ್ ಕ್ರಿಕೆಟಿಗ?: ವೈರಲ್ ಆಗುತ್ತಿದೆ ಫೋಟೋ
Deepak Chahar Wedding and Hasan Ali
Follow us
TV9 Web
| Updated By: Vinay Bhat

Updated on:Jun 05, 2022 | 11:42 AM

ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ದೀಪಕ್ ಚಹರ್ (Deepak Chahar) ಅವರು ತಮ್ಮ ಬಹುಕಾಲದ ಗೆಳತಿ ಜಯಾ ಭಾರದ್ವಾಜ್ (Jaya Bhardwaj) ಅವರನ್ನು ಜೂನ್ 1 ರಂದು ವಿವಾಹವಾದರು. ಆಗ್ರಾದ ವಾಯು ವಿಹಾರ್‌ನಲ್ಲಿ ವಾಸಿಸುವ ಚಹರ್ ಮತ್ತು ಜಯಾ ಫತೇಹಾಬಾದ್ ರಸ್ತೆಯಲ್ಲಿರುವ ಜೇಪೀ ಪ್ಯಾಲೇಸ್‌ನಲ್ಲಿ ಸಪ್ತಪದಿ ತುಳಿದಿದ್ದರು. ನಂತರ ನಡೆದ ಮೆಹಂದಿ ಸಮಾರಂಭ ಹಾಗೂ ಸಂಗೀತ ಕಾರ್ಯಕ್ರಮ ಕೂಡ ಅದ್ಧೂರಿಯಾಗಿತ್ತು. ಇವರಿಬ್ಬರ ಆರತಕ್ಷತೆ ದೆಹಲಿಯಲ್ಲಿ ನಡೆಯಿತು. ಇದರಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ನ ಅನೇಕ ಸ್ಟಾರ್ ಆಟಗಾರರು ಕಾಣಿಸಿಕೊಂಡರು. ಚೆನ್ನೈನ ಮಾಜಿ ಬ್ಯಾಟರ್ ಸುರೇಶ್ ರೈನಾ, ಪತ್ನಿ ಪ್ರಿಯಾಂಕಾ ರೈನಾ ಕೂಡ, ರಾಬಿನ್ ಉತ್ತಪ್ಪ, ಪಿಯೂಷ್ ಚಾವ್ಲಾ ಸೇರಿದಂತೆ ಅನೇಕ ಕ್ರಿಕೆಟಿಗರು ಹಾಜರಾಗಿದ್ದಾರು. ಇದರ ನಡುವೆ ಪಾಕಿಸ್ತಾನ ಕ್ರಿಕೆಟಿಗ (Pakistan Cricket) ಕೂಡ ಚಹರ್-ಜಯಾ ಆರತಕ್ಷತೆ ಕಾರ್ಯಕ್ರಮದಲ್ಲಿ ಪಾಲ್ದೊಂಡಿದ್ದರಾ ಎಂಬ ಅನುಮಾನ ಮೂಡಿದೆ.

ಹೌದು, ಪಾಕಿಸ್ತಾನದ ಸ್ಟಾರ್ ಆಟಗಾರ ಹಸನ್ ಅಲಿ ದೆಹಲಿಯಲ್ಲಿ ನಡೆದ ಆರತಕ್ಷತೆ ಕಾರ್ಯಕ್ರಮದಲ್ಲಿ ಹಾಜರಿದ್ದರು ಎಂದು ಅನೇಕರು ಟ್ವೀಟ್ ಮಾಡುತ್ತಿದ್ದಾರೆ. ಒಂದು ಫೋಟೋ ಕೂಡ ವೈರಲ್ ಆಗುತ್ತಿದೆ. ಇದರಲ್ಲಿ ಶಾರ್ದೂಲ್ ಠಾಕೂರ್, ರವಿ ಬಿಷ್ಟೋಯ್, ರಿಷಭ್ ಪಂತ್, ಇಶಾನ್ ಕಿಶನ್ ಸೇರಿದಂತೆ ಕೆಲ ಕ್ರಿಕೆಟಿಗರಿದ್ದಾರೆ. ಪಂತ್ ಬಳಿ ನಿಂತಿರುವ ಆಟಗಾರ ಹಸನ್ ಅಲಿ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಆದರೆ, ಇವರು ಪಾಕ್ ಕ್ರಿಕೆಟಿಗ ಅಲ್ಲ. ಬದಲಾಗಿ ರಾಜಸ್ಥಾನ್ ಪರ ಆಡುವ ದೀಪಕ್ ಅವರ ಸ್ನೇಹಿತ ಎಂದು ಹೇಳಲಾಗಿದೆ.

ಇದನ್ನೂ ಓದಿ
Image
IND vs SA: ಇಂಡೋ-ಆಫ್ರಿಕಾ ಕದನಕ್ಕೆ ದಿನಗಣನೆ: ಇಂದು ಫಿರೋಜ್ ಶಾ ಕೋಟ್ಲಾಕ್ಕೆ ಟೀಮ್ ಇಂಡಿಯಾ ಎಂಟ್ರಿ
Image
ENG vs NZ, 1st Test: ಇಂಗ್ಲೆಂಡ್ ಬೌಲರ್​ಗಳ ಬಿರುಗಾಳಿಗೆ ತಬ್ಬಿಬ್ಬಾದ ನ್ಯೂಜಿಲೆಂಡ್: ಗೆಲುವಿನತ್ತ ಆಂಗ್ಲರು
Image
French Open 2022 Mens Final: ಗುರು ಶಿಷ್ಯರ ನಡುವೆ ಫೈನಲ್ ಕಾಳಗ! ಪಂದ್ಯದ ಬಗ್ಗೆ ಪೂರ್ಣ ವಿವರ ಇಲ್ಲಿದೆ
Image
Deepak Chahar Wedding: ನಿನ್ನ ಬೆನ್ನು ಹುಷಾರು.. ವಿಶ್ವಕಪ್ ಇದೆ; ಹನಿಮೂನ್​ಗೆ ಹೊರಟ ದೀಪಕ್​ ಕಾಲೆಳೆದ ತಂಗಿ

Deepak Chahar-Jaya Bhardwaj: ಸಖತ್ ವೈರಲ್ ಆಗುತ್ತಿದೆ ದೀಪಕ್ ಚಹರ್-ಜಯಾ ಭಾರದ್ವಾಜ್ ಕ್ಯೂಟ್ ಫೋಟೋಗಳು

ಮೊನ್ನೆಯಷ್ಟೆ ದೀಪಕ್-ಜಯಾ ಖಾಸಗಿ ಹೋಟೆಲ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ವಿವಾಹಕ್ಕೆ ಕ್ರಿಕೆಟ್‌ ತಾರೆಗಳು, ಸ್ಥಳೀಯ ರಾಜಕಾರಣಿಗಳು, ಸಿನಿಮಾರಂಗದ ಗಣ್ಯರು, ಕುಟುಂಬದವರು ಮತ್ತು ಆಪ್ತರು ಭಾಗವಹಿಸಿದ್ದರು. ಸಹೋದರ ರಾಹುಲ್‌ ಚಹರ್‌ ಅವರು ಈ ಮದುವೆಯ ಪೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು ಭರ್ಜರಿ ವೈರಲ್ ಆಗಿತ್ತು.

ಅದ್ಧೂರಿಯಾಗಿ ನಡೆದ ಈ ವಿವಾಹದ ಮೆಹಂದಿ ಮತ್ತು ಸಂಗೀತ ಸಮಾರಂಭದಲ್ಲಿ ಜೋಡಿಯ ದೇಸಿ ಶೈಲಿಯನ್ನು ಅಭಿಮಾನಿಗಳು ಇಷ್ಟಪಟ್ಟರು. ಸಂಗೀತ ಸಮಾರಂಭದಲ್ಲಿ ದೀಪಕ್ ಚಹರ್, ಜಯಾ ಭಾರದ್ವಾಜ್ ಮತ್ತು ಮಾಲ್ತಿ ಚಹಾರ್ ಅವರು ‘ಅಕೇಲಾ ಹೈ ಮಿಸ್ಟರ್ ಕಿಲಾಡಿ ಮಿಸ್ ಕಿಲಾಡಿ ಚಾಹಿಯೇ’ ಹಾಡಿನಲ್ಲಿ ಅದ್ಭುತವಾಗಿ ನೃತ್ಯ ಮಾಡಿದರು. ದೀಪಕ್ ಬಿಳಿ ಶೆರ್ವಾನಿ ಮತ್ತು ಪೇಟವನ್ನು ಧರಿಸಿದ್ದರೆ, ಜಯಾ ಕ್ರೀಮ್ ಬಣ್ಣದ ಲೆಹೆಂಗಾ ತೊಟ್ಟು ಮಿಂಚಿದರು.

ಕಳೆದ ವರ್ಷ ಐಪಿಎಲ್‌ ಪಂದ್ಯದ ವೇಳೆ, ಚೆನ್ನೈ ಸೂಪರ್ ಕಿಂಗ್ಸ್ ಆಟಗಾರ ದೀಪಕ್ ಚಾಹರ್ ಗೆಳತಿ ಜಯಾ ಭಾರದ್ವಾಜ್‌ ಅವರಿಗೆ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದ ವೇಳೆ ಎಲ್ಲರೆದುರೇ ಪ್ರೇಮ ನಿವೇದನೆ ಮಾಡಿದ್ದರು. ಜಯಾ ಅವರು ನಟ ಮತ್ತು ಬಿಗ್‌ಬಾಸ್‌ ಸಿದ್ಧಾರ್ಥ್ ಭಾರದ್ವಾಜ್ ಅವರ ಸಹೋದರಿ. ದೆಹಲಿಯವರಾದ ಜಯಾ, ಕಾರ್ಪೊರೇಟ್ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.

ಕ್ರಿಕೆಟ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 11:42 am, Sun, 5 June 22

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ