IND vs SA: ಆಟಗಾರನಾಗಿ ಕ್ಲಿಕ್, ನಾಯಕನಾಗಿ ಫ್ಲಾಪ್! ನಾಯಕನಾಗಿ ರಾಹುಲ್​ಗೆ ಇದು ಮಾಡು ಇಲ್ಲವೇ ಮಡಿ ಸರಣಿ

IND vs SA: ಟೀಂ ಇಂಡಿಯಾ ನಾಯಕನಾಗಿ ರಾಹುಲ್ ಅವರ ದಾಖಲೆಯನ್ನು ನೋಡಿದರೆ ಇನ್ನೂ ಕೆಟ್ಟದಾಗಿದೆ. ಜೋಹಾನ್ಸ್‌ಬರ್ಗ್‌ನಲ್ಲಿ ಅವರು ನಾಯಕತ್ವದ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಸೋತಿತ್ತು. ನಂತರ ರಾಹುಲ್ ನಾಯಕತ್ವ ವಹಿಸಿ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯನ್ನು ಸೋತರು.

IND vs SA: ಆಟಗಾರನಾಗಿ ಕ್ಲಿಕ್, ನಾಯಕನಾಗಿ ಫ್ಲಾಪ್! ನಾಯಕನಾಗಿ ರಾಹುಲ್​ಗೆ ಇದು ಮಾಡು ಇಲ್ಲವೇ ಮಡಿ ಸರಣಿ
KL Rahul and Rahul Dravid
Follow us
TV9 Web
| Updated By: ಪೃಥ್ವಿಶಂಕರ

Updated on:Jun 05, 2022 | 2:46 PM

ಭಾರತ ಮತ್ತು ದಕ್ಷಿಣ ಆಫ್ರಿಕಾ (IND vs SA) ನಡುವಿನ ಐದು ಪಂದ್ಯಗಳ T20 ಸರಣಿಯು ಜೂನ್ 9 ರಂದು ಪ್ರಾರಂಭವಾಗುತ್ತದೆ. ಸರಣಿಯ ಮೊದಲ ಪಂದ್ಯವು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಸರಣಿಗಾಗಿ, ಬಿಸಿಸಿಐ ಹಿರಿಯ ಆಯ್ಕೆ ಸಮಿತಿಯು ಕೊಹ್ಲಿ, ಜಸ್ಪ್ರೀತ್ ಬುಮ್ರಾ ಮತ್ತು ನಾಯಕ ರೋಹಿತ್ ಶರ್ಮಾ (Rohit Sharma, Jaspreet Bumra)ಗೆ ವಿಶ್ರಾಂತಿ ನೀಡಿದೆ. ಇಂತಹ ಪರಿಸ್ಥಿತಿಯಲ್ಲಿ ಮತ್ತೊಮ್ಮೆ ತಂಡದ ನಾಯಕನಾಗಿ ಕೆಎಲ್ ರಾಹುಲ್ (KL Rahul)​ಗೆ ಪಟ್ಟಕಟ್ಟಲಾಗಿದೆ. ಈ ವರ್ಷದ ಆರಂಭದಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದಲ್ಲೂ ರಾಹುಲ್ ತಂಡದ ನಾಯಕರಾಗಿದ್ದರು. ರಾಹುಲ್ ಇತ್ತೀಚೆಗೆ IPL-2022 ರಲ್ಲಿ ಹೊಸದಾಗಿ ಪ್ರಾರಂಭಿಸಲಾದ ಲಕ್ನೋ ಸೂಪರ್ ಜೈಂಟ್ಸ್ ನಾಯಕತ್ವ ವಹಿಸಿದ್ದರು. ಅವರು ತಂಡವನ್ನು ಪ್ಲೇ ಆಫ್‌ಗೆ ಕರೆದೊಯ್ದರು. ಆದರೆ, ಈ ಯಶಸ್ಸು ಟೀಂ ಇಂಡಿಯಾದಲ್ಲಿ ಪುನರಾವರ್ತನೆಯಾಗುವುದೇ ಎಂಬುದು ದೊಡ್ಡ ಪ್ರಶ್ನೆಯಾಗಿದೆ.

ಇದರ ಹಿಂದೆ ಹಲವು ಕಾರಣಗಳಿವೆ. ನಾಯಕನಾಗಿ ರಾಹುಲ್ ದಾಖಲೆ ಉತ್ತಮವಾಗಿಲ್ಲ. ಆದರೂ ಅವರು ಟೀಂ ಇಂಡಿಯಾ ನಾಯಕ ರೇಸ್‌ನಲ್ಲಿದ್ದಾರೆ. ನಾಯಕ ವಿರಾಟ್ ಕೊಹ್ಲಿ ನಾಯಕತ್ವ ಕಳೆದುಕೊಂಡ ನಂತರ ರಾಹುಲ್ ನಾಯಕತ್ವದ ರೇಸ್‌ನಲ್ಲಿದ್ದಾರೆ. ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಕೊಹ್ಲಿ ಟೆಸ್ಟ್ ನಾಯಕತ್ವದಿಂದ ಕೆಳಗಿಳಿದಿದ್ದರು. ರಾಹುಲ್ ನಂತರ ಪಂದ್ಯಕ್ಕೆ ತಂಡದ ನಾಯಕರಾಗಿದ್ದರು. ರೋಹಿತ್ ಶರ್ಮಾ ಮೂರು ಸ್ವರೂಪಗಳಿಗೆ ನಾಯಕನಾಗಿದ್ದರೆ, ರಾಹುಲ್ ಉಪನಾಯಕನಾಗಿ ನೇಮಕಗೊಂಡರು.

ಇದನ್ನೂ ಓದಿ:KL Rahul: ಕೆಎಲ್ ರಾಹುಲ್- ಆಥಿಯಾ ಶೆಟ್ಟಿ ಮದುವೆ ಸದ್ಯಕ್ಕಿಲ್ಲ ಎಂದ ಕುಟುಂಬ; ಫ್ಯಾನ್ಸ್ ಮನದಲ್ಲಿ ಮೂಡಿದೆ ಹಲವು ಪ್ರಶ್ನೆ

ಇದನ್ನೂ ಓದಿ
Image
IND vs SA: ಭಾರತ- ಆಫ್ರಿಕಾ ಟಿ20 ಪಂದ್ಯದ ಟಿಕೆಟ್ ನಾಳೆಯಿಂದ ಲಭ್ಯ! ಟಿಕೆಟ್ ಬುಕ್ ಮಾಡುವುದು ಹೇಗೆ?
Image
T20 Blast: 63 ರನ್‌, 9 ವಿಕೆಟ್! ಟಿ20 ಬ್ಲಾಸ್ಟ್​ನಲ್ಲಿ ಮಿಂಚಿದ ರಾಜಸ್ಥಾನ್ ರಾಯಲ್ಸ್‌ ಬೌಲರ್

ಕೆಟ್ಟ ದಾಖಲೆ..

ಟೀಂ ಇಂಡಿಯಾ ನಾಯಕನಾಗಿ ರಾಹುಲ್ ಅವರ ದಾಖಲೆಯನ್ನು ನೋಡಿದರೆ ಇನ್ನೂ ಕೆಟ್ಟದಾಗಿದೆ. ಜೋಹಾನ್ಸ್‌ಬರ್ಗ್‌ನಲ್ಲಿ ಅವರು ನಾಯಕತ್ವದ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಸೋತಿತ್ತು. ನಂತರ ರಾಹುಲ್ ನಾಯಕತ್ವ ವಹಿಸಿ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯನ್ನು ಸೋತರು. ಕೊಹ್ಲಿ ಮತ್ತು ರೋಹಿತ್ ನಾಯಕತ್ವದಲ್ಲಿ ಕಾಣುವ ಆಕ್ರಮಣಶೀಲತೆ ಮತ್ತು ಜಾಣ್ಮೆ ರಾಹುಲ್ ನಾಯಕತ್ವದಲ್ಲಿ ಕಾಣುತ್ತಿಲ್ಲ. ಇದು ಅವರ ನಾಯಕತ್ವದ ದೊಡ್ಡ ದೌರ್ಬಲ್ಯ ಎಂದು ಪರಿಗಣಿಸಲಾಗಿದೆ. ಅವರು ಎರಡು ವರ್ಷಗಳ ಕಾಲ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್‌ಗೆ ನಾಯಕರಾಗಿದ್ದರು. ಆದರೆ, ತಂಡವನ್ನು ಪ್ಲೇ ಆಫ್‌ಗೆ ಕೊಂಡೊಯ್ಯಲು ಸಾಧ್ಯವಾಗಲಿಲ್ಲ. ರಾಹುಲ್ ಈ ಸೀಸನ್​ನಲ್ಲಿ ಲಕ್ನೋವನ್ನು ಪ್ಲೇ ಆಫ್‌ಗೆ ಕರೆದೊಯ್ಯುವಲ್ಲಿ ಯಶಸ್ವಿಯಾದರು. ಆದರೆ ಫೈನಲ್​ಗೇರುವಲ್ಲಿ ಅವರ ನಿಧಾನಗತಿಯ ಬ್ಯಾಟಿಂಗ್​ಗೆ ತಂಡದ ಸೋಲಿಗೆ ಕಾರಣವಾಯಿತು. ಇಂತಹ ಸಂದರ್ಭಗಳಲ್ಲಿ ಅನುಭವವಿರುವ ರಾಹುಲ್ ಉತ್ತಮ ನಾಯಕನಾಗಿ ಬೆಳೆದು ಅಗತ್ಯ ಬಿದ್ದಾಗ ಟೀಂ ಇಂಡಿಯಾವನ್ನು ನಿಭಾಯಿಸುವ ನಿರೀಕ್ಷೆಯಿದೆ.

ಒಂದು ವೇಳೆ ಫ್ಲಾಪ್ ಆದಲ್ಲಿ ಸ್ಥಾನ ಕಳೆದುಕೊಂಡಂತಾಗುತ್ತದೆ

ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ರಾಹುಲ್‌ಗೆ ದೊಡ್ಡ ಸವಾಲಾಗಿದೆ. ಏಕೆಂದರೆ ಇದು ಬಹುಶಃ ನಾಯಕ ಅಥವಾ ಉಪನಾಯಕನಾಗಿ ಅವರ ಭವಿಷ್ಯವನ್ನು ನಿರ್ಧರಿಸುತ್ತದೆ. ಈ ಸರಣಿಯಲ್ಲಿ ರಾಹುಲ್ ಉತ್ತಮ ಪ್ರದರ್ಶನ ನೀಡಿದರೆ, ಆಯ್ಕೆದಾರರು ಅವರ ಮೇಲೆ ನಂಬಿಕೆ ಇಡುತ್ತಾರೆ. ಆದರೆ, ಅವರು ವಿಫಲವಾದರೆ ಬದಲಾವಣೆಗಳನ್ನು ಕಾಣಬಹುದು. ಟೀಂ ಇಂಡಿಯಾಗೆ ಈಗ ಉಪನಾಯಕ/ನಾಯಕನ ಆಯ್ಕೆ ಇದೆ. ರಿಷಬ್ ಪಂತ್, ಜಸ್ಪ್ರೀತ್ ಬುಮ್ರಾ ಮತ್ತು ಹಾರ್ದಿಕ್ ಪಾಂಡ್ಯ ರೇಸ್‌ನಲ್ಲಿದ್ದಾರೆ. ಪಂತ್ ಮತ್ತು ಬುಮ್ರಾ ಕೂಡ ಉಪನಾಯಕರಾಗಿದ್ದಾರೆ. ಇದರೊಂದಿಗೆ ಕೆಎಲ್ ರಾಹುಲ್​ಗೆ ಈ ಸರಣಿಯಲ್ಲಿ ದೊಡ್ಡ ಅಪಾಯ ಎದುರಾಗಿದೆ. ಹೀಗಾಗಿ ಈ ಸರಣಿಯಲ್ಲಿ ರಾಹುಲ್ ಹೇಗೆ ಕಾರ್ಯನಿರ್ವಹಿತ್ತಾರೆ ಎಂಬುದನ್ನು ನಾವು ನೋಡಬೇಕಾಗಿದೆ.

Published On - 2:46 pm, Sun, 5 June 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್