LPL 2023: ಭರ್ಜರಿ ಜಯದೊಂದಿಗೆ ಫೈನಲ್ಗೆ ಪ್ರವೇಶಿಸಿದ ದಂಬುಲ್ಲಾ ಔರ
Lanka Premier League 2023: ಈ ಗೆಲುವಿನೊಂದಿಗೆ ದುಂಬುಲ್ಲಾ ಔರ ತಂಡ ಲಂಕಾ ಪ್ರೀಮಿಯರ್ ಲೀಗ್ನ ಫೈನಲ್ಗೆ ಎಂಟ್ರಿ ಕೊಟ್ಟಿದೆ. ಇನ್ನು ಸೋತಿರುವ ಗಾಲೆ ಟೈಟಾನ್ಸ್ ತಂಡವು ಎಲಿಮಿನೇಟರ್ ಪಂದ್ಯದಲ್ಲಿ ಗೆಲ್ಲುವ ತಂಡದೊಡನೆ 2ನೇ ಕ್ವಾಲಿಫೈಯರ್ ಪಂದ್ಯವಾಡಲಿದೆ.
ಶ್ರೀಲಂಕಾದಲ್ಲಿ ನಡೆಯುತ್ತಿರುವ ಲಂಕಾ ಪ್ರೀಮಿಯರ್ ಲೀಗ್ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ದಂಬುಲ್ಲಾ ಔರ ತಂಡ ಭರ್ಜರಿ ಜಯ ಸಾಧಿಸಿದೆ. ಗಾಲೆ ಟೈಟಾನ್ಸ್ ವಿರುದ್ಧದ ಈ ಪಂದ್ಯದಲ್ಲಿ 6 ವಿಕೆಟ್ಗಳ ಗೆಲುವು ದಾಖಲಿಸಿದ ದಂಬುಲ್ಲಾ ಔರ ತಂಡ ಫೈನಲ್ಗೆ ಪ್ರವೇಶಿಸಿದೆ.
ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದ ದಂಬುಲ್ಲಾ ಔರ ತಂಡದ ನಾಯಕ ಕುಸಾಲ್ ಮೆಂಡಿಸ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಗಾಲೆ ಟೈಟಾನ್ಸ್ ತಂಡ ಉತ್ತಮ ಆರಂಭ ಪಡೆದಿರಲಿಲ್ಲ.
ಆರಂಭಿಕ ಆಟಗಾರ ಭಾನುಕ ರಾಜಪಕ್ಸೆ ಮೊದಲ ಓವರ್ನಲ್ಲೇ ಶೂನ್ಯಕ್ಕೆ ಔಟಾಗಿದ್ದರು. ಇದಾಗ್ಯೂ ಮತ್ತೋರ್ವ ಆರಂಭಿಕ ಆಟಗಾರ ಲಸಿತ್ ಕ್ರೂಸ್ಪುಲ್ಲೆ ಅತ್ಯುತ್ತಮ ಇನಿಂಗ್ಸ್ ಆಡಿದರು. 61 ಎಸೆತಗಳನ್ನು ಎದುರಿಸಿದ ಲಸಿತ್ 7 ಫೋರ್ಗಳೊಂದಿಗೆ 80 ರನ್ ಬಾರಿಸಿದರು.
ಆದರೆ ಉಳಿದ ಬ್ಯಾಟರ್ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಅತ್ತ ಕರಾರುವಾಕ್ ದಾಳಿ ಸಂಘಟಿಸಿದ ಹೇಡನ್ ಕೆರ್ 3 ವಿಕೆಟ್ ಕಬಳಿಸಿದರು. ಪರಿಣಾಮ 20 ಓವರ್ಗಳಲ್ಲಿ ಗಾಲೆ ಟೈಟಾನ್ಸ್ ತಂಡವು 146 ರನ್ಗಳಿಸಿ ಆಲೌಟ್ ಆಯಿತು.
147 ರನ್ಗಳ ಸುಲಭ ಗುರಿ ಪಡೆದ ದಂಬುಲ್ಲಾ ಔರ ತಂಡಕ್ಕೆ ಅವಿಷ್ಕ ಫರ್ನಾಂಡೊ (24) ಹಾಗೂ ಕುಸಾಲ್ ಮೆಂಡಿಸ್ (49) ಉತ್ತಮ ಆರಂಭ ಒದಗಿಸಿದ್ದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಕುಸಾಲ್ ಪೆರೆರಾ ಭರ್ಜರಿ ಬ್ಯಾಟಿಂಗ್ ನಡೆಸಿದರು.
39 ಎಸೆತಗಳನ್ನು ಎದುರಿಸಿದ ಕುಸಾಲ್ ಪೆರೆರಾ 3 ಭರ್ಜರಿ ಸಿಕ್ಸ್ 4 ಫೋರ್ಗಳೊಂದಿಗೆ 53 ರನ್ ಬಾರಿಸಿದರು. ಈ ಅರ್ಧಶತಕದ ನೆರವಿನೊಂದಿಗೆ 19.4 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು ದಂಬುಲ್ಲಾ ಔರ ತಂಡವು ಗುರಿ ಮುಟ್ಟಿತು.
ಈ ಗೆಲುವಿನೊಂದಿಗೆ ದುಂಬುಲ್ಲಾ ಔರ ತಂಡ ಲಂಕಾ ಪ್ರೀಮಿಯರ್ ಲೀಗ್ನ ಫೈನಲ್ಗೆ ಎಂಟ್ರಿ ಕೊಟ್ಟಿದೆ. ಇನ್ನು ಸೋತಿರುವ ಗಾಲೆ ಟೈಟಾನ್ಸ್ ತಂಡವು ಎಲಿಮಿನೇಟರ್ ಪಂದ್ಯದಲ್ಲಿ ಗೆಲ್ಲುವ ತಂಡದೊಡನೆ 2ನೇ ಕ್ವಾಲಿಫೈಯರ್ ಪಂದ್ಯವಾಡಲಿದೆ.
Dambulla Aura star batter Avishka has been in top form this season. Let’s hear what he has to say.#LPL2023 #LiveTheAction pic.twitter.com/xb3jS6T081
— LPL – Lanka Premier League (@LPLT20) August 17, 2023
ದಂಬುಲ್ಲಾ ಔರ ಪ್ಲೇಯಿಂಗ್ 11: ಅವಿಷ್ಕಾ ಫೆರ್ನಾಂಡೋ , ಕುಸಾಲ್ ಮೆಂಡಿಸ್ (ನಾಯಕ) , ಸದೀರ ಸಮರವಿಕ್ರಮ , ಕುಸಾಲ್ ಪೆರೇರಾ , ಧನಂಜಯ ಡಿ ಸಿಲ್ವಾ , ಅಲೆಕ್ಸ್ ರಾಸ್ , ಹೇಡನ್ ಕೆರ್ , ದುಶನ್ ಹೇಮಂತ , ಹಸನ್ ಅಲಿ , ಬಿನೂರ ಫರ್ನಾಂಡೋ , ನೂರ್ ಅಹ್ಮದ್.
ಇದನ್ನೂ ಓದಿ: IPL 2024: ಮತ್ತೆ ಬದಲಾಗಲಿದೆಯಾ RCB ತಂಡದ ನಾಯಕತ್ವ..?
ಗಾಲೆ ಟೈಟಾನ್ಸ್ ಪ್ಲೇಯಿಂಗ್ 11: ಲಸಿತ್ ಕ್ರೂಸ್ಪುಲ್ಲೆ , ಲಿಟ್ಟನ್ ದಾಸ್ (ವಿಕೆಟ್ ಕೀಪರ್) , ಭಾನುಕಾ ರಾಜಪಕ್ಸೆ , ಶಕೀಬ್ ಅಲ್ ಹಸನ್ , ನಜಿಬುಲ್ಲಾ ಝದ್ರಾನ್ , ದಾಸುನ್ ಶನಕ (ನಾಯಕ) , ಲಹಿರು ಸಮರಕೋನ್ , ಸೀಕ್ಕುಗೆ ಪ್ರಸನ್ನ , ಕಸುನ್ ರಜಿತ , ಲಹಿರು ಕುಮಾರ , ತಬ್ರೈಝ್ ಶಮ್ಸಿ.