ಇಂಗ್ಲೆಂಡ್ ನ ಲೆಜೆಂಡರಿ ಆಟಗಾರ ಮತ್ತು ಕ್ರಿಕೆಟ್ ವಲಯಗಳಲ್ಲಿ ಲಾರ್ಡ್ ಟೆಡ್ ಅಂತ ಖ್ಯಾತರಾಗಿದ್ದ ಟೆಡ್ ಡೆಕ್ಸ್ಟರ್ ಗುರುವಾರದಂದು ತಮ್ಮ 86ನೇ ವಯಸ್ಸಿನಲ್ಲಿ ನಿಧನ ಹೊಂದಿದರು. ಕಳೆದ ಕೆಲ ದಿನಗಳಿಂದ ಅನಾರೋಗ್ಯಕ್ಕೀಡಾಗಿದ್ದ ಟೆಡ್ ವೂಲ್ವರ್ಹ್ಯಾಂಪ್ಟನ್ ನಲ್ಲಿ ಕೊನೆಯುಸಿರೆಳೆದರು ಅಂತ ಕುಟುಂಬದ ಮೂಲಗಳು ತಿಳಿಸಿವೆ.
ಇಂಗ್ಲೆಂಡ್ನ ಸರ್ವಕಾಲಿಕ ಶ್ರೇಷ್ಠರಲ್ಲಿ ಒಬ್ಬರೆಂದು ಪರಿಗಣಿಸಲ್ಪಡುವ ಟೆಡ್ ಅವರು ಆಕ್ರಮಣಕಾರಿ ಮಧ್ಯಮ ಕ್ರಮಾಂಕದ ಆಟಗಾರರಾಗಿದ್ದರು ಮತ್ತು ಮಧ್ಯಮ ವೇಗದ ಬೌಲರ್ ಸಹ ಆಗಿದ್ದರು.
ಇಂಗ್ಲೆಂಡ್ ಪರ 1958 ರಿಂದ 1968 ರವರೆಗೆ 62 ಟೆಸ್ಟ್ಗಳನ್ನಾಡಿ 47.89 ರ ಸರಾಸರಿಯಲ್ಲಿ 9 ಶತಕ ಮತ್ತು 27 ಆರ್ಧ ಶತಕಗಳ ನೆರವಿನೊಂದಿಗೆ ಟೆಡ್ 4,502 ರನ್ ಗಳಿಸಿದ್ದರು. ಹಾಗೆಯೇ 34.83 ರ ಸರಾಸರಿಯಲ್ಲಿ 66 ವಿಕೆಟ್ ಸಹ ಪಡೆದರು. ಇನ್ನಿಂಗ್ಸೊಂದರಲ್ಲಿ 4/10 ಅವರ ಅತ್ಯುತ್ತಮ ಬೌಲಿಂಗ್ ಪ್ರದರ್ಶನವಾಗಿತ್ತು.
ಉತ್ತಮ ಲೀಡರ್ ಅಂತಲೂ ಗುರುತಿಸಿಕೊಂಡಿದ್ದ ಟೆಡ್ 30 ಟೆಸ್ಟ್ಗಳಲ್ಲಿ ತನ್ನ ದೇಶದ ನಾಯಕತ್ವ ವಹಿಸಿದ್ದರು. ಇಂಗ್ಲೆಂಡ್ನ ಕೆಲ ಮಾಜಿ ಮತ್ತು ಹಾಲಿ ಆಟಗಾರರು ಟೆಡ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.
ಇಂಗ್ಲೆಂಡ್ ಮಾಜಿ ಅಟಗಾರ ಮೈಕೆಲ್ ವಾನ್ ತನ್ನ ಟ್ವೀಟ್ ನಲ್ಲಿ, ‘ಬಹಳ ದುಃಖಕರ ಸುದ್ದಿ..ನನಗೆ ಮತ್ತು ನನ್ನಂಥ ಅನೇಕರಿಗೆ ಅವರು ಯಾವುದೇ ಅಹಂಭಾವವಿಲ್ಲದೆ ಸಲಹೆಗಳನ್ನು ನೀಡುತ್ತಿದ್ದರು. ತಮ್ಮ ಮೊಟಾರ್ ಬೈಕ್ ಮೇಲೆ ಅವರು ಲಂಚ್ಗಾಗಿ ಬರುವುದನ್ನು ನೋಡುವುದು ಮತ್ತು ಅವರ ಜೊತೆ ಕೂತು ಕ್ರಿಕೆಟ್ ಬಗ್ಗೆ ಹರಟುವುದು ಬಹಲ ಮಜವಾಗಿರುತಿತ್ತು,’ ಅಂತ ಹೇಳಿದ್ದಾರೆ.
Such sad news .. Ted dexter was someone who always went out of his way to offer so much great advice to me & many others .. seeing him arrive for lunch on his motorbike & then sit & listen to him discuss all cricketing issues was always a joy .. #RIPTed
— Michael Vaughan (@MichaelVaughan) August 26, 2021
ಇಂಗ್ಲೆಂಡ್ ಮಾಜಿ ಆರಂಭ ಆಟಗಾರ ಮತ್ತು ಕಾಮೆಂಟೇಟರ್ ಮೈಕೆಲ್ ಆರ್ಥರ್ಟನ್ ಅವರು, ಟೆಡ್ ಡೆಕ್ಸ್ಟರ್ ಅವರು ತಮ್ಮ ಬ್ಯಾಟಿಂಗ್ನಲ್ಲಿ ತೋರುತ್ತಿದ್ದ ಗ್ರೇಸ್, ಶೈಲಿ ಮತ್ತು ಸೊಬಗನ್ನು ಇಂಗ್ಲೆಂಡ್ ಬ್ಯಾಟ್ಸ್ಮನ್ಗಳು ಇಂದು ತೋರುತ್ತಾರೆಂಬ ನಂಬಿಕೆ ಇಟ್ಟುಕೊಂಡಿದ್ದೇನೆ, ಎಂದು ಹೇಳಿದ್ದಾರೆ.
Hope England’s batsmen can put on a show today and that they play with the kind of grace and style and flair that Ted Dexter epitomised
— Mike atherton (@Athersmike) August 26, 2021
ಮಾಜಿ ಆಟಗಾರ, ಕಾಮೆಂಟೇಟರ್ ಮತ್ತು ಅಂಕಣಕಾರ ಮಾರ್ಕ್ ನಿಕೊಲಾಸ್ ಅವರು ತನ್ನ ಟ್ವೀಟ್ನಲ್ಲಿ, ‘ನನ್ನ ಬಾಲ್ಯದ ಹಿರೋ, ಶಿಕ್ಷಕ ಮತ್ತು ಸ್ನೇಹಿತ-ಟೆಡ್ ಡೆಕ್ಸ್ಟರ್ ಇನ್ನಿಲ್ಲ. ಶ್ರೇಷ್ಠ ಆಟಗಾರನಾಗಿದ್ದ ಟೆಡ್ ಕ್ರಿಕೆಟ್ ಅನ್ನು ಆಧುನಿಕತೆಗೆ ಎಳೆತರಲು, ಬೇರೆಯವರಿಗಿಂತ ಅಥವಾ ಬೇರೆಯವರೆಲ್ಲರಿಗಿಂತ ಜಾಸ್ತಿ ಶ್ರಮಿಸಿದ್ದಾರೆ. ಕೇವಲ 24 ಗಂಟೆಗಳ ಅವಧಿಯಲ್ಲಿ 60 ರ ದಶಕದಲ್ಲಿ ಬೇರೆ ಬೇರೆ ರೀತಿಯ ಐಕಾನ್ಗಳಾಗಿದ್ದ ಚಾರ್ಲೀ ವ್ಯಾಟ್ಸ್ ಮತ್ತು ಟೆಡ್ ನಮ್ಮನ್ನು ಆಗಲಿದ್ದಾರೆ, ನಿಜಕ್ಕೂ ವಿಷಾದಕರ,’ ಎಂದು ಹೇಳಿದ್ದಾರೆ.
Ted Dexter has gone – boyhood hero, teacher and dear friend. He was one of the great players and did as much or more than anyone to drag cricket into the modern age. Charlie Watts and Ted, in the space of 24 hours – icons of the 60’s in very different ways – sadness indeed..
— Mark Nicholas (@mcjnicholas) August 26, 2021
ಇದನ್ನೂ ಓದಿ: ಭಾರತೀಯ ಕ್ರಿಕೆಟ್ಗೆ ಗುಡ್ ಬೈ ಹೇಳಿ ವಿದೇಶಿ ಲೀಗ್ನತ್ತ ಮುಖ ಮಾಡಿದ ಮುಂಬೈ ಆಟಗಾರ
Published On - 2:11 am, Fri, 27 August 21