ಗುಜರಾತ್ ಜೈಂಟ್ಸ್​ ವಿರುದ್ಧ ಇಂಡಿಯಾ ಕ್ಯಾಪಿಟಲ್ಸ್​ ತಂಡಕ್ಕೆ ರೋಚಕ ಜಯ

| Updated By: ಝಾಹಿರ್ ಯೂಸುಫ್

Updated on: Dec 06, 2023 | 11:17 PM

India Capitals vs Gujarat Giants: 30 ಎಸೆತಗಳನ್ನು ಎದುರಿಸಿದ ಗೌತಮ್ ಗಂಭೀರ್ 1 ಸಿಕ್ಸ್​ ಹಾಗೂ 7 ಫೋರ್​ಗಳೊಂದಿಗೆ 51 ರನ್ ಬಾರಿಸಿದರು. ಇನ್ನು ಕೆವಿನ್ ಪೀಟರ್ಸನ್ 26 ರನ್ ಬಾರಿಸಿದರೆ, ಬೆನ್ ಡಕ್ 10 ಎಸೆತಗಳಲ್ಲಿ 30 ರನ್ ಸಿಡಿಸಿದರು. ಇನ್ನು ಅಂತಿಮ ಹಂತದಲ್ಲಿ ಭರತ್ ಚಿಪ್ಲಿ 16 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್​ ಹಾಗೂ 2 ಫೋರ್​ಗಳೊಂದಿಗೆ 35 ರನ್ ಬಾರಿಸಿದರು.

ಗುಜರಾತ್ ಜೈಂಟ್ಸ್​ ವಿರುದ್ಧ ಇಂಡಿಯಾ ಕ್ಯಾಪಿಟಲ್ಸ್​ ತಂಡಕ್ಕೆ ರೋಚಕ ಜಯ
Legends League Cricket
Follow us on

ಸೂರತ್​ನ ಲಾಲ್​ಭಾಯ್ ಸ್ಟೇಡಿಯಂನಲ್ಲಿ ನಡೆದ ಲೆಜೆಂಡ್ಸ್ ಲೀಗ್​ನ ಎಲಿಮಿನೇಟರ್ ಪಂದ್ಯದಲ್ಲಿ ಇಂಡಿಯಾ ಕ್ಯಾಪಿಟಲ್ಸ್ ತಂಡ ರೋಚಕ ಜಯ ಸಾಧಿಸಿತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಜೈಂಟ್ಸ್​ ತಂಡವು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಇಂಡಿಯಾ ಕ್ಯಾಪಿಟಲ್ಸ್ ತಂಡಕ್ಕೆ ನಾಯಕ ಗೌತಮ್ ಗಂಭೀರ್ ಭರ್ಜರಿ ಆರಂಭ ಒದಗಿಸಿದ್ದರು.

30 ಎಸೆತಗಳನ್ನು ಎದುರಿಸಿದ ಗೌತಮ್ ಗಂಭೀರ್ 1 ಸಿಕ್ಸ್​ ಹಾಗೂ 7 ಫೋರ್​ಗಳೊಂದಿಗೆ 51 ರನ್ ಬಾರಿಸಿದರು. ಇನ್ನು ಕೆವಿನ್ ಪೀಟರ್ಸನ್ 26 ರನ್ ಬಾರಿಸಿದರೆ, ಬೆನ್ ಡಕ್ 10 ಎಸೆತಗಳಲ್ಲಿ 30 ರನ್ ಸಿಡಿಸಿದರು. ಇನ್ನು ಅಂತಿಮ ಹಂತದಲ್ಲಿ ಭರತ್ ಚಿಪ್ಲಿ 16 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್​ ಹಾಗೂ 2 ಫೋರ್​ಗಳೊಂದಿಗೆ 35 ರನ್ ಬಾರಿಸಿದರು. ಪರಿಣಾಮ 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು ಇಂಡಿಯಾ ಕ್ಯಾಪಿಟಲ್ಸ್​ ತಂಡ 223 ರನ್ ಬಾರಿಸಿದರು.

224 ರನ್​ಗಳ ಗುರಿಯನ್ನು ಬೆನ್ನತ್ತಿದ ಗುಜರಾತ್ ಜೈಂಟ್ಸ್ ತಂಡಕ್ಕೆ ಕ್ರಿಸ್ ಗೇಲ್​ ಸ್ಪೋಟಕ ಆರಂಭ ಒದಗಿಸಿದರು. 55 ಎಸೆತಗಳನ್ನು ಎದುರಿಸಿದ ಗೇಲ್ 4 ಭರ್ಜರಿ ಸಿಕ್ಸ್ ಹಾಗೂ 9 ಫೋರ್​ಗಳೊಂದಿಗೆ 84 ಬಾರಿಸಿದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ 33 ಎಸೆತಗಳಲ್ಲಿ ಕೆವಿನ್ ಓ ಬ್ರಿಯಾನ್ 2 ಸಿಕ್ಸ್ ಹಾಗೂ 7 ಫೋರ್​ಗಳೊಂದಿಗೆ 57 ರನ್ ಸಿಡಿಸಿದರು.

ಪರಿಣಾಮ ಕೊನೆಯ ಓವರ್​ನಲ್ಲಿ ಗುಜರಾತ್ ಜೈಂಟ್ಸ್ ತಂಡಕ್ಕೆ 20 ರನ್​ಗಳು ಬೇಕಿತ್ತು. ಆದರೆ ಅಂತಿಮ ಓವರ್​ನಲ್ಲಿ ಕೇವಲ 8 ರನ್ ನೀಡುವ ಮೂಲಕ ಇಸುರು ಉದಾನ ಇಂಡಿಯಾ ಕ್ಯಾಪಿಟಲ್ಸ್ ತಂಡಕ್ಕೆ ರೋಚಕ ಜಯ ತಂದುಕೊಟ್ಟರು.

ಗುಜರಾತ್ ಜೈಂಟ್ಸ್​ ಪ್ಲೇಯಿಂಗ್ ಇಲೆವೆನ್: ಜಾಕ್ವೆಸ್ ಕಾಲಿಸ್ , ಕೆವಿನ್ ಒ ಬ್ರಿಯಾನ್ , ರಿಚರ್ಡ್ ಲೆವಿ , ಪಾರ್ಥಿವ್ ಪಟೇಲ್ (ನಾಯಕ) , ಅಭಿಷೇಕ್ ಜುಂಜುನ್ವಾಲಾ , ಸೀಕ್ಕುಗೆ ಪ್ರಸನ್ನ , ರಾಯದ್ ಎಮ್ರಿಟ್ , ಎಸ್ ಶ್ರೀಶಾಂತ್ , ಸರಬ್ಜಿತ್ ಲಡ್ಡಾ , ರಜತ್ ಭಾಟಿಯಾ , ಈಶ್ವರ್ ಚೌಧರಿ.

ಇದನ್ನೂ ಓದಿ: IND vs ENG: ಟೀಮ್ ಇಂಡಿಯಾಗೆ ಸೋಲುಣಿಸಿದ ಇಂಗ್ಲೆಂಡ್

ಇಂಡಿಯಾ ಕ್ಯಾಪಿಟಲ್ಸ್ ಪ್ಲೇಯಿಂಗ್ ಇಲೆವೆನ್: ಗೌತಮ್ ಗಂಭೀರ್ (ನಾಯಕ) , ರಿಕಾರ್ಡೊ ಪೊವೆಲ್ , ಕಿರ್ಕ್ ಎಡ್ವರ್ಡ್ಸ್ , ಬೆನ್ ಡಂಕ್ ( wk ) , ಕೆವಿನ್ ಪೀಟರ್ಸನ್ , ಆಶ್ಲೇ ನರ್ಸ್ , ಭರತ್ ಚಿಪ್ಲಿ , ರಸ್ಟಿ ಥರಾನ್ , ಇಸುರು ಉದಾನಾ , ಕೆಪಿ ಅಪ್ಪಣ್ಣ , ಈಶ್ವರ್ ಪಾಂಡೆ.