AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

LLC 2024: ಲೆಜೆಂಡ್ಸ್ ಲೀಗ್ ಹರಾಜಿನಲ್ಲಿ ಮಾರಾಟವಾದ ಆಟಗಾರರ ಪಟ್ಟಿ ಇಲ್ಲಿದೆ

LLC 2024: ಮೂರನೇ ಆವೃತ್ತಿಯ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಇದೇ ಸೆಪ್ಟೆಂಬರ್ 20 ರಿಂದ ಆರಂಭವಾಗಲಿದೆ. ಹೀಗಾಗಿ ಈ ಲೀಗ್​ನ ಹರಾಜನ್ನು ಆಗಸ್ಟ್ 29 ರಂದು ಅಂದರೆ ಇಂದು ನಡೆಸಲಾಯಿತು. ನವದೆಹಲಿಯಲ್ಲಿ ನಡೆದ ಈ ಹರಾಜಿನಲ್ಲಿ ಒಟ್ಟು 6 ತಂಡಗಳು ತಮಗೆ ಬೇಕಾದ ಆಟಗಾರರನ್ನು ಖರೀದಿಸುವಲ್ಲಿ ಯಶಸ್ವಿಯಾದವು. ಈ ಹರಾಜಿನಲ್ಲಿ ವಿದೇಶಿ ಆಟಗಾರರು ಹೆಚ್ಚಿನ ಬೆಲೆ ಪಡೆದರೆ, ಭಾರತದ ಆಟಗಾರರಿಗೂ ಉತ್ತಮ ಬೆಲೆ ಸಿಕ್ಕಿತು.

LLC 2024: ಲೆಜೆಂಡ್ಸ್ ಲೀಗ್ ಹರಾಜಿನಲ್ಲಿ ಮಾರಾಟವಾದ ಆಟಗಾರರ ಪಟ್ಟಿ ಇಲ್ಲಿದೆ
ಲೆಜೆಂಡ್ಸ್ ಲೀಗ್ ಕ್ರಿಕೆಟ್
ಪೃಥ್ವಿಶಂಕರ
|

Updated on: Aug 29, 2024 | 8:05 PM

Share

ಮೂರನೇ ಆವೃತ್ತಿಯ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಇದೇ ಸೆಪ್ಟೆಂಬರ್ 20 ರಿಂದ ಆರಂಭವಾಗಲಿದೆ. ಹೀಗಾಗಿ ಈ ಲೀಗ್​ನ ಹರಾಜನ್ನು ಆಗಸ್ಟ್ 29 ರಂದು ಅಂದರೆ ಇಂದು ನಡೆಸಲಾಯಿತು. ನವದೆಹಲಿಯಲ್ಲಿ ನಡೆದ ಈ ಹರಾಜಿನಲ್ಲಿ ಒಟ್ಟು 6 ತಂಡಗಳು ತಮಗೆ ಬೇಕಾದ ಆಟಗಾರರನ್ನು ಖರೀದಿಸುವಲ್ಲಿ ಯಶಸ್ವಿಯಾದವು. ಈ ಹರಾಜಿನಲ್ಲಿ ವಿದೇಶಿ ಆಟಗಾರರು ಹೆಚ್ಚಿನ ಬೆಲೆ ಪಡೆದರೆ, ಭಾರತದ ಆಟಗಾರರಿಗೂ ಉತ್ತಮ ಬೆಲೆ ಸಿಕ್ಕಿತು. ಇನ್ನು ಈ ಆವೃತ್ತಿಯಿಂದ ದಿನೇಶ್ ಕಾರ್ತಿಕ್, ಶಿಖರ್ ಧವನ್ ಮತ್ತು ಹಾಶಿಮ್ ಆಮ್ಲಾ ಅವರಂತಹ ಅನುಭವಿ ಆಟಗಾರರೂ ಆಡುತ್ತಿರುವುದರಿಂದ ಲೀಗ್​ ಬಗ್ಗೆಗಿನ ರೋಚಕತೆ ಹೆಚ್ಚಿದೆ. ಇನ್ನು ಈ ಹರಾಜಿನಲ್ಲಿ ಯಾವ ಆಟಗಾರನಿಗೆ ಅಧಿಕ ಬೆಲೆ ನೀಡಲಾಯಿತು. ಯಾರು ಯಾವ ಬೆಲೆಗೆ ಹರಾಜಾದರು ಎಂಬುದನ್ನು ನೋಡುವುದಾದರೆ..

ಶ್ರೀಲಂಕಾದ ಮಾಜಿ ಆಲ್ ರೌಂಡರ್ ಈಸುರು ಉದಾನ ಅತ್ಯಂತ ದುಬಾರಿ ಬೆಲೆಗೆ ಮಾರಾಟವಾಗಿದ್ದಾರೆ. ಅವರನ್ನು 62 ಲಕ್ಷಕ್ಕೆ ಹೈದರಾಬಾದ್ ಖರೀದಿಸಿತ್ತು. ಚಾಡ್ವಿಕ್ ವಾಲ್ಟನ್ ಹರಾಜಿನಲ್ಲಿ ಮಾರಾಟವಾದ ಎರಡನೇ ಅತ್ಯಂತ ದುಬಾರಿ ಆಟಗಾರನಾಗಿದ್ದು, ಇವರನ್ನೂ ಸಹ ಹೈದರಾಬಾದ್ 60 ಲಕ್ಷ ರೂ.ಗೆ ಖರೀದಿಸಿತು. ಆಸ್ಟ್ರೇಲಿಯಾದ ಮಾಜಿ ಆಲ್‌ರೌಂಡರ್ ಡಾನ್ ಕ್ರಿಸ್ಟಿಯನ್ ಅವರನ್ನು ಮಣಿಪಾಲ್ ತಂಡ 56.95 ಲಕ್ಷಕ್ಕೆ ಖರೀದಿಸಿತು. ಈ ಮೂಲಕ ಹರಾಜಿನಲ್ಲಿ ಮಾರಾಟವಾದ ಮೂರನೇ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡರು. ಇದಾದ ನಂತರ ಕಿವೀಸ್ ತಂಡದ ಮಾಜಿ ಬ್ಯಾಟ್ಸ್‌ಮನ್ ರಾಸ್ ಟೇಲರ್ ಅವರನ್ನು ಕೊನಾರ್ಕ್ ಸೂರ್ಯಸ್ 50 ಲಕ್ಷ 34 ಸಾವಿರಕ್ಕೆ ಖರೀದಿಸಿತು. ಆದಾಗ್ಯೂ, ಧವನ್ ಅವರನ್ನು ಗುಜರಾತ್ ತಂಡ ಮತ್ತು ದಿನೇಶ್ ಕಾರ್ತಿಕ್ ಅವರನ್ನು ದಕ್ಷಿಣದ ಸದರ್ನ್ ಸೂಪರ್ ಸ್ಟಾರ್ಸ್ ತಂಡ ನೇರವಾಗಿ ತಮ್ಮ ತಂಡಕ್ಕೆ ಸೇರಿಸಿಕೊಂಡವು.

ಹರಾಜಿನಲ್ಲಿ ಮಾರಾಟವಾದ ಆಟಗಾರರ ಪಟ್ಟಿ

ಸದರ್ನ್ ಸೂಪರ್ ಸ್ಟಾರ್ಸ್

  • ಎಲ್ಟನ್ ಚಿಗುಂಬರ – 25 ಲಕ್ಷ
  • ಹ್ಯಾಮಿಲ್ಟನ್ ಮಸಕಡ್ಜಾ – 23.28 ಲಕ್ಷ
  • ಪವನ್ ನೇಗಿ – 40 ಲಕ್ಷ
  • ಜೀವನ್ ಮೆಂಡಿಸ್ – 15.6 ಲಕ್ಷ
  • ಸುರಂಗ ಲಕ್ಮಲ್ – 34 ಲಕ್ಷ
  • ಶ್ರೀವತ್ಸ ಗೋಸ್ವಾಮಿ – 17 ಲಕ್ಷ
  • ಹಮೀದ್ ಹಸನ್ – 21 ಲಕ್ಷ
  • ನಾಥನ್ ಕೌಲ್ಟರ್ ನೈಲ್ – 42 ಲಕ್ಷ

ಅರ್ಬನ್ ರೈಸರ್ಸ್ ಹೈದರಾಬಾದ್

  • ಸಮೀವುಲ್ಲಾ ಶಿನ್ವಾರಿ – 18.59 ಲಕ್ಷ
  • ಜಾರ್ಜ್ ವರ್ಕರ್ – 15.5 ಲಕ್ಷ
  • ಈಸುರು ಉದಾನ- 62 ಲಕ್ಷ
  • ರಿಕಿ ಕ್ಲಾರ್ಕ್ – 38 ಲಕ್ಷ
  • ಸ್ಟುವರ್ಟ್ ಬಿನ್ನಿ – 40 ಲಕ್ಷ
  • ಜಸ್ಕರನ್ ಮಲ್ಹೋತ್ರಾ – 10.50 ಲಕ್ಷ
  • ಚಾಡ್ವಿಕ್ ವಾಲ್ಟನ್ – 60 ಲಕ್ಷ
  • ಬಿಪುಲ್ ಶರ್ಮಾ – 17 ಲಕ್ಷ

ಇಂಡಿಯಾ ಕ್ಯಾಪಿಟಲ್ಸ್

  • ಡ್ವೇನ್ ಸ್ಮಿತ್ – 47.36 ಲಕ್ಷ
  • ಕಾಲಿನ್ ಡಿ ಗ್ರಾಂಡ್‌ಹೋಮ್ – 32.36 ಲಕ್ಷ
  • ನಮನ್ ಓಜಾ – 40 ಲಕ್ಷ
  • ಧವಳ್ ಕುಲಕರ್ಣಿ – 50 ಲಕ್ಷ
  • ಕ್ರಿಸ್ ಎಂಪೋಫು – 40 ಲಕ್ಷ

ಕೋನಾರ್ಕ್ ಸೂರ್ಯಸ್ ಒಡಿಶಾ

  • ಕೆವಿನ್ ಒ’ಬ್ರೇನ್ – 29.17 ಲಕ್ಷ
  • ರಾಸ್ ಟೇಲರ್ – 50.34 ಲಕ್ಷ
  • ವಿನಯ್ ಕುಮಾರ್ – 33 ಲಕ್ಷ
  • ರಿಚರ್ಡ್ ಲೆವಿ – 17 ಲಕ್ಷ
  • ದಿಲ್ಶನ್ ಮುನವೀರ – 15.5 ಲಕ್ಷ
  • ಶಹಬಾಜ್ ನದೀಮ್ – 35 ಲಕ್ಷ
  • ಫಿಡೆಲ್ ಎಡ್ವರ್ಡ್ಸ್ – 29 ಲಕ್ಷ
  • ಬೆನ್ ಲಾಫ್ಲಿನ್ – 23 ಲಕ್ಷ

ಮಣಿಪಾಲ್ ಟೈಗರ್ಸ್

  • ಶೆಲ್ಡನ್ ಕಾಟ್ರೆಲ್ – 33.56 ಲಕ್ಷ
  • ಡಾನ್ ಕ್ರಿಶ್ಚಿಯನ್ – 56.95 ಲಕ್ಷ
  • ಏಂಜೆಲೊ ಪೆರೇರಾ – 41 ಲಕ್ಷ
  • ಮನೋಜ್ ತಿವಾರಿ – 15 ಲಕ್ಷ
  • ಅಸೆಲಾ ಗುಣರತ್ನ – 36 ಲಕ್ಷ
  • ಸೊಲೊಮನ್ ಮೇಯರ್ – 38 ಲಕ್ಷ
  • ಅನುರೀತ್ ಸಿಂಗ್ – 27 ಲಕ್ಷ
  • ಅಬು ನೆಚಿಮ್ – 19 ಲಕ್ಷ
  • ಅಮಿತ್ ವರ್ಮಾ – 26 ಲಕ್ಷ

ಗುಜರಾತ್ ಜೈಂಟ್ಸ್

  • ಲಿಯಾಮ್ ಪ್ಲಂಕೆಟ್ – 41.56 ಲಕ್ಷ
  • ಮೋರ್ನೆ ವ್ಯಾನ್ ವೈಕ್ – 29.29 ಲಕ್ಷ
  • ಲೆಂಡ್ಲ್ ಸಿಮನ್ಸ್ – 37.5 ಲಕ್ಷ
  • ಅಸ್ಗರ್ ಅಫ್ಘಾನ್ – 33.17 ಲಕ್ಷ
  • ಜೆರೋಮ್ ಟೇಲರ್ – 36.17 ಲಕ್ಷ
  • ಪಾರಸ್ ಖಡ್ಕಾ – 12.58 ಲಕ್ಷ
  • ಸೆಕ್ಕುಗೆ ಪ್ರಸನ್ನ – 22.78 ಲಕ್ಷ
  • ಕಮೌ ಲಿವೆರಾಕ್ – 11 ಲಕ್ಷಗಳು
  • ಸೈಬ್ರಾಂಡ್ – 15 ಲಕ್ಷ

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ