ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ ಮತ್ತೊಬ್ಬ ಟೀಂ ಇಂಡಿಯಾ ಕ್ರಿಕೆಟಿಗ
Barinder Singh Sran: ಎಂಎಸ್ ಧೋನಿ ನಾಯಕತ್ವದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಟೀಂ ಇಂಡಿಯಾದ ಎಡಗೈ ವೇಗದ ಬೌಲರ್ ಬರೀಂದರ್ ಸಿಂಗ್ ಸ್ರಾನ್ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಬಹಳ ವರ್ಷಗಳಿಂದ ಟೀಂ ಇಂಡಿಯಾದಿಂದ ಹೊರಗಿದ್ದ ಬರೀಂದರ್, ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ತಮ್ಮ ಕ್ರಿಕೆಟ್ ಜೀವನಕ್ಕೆ ಅಂತ್ಯ ಹಾಡಿದ್ದಾರೆ.
ಎಂಎಸ್ ಧೋನಿ ನಾಯಕತ್ವದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಟೀಂ ಇಂಡಿಯಾದ ಎಡಗೈ ವೇಗದ ಬೌಲರ್ ಬರೀಂದರ್ ಸಿಂಗ್ ಸ್ರಾನ್ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಬಹಳ ವರ್ಷಗಳಿಂದ ಟೀಂ ಇಂಡಿಯಾದಿಂದ ಹೊರಗಿದ್ದ ಬರೀಂದರ್, ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ತಮ್ಮ ಕ್ರಿಕೆಟ್ ಜೀವನಕ್ಕೆ ಅಂತ್ಯ ಹಾಡಿದ್ದಾರೆ. ಈ ಮೂಲಕ ಇಂದು ಒಂದೇ ದಿನ ಮೂವರು ಕ್ರಿಕೆಟಿಗರು ವೃತ್ತಿಜೀವನಕ್ಕೆ ವಿದಾಯ ಹೇಳಿದಂತ್ತಾಗಿದೆ. ಬರೀಂದರ್ ಸಿಂಗ್ ಸ್ರಾನ್ ಅವರಿಗೂ ಮೊದಲು ಆಸ್ಟ್ರೇಲಿಯಾದ ಯುವ ಬ್ಯಾಟ್ಸ್‌ಮನ್ ವಿಲ್ ಪುಕೊವ್ಸ್ಕಿ ಮತ್ತು ವೆಸ್ಟ್ ಇಂಡೀಸ್ ತಂಡದ ಶಾನನ್ ಗೇಬ್ರಿಯಲ್ ಕೂಡ ನಿವೃತ್ತಿ ಘೋಷಿಸಿದ್ದರು.
8 ವರ್ಷಗಳಿಂದ ಅವಕಾಶಗಳಿಲ್ಲ
2016 ರಲ್ಲಿ ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿದ್ದ ವೇಗದ ಬೌಲರ್ ಬರೀಂದರ್ ಸ್ರಾನ್, ಕಳೆದ 8 ವರ್ಷಗಳಿಂದ ಟೀಂ ಇಂಡಿಯಾದಿಂದ ಹೊರಗಿದ್ದರು. ಈಗ ತಮ್ಮ ಕೆಲವು ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಅವರು ತಮ್ಮ ನಿವೃತ್ತಿಯ ನಿರ್ಧಾರದ ಬಗ್ಗೆ ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಬರೀಂದರ್, ತಮ್ಮ ಕೊನೆಯ ಅಂತರಾಷ್ಟ್ರೀಯ ಪಂದ್ಯವನ್ನು 22 ಜೂನ್ 2016 ರಂದು ಜಿಂಬಾಬ್ವೆ ವಿರುದ್ಧ ಟಿ20 ಸರಣಿಯಲ್ಲಿ ಆಡಿದ್ದರು.
ನಾನು ಅತ್ಯಂತ ಕೃತಜ್ಞನ
ಇನ್ನು ತಮ್ಮ ನಿವೃತ್ತಿಯ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಬರೀಂದರ್, ‘ನಾನು ಅಧಿಕೃತವಾಗಿ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದೇನೆ. ಈ ಪ್ರಯಾಣಕ್ಕಾಗಿ ನಾನು ಹೃತ್ಪೂರ್ವಕವಾಗಿ ಕೃತಜ್ಞನಾಗಿದ್ದೇನೆ. 2009 ರಲ್ಲಿ ಬಾಕ್ಸಿಂಗ್‌ನಿಂದ ನನ್ನ ಬದುಕನ್ನು ಕ್ರಿಕೆಟ್ನತ್ತ ತಿರುಗಿಸಿದ ನಂತರ, ಕ್ರಿಕೆಟ್ ನನಗೆ ಲೆಕ್ಕವಿಲ್ಲದಷ್ಟು ಮತ್ತು ನಂಬಲಾಗದ ಅನುಭವಗಳನ್ನು ನೀಡಿದೆ. ವೇಗದ ಬೌಲಿಂಗ್ ಶೀಘ್ರದಲ್ಲೇ ನನ್ನ ಅದೃಷ್ಟವನ್ನು ಬದಲಿಸಿತು. ಆ ಬಳಿಕ ಐಪಿಎಲ್ ಫ್ರಾಂಚೈಸಿಯನ್ನು ಪ್ರತಿನಿಧಿಸಲು ಬಾಗಿಲು ತೆರೆಯಿತು. ನಂತರ 2016 ರಲ್ಲಿ ಭಾರತವನ್ನು ಪ್ರತಿನಿಧಿಸುವ ಗೌರವ ಸಿಕ್ಕಿತು. ನನ್ನ ಅಂತರರಾಷ್ಟ್ರೀಯ ವೃತ್ತಿಜೀವನವು ಚಿಕ್ಕದಾಗಿದ್ದರೂ, ಅಲ್ಲಿ ಸಿಕ್ಕ ನೆನಪುಗಳು ಯಾವಾಗಲೂ ಸ್ಮರಣೀಯವಾಗಿರತ್ತವೆ. ನನ್ನ ಪ್ರಯಾಣದುದ್ದಕ್ಕೂ ನನಗೆ ಬೆಂಬಲ ನೀಡಿದ ತರಬೇತುದಾರರು ಮತ್ತು ದೇವರಿಗೆ ನಾನು ಕೃತಜ್ಞನಾಗಿದ್ದೇನೆ. ನಾನು ಈ ಹೊಸ ಅಧ್ಯಾಯವನ್ನು ಆರಂಭಿಸುತ್ತಿದ್ದಂತೆ, ಕ್ರಿಕೆಟ್ ನನಗೆ ನೀಡಿದ ಅವಕಾಶಗಳಿಗಾಗಿ ನಾನು ಅತ್ಯಂತ ಕೃತಜ್ಞನಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.
View this post on Instagram
ಕೇವಲ 8 ಪಂದ್ಯಗಳಿಗೆ ಅಂತ್ಯ
2016 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಏಕದಿನ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ್ದ ಬರೀಂದರ್ ಅವರು ಜಿಂಬಾಬ್ವೆ ವಿರುದ್ಧ ಚೊಚ್ಚಲ ಟಿ20 ಪಂದ್ಯವನ್ನು ಆಡಿದರು. ಒಟ್ಟಾರೆ ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ ಬರೀಂದರ್, 6 ಏಕದಿನ ಮತ್ತು 2 ಟಿ20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ, ಅವರು ಏಕದಿನದಲ್ಲಿ ಒಟ್ಟು 7 ವಿಕೆಟ್ ಮತ್ತು ಟಿ20ಯಲ್ಲಿ 6 ವಿಕೆಟ್ಗಳನ್ನು ಪಡೆದಿದ್ದರು. ಇದಲ್ಲದೆ, ಐಪಿಎಲ್‌ನಲ್ಲಿ 4 ತಂಡಗಳ ಪರ ಆಡಿದ್ದ ಅವರು ಒಟ್ಟು 24 ಪಂದ್ಯಗಳನ್ನು ಆಡಿದ್ದು, 18 ವಿಕೆಟ್ ಪಡೆದಿದ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ