T20 Blast: ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ವಿಟಾಲಿಟಿ ಟಿ20 ಬ್ಲಾಸ್ಟ್ನಲ್ಲಿ ನಡೆದ ಡರ್ಬಿಶೈರ್ ಹಾಗೂ ಲಂಕಾಶೈರ್ ನಡುವಣ ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಲಂಕಾಶೈರ್ ತಂಡವು ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಲಂಕಾಶೈರ್ ಆರಂಭಿಕರಾದ ಜೆನ್ನಿಂಗ್ಸ್ ಹಾಗೂ ಸಾಲ್ಟ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಮೊದಲ ವಿಕೆಟ್ಗೆ 45 ರನ್ಗಳ ಜೊತೆಯಾಟವಾಡಿ ಈ ಜೋಡಿ ನಿರ್ಗಮಿಸುತ್ತಿದ್ದಂತೆ ಕ್ರೀಸ್ಗೆ ಎಂಟ್ರಿ ಕೊಟ್ಟಿದ್ದು ಲಿಯಾಮ್ ಲಿವಿಂಗ್ಸ್ಟೋನ್ (Liam Livingstone).
ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ ಪರ ಅಬ್ಬರಿಸಿ ಬೊಬ್ಬರಿದಿದ್ದ ಲಿವಿಂಗ್ಸ್ಟೋನ್ ತಮ್ಮ ಅದ್ಭುತ ಫಾರ್ಮ್ನ್ನು ಟಿ20 ಬ್ಲಾಸ್ಟ್ ಲೀಗ್ನಲ್ಲೂ ಮುಂದುವರೆಸಿದ್ದಾರೆ. ಆರಂಭದಿಂದಲೇ ಡರ್ಬಿಶೈರ್ ಬೌಲರ್ಗಳ ಬೆಂಡೆತ್ತಿದ ಲಿವಿಂಗ್ಸ್ಟೋನ್ ಸಿಕ್ಸ್-ಫೋರ್ಗಳ ಸುರಿಮಳೆಗೈದರು. ಪರಿಣಾಮ ಕೇವಲ 28 ಎಸೆತಗಳಲ್ಲಿ ಅರ್ಧಶತಕ ಮೂಡಿಬಂತು.
ಹಾಫ್ ಸೆಂಚುರಿ ಬೆನ್ನಲ್ಲೇ ಬ್ಯಾಟಿಂಗ್ ಅಬ್ಬರ ಮುಂದುವರೆಸಿದ ಲಿವಿಂಗ್ಸ್ಟೋನ್ 5 ಸಿಕ್ಸ್ ಹಾಗೂ 5 ಫೋರ್ಗಳನ್ನು ಬಾರಿಸಿದ್ದರು. ಪರಿಣಾಮ 40 ಎಸೆತಗಳಲ್ಲಿ ವೈಯುಕ್ತಿಕ ಮೊತ್ತ 75ಕ್ಕೆ ಬಂದು ನಿಂತಿತು. ವಿಶೇಷ ಎಂದರೆ ಸಿಕ್ಸ್, ಫೋರ್ಗಳ ಮೂಲಕವೇ ಲಿವಿಂಗ್ಸ್ಟೋನ್ ಕೇವಲ 10 ಎಸೆತಗಳಲ್ಲಿ 50 ರನ್ ಕಲೆಹಾಕಿದ್ದರು. ಈ ಹಂತದಲ್ಲಿ ಲಿವಿಂಗ್ಸ್ಟೋನ್ ಅವರ ಈ ಸಿಡಿಲಬ್ಬರದ ಬ್ಯಾಟಿಂಗ್ ಅನ್ನು ತಡೆಯಲು ಕೊನೆಗೂ ಹೇಡನ್ ಕೇರ್ ಯಶಸ್ವಿಯಾದರು. ಅದರಂತೆ ಬಿರುಸಿನ 75 ರನ್ಗಳಿಸಿ ಲಿವಿಂಗ್ಸ್ಟೋನ್ ಔಟಾದರು. ಈ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಲಂಕಾಶೈರ್ ತಂಡವು 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 219 ರನ್ ಕಲೆಹಾಕಿತು.
5️⃣0️⃣ UP IN STYLE!!! ?@liaml4893 reaches his half-century off 28 balls with a huge six! Also 50 partnership up between him and @DaneVilas! ?
4⃣ FOURS
4️⃣ SIXESWatch every ball LIVE on #LancsTV ➡️ https://t.co/JiDEOGoPX3
⚡️ #LightningStrikes pic.twitter.com/HxupjEJ8JH
— Lancashire Lightning (@lancscricket) June 1, 2022
220 ರನ್ಗಳ ಬೃಹತ್ ಟಾರ್ಗೆಟ್ ಬೆನ್ನತ್ತಿದ ಡರ್ಬಿಶೈರ್ ಪರ ಲೂಯಿಸ್ ರೀಸ್ ಅಬ್ಬರಿಸಿದರು. ಆರಂಭಿಕನಾಗಿ ಕಣಕ್ಕಿಳಿದ ರೀಸ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ ಕೇವಲ 36 ಎಸೆತಗಳಲ್ಲಿ 55 ರನ್ ಬಾರಿಸಿದರು. ಆ ಬಳಿಕ ಬಂದ ಡುಪೊಲಿ ಕೂಡ ಸ್ಪೋಟಕ ಇನಿಂಗ್ಸ್ ಆಡಿದರು. 3 ಸಿಕ್ಸ್ ಹಾಗೂ 3 ಫೋರ್ಗಳನ್ನು ಒಳಗೊಂಡಂತೆ ಕೇವಲ 31 ಎಸೆತಗಳಲ್ಲಿ 59 ರನ್ ಬಾರಿಸಿದ ಡುಪೊಲಿ ತಂಡವನ್ನು ಜಯದತ್ತ ಕೊಂಡೊಯ್ದರು.
ಆದರೆ ಅಂತಿಮ ಹಂತದಲ್ಲಿ ಲಂಕಾಶೈರ್ ಅತ್ಯುತ್ತಮ ಬೌಲಿಂಗ್ ಮೂಲಕ ಡರ್ಬಿಶೈರ್ ತಂಡವನ್ನು 202 ರನ್ಗೆ ನಿಯಂತ್ರಿಸಿದರು. ಪರಿಣಾಮ ಲಂಕಾಶೈರ್ ತಂಡವು 17 ರನ್ಗಳಿಂದ ಜಯ ಸಾಧಿಸಿತು.
ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.