AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೆರಿಕದಲ್ಲಿ ಸೆಕೆಂಡ್ ಇನಿಂಗ್ಸ್ ಆರಂಭಿಸಲು ಸ್ಟಾರ್ ಆಲ್​ರೌಂಡರ್ ಸಜ್ಜು

Liam Plunkett: ಇಂಗ್ಲೆಂಡ್ ಪರ 13 ಟೆಸ್ಟ್ ಪಂದ್ಯಗಳಿಂದ ಲಿಯಾಮ್ ಪ್ಲಂಕೆಟ್ 41 ವಿಕೆಟ್ ಹಾಗೂ 238 ರನ್ ಬಾರಿಸಿದ್ದರು. ಇನ್ನು 89 ಏಕದಿನ ಪಂದ್ಯಗಳಿಂದ 646 ರನ್ ಹಾಗೂ 135 ವಿಕೆಟ್ ಪಡೆದಿದ್ದಾರೆ.

ಅಮೆರಿಕದಲ್ಲಿ ಸೆಕೆಂಡ್ ಇನಿಂಗ್ಸ್ ಆರಂಭಿಸಲು ಸ್ಟಾರ್ ಆಲ್​ರೌಂಡರ್ ಸಜ್ಜು
Liam Plunkett
TV9 Web
| Updated By: ಝಾಹಿರ್ ಯೂಸುಫ್|

Updated on: Sep 01, 2021 | 3:49 PM

Share

ಮಂಗಳವಾರವಷ್ಟೇ ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಡೇಲ್ ಸ್ಟೇನ್ (Dale Steyn) ಅಂತಾರಾಷ್ಟ್ರೀಯ ಕ್ರಿಕೆಟ್​​ಗೆ ವಿದಾಯ ಹೇಳಿದ್ದರು. ಇದೀಗ ಇಂಗ್ಲೆಂಡ್ (England) ತಂಡದ ಸ್ಟಾರ್ ಆಲ್​ರೌಂಡರ್ ಲಿಯಾಮ್ ಪ್ಲಂಕೆಟ್ (Liam Plunkett) ಕೂಡ ಇಂಗ್ಲೆಂಡ್ ಕ್ರಿಕೆಟ್​ಗೆ ಗುಡ್​ ಬೈ ಹೇಳಿದ್ದಾರೆ. ಆದರೆ ಪ್ಲಂಕೆಟ್ ಕ್ರಿಕೆಟ್ ಅಂಗಳದಲ್ಲೇ ಕಾಣಿಸಿಕೊಳ್ಳುವುದಾಗಿ ತಿಳಿಸಿದ್ದಾರೆ. ಅದರಂತೆ ಮುಂದಿನ ದಿನಗಳಲ್ಲಿ ಅಮೆರಿಕ ಲೀಗ್​ನಲ್ಲಿ ಇಂಗ್ಲೆಂಡ್ ತಂಡದ ಆಲ್​ರೌಂಡರ್ ಕಾಣಿಸಿಕೊಳ್ಳಲಿದ್ದಾರೆ. ಪ್ಲಂಕೆಟ್​ ಅವರ ಪತ್ನಿಯು ಅಮೆರಿಕ ಮೂಲದವರಾಗಿದ್ದು, ಹೀಗಾಗಿ ಮುಂಬರುವ ದಿನಗಳಲ್ಲಿ ಅಲ್ಲಿನ ಲೀಗ್​ನ ಭಾಗವಾಗಲು ಬಯಸಿದ್ದಾರೆ.

2019 ರಲ್ಲಿ ಮೊದಲ ಬಾರಿಗೆ ವಿಶ್ವಕಪ್ ಗೆದ್ದ ಇಂಗ್ಲೆಂಡ್​ ತಂಡದ ಭಾಗವಾಗಿದ್ದ ಪ್ಲಂಕೆಟ್, ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 124 ಪಂದ್ಯಗಳಲ್ಲಿ ಪ್ರತಿನಿಧಿಸಿದ್ದಾರೆ. ಈ ವೇಳೆ 201 ವಿಕೆಟ್ ಪಡೆದು ಮಿಂಚಿರುವುದು ವಿಶೇಷ. 2018 ರಲ್ಲಿ ಯಾರ್ಕ್‌ಷೈರ್‌ ಕ್ಲಬ್​ನಿಂದ ಪ್ರತಿಷ್ಠಿತ ಸರ್ರೆ ಕ್ಲಬ್​ಗೆ ಆಯ್ಕೆಯಾಗಿದ್ದರು. ಈ ತಂಡದೊಂದಿಗೆ ಸುಮಾರು ಮೂರು ವರ್ಷಗಳ ಕಾಲ ಆಡಿದ್ದರು.

“ಕಳೆದ 3 ವರ್ಷಗಳಿಂದ ನನ್ನನ್ನು ಬೆಂಬಲಿಸಿದ ಸರ್ರೆ ತಂಡದ ಪ್ರತಿಯೊಬ್ಬ ವ್ಯಕ್ತಿಗೂ ನನ್ನ ಧನ್ಯವಾದಗಳು. ನಾನು ಇಂಗ್ಲೆಂಡಿನೊಂದಿಗೆ ಅದ್ಭುತವಾದ ವೃತ್ತಿಜೀವನವನ್ನು ಆನಂದಿಸಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿಯಾದ ಬಳಿಕ, ಕ್ರೀಡೆಗಳಲ್ಲಿ ಮತ್ತು ತರಬೇತಿಯಲ್ಲಿ ಅಮೆರಿಕದಲ್ಲಿ ಕ್ರೀಡೆಯನ್ನು ಉತ್ತೇಜಿಸಲು ಬಯಸಿದ್ದೇನೆ ಎಂದು ಪ್ಲಂಕೆಟ್ ತಿಳಿಸಿದ್ದಾರೆ.

ಕೋಚ್ ಜವಾಬ್ದಾರಿ: ಮೈನರ್ ಲೀಗ್ ಕ್ರಿಕೆಟ್ ತಂಡವಾದ ಫಿಲೋಡೆಲ್ಫಿಯನ್ಸ್ ನಲ್ಲಿ ಪ್ಲಂಕೆಟ್​ ಆಟಗಾರ ಹಾಗೂ ತರಬೇತುದಾರನ ಪಾತ್ರ ನಿರ್ವಹಿಸಲಿದ್ದಾರೆ ಎಂದು ಹೇಳಲಾಗಿದೆ. ಇದಾಗ್ಯೂ 2022 ಟಿ20 ಬ್ಲಾಸ್ಟರ್ಸ್ ಮತ್ತು ದಿ ಹಂಡ್ರೆಡ್ ಲೀಗ್‌ನಲ್ಲಿ ಸ್ಥಳೀಯ ಆಟಗಾರನಾಗಿ ಭಾಗವಹಿಸಲು ಅರ್ಹತೆ ಹೊಂದಿದ್ದಾರೆ. ಇದೇ ವೇಳೆ ಅಮೆರಿಕ ರಾಷ್ಟ್ರೀಯ ತಂಡದ ಭಾಗವಾಗುವುದರ ಬಗ್ಗೆ ಮಾತನಾಡಿದ ಪ್ಲಂಕೆಟ್, ನನಗೆ ಈಗ 36 ವರ್ಷ. ರಾಷ್ಟ್ರೀಯ ತಂಡದಲ್ಲಿ ಅರ್ಹತೆ ಪಡೆಯುವ ವೇಳೆಗೆ ನನಗೆ 39 ಅಥವಾ 40 ವರ್ಷ ವಯಸ್ಸಾಗಿರುತ್ತದೆ. ಹೀಗಾಗಿ ಅದರ ಬಗ್ಗೆ ಯೋಚಿಸಿಲ್ಲ ಎಂದಿದ್ದಾರೆ.

ಇಂಗ್ಲೆಂಡ್ ಪರ 13 ಟೆಸ್ಟ್ ಪಂದ್ಯಗಳಿಂದ ಲಿಯಾಮ್ ಪ್ಲಂಕೆಟ್ 41 ವಿಕೆಟ್ ಹಾಗೂ 238 ರನ್ ಬಾರಿಸಿದ್ದರು. ಇನ್ನು 89 ಏಕದಿನ ಪಂದ್ಯಗಳಿಂದ 646 ರನ್ ಹಾಗೂ 135 ವಿಕೆಟ್ ಪಡೆದಿದ್ದಾರೆ. ಹಾಗೆಯೇ 22 ಟಿ20 ಪಂದ್ಯಗಳಲ್ಲಿ 25 ವಿಕೆಟ್ ಕಬಳಿಸಿದ್ದಾರೆ. ಇದಲ್ಲದೆ ಹಲವು ಕ್ರಿಕೆಟ್ ಲೀಗ್​ಗಳಲ್ಲಿ ಹಲವು ತಂಡಗಳನ್ನು ಪ್ಲಂಕೆಟ್​ ಪ್ರತಿನಿಧಿಸಿದ್ದು, ಐಪಿಎಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ 7 ಪಂದ್ಯಗಳನ್ನಾಡಿದ್ದರು.

ಇದನ್ನೂ ಓದಿ: IPL 2022: ಐಪಿಎಲ್ ಹೊಸ ತಂಡಗಳಿಗೆ ಮೂಲ ಬೆಲೆ ಫಿಕ್ಸ್​: ಇಷ್ಟು ಮೊತ್ತ ನೀಡಿ ಖರೀದಿಸುವವರು ಯಾರು?

ಇದನ್ನೂ ಓದಿ: Cristiano Ronaldo: ಮ್ಯಾಚೆಂಸ್ಟರ್ ಯುನೈಟೆಡ್ ಒಪ್ಪಂದ: ಪ್ರತಿ ಸೆಕೆಂಡ್​ಗೆ ಕ್ರಿಸ್ಟಿಯಾನೊ ರೊನಾಲ್ಡೊ ಪಡೆಯುವ ಮೊತ್ತವೆಷ್ಟು ಗೊತ್ತಾ?

ಇದನ್ನೂ ಓದಿ: Afghanistan Cricket: ಅಫ್ಘಾನಿಸ್ತಾನದ ಕ್ರಿಕೆಟ್ ಕುರಿತಾಗಿ ಹೊಸ ಆದೇಶ ಹೊರಡಿಸಿದ ತಾಲಿಬಾನ್

(Liam Plunkett Exits English Cricket To Join USA Cricket)

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ