Asia Cup: ಏಷ್ಯಾಕಪ್‌ನ ಪ್ರತಿ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಿವರು
Highest Run Scorers in Every Edition of Asia Cup: ಏಷ್ಯಾಕಪ್ 2025 ರ ಸೆಪ್ಟೆಂಬರ್ 9 ರಿಂದ ಆರಂಭವಾಗಲಿದೆ. ಈ ಲೇಖನವು ಹಿಂದಿನ ಏಷ್ಯಾಕಪ್ ಪಂದ್ಯಾವಳಿಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಮಾಹಿತಿಯನ್ನು ಒಳಗೊಂಡಿದೆ. ಪ್ರತಿ ಆವೃತ್ತಿಯಲ್ಲಿ ಯಾರು ಅತಿ ಹೆಚ್ಚು ರನ್ ಗಳಿಸಿದ್ದಾರೆ ಎಂಬುದನ್ನು ವಿವರಿಸುತ್ತದೆ. ಸುರೀಂದರ್ ಖನ್ನಾ ನಿಂದ ಮೊಹಮ್ಮದ್ ರಿಜ್ವಾನ್ ವರೆಗಿನ ಅಗ್ರ ಆಟಗಾರರ ಸಾಧನೆಗಳನ್ನು ಇಲ್ಲಿ ತಿಳಿದುಕೊಳ್ಳಬಹುದು.

Asia Cup
2025 ರ ಏಷ್ಯಾಕಪ್ (Asia Cup 2025) ಸೆಪ್ಟೆಂಬರ್ 9 ರಿಂದ ಆರಂಭವಾಗಲಿದೆ. ಇದು ಏಷ್ಯಾಕಪ್‌ನ 17 ನೇ ಆವೃತ್ತಿಯಾಗಲಿದ್ದು, ಈ ಟೂರ್ನಿ ಬಿಸಿಸಿಐ ಆತಿಥ್ಯದಲ್ಲಿ ಯುಎಇಯಲ್ಲಿ ನಡೆಯಲಿದೆ. ಮುಂದಿನ ವರ್ಷ ಟಿ20 ವಿಶ್ವಕಪ್ ನಡೆಯುವುದರಿಂದ ಈ ಬಾರಿ ಏಷ್ಯಾಕಪ್ ಅನ್ನು ಟಿ20 ಮಾದರಿಯಲ್ಲಿ ನಡೆಸಲಾಗುತ್ತಿದೆ. ಈ ಪಂದ್ಯಾವಳಿಗೆ ಪಾಕ್ ತಂಡವನ್ನು ಪ್ರಕಟಿಸಲಾಗಿದ್ದು, ಉಳಿದ ತಂಡಗಳನ್ನು ಇನ್ನು ಕೆಲವೇ ದಿನಗಳಲ್ಲಿ ಪ್ರಕಟಿಸಲಾಗುತ್ತದೆ. ಆದರೆ ಅದಕ್ಕೂ ಮುನ್ನ ಇದುವರೆಗೆ ನಡೆದಿರುವ ಏಷ್ಯಾಕಪ್‌ನ ಪ್ರತಿ ಆವೃತ್ತಿಗಳಲ್ಲಿ ಯಾವ ಬ್ಯಾಟ್ಸ್‌ಮನ್ ಹೆಚ್ಚು ರನ್ ಗಳಿಸಿದ್ದಾರೆ ಎಂಬುದನ್ನು ನಾವು ನಿಮಗೆ ಹೇಳಲಿದ್ದೇವೆ.
- ಮೊದಲ ಏಷ್ಯಾಕಪ್ ಆವೃತ್ತಿ 1984 ರಲ್ಲಿ ನಡೆಯಿತು. ಈ ಪಂದ್ಯಾವಳಿಯಲ್ಲಿ ಭಾರತದ ಸುರೀಂದರ್ ಖನ್ನಾ 107 ರನ್ ಬಾರಿಸಿ ಅತಿ ಹೆಚ್ಚು ರನ್ ಕಲೆಹಾಕಿದ ಆಟಗಾರ ಎನಿಸಿಕೊಂಡಿದ್ದರು.
- ಎರಡನೇ ಆವೃತ್ತಿಯ ಏಷ್ಯಾಕಪ್ 1986 ರಲ್ಲಿ ನಡೆಯಿತು. ಈ ಆವೃತ್ತಿಯಲ್ಲಿ ಶ್ರೀಲಂಕಾದ ಅರ್ಜುನ ರಣತುಂಗ ಒಟ್ಟು 105 ರನ್ ಬಾರಿಸಿದ್ದರು.
- 1988 ರಲ್ಲಿ ನಡೆದ ಮೂರನೇ ಆವೃತ್ತಿಯಲ್ಲಿ ಪಾಕಿಸ್ತಾನದ ಇಜಾಜ್ ಅಹ್ಮದ್ ಒಟ್ಟು 192 ರನ್ ಗಳಿಸಿದ್ದರು.
- 1990- 91 ರ ನಾಲ್ಕನೇ ಆವೃತ್ತಿಯ ಏಷ್ಯಾಕಪ್‌ನಲ್ಲಿ ಶ್ರೀಲಂಕಾದ ಅರ್ಜುನ ರಣತುಂಗ ಒಟ್ಟು 166 ರನ್ ಬಾರಿಸಿದ್ದರು.
- 1995ರಲ್ಲಿ ನಡೆದಿದ್ದ ಐದನೇ ಆವೃತ್ತಿಯ ಏಷ್ಯಾಕಪ್‌ನಲ್ಲಿ ಭಾರತದ ಸಚಿನ್ ತೆಂಡೂಲ್ಕರ್ 205 ರನ್ ಸಿಡಿಸಿದ್ದರು.
- 1997 ರಲ್ಲಿ ನಡೆದಿದ್ದ 6ನೇ ಆವೃತ್ತಿಯ ಏಷ್ಯಾಕಪ್ನಲ್ಲೂ ಶ್ರೀಲಂಕಾದ ಅನುಭವಿ ಬ್ಯಾಟ್ಸ್‌ಮನ್ ಅರ್ಜುನ ರಣತುಂಗ 272 ರನ್ ಸಿಡಿಸಿದ್ದರು.
- 2000ನೇ ಇಸವಿಯಲ್ಲಿ ನಡೆದಿದ್ದ ಏಳನೇ ಆವೃತ್ತಿಯಲ್ಲಿ ಪಾಕಿಸ್ತಾನದ ಮೊಹಮ್ಮದ್ ಯೂಸುಫ್ 295 ರನ್ ಕಲೆಹಾಕಿದ್ದರು.
- 2004 ರಲ್ಲಿ ನಡೆದಿದ್ದ 8 ನೇ ಆವೃತ್ತಿಯಲ್ಲಿ ಪಾಕಿಸ್ತಾನದ ಶೋಯೆಬ್ ಮಲಿಕ್ 316 ರನ್ ಗಳಿಸಿದ್ರು.
- ಶ್ರೀಲಂಕಾದ ಶ್ರೇಷ್ಠ ಬ್ಯಾಟ್ಸ್‌ಮನ್ ಸನತ್ ಜಯಸೂರ್ಯ 2008 ರಲ್ಲಿ ನಡೆದಿದ್ದ ಒಂಬತ್ತನೇ ಆವೃತ್ತಿಯಲ್ಲಿ 378 ರನ್ ಬಾರಿಸಿದ್ದರು.
- ಪಾಕಿಸ್ತಾನದ ಶಾಹಿದ್ ಅಫ್ರಿದಿ 2010 ರಲ್ಲಿ ನಡೆದಿದ್ದ ಹತ್ತನೇ ಆವೃತ್ತಿಯಲ್ಲಿ ಒಟ್ಟು 265 ರನ್ ಗಳಿಸಿದ್ದರು.
- 2012 ರಲ್ಲಿ ನಡೆದಿದ್ದ 11ನೇ ಆವೃತ್ತಿಯಲ್ಲಿ ಭಾರತದ ಅನುಭವಿ ಆಟಗಾರ ವಿರಾಟ್ ಕೊಹ್ಲಿ 357 ರನ್ ಸಿಡಿಸಿದ್ದರು.
- 2014 ರಲ್ಲಿ ನಡೆದಿದ್ದ 12ನೇ ಆವೃತ್ತಿಯಲ್ಲಿ ಶ್ರೀಲಂಕಾದ ಲಹಿರು ತಿರಿಮನೆ 279 ರನ್ ಗಳಿಸಿದ್ದರು.
- 2016 ರಲ್ಲಿ ನಡೆದಿದ್ದ 13ನೇ ಆವೃತ್ತಿಯಲ್ಲಿ ಬಾಂಗ್ಲಾದೇಶದ ಬ್ಯಾಟ್ಸ್‌ಮನ್ ಸಬ್ಬೀರ್ ರೆಹಮಾನ್ 176 ರನ್ ಬಾರಿಸಿದ್ದರು.
- 2014 ರಲ್ಲಿ ನಡೆದಿದ್ದ 14 ನೇ ಆವೃತ್ತಿಯಲ್ಲಿ ಭಾರತದ ಬ್ಯಾಟ್ಸ್‌ಮನ್ ಶಿಖರ್ ಧವನ್ 342 ರನ್ ಗಳಿಸಿದ್ದರು.
- 2022 ರಲ್ಲಿ ನಡೆದಿದ್ದ 15ನೇ ಆವೃತ್ತಿಯಲ್ಲಿ ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್ ಒಟ್ಟು 281 ರನ್ ಸಿಡಿಸಿದ್ದರು.
- 2023 ರಲ್ಲಿ ನಡೆದಿದ್ದ 16 ನೇ ಆವೃತ್ತಿಯಲ್ಲಿ ಭಾರತೀಯ ಬ್ಯಾಟ್ಸ್‌ಮನ್ ಶುಭಮನ್ ಗಿಲ್ ಒಟ್ಟು 302 ರನ್ ಗಳಿಸಿದ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
