
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ಆರಂಭಕ್ಕೆ ಇನ್ನೂ ಮೂರು ತಿಂಗಳುಗಳಿವೆ. ಅದಕ್ಕೂ ಮುನ್ನವೇ ಲಕ್ನೋ ಸೂಪರ್ ಜೈಂಟ್ಸ್ ಸಿದ್ಧತೆಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಸೌತ್ ಆಫ್ರಿಕಾ ಟಿ20 ಲೀಗ್ ಅನ್ನು ವೇದಿಕೆಯಾಗಿ ಬಳಸಿಕೊಳ್ಳಲು ಮುಂದಾಗಿದೆ. ಸೌತ್ ಆಫ್ರಿಕಾ ಟಿ20 ಲೀಗ್ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿಯ ಡರ್ಬನ್ ಸೂಪರ್ ಜೈಂಟ್ಸ್ ತಂಡ ಕಣಕ್ಕಿಳಿಯುತ್ತಿದೆ.
ಈ ತಂಡದ ಅಭ್ಯಾಸಗಳಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿರುವ ಭಾರತೀಯ ಬೌಲರ್ಗಳನ್ನು ಬಳಸಿಕೊಳ್ಳಲು LSG ಪ್ಲ್ಯಾನ್ ರೂಪಿಸಿದೆ. ಇದಕ್ಕಾಗಿ ಈಗಾಗಲೇ ಬಿಸಿಸಿಐ ಕಡೆಯಿಂದ ಅನುಮತಿ ಪಡೆದಿದ್ದು, ಭಾರತೀಯ ಬೌಲರ್ಗಳನ್ನು ಬಳಸಿಕೊಳ್ಳಲು ಅನುಮತಿ ನೀಡಲಾಗಿದೆ ಎಂದು ವರದಿಯಾಗಿದೆ.
ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿರುವ ವೇಗಿಗಳಾದ ಅವೇಶ್ ಖಾನ್, ನಮನ್ ತಿವಾರಿ ಹಾಗೂ ಮೊಹ್ಸಿನ್ ಖಾನ್ ಸೇರಿದಂತೆ ಕೆಲ ಆಟಗಾರರನ್ನು LSG ಸೌತ್ ಆಫ್ರಿಕಾಗೆ ಕಳುಹಿಸಲಿದೆ. ಈ ಆಟಗಾರರು ಡರ್ಬನ್ ಸೂಪರ್ ಜೈಂಟ್ಸ್ ತಂಡದ ಜೊತೆ ಕಾಣಿಸಿಕೊಳ್ಳಲಿದ್ದಾರೆ.
ಅಂದರೆ ಡರ್ಬನ್ ಸೂಪರ್ ಜೈಂಟ್ಸ್ ತಂಡದ ಅಭ್ಯಾಸದ ವೇಳೆ ಈ ಆಟಗಾರರು ಕೂಡ ಅಭ್ಯಾಸ ನಡೆಸಲಿದ್ದಾರೆ. ಅದರಲ್ಲೂ ನೆಟ್ಸ್ನಲ್ಲಿ ಪ್ರಮುಖ ವೇಗಿಗಳಾಗಿ ಬೆವರಿಳಿಸಲಿದ್ದಾರೆ. ಈ ಮೂಲಕ ಐಪಿಎಲ್ಗಾಗಿ ತಯಾರಿ ನಡೆಸಲು ಲಕ್ನೋ ಸೂಪರ್ ಜೈಂಟ್ಸ್ ಭರ್ಜರಿ ಪ್ಲ್ಯಾನ್ ರೂಪಿಸಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ಮಿನಿ ಹರಾಜಿಗೂ ಮುನ್ನ 19 ಆಟಗಾರರನ್ನು ಉಳಿಸಿಕೊಂಡಿದ್ದ ಲಕ್ನೋ ಸೂಪರ್ ಜೈಂಟ್ಸ್ ಆಕ್ಷನ್ ಮೂಲಕ 6 ಆಟಗಾರರನ್ನು ಖರೀದಿಸಿದೆ. ಅದರಂತೆ ಮುಂಬರುವ ಸೀಸನ್ನಲ್ಲಿ ಶ್ರೀಲಂಕಾದ ವನಿಂದು ಹಸರಂಗ, ಸೌತ್ ಆಫ್ರಿಕಾದ ಅನ್ರಿಕ್ ನೋಕಿಯ, ಆಸ್ಟ್ರೇಲಿಯಾದ ಜೋಶ್ ಇಂಗ್ಲಿಸ್, ಭಾರತದ ಮುಕುಲ್ ಚೌಧರಿ, ಅಕ್ಷತ್ ರಘುವಂಶಿ, ನಮನ್ ತಿವಾರಿ ಲಕ್ನೋ ಸೂಪರ್ ಜೈಂಟ್ಸ್ ಪರ ಕಣಕ್ಕಿಳಿಯಲಿದ್ದಾರೆ.
ಇದನ್ನೂ ಓದಿ: ಒಂದೇ ವರ್ಷದಲ್ಲಿ ಇತಿಹಾಸ ನಿರ್ಮಿಸಿದ ಜೇಕಬ್ ಡಫಿ
ಲಕ್ನೋ ಸೂಪರ್ ಜೈಂಟ್ಸ್ ತಂಡ: ರಿಷಭ್ ಪಂತ್ (ನಾಯಕ), ಮಿಚೆಲ್ ಮಾರ್ಷ್, ಐಡೆನ್ ಮಾರ್ಕ್ರಾಮ್, ಮಯಾಂಕ್ ಯಾದವ್, ಅಬ್ದುಲ್ ಸಮದ್, ಆಯುಷ್ ಬದೋನಿ, ಮ್ಯಾಥ್ಯೂ ಬ್ರೀಟ್ಝ್ಕೆ, ಹಿಮ್ಮತ್ ಸಿಂಗ್, ನಿಕೋಲಸ್ ಪೂರನ್, ಶಹಬಾಝ್ ಅಹ್ಮದ್, ಅರ್ಶಿನ್ ಕುಲಕರ್ಣಿ, ಮಯಾಂಕ್ ಯಾದವ್, ಅವೇಶ್ ಖಾನ್, ಮೊಹ್ಸಿನ್ ಖಾನ್, ಪ್ರಿನ್ಸ್ ಯಾದವ್, ಮೊಹಮ್ಮದ್ ಶಮಿ, ಅರ್ಜುನ್ ತೆಂಡೂಲ್ಕರ್, ಜೋಶ್ ಇಂಗ್ಲಿಸ್, ಮುಕುಲ್ ಚೌಧರಿ, ವನಿಂದು ಹಸರಂಗ, ಅನ್ರಿಕ್ ನೋಕಿಯ, ಅಕ್ಷತ್ ರಘುವಂಶಿ, ನಮನ್ ತಿವಾರಿ.