ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2024) ಮುಂಬರುವ ಸೀಸನ್ಗಾಗಿ ಲಕ್ನೋ ಸೂಪರ್ ಜೈಂಟ್ಸ್ ನಾಯಕ ಹಾಗೂ ಕೋಚಿಂಗ್ ಸಿಬ್ಬಂದಿಗಳನ್ನು ಘೋಷಿಸಿದೆ. ಅದರಂತೆ ಮುಂದಿನ ಸೀಸನ್ನಲ್ಲೂ ಕೆಎಲ್ ರಾಹುಲ್ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಮುನ್ನಡೆಸಲಿದ್ದಾರೆ. ಹಾಗೆಯೇ ಗೌತಮ್ ಗಂಭೀರ್ ಅವರನ್ನು ಗ್ಲೋಬಲ್ ಮೆಂಟರ್ ಎಂದು ಹೆಸರಿಸಲಾಗಿದೆ.
ಇನ್ನು ಲಕ್ನೋ ಸೂಪರ್ ಜೈಂಟ್ಸ್ ತಂಡದ ಹೊಸ ಕೋಚ್ ಆಗಿ ಆಸ್ಟ್ರೇಲಿಯಾದ ಮಾಜಿ ಆಟಗಾರ ಜಸ್ಟಿನ್ ಲ್ಯಾಂಗರ್ ಕಾರ್ಯ ನಿರ್ವಹಿಸಲಿದ್ದಾರೆ. ಇವರೊಂದಿಗೆ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟ್ ಸ್ಪಿನ್ ಕೋಚ್ ಸಲಹೆಗಾರ ಶ್ರೀಧರನ್ ಶ್ರೀರಾಮ್ ಅವರು ಅಸಿಸ್ಟೆಂಟ್ ಕೋಚ್ ಆಗಿ ಕಾಣಿಸಿಕೊಳ್ಳಲಿದ್ದಾರೆ.
ಹಾಗೆಯೇ ಸಹಾಯಕ ಕೋಚ್‌ಗಳಾಗಿ ವಿಜಯ್ ದಹಿಯಾ, ಪ್ರವೀಣ್ ತಾಂಬೆ ಮತ್ತು ದಕ್ಷಿಣ ಆಫ್ರಿಕಾದ ಮೊರ್ನೆ ಮೊರ್ಕೆಲ್ ಮತ್ತು ಜಾಂಟಿ ರೋಡ್ಸ್ ಅವರನ್ನು ಆಯ್ಕೆ ಮಾಡಲಾಗಿದೆ.
S Sriram joins to complete our coaching staff for 2024 💙
Full story 👉 https://t.co/4svdieJytL pic.twitter.com/8EgX2Pg8uP
— Lucknow Super Giants (@LucknowIPL) September 9, 2023
ಗೌತಮ್ ಗಂಭೀರ್ ಅವರನ್ನು ಲಕ್ನೋ ಸೂಪರ್ ಜೈಂಟ್ಸ್ ತಂಡದ ಗ್ಲೋಬಲ್ ಮೆಂಟರ್ ಎಂದು ಹೆಸರಿಸಲಾಗಿದೆ. ಕಳೆದ ಸೀಸನ್ನಲ್ಲಿ ಲಕ್ನೋ ತಂಡದ ಮೆಂಟರ್ ಆಗಿದ್ದ ಗಂಭೀರ್ ಅವರನ್ನು ಇದೀಗ ಗ್ಲೋಬಲ್ ಮೆಂಟರ್ ಹೆಸರಿಸಿರುವುದು ವಿಶೇಷ. ಅಂದರೆ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ ಇತರೆ ಲೀಗ್ಗಳಲ್ಲೂ ತಂಡಗಳನ್ನು ಖರೀದಿಸುವ ಸಾಧ್ಯತೆಯಿದೆ. ಇದೇ ಕಾರಣದಿಂದಾಗಿ ಗಂಭೀರ್ ಅವರಿಗೆ ಗ್ಲೋಬಲ್ ಮೆಂಟರ್ ಸ್ಥಾನ ನೀಡಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ/ಕೋಚಿಂಗ್ ಸಿಬ್ಬಂದಿಗಳು:
ಪ್ರಸ್ತುತ ಲಕ್ನೋ ಸೂಪರ್ ಜೈಂಟ್ಸ್ ತಂಡ: ಕೆಎಲ್ ರಾಹುಲ್ (ನಾಯಕ), ಆಯುಷ್ ಬಡೋನಿ, ಕರಣ್ ಶರ್ಮಾ, ಮನನ್ ವೋಹ್ರಾ, ಕ್ವಿಂಟನ್ ಡಿ ಕಾಕ್, ಮಾರ್ಕಸ್ ಸ್ಟೊಯಿನಿಸ್, ಕೃಷ್ಣಪ್ಪ ಗೌತಮ್, ದೀಪಕ್ ಹೂಡಾ, ಕೈಲ್ ಮೇಯರ್ಸ್, ಕೃನಾಲ್ ಪಾಂಡ್ಯ, ಅವೇಶ್ ಖಾನ್, ಮೊಹ್ಸಿನ್ ಖಾನ್, ಮಾರ್ಕ್ ವುಡ್, ಮಯಾಂಕ್ ಯಾದವ್, ರವಿ ಬಿಷ್ಣೋಯ್, ಯುದ್ಧವೀರ್ ಚರಕ್, ನವೀನ್-ಉಲ್-ಹಕ್ , ಸ್ವಪ್ನಿಲ್ ಸಿಂಗ್ , ಪ್ರೇರಕ್ ಮಂಕಡ್, ಅಮಿತ್ ಮಿಶ್ರಾ , ಡೇನಿಯಲ್ ಸ್ಯಾಮ್ಸ್ , ರೊಮಾರಿಯೋ ಶೆಫರ್ಡ್ , ಯಶ್ ಠಾಕೂರ್ , ಜಯದೇವ್ ಉನಾದ್ಕಟ್ , ನಿಕೋಲಸ್ ಪೂರನ್.
ಲಕ್ನೋ ಸೂಪರ್ ಜೈಂಟ್ಸ್ ಪ್ರಸ್ತುತ ತಂಡದಲ್ಲಿ ಒಟ್ಟು 28 ಆಟಗಾರರಿದ್ದಾರೆ. ಮುಂಬರುವ ಐಪಿಎಲ್ ಹರಾಜಿಗೂ ಮುನ್ನ ಇವರಲ್ಲಿ ಕೆಲ ಆಟಗಾರರನ್ನು ತಂಡದಿಂದ ಕೈ ಬಿಡಲಿದ್ದು, ಇದಾದ ಬಳಿಕ ಲಕ್ನೋ ಸೂಪರ್ ಜೈಂಟ್ಸ್ ತಂಡ ಬಿಡ್ಡಿಂಗ್ನಲ್ಲಿ ಕಾಣಿಸಿಕೊಳ್ಳಲಿದೆ.
Published On - 3:56 pm, Sat, 9 September 23