Maharaja Trophy 2024: ಸತತ ಐದನೇ ಪಂದ್ಯದಲ್ಲಿ ಸೋತ ಶಿವಮೊಗ್ಗ; ಪಡಿಕ್ಕಲ್ ಪಡೆಗೆ ಸುಲಭ ಜಯ
Maharaja Trophy 2024: ಮಹಾರಾಜ ಟಿ20 ಟ್ರೋಫಿಯಲ್ಲಿ ಇಂದು ನಡೆದ 13ನೇ ಪಂದ್ಯದಲ್ಲಿ ನಮ್ಮ ಶಿವಮೊಗ್ಗ ಹಾಗೂ ಗುಲ್ಬರ್ಗಾ ಮಿಸ್ಟಿಕ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಉಭಯ ಗಂಡಗಳ ನಡುವೆ ನಡೆದ ಈ ಪಂದ್ಯವನ್ನು ದೇವದತ್ ಪಡಿಕ್ಕಲ್ ನಾಯಕತ್ವದ ಗುಲ್ಬರ್ಗಾ ಮಿಸ್ಟಿಕ್ಸ್ ತಂಡ ಸುಲಭ ಜಯ ಸಾಧಿಸಿದೆ.
ಮಹಾರಾಜ ಟಿ20 ಟ್ರೋಫಿಯಲ್ಲಿ ಇಂದು ನಡೆದ 13ನೇ ಪಂದ್ಯದಲ್ಲಿ ನಮ್ಮ ಶಿವಮೊಗ್ಗ ಹಾಗೂ ಗುಲ್ಬರ್ಗಾ ಮಿಸ್ಟಿಕ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಉಭಯ ಗಂಡಗಳ ನಡುವೆ ನಡೆದ ಈ ಪಂದ್ಯವನ್ನು ದೇವದತ್ ಪಡಿಕ್ಕಲ್ ನಾಯಕತ್ವದ ಗುಲ್ಬರ್ಗಾ ಮಿಸ್ಟಿಕ್ಸ್ ತಂಡ ಸುಲಭ ಜಯ ಸಾಧಿಸಿದೆ. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶಿವಮೊಗ್ಗ ತಂಡ ಪೂರ್ಣ 20 ಓವರ್ಗಳನ್ನು ಆಡಲಾಗದೆ 18.1 ಓವರ್ಗಳಲ್ಲಿ 126 ರನ್ಗಳಿಗೆ ಆಲೌಟ್ ಆಯಿತು. ಈ ಗುರಿ ಬೆನ್ನಟ್ಟಿದ ಗುಲ್ಬರ್ಗಾ ತಂಡ ಇನ್ನು 50 ಎಸೆತಗಳು ಬಾಕಿ ಇರುವಂತೆಯೇ 9 ವಿಕೆಟ್ಗಳಿಂದ ಜಯದ ನಗೆಬೀರಿತು. ಇನ್ನು ಈ ಸೋಲಿನೊಂದಿಗೆ ನಮ್ಮ ಶಿವಮೊಗ್ಗ ತಂಡ ಲೀಗ್ನಲ್ಲಿ ಸತತ ಐದನೇ ಸೋಲು ದಾಖಲಿಸಿದೆ.
ಶಿವಮೊಗ್ಗ ಪೆವಿಲಿಯನ್ ಪರೇಡ್
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಶಿವಮೊಗ್ಗ ತಂಡ ಎಂದಿನಂತೆ ಆರಂಭದಿಂದಲೂ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ತಂಡ 18 ರನ್ ಕಲೆಹಾಕಿದ್ದಾಗ ಮೊದಲ ವಿಕೆಟ್ ಕಳೆದುಕೊಂಡರೆ, 20 ರನ್ಗಳಿಗೆ 2ನೇ ವಿಕೆಟ್. 30 ರನ್ಗಳಿಗೆ ಮೂರು ಮತ್ತು ನಾಲ್ಕನೇ ವಿಕೆಟ್ಗಳು ಪತನಗೊಂಡವು.ಈ ವೇಳೆ ತಂಡದ ಪರ ಏಕಾಂಗಿ ಹೋರಾಟ ನಡೆಸಿದ ಅಭಿನವ್ ಮನೋಹರ್ 55 ರನ್ಗಳ ಸ್ಫೋಟಕ ಇನ್ನಿಂಗ್ ಆಡಿದರು. ಅಭಿನವ್ 36 ಎಸೆತಗಳಲ್ಲಿ 1 ಬೌಂಡರಿ ಹಾಗೂ 5 ಸಿಕ್ಸರ್ ಸಮೇತ 55 ರನ್ಗಳ ಕಾಣಿಕೆ ನೀಡಿದರು. ಉಳಿದಂತೆ ತಂಡದಿಂದ ಯಾರೋಬ್ಬರು ಒಂದಂಕಿ ದಾಟುವ ಸಾಹಸವನ್ನೂ ಮಾಡಲಿಲ್ಲ. ಹೀಗಾಗಿ ತಂಡ ಕೇವಲ 126 ರನ್ಗಳಿಗೆ ಆಲೌಟ್ ಆಯಿತು.
Gulbarga Mystics ಗೆ ಭರ್ಜರಿ 9 ವಿಕೆಟ್ ಗಳ ಜಯ.. 🥳🥳#MaharajaTrophyOnStar #StarSportsKannada@maharaja_t20 pic.twitter.com/VDRVR6WdGV
— Star Sports Kannada (@StarSportsKan) August 21, 2024
ಸಿಕ್ಸ್ ಮುಖಾಂತರ ತಮ್ಮ ಅರ್ಧಶತಕ ಪೂರೈಸಿದ ಲವ್ನಿತ್..🤩#MaharajaTrophyOnStar #StarSportsKannada@maharaja_t20 pic.twitter.com/lTWwcZUDbP
— Star Sports Kannada (@StarSportsKan) August 21, 2024
ಗುಲ್ಬರ್ಗಾ ತಂಡಕ್ಕೆ ಸುಲಭ ಜಯ
ಈ ಗುರಿ ಬೆನ್ನಟ್ಟಿದ ಗುಲ್ಬರ್ಗಾ ತಂಡಕ್ಕೆ ಆರಂಭಿಕರಿಬ್ಬರು ಉತ್ತಮ ಆರಂಭ ಒದಗಿಸಿಕೊಟ್ಟರು. ನಾಯಕ ದೇವದತ್ ಪಡಿಕ್ಕಲ್ 24 ಎಸೆತಗಳಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್ ಸೇರಿದಂತೆ 27 ರನ್ ಬಾರಿಸಿ ಔಟಾದರು. ಮತ್ತೊಬ್ಬ ಆರಂಭಿಕ ಲುವ್ನಿತ್ ಸಿಸೋಡಿಯಾ 35 ಎಸೆತಗಳಲ್ಲಿ 5 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ ಅಜೇಯ 62 ರನ್ಗಳ ಗೆಲುವಿನ ಇನ್ನಿಂಗ್ಸ್ ಆಡಿದರು. ಸಿಸೋಡಿಯಾಗೆ ಉತ್ತಮ ಸಾಥ್ ನೀಡಿದ ಕೆವಿ ಅವಿನಾಶ್ 14 ಎಸೆತಗಳಲ್ಲಿ 5 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ ಅಜೇಯ 31 ರನ್ ಬಾರಿಸಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:24 pm, Wed, 21 August 24