AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs AUS: ‘ಭಾರತ ವಿರುದ್ಧ ಟೆಸ್ಟ್ ಸರಣಿ ಗೆದ್ದೇ ಗೆಲ್ಲುತ್ತೇವೆ’; ಆಸೀಸ್ ವೇಗಿ ಮಿಚೆಲ್ ಸ್ಟಾರ್ಕ್

IND vs AUS: ಈ ಬಾರಿ ಈ ಸರಣಿಯು ಐದು ಪಂದ್ಯಗಳದ್ದಾಗಿದೆ. ಇದರಿಂದಾಗಿ ಈ ಸರಣಿಯೂ ಆಶಸ್‌ನಷ್ಟೇ ಮಹತ್ವ ಪಡೆದುಕೊಂಡಿದೆ. ತವರಿನಲ್ಲಿ ನಾವು ಪ್ರತಿ ಪಂದ್ಯವನ್ನು ಗೆಲ್ಲಲು ಬಯಸುತ್ತೇವೆ. ಆದರೆ ಭಾರತವೂ ಕೂಡ ಬಲಿಷ್ಠ ತಂಡವನ್ನು ಹೊಂದಿದೆ. ಆದಾಗ್ಯೂ ನಾವು ಸರಣಿ ಗೆಲ್ಲಲಿದ್ದೇವೆ ಎಂದು ಸ್ಟಾರ್ಕ್​ ಹೇಳಿದ್ದಾರೆ.

IND vs AUS: ‘ಭಾರತ ವಿರುದ್ಧ ಟೆಸ್ಟ್ ಸರಣಿ ಗೆದ್ದೇ ಗೆಲ್ಲುತ್ತೇವೆ’; ಆಸೀಸ್ ವೇಗಿ ಮಿಚೆಲ್ ಸ್ಟಾರ್ಕ್
ಮಿಚೆಲ್ ಸ್ಟಾರ್ಕ್​
ಪೃಥ್ವಿಶಂಕರ
|

Updated on:Aug 21, 2024 | 9:44 PM

Share

ಈ ವರ್ಷದ ಕೊನೆಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಟೆಸ್ಟ್ ಸರಣಿ ನಡೆಯಲಿದೆ. ಈ ಸರಣಿಗೆ ಸಂಬಂಧಿಸಿದಂತೆ ಈಗಾಗಲೇ ಆಸ್ಟ್ರೇಲಿಯಾ ಆಟಗಾರರಿಂದ ಮೈಂಡ್ ಗೇಮ್‌ ಶುರುವಾಗಿದೆ. ಅದರ ಮುಂದಿನ ಸರಣಿಯಾಗಿ ಇದೀಗ ಆಸ್ಟ್ರೇಲಿಯಾದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ದೊಡ್ಡ ಹೇಳಿಕೆ ನೀಡಿದ್ದು, ಈ ಸರಣಿಯನ್ನು ಗೆಲ್ಲಲಿದ್ದೇವೆ ಎಂದಿದ್ದಾರೆ. ಸ್ಟಾರ್ಕ್​ಗೂ ಮುನ್ನ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್, ಈ ಸರಣಿಯನ್ನು ನಮ್ಮ ತಂಡ 3-1 ಅಂತರದಿಂದ ಗೆಲ್ಲಲಿದೆ ಎಂದಿದ್ದಾರೆ. ವಾಸ್ತವವಾಗಿ ಹೇಳಬೇಕೆಂದರೆ ಕಳೆದ ನಾಲ್ಕು ಟೆಸ್ಟ್ ಸರಣಿಗಳಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾವನ್ನು ಸೋಲಿಸಿದೆ. ಇದರಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾ ನೆಲದಲ್ಲೇ ಎರಡು ಬಾರಿ ಗೆದ್ದಿದೆ.

ಮಿಚೆಲ್ ಸ್ಟಾರ್ಕ್ ವಾರ್ನಿಂಗ್

ಭಾರತದ ವಿರುದ್ಧದ ಸರಣಿಯ ಕುರಿತು ಮಾತನಾಡಿದ ಸ್ಟಾರ್ಕ್, ‘ಈ ಸರಣಿಯಲ್ಲಿ ಭಾರತಕ್ಕೆ ಒಂದೇ ಒಂದು ಪಂದ್ಯವನ್ನು ಗೆಲ್ಲಲು ನಾವು ಬಿಡುವುದಿಲ್ಲ’ ಎಂದಿದ್ದಾರೆ. ಆಸ್ಟ್ರೇಲಿಯಾದ ಆಟಗಾರರು ಈಗಾಗಲೇ ಈ ಸರಣಿಗೆ ತಯಾರಿ ಆರಂಭಿಸಿದ್ದಾರೆ. ಟೆಸ್ಟ್ ತಂಡದ ನಾಯಕ ಕಮ್ಮಿನ್ಸ್ ಕೂಡ ಈ ಬಾರಿ ಭಾರತವನ್ನು ಸೋಲಿಸಲು ಬಯಸುವುದಾಗಿ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿದ್ದರು.

ಆಶಸ್ ಸರಣಿಗೆ ಹೋಲಿಸಿದ ಸ್ಟಾರ್ಕ್

ಈ ಬಾರಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ 5 ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ಹೀಗಾಗಿ ಈ ಸರಣಿಯನ್ನು ಪ್ರತಿಷ್ಠಿತ ಆಶಸ್‌ನೊಂದಿಗೆ ಹೋಲಿಕೆ ಮಾಡಲಾಗುತ್ತಿದೆ. ಈ ಬಗ್ಗೆ ಮಾತನಾಡಿದ ಸ್ಟಾರ್ಕ್, ‘ಈ ಬಾರಿ ಈ ಸರಣಿಯು ಐದು ಪಂದ್ಯಗಳದ್ದಾಗಿದೆ. ಇದರಿಂದಾಗಿ ಈ ಸರಣಿಯೂ ಆಶಸ್‌ನಷ್ಟೇ ಮಹತ್ವ ಪಡೆದುಕೊಂಡಿದೆ. ತವರಿನಲ್ಲಿ ನಾವು ಪ್ರತಿ ಪಂದ್ಯವನ್ನು ಗೆಲ್ಲಲು ಬಯಸುತ್ತೇವೆ. ಆದರೆ ಭಾರತವೂ ಕೂಡ ಬಲಿಷ್ಠ ತಂಡವನ್ನು ಹೊಂದಿದೆ. ಆದಾಗ್ಯೂ ನಾವು ಸರಣಿ ಗೆಲ್ಲಲಿದ್ದೇವೆ ಎಂದು ಸ್ಟಾರ್ಕ್​ ಹೇಳಿದ್ದಾರೆ.

ನಾಯಕ ಕಮ್ಮಿನ್ಸ್ ಹೇಳಿದ್ದಿದು

ಇತ್ತೀಚೆಗೆ ಟೆಸ್ಟ್ ತಂಡದ ನಾಯಕ ಕಮ್ಮಿನ್ಸ್ ಬಳಿ ಭಾರತ ವಿರುದ್ಧದ ಸರಣಿಯ ಕುರಿತು ಕೇಳಿದಾಗ, ಈ ಬಾರಿ ಕ್ಯಾಮೆರಾನ್ ಗ್ರೀನ್ ಮತ್ತು ಮಿಚೆಲ್ ಮಾರ್ಷ್ ಅವರಿಂದ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದ್ದೇನೆ. ಅವರು ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಬಲ್ಲರು. ಕಳೆದ ಎರಡು ವರ್ಷಗಳಲ್ಲಿ ನಾವು ಅವರನ್ನು ಬೌಲಿಂಗ್‌ನಲ್ಲಿ ಅಷ್ಟು ಚೆನ್ನಾಗಿ ಬಳಸಿಕೊಂಡಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಅವರು ಭಾರತದ ವಿರುದ್ಧ ಬೌಲಿಂಗ್ ವಿಭಾಗದಲ್ಲಿ ಪ್ರಮುಖ ಪಾತ್ರವಹಿಸಬಹುದು ಎಂದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:44 pm, Wed, 21 August 24

ಶಿವರಾಜಕುಮಾರ್ ಹಾಡಿಗೆ ಹೆಜ್ಜೆ ಹಾಕಿದ ಶಾಸಕ ಹೆಚ್.ಸಿ.ಬಾಲಕೃಷ್ಣ
ಶಿವರಾಜಕುಮಾರ್ ಹಾಡಿಗೆ ಹೆಜ್ಜೆ ಹಾಕಿದ ಶಾಸಕ ಹೆಚ್.ಸಿ.ಬಾಲಕೃಷ್ಣ
ಶಾಮನೂರು ಶಿವಶಂಕರಪ್ಪ ಅಂತ್ಯಸಂಸ್ಕಾರ ಹೇಗೆ ನಡೆಯಲಿದೆ? ಇಲ್ಲಿದೆ ಮಾಹಿತಿ
ಶಾಮನೂರು ಶಿವಶಂಕರಪ್ಪ ಅಂತ್ಯಸಂಸ್ಕಾರ ಹೇಗೆ ನಡೆಯಲಿದೆ? ಇಲ್ಲಿದೆ ಮಾಹಿತಿ
ನಾನು ಸಖತ್ ದುಬಾರಿ ಎಂದ ಕಿಚ್ಚ ಸುದೀಪ್; ಕಾರಣವೇನು?
ನಾನು ಸಖತ್ ದುಬಾರಿ ಎಂದ ಕಿಚ್ಚ ಸುದೀಪ್; ಕಾರಣವೇನು?
ಶಾಮನೂರು ಶಿವಶಂಕರಪ್ಪ ನಿಧನ: ಅಂತ್ಯ ಸಂಸ್ಕಾರದ ಲೈವ್​​ ವಿಡಿಯೋ
ಶಾಮನೂರು ಶಿವಶಂಕರಪ್ಪ ನಿಧನ: ಅಂತ್ಯ ಸಂಸ್ಕಾರದ ಲೈವ್​​ ವಿಡಿಯೋ
ಶಾಮನೂರು ನಿಧನ: ದೆಹಲಿಯಲ್ಲಿ ‘ಕೈ’ ಶಾಸಕರು, ಸಚಿವರು ವಿಮಾನದಲ್ಲಿ ಲಾಕ್
ಶಾಮನೂರು ನಿಧನ: ದೆಹಲಿಯಲ್ಲಿ ‘ಕೈ’ ಶಾಸಕರು, ಸಚಿವರು ವಿಮಾನದಲ್ಲಿ ಲಾಕ್
ಸಂಸತ್ ಮೇಲಿನ ದಾಳಿ, ಅಫ್ಜಲ್​ ಗುರು ನಿರಪರಾಧಿ ಎಂದ ಅರುಂಧತಿ ರಾಯ್
ಸಂಸತ್ ಮೇಲಿನ ದಾಳಿ, ಅಫ್ಜಲ್​ ಗುರು ನಿರಪರಾಧಿ ಎಂದ ಅರುಂಧತಿ ರಾಯ್
ರಸ್ತೆ ಮಾಡುವುದರಿಂದ ಬಡವರ ಜೀವನ ಉದ್ದಾರ ಆಗ್ತದಾ: ಪರಮೇಶ್ವರ್ ಪ್ರಶ್ನೆ
ರಸ್ತೆ ಮಾಡುವುದರಿಂದ ಬಡವರ ಜೀವನ ಉದ್ದಾರ ಆಗ್ತದಾ: ಪರಮೇಶ್ವರ್ ಪ್ರಶ್ನೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ