Maharaja Trophy T20 2023: ಮಹಾರಾಜ ಟ್ರೋಫಿ: ಸೆಮಿಫೈನಲ್ ವೇಳಾಪಟ್ಟಿ
Maharaja Trophy T20 2023: ವಿಜಯಕುಮಾರ್ ವೈಶಾಕ್ ಮುನ್ನಡೆಸಿರುವ ಗುಲ್ಬರ್ಗ ಮಿಸ್ಟಿಕ್ಸ್ ತಂಡವು 10 ರಲ್ಲಿ 6 ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಅಲಂಕರಿಸಿದೆ. ಇನ್ನು ಶ್ರೇಯಸ್ ಗೋಪಾಲ್ ಮುನ್ನಡೆಸಿರುವ ಶಿವಮೊಗ್ಗ ಲಯನ್ಸ್ ತಂಡವು ನಾಲ್ಕನೇ ಸ್ಥಾನದಲ್ಲಿದೆ.
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮಹಾರಾಜ ಟ್ರೋಫಿ ಟಿ20 ಟೂರ್ನಿಯು ಅಂತಿಮ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ ಲೀಗ್ ಹಂತದ ಎಲ್ಲಾ ಪಂದ್ಯಗಳು ಮುಗಿದಿದ್ದು, ಹುಬ್ಬಳ್ಳಿ ಟೈಗರ್ಸ್, ಮೈಸೂರು ವಾರಿಯರ್ಸ್, ಗುಲ್ಬರ್ಗ ಮಿಸ್ಟಿಕ್ಸ್ ಹಾಗೂ ಶಿವಮೊಗ್ಗ ಲಯನ್ಸ್ ತಂಡಗಳು ಸೆಮಿಫೈನಲ್ಗೆ ಪ್ರವೇಶಿಸಿದೆ.
ಮೊದಲ ಹಂತದಲ್ಲಿ ಪ್ರತಿ ತಂಡಗಳು ತಲಾ 10 ಪಂದ್ಯಗಳನ್ನಾಡಿದ್ದು, ಇದರಲ್ಲಿ 8 ಜಯ ಸಾಧಿಸಿರುವ ಮನೀಶ್ ಪಾಂಡೆ ನಾಯಕತ್ವದ ಹುಬ್ಬಳ್ಳಿ ಟೈಗರ್ಸ್ ತಂಡವು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದೆ. ಇನ್ನು ಹತ್ತರಲ್ಲಿ 6 ಗೆಲುವು ದಾಖಲಿಸಿರುವ ಕರುಣ್ ನಾಯರ್ ಮುಂದಾಳತ್ವದ ಮೈಸೂರು ವಾರಿಯರ್ಸ್ 2ನೇ ಸ್ಥಾನದಲ್ಲಿದೆ.
ಹಾಗೆಯೇ ವಿಜಯಕುಮಾರ್ ವೈಶಾಕ್ ಮುನ್ನಡೆಸಿರುವ ಗುಲ್ಬರ್ಗ ಮಿಸ್ಟಿಕ್ಸ್ ತಂಡವು 10 ರಲ್ಲಿ 6 ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಅಲಂಕರಿಸಿದೆ. ಇನ್ನು ಶ್ರೇಯಸ್ ಗೋಪಾಲ್ ಮುನ್ನಡೆಸಿರುವ ಶಿವಮೊಗ್ಗ ಲಯನ್ಸ್ ತಂಡವು ನಾಲ್ಕನೇ ಸ್ಥಾನದೊಂದಿಗೆ ಸೆಮಿಫೈನಲ್ಗೆ ಅರ್ಹತೆ ಪಡೆದುಕೊಂಡಿದೆ.
ಇನ್ನುಳಿದಂತೆ ಕೃಷ್ಣಪ್ಪ ಗೌತಮ್ ನಾಯಕತ್ವದ ಮಂಗಳೂರು ಡ್ರಾಗನ್ಸ್ ಹಾಗೂ ಮಯಾಂಕ್ ಅಗರ್ವಾಲ್ ಮುಂದಾಳತ್ವದ ಬೆಂಗಳೂರು ಬ್ಲಾಸ್ಟರ್ ತಂಡಗಳು ಟೂರ್ನಿಯಿಂದ ಹೊರಬಿದ್ದಿದೆ.
ಸೆಮಿಫೈನಲ್ ಫೈಟ್ ಯಾವಾಗ?
ಮಹಾರಾಜ ಟ್ರೋಫಿಯ ಸೆಮಿಫೈನಲ್ ಪಂದ್ಯಗಳು ಸೋಮವಾರ (ಆಗಸ್ಟ್ 28) ನಡೆಯಲಿದೆ. ಮೊದಲ ಪಂದ್ಯವು ಮಧ್ಯಾಹ್ನ 12 ಗಂಟೆಯಿಂದ ಶುರುವಾದರೆ, 2ನೇ ಪಂದ್ಯವು ರಾತ್ರಿ 7.30 ರಿಂದ ಆರಂಭವಾಗಲಿದೆ. ಈ ಎರಡೂ ಪಂದ್ಯಗಳು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲೇ ಜರುಗಲಿದೆ.
ಸೆಮಿಫೈನಲ್ ವೇಳಾಪಟ್ಟಿ:
- ಮೈಸೂರು ವಾರಿಯರ್ಸ್ vs ಗುಲ್ಬರ್ಗ ಮಿಸ್ಟಿಕ್ಸ್ (ಮಧ್ಯಾಹ್ನ 12 ಗಂಟೆಯಿಂದ)
- ಹುಬ್ಬಳ್ಳಿ ಟೈಗರ್ಸ್ vs ಶಿವಮೊಗ್ಗ ಲಯನ್ಸ್ (ರಾತ್ರಿ 7.30 ರಿಂದ)
- ಆಗಸ್ಟ್ 29, ಮಂಗಳವಾರ: ಫೈನಲ್ ಪಂದ್ಯ (ಚಿನ್ನಸ್ವಾಮಿ ಸ್ಟೇಡಿಯಂ, ಬೆಂಗಳೂರು)
ಹುಬ್ಬಳ್ಳಿ ಟೈಗರ್ಸ್: ಮನೀಶ್ ಪಾಂಡೆ (ನಾಯಕ),ಪ್ರವೀಣ್ ದುಬೆ, ಕೆಸಿ ಕಾರ್ಯಪ್ಪ, ಲವ್ನಿತ್ ಸಿಸೋಡಿಯಾ, ಶ್ರೀಜಿತ್ ಕೆಎಲ್, ಮೊಹಮ್ಮದ್ ತಾಹ, ವಿದ್ವತ್ ಕಾವೇರಪ್ಪ, ದರ್ಶನ್ ಎಂಬಿ, ಶಿವಂ ಎಂಬಿ, ನಾಗ ಭರತ್, ಸಂತೋಖ್ ಸಿಂಗ್, ಮನ್ವಂತ್ ಕುಮಾರ್ ಎಲ್, ಮಿತ್ರಕಾಂತ್ ಯಾದವ್, ಮಲ್ಲಿಕ್ ಸಾಬ್, ರಾಜಶೇಖರ್ ಹರಿಕಾಂತ್, ಕ್ಲೆಮೆಂಟ್ ರಾಜು.
ಶಿವಮೊಗ್ಗ ಲಯನ್ಸ್: ಶ್ರೇಯಸ್ ಗೋಪಾಲ್ (ನಾಯಕ), ಅಭಿನವ್ ಮನೋಹರ್, ನಿಹಾಲ್ ಉಳ್ಳಾಲ್, ವಿ ಕೌಶಿಕ್, ಎಚ್ ಎಸ್ ಶರತ್, ಕ್ರಾಂತಿ ಕುಮಾರ್, ರೋಹನ್ ಕದಂ, ಶ್ರೇಯಸ್ ಪುರಾಣಿಕ್, ಪ್ರಣವ್ ಭಾಟಿಯಾ, ವಿನಯ್ ಎನ್ ಸಾಗರ್, ಪವನ್ ಶಿರಡಿ, ರೋಹನ್ ನವೀನ್, ಶಿವರಾಜ್ ಎಸ್, ರೋಹಿತ್ ಕುಮಾರ್ ಕೆ, ನಿಶ್ಚಿತ್ ರಾವ್, ದೀಪಕ್ ದೇವಾಡಿಗ.
ಗುಲ್ಬರ್ಗ ಮಿಸ್ಟಿಕ್ಸ್: ವಿಜಯಕುಮಾರ್ ವೈಶಾಕ್ (ನಾಯಕ), ಕೆ.ಪಿ.ಅಪ್ಪಣ್ಣ, ಶರತ್ ಶ್ರೀನಿವಾಸ್, ಚೇತನ್ ಎಲ್.ಆರ್., ಮೊಹಮ್ಮದ್ ಅಕಿಬ್ ಜವಾದ್, ಸ್ಮರಣ್ ಆರ್, ಅನೀಶ್ ಕೆ.ವಿ, ಮ್ಯಾಕ್ನೀಲ್ ನೊರೊನ್ಹಾ, ಶರಣ್ ಗೌಡ್, ಅಭಿಲಾಷ್ ಶೆಟ್ಟಿ, ಹಾರ್ದಿಕ್ ರಾಜ್, ಶಿಮೊನ್ ಲೂಯಿಜ್, ಅವಿನಾಶ್ ಶೆಟ್ಟಿ, ಹಾರ್ದಿಕ್ ರಾಜ್, ಅವಿನಾಶ್ ಡಿ, ಯಶೋವರ್ಧನ್ ಪಿ, ಆದರ್ಶ್ ಪ್ರಜ್ವಲ್, ಶಾನ್ ಜೋಸೆಫ್, ಅಬುಲ್ ಹಸನ್ ಖಾಲಿದ್.
ಮೈಸೂರು ವಾರಿಯರ್ಸ್: ಕರುಣ್ ನಾಯರ್ (ನಾಯಕ), ಜಗದೀಶ ಸುಚಿತ್, ಪ್ರಸಿದ್ಧ್ ಕೃಷ್ಣ, ಶೋಯೆಬ್ ಮ್ಯಾನೇಜರ್, ರವಿಕುಮಾರ್ ಸಮರ್ಥ್, ಕಾರ್ತಿಕ್ ಸಿಎ, ಮನೋಜ್ ಭಾಂಡಗೆ, ವೆಂಕಟೇಶ್ ಎಂ, ತುಷಾರ್ ಸಿಂಗ್, ಕುಶಾಲ್ ವಾಧ್ವಾನಿ, ಶಶಿಕುಮಾರ್ ಕೆ, ರಕ್ಷಿತ್ ಎಸ್, ಗೌತಮ್ ಮಿಶ್ರಾ, ಶ್ರೀಶ ಆಚಾರ್, ಮೋನಿಶ್ ರೆಡ್ಡಿ, ಭರತ್ ಮಣಿ, ರಾಹುಲ್ ಸಿಂಗ್ ರಾವತ್, ಭರತ್ ಧುರಿ.