ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ಇಂದು ಭಾರತ-ಅಫ್ಘಾನಿಸ್ತಾನ್ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯದ ಆರಂಭಕ್ಕೂ ಮುನ್ನ ಸ್ಟೇಡಿಯಂ ಹೊರಗೆ ಭಾರೀ ಬೆಂಕಿ ಕಾಣಿಸಿಕೊಂಡಿದ್ದು, ಆತಂಕ ಮೂಡಿಸಿದೆ. ಪ್ರಸ್ತುತ ಮಾಹಿತಿ ಪ್ರಕಾರ ಸಮೀಪದ ಕಟ್ಟಡಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ಕ್ರೀಡಾಂಗಣದ ಪ್ರವೇಶ ದ್ವಾರದಲ್ಲಿ ಹೊಗೆ ಹರಡಿದೆ. ಇದಾಗ್ಯೂ ಪಂದ್ಯಾವಳಿಯ ಆಯೋಜಕರು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಅಲ್ಲದೆ ಮೈದಾನದ ಸುತ್ತ ಮುತ್ತ ಪರಿಸ್ಥಿತಿಯು ನಿಯಂತ್ರಣದಲ್ಲಿದೆ ಎಂದು ವರದಿಯಾಗಿದೆ.
ಏಷ್ಯಾಕಪ್ನಿಂದ ಹೊರಬಿದ್ದಿರುವ ಭಾರತ-ಅಫ್ಘಾನಿಸ್ತಾನ್ ಇಂದು ಔಪಚಾರಿಕ ಪಂದ್ಯವಾಡುತ್ತಿದೆ. ಈಗಾಗಲೇ ಉಭಯ ತಂಡಗಳು ಎರಡು ಸೋಲುಗಳನ್ನು ಕಾಣುವ ಮೂಲಕ ಟೂರ್ನಿಯಿಂದ ಹೊರಬಿದ್ದಿದೆ. ಸೂಪರ್-4 ಹಂತದಲ್ಲಿ ಭಾರತ ತಂಡವು ಶ್ರೀಲಂಕಾ ಹಾಗೂ ಪಾಕಿಸ್ತಾನ್ ವಿರುದ್ದ ಸೋತರೆ, ಅಫ್ಘಾನಿಸ್ತಾನ್ ಕೂಡ ಶ್ರೀಲಂಕಾ ಹಾಗೂ ಪಾಕ್ ವಿರುದ್ದ ಪರಾಜಯಗೊಂಡಿದೆ.
ಅತ್ತ ಎರಡು ತಂಡಗಳ ವಿರುದ್ದ ಭರ್ಜರಿ ಜಯ ಸಾಧಿಸಿರುವ ಪಾಕಿಸ್ತಾನ್ ಹಾಗೂ ಶ್ರೀಲಂಕಾ ತಂಡಗಳು ಫೈನಲ್ ಆಡಲಿದೆ. ದುಬೈ ಇಂಟರ್ನ್ಯಾಷನಲ್ ಮೈದಾನದಲ್ಲೇ ಫೈನಲ್ ಪಂದ್ಯ ಕೂಡ ನಡೆಯಲಿದ್ದು, ಇದೀಗ ಇದೇ ಸ್ಟೇಡಿಯಂ ಬಳಿ ಬೆಂಕಿ ಕಾಣಿಸಿಕೊಂಡಿರುವುದು ಆತಂಕ ಮೂಡಿಸಿದೆ.
Getting to know about major fire outside Dubai stadium right now#INDVSAFG #AsiaCup2022 pic.twitter.com/jjvPzqAVNj
— Ishaan (@Ishaan13891693) September 8, 2022
ಹೆಚ್ಚಿನ ಮಾಹಿತಿ ನಿರೀಕ್ಷಿಸಿ…
Published On - 6:39 pm, Thu, 8 September 22