- Kannada News Photo gallery Cricket photos ICC ODI Team Rankings: New Zealand dethroned as the no.1 ODI side
ICC ODI Team Rankings: ಏಕದಿನ ತಂಡಗಳ ಹೊಸ ರ‍್ಯಾಂಕಿಂಗ್ ಪ್ರಕಟ: ಟೀಮ್ ಇಂಡಿಯಾ ಸ್ಥಾನ ಭದ್ರ..!
ICC ODI Team Rankings: 107 ಅಂಕಗಳನ್ನು ಹೊಂದಿರುವ ಪಾಕಿಸ್ತಾನ್ 4ನೇ ಸ್ಥಾನ ಅಲಂಕರಿಸಿದೆ. ಹಾಗಿದ್ರೆ ಏಕದಿನ ತಂಡಗಳ ಐಸಿಸಿ ನೂತನ ರ‍್ಯಾಂಕಿಂಗ್ ಪಟ್ಟಿಯಲ್ಲಿ ಯಾವ ತಂಡ ಯಾವ ಸ್ಥಾನದಲ್ಲಿದೆ ನೋಡೋಣ...
Updated on: Sep 08, 2022 | 6:25 PM

ಐಸಿಸಿ ನೂತನ ಏಕದಿನ ತಂಡಗಳ ರ‍್ಯಾಂಕಿಂಗ್ ಪಟ್ಟಿಯನ್ನು ಪ್ರಕಟಿಸಿದೆ. ವಿಶೇಷ ಎಂದರೆ ಕಳೆದ ಬಾರಿ ಅಗ್ರಸ್ಥಾನ ಅಲಂಕರಿಸಿದ್ದ ನ್ಯೂಜಿಲೆಂಡ್ ತಂಡವು ಈ ಬಾರಿ ಒಂದು ಸ್ಥಾನ ಕುಸಿತ ಕಂಡಿದೆ.

ಇನ್ನು ವೆಸ್ಟ್ ಇಂಡೀಸ್ ವಿರುದ್ದದ ಏಕದಿನ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದ್ದ ಟೀಮ್ ಇಂಡಿಯಾ ಈ ಬಾರಿ ಕೂಡ ರ‍್ಯಾಂಕಿಂಗ್ ಪಟ್ಟಿಯಲ್ಲಿ ಮೂರನೇ ಸ್ಥಾನ ಕಾಯ್ದುಕೊಂಡಿದೆ. ಆದರೆ ಈ ಬಾರಿ ಹೆಚ್ಚಿನ ರೇಟಿಂಗ್ ಪಾಯಿಂಟ್ಗಳನ್ನು ಪಡೆದುಕೊಂಡಿದ್ದು, ಈ ಮೂಲಕ ಮೂರನೇ ಮತ್ತು ನಾಲ್ಕನೇ ಸ್ಥಾನಗಳ ಅಂತರವನ್ನು ಹೆಚ್ಚಿಸಿಕೊಂಡಿದೆ.

ಸದ್ಯ ಟೀಮ್ ಇಂಡಿಯಾ ಮೂರನೇ ಸ್ಥಾನದಲ್ಲಿದ್ದರೆ, ಅತ್ತ 107 ಅಂಕಗಳನ್ನು ಹೊಂದಿರುವ ಪಾಕಿಸ್ತಾನ್ 4ನೇ ಸ್ಥಾನ ಅಲಂಕರಿಸಿದೆ. ಹಾಗಿದ್ರೆ ಏಕದಿನ ತಂಡಗಳ ಐಸಿಸಿ ನೂತನ ರ‍್ಯಾಂಕಿಂಗ್ ಪಟ್ಟಿಯಲ್ಲಿ ಯಾವ ತಂಡ ಯಾವ ಸ್ಥಾನದಲ್ಲಿದೆ ನೋಡೋಣ...

10- ಅಫ್ಘಾನಿಸ್ತಾನ್ (69 ರೇಟಿಂಗ್)

9- ವೆಸ್ಟ್ ಇಂಡೀಸ್ (71 ರೇಟಿಂಗ್)

8- ಶ್ರೀಲಂಕಾ (92 ರೇಟಿಂಗ್)

7- ಬಾಂಗ್ಲಾದೇಶ (92 ರೇಟಿಂಗ್)

6- ಸೌತ್ ಆಫ್ರಿಕಾ (101 ರೇಟಿಂಗ್)

5- ಆಸ್ಟ್ರೇಲಿಯಾ (104 ರೇಟಿಂಗ್)

4- ಪಾಕಿಸ್ತಾನ್ (107 ರೇಟಿಂಗ್)

3- ಭಾರತ (111 ರೇಟಿಂಗ್)

2- ನ್ಯೂಜಿಲೆಂಡ್ (117 ರೇಟಿಂಗ್)

1- ಇಂಗ್ಲೆಂಡ್ (119 ರೇಟಿಂಗ್)
























