MLC 2023: ಮೇಜರ್ ಲೀಗ್​ ಕ್ರಿಕೆಟ್ ಟೂರ್ನಿ: ಪ್ಲೇಆಫ್ಸ್​ಗೆ 4 ತಂಡಗಳು ಎಂಟ್ರಿ

| Updated By: ಝಾಹಿರ್ ಯೂಸುಫ್

Updated on: Jul 26, 2023 | 4:08 PM

Major League Cricket 2023: ಈ ನಾಲ್ಕು ತಂಡಗಳು ಪ್ಲೇಆಫ್ಸ್ ಸುತ್ತಿನಲ್ಲಿ ಮುಖಾಮುಖಿಯಾಗಲಿದೆ. ಈ ಸುತ್ತಿನಲ್ಲಿ ಮೊದಲು ಕ್ವಾಲಿಫೈಯರ್ ಪಂದ್ಯ ನಡೆಯಲಿದ್ದು, ಇದರಲ್ಲಿ ಗೆದ್ದ ತಂಡವು ನೇರವಾಗಿ ಫೈನಲ್​ಗೆ ಪ್ರವೇಶಿಸಲಿದೆ.

MLC 2023: ಮೇಜರ್ ಲೀಗ್​ ಕ್ರಿಕೆಟ್ ಟೂರ್ನಿ: ಪ್ಲೇಆಫ್ಸ್​ಗೆ 4 ತಂಡಗಳು ಎಂಟ್ರಿ
MLC 2023
Follow us on

ಯುಎಸ್​ಎನಲ್ಲಿ ನಡೆಯುತ್ತಿರುವ ಮೇಜರ್ ಲೀಗ್ ಕ್ರಿಕೆಟ್ (MLC) ಟೂರ್ನಿ ಅಂತಿಮ ಹಂತಕ್ಕೆ ಬಂದು ನಿಂತಿದೆ. 6 ತಂಡಗಳ ನಡುವಣ ಈ ಟೂರ್ನಿಯಲ್ಲಿ 2 ತಂಡಗಳು ಹೊರಬಿದ್ದಿದ್ದು, ಉಳಿದ 4 ಟೀಮ್​ಗಳು ಪ್ಲೇಆಫ್ಸ್ ಪ್ರವೇಶಿಸಿದೆ. ಐದು ಪಂದ್ಯಗಳಲ್ಲಿ ಕೇವಲ 1 ಜಯ ಸಾಧಿಸಿದ ಲಾಸ್ ಏಂಜಲೀಸ್ ನೈಟ್ ರೈಡರ್ಸ್ ಹಾಗೂ ಐದರಲ್ಲಿ 2 ಗೆಲುವು ದಾಖಲಿಸಿದ ಸ್ಯಾನ್ ಫ್ರಾನ್ಸಿಕೊ ಯುನಿಕಾರ್ನ್ಸ್ ತಂಡಗಳು ಟೂರ್ನಿಯಿಂದ ಎಲಿಮಿನೇಟ್ ಆಗಿದೆ.

ಇನ್ನು 5 ಪಂದ್ಯಗಳಲ್ಲಿ 4 ಜಯ ಸಾಧಿಸಿರುವ ಸಿಯಾಟಲ್ ಒರ್ಕಾಸ್ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದರೆ, ಐದರಲ್ಲಿ 3 ಗೆಲುವು ದಾಖಲಿಸಿರುವ ಟೆಕ್ಸಾಸ್ ಸೂಪರ್ ಕಿಂಗ್ಸ್​ ಪಾಯಿಂಟ್ಸ್ ಟೇಬಲ್​ನಲ್ಲಿ ದ್ವಿತೀಯ ಸ್ಥಾನದಲ್ಲಿದೆ.

ಹಾಗೆಯೇ 5 ಪಂದ್ಯಗಳ 3 ಗೆಲುವು ಸಾಧಿಸಿರುವ ವಾಷಿಂಗ್ಟನ್ ಫ್ರೀಡಮ್ 3ನೇ ಸ್ಥಾನದಲ್ಲಿದ್ದರೆ, ಐದರಲ್ಲಿ 2 ಜಯ ಸಾಧಿಸಿ ನೆಟ್ ರನ್ ರೇಟ್ ನೆರವಿನೊಂದಿಗೆ ಎಂಐ ನ್ಯೂಯಾರ್ಕ್​ 4ನೇ ಸ್ಥಾನ ಅಲಂಕರಿಸಿದೆ.

ಈ ನಾಲ್ಕು ತಂಡಗಳು ಪ್ಲೇಆಫ್ಸ್ ಸುತ್ತಿನಲ್ಲಿ ಮುಖಾಮುಖಿಯಾಗಲಿದೆ. ಈ ಸುತ್ತಿನಲ್ಲಿ ಮೊದಲು ಕ್ವಾಲಿಫೈಯರ್ ಪಂದ್ಯ ನಡೆಯಲಿದ್ದು, ಇದರಲ್ಲಿ ಗೆದ್ದ ತಂಡವು ನೇರವಾಗಿ ಫೈನಲ್​ಗೆ ಪ್ರವೇಶಿಸಲಿದೆ. ಹಾಗೆಯೇ ಸೋತ ತಂಡಕ್ಕೆ ಮತ್ತೊಂದು ಅವಕಾಶ ಸಿಗಲಿದೆ.

ಇದರ ನಡುವೆ ಎಲಿಮಿನೇಟರ್ ಪಂದ್ಯ ಜರುಗಲಿದ್ದು, ಈ ಪಂದ್ಯದಲ್ಲಿ ಸೋತ ತಂಡ ಟೂರ್ನಿಯಿಂದ ಹೊರಬೀಳಲಿದೆ. ಹಾಗೆಯೇ ಗೆದ್ದ ತಂಡ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಸೋತ ತಂಡದೊಡನೆ ಚಾಲೆಂಜರ್ ಪಂದ್ಯವನ್ನಾಡಲಿದೆ. ಚಾಲೆಂಜರ್ ಪಂದ್ಯದಲ್ಲಿ ಗೆದ್ದ ತಂಡ ಫೈನಲ್​ಗೆ ಪ್ರವೇಶಿಸಲಿದೆ.

ಇದನ್ನೂ ಓದಿ: Heinrich Klaasen: 7 ಭರ್ಜರಿ ಸಿಕ್ಸ್​: ದಾಖಲೆಯ ಸೆಂಚುರಿ ಸಿಡಿಸಿದ ಕ್ಲಾಸೆನ್..!

ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯ ಪ್ಲೇಆಫ್ಸ್ ವೇಳಾಪಟ್ಟಿ ಈ ಕೆಳಗಿನಂತಿದೆ:

  1. ಜುಲೈ 27: ಸಿಯಾಟಲ್ ಓರ್ಕಾಸ್ ವಿರುದ್ಧ ಟೆಕ್ಸಾಸ್ ಸೂಪರ್ ಕಿಂಗ್ಸ್ (ಕ್ವಾಲಿಫೈಯರ್ ಪಂದ್ಯ)
  2. ಜುಲೈ 27: ವಾಷಿಂಗ್ಟನ್ ಫ್ರೀಡಮ್ ವಿರುದ್ಧ ಎಂಐ ನ್ಯೂಯಾರ್ಕ್, (ಎಲಿಮಿನೇಟರ್ ಪಂದ್ಯ)
  3. ಜುಲೈ 29: TBC vs TBC (ಚಾಲೆಂಜರ್ ಪಂದ್ಯ)
  4. ಜುಲೈ 30: ಫೈನಲ್ ಪಂದ್ಯ