Manish Pandey: ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿಗೆ ಕರ್ನಾಟಕದ ಬಲಿಷ್ಠ ತಂಡ ಘೋಷಣೆ: ನಾಯಕ ಯಾರು ಗೊತ್ತಾ?

Karnataka Team, Syed Mushtaq Ali Trophy: ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ 2021-22ನೇ ಸಾಲಿಗೆ ಕರ್ನಾಟಕದ ಬಲಿಷ್ಠ 20 ಸದಸ್ಯರ ತಂಡವನ್ನು ಪ್ರಕಟಮಾಡಲಾಗಿದೆ. ಕಳೆದ ಆವೃತ್ತಿಯ ಟೂರ್ನಿಯಿಂದ ಮೊಣಕೈ ಗಾಯದ ಸಮಸ್ಯೆ ಕಾರಣ ಮನೀಶ್ ಪಾಂಡೆ ಸಂಪೂರ್ಣವಾಗಿ ಹೊರಗುಳಿದಿದ್ದರು.

Manish Pandey: ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿಗೆ ಕರ್ನಾಟಕದ ಬಲಿಷ್ಠ ತಂಡ ಘೋಷಣೆ: ನಾಯಕ ಯಾರು ಗೊತ್ತಾ?
karnataka team
Follow us
TV9 Web
| Updated By: Vinay Bhat

Updated on: Oct 21, 2021 | 8:16 AM

ನವೆಂಬರ್‌ 4ರಿಂದ ಆರಂಭವಾಗಲಿರುವ ಸೈಯದ್ ಮುಷ್ತಾಕ್ ಅಲಿ ಟ್ರೋಫಿಗೆ (Syed Mushtaq Ali Trophy) ಕರ್ನಾಟಕ ತಂಡ (Karnataka Team) ಪ್ರಕಟವಾಗಿದೆ. 20 ಆಟಗಾರರ ಬಲಿಷ್ಠ ಕರ್ನಾಟಕ ತಂಡವನ್ನು ಘೋಷಣೆ ಮಾಡಲಾಗಿದ್ದು, ಮನೀಷ್ ಪಾಂಡೆಗೆ (Manish Pandey) ನಾಯಕ ಸ್ಥಾನ ಲಭಿಸಿದೆ. ಸ್ಟಾರ್‌ ಓಪನರ್‌ಗಳಾದ ಮಯಾಂಕ್‌ ಅಗರ್ವಾಲ್‌ (Mayank Agarwal) ಮತ್ತು ದೇವದತ್‌ ಪಡಿಕ್ಕಲ್‌ (Devdutt Padikkal) ಕರ್ನಾಟಕ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಕೆ. ಎಲ್‌ ರಾಹುಲ್‌ (KL Rahul) ಟಿ20 ವಿಶ್ವಕಪ್ (T20 World Cup) ಪ್ರಯುಕ್ತ ಭಾರತ ತಂಡದ (Team India) ಸೇವೆಯಲ್ಲಿ ನಿರತರಾದ ಕಾರಣ ಅವರನ್ನು ತಂಡದಿಂದ ಹೊರಗಿಡಲಾಗಿದೆ.

ಮನೀಶ್ ಪಾಂಡೆ ಮೊಣಕೈ ಗಾಯದ ಸಮಸ್ಯೆ ಕಾರಣ ಕಳೆದ ಆವೃತ್ತಿಯ ಟೂರ್ನಿಯಿಂದ ಸಂಪೂರ್ಣವಾಗಿ ಹೊರಗುಳಿದಿದ್ದರು. ಅವರ ಅನುಪಸ್ಥಿತಿಯಲ್ಲಿ ಕರುಣ್‌ ನಾಯರ್‌ ತಂಡದ ನಾಯಕತ್ವ ವಹಿಸಿಕೊಂಡಿದ್ದರು. ಕಳೆದ ಬಾರಿ ಕರ್ನಾಟಕ ತಂಡದ ಉಪನಾಯಕ ಆಗಿದ್ದ ಆಲ್‌ರೌಂಡರ್‌ ಪವನ್‌ ದೇಶಪಾಂಡೆ ಅವರನ್ನು ಈ ಬಾರಿ ತಂಡದಿಂದ ಕೈ ಬಿಡಲಾಗಿದೆ. ಇತ್ತೀಚೆಗೆ ನಿವೃತ್ತಿ ಘೋಷಿಸಿರುವ ಅಭಿಮನ್ಯು ಮಿಥುನ್‌ ಸೇವೆಯೂ ತಂಡಕ್ಕೆ ಇಲ್ಲವಾಗಿದೆ.

ಇನ್ನು 2020 – 21 ಆವೃತ್ತಿಯ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಕರ್ನಾಟಕ ತಂಡದ ಉಪನಾಯಕ ಸ್ಥಾನವನ್ನು ಪಡೆದುಕೊಂಡಿದ್ದ ಪವನ್ ದೇಶಪಾಂಡೆ ಈ ಬಾರಿ ಪ್ರಕಟವಾಗಿರುವ ಕರ್ನಾಟಕ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಉಳಿದಂತೆ ಶ್ರೇಯಸ್‌ ಗೋಪಾಲ್‌, ಕೆ. ಗೌತಮ್‌, ಜೆ. ಸುಚಿತ್‌, ಪ್ರವೀಣ್‌ ದುಬೆ, ಕೆ.ಸಿ. ಕರಿಯಪ್ಪ, ಎಂ. ಪ್ರಸಿದ್ಧ್ ಕೃಷ್ಣ ಸೇರಿದಂತೆ ಪ್ರಮುಖರು ಸ್ಥಾನ ಪಡೆದುಕೊಂಡಿದ್ದಾರೆ.

ಈಗಾಗಲೇ 2018-19 ಮತ್ತು 2019-20ರಲ್ಲಿ ಎರಡು ಬಾರಿ ಟ್ರೋಫಿ ಗೆದ್ದು ಟೂರ್ನಿಯ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದಾದ ಕರ್ನಾಟಕ ತಂಡ ಈ ಬಾರಿ ಮೂರನೇ ಟ್ರೋಫಿ ಎತ್ತಿ ಹಿಡಿಯುವ ಕಡೆಗೆ ಗುರಿಯಿಟ್ಟಿದೆ. ಕಳೆದ ಬಾರಿ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಪಂಜಾಬ್‌ ಎದುರು ಕರ್ನಾಟಕ ನಿರಾಶೆ ಅನುಭವಿಸಿತ್ತು. ಈ ಬಾರಿ ಸ್ಟಾರ್‌ ಆಟಗಾರರ ದಂಡೇ ಇರುವ ಕಾರಣ ಕರ್ನಾಟಕ ಟ್ರೋಫಿ ಗೆಲ್ಲುವ ಫೇವರಿಟ್‌ ತಂಡಗಳಲ್ಲಿ ಒಂದಾಗಿದ್ದು, ಮೊದಲ ಪಂದ್ಯವನ್ನು ಮುಂಬೈ ವಿರುದ್ಧ ಆಡಲಿದೆ.

ಕರ್ನಾಟಕ ತಂಡ: ಮನೀಷ್‌ ಪಾಂಡೆ (ನಾಯಕ), ಮಾಯಾಂಕ್‌ ಅಗರ್ವಾಲ್‌, ದೇವದತ್ತ ಪಡಿಕ್ಕಲ್‌, ಕೆ.ವಿ. ಸಿದ್ಧಾರ್ಥ, ರೋಹನ್‌ ಕದಮ್‌, ಅನಿರುದ್ಧ ಜೋಷಿ, ಅಭಿನವ್‌ ಮನೋಹರ್‌, ಬಿ.ಆರ್‌. ಶರತ್‌ (ವಿ.ಕೀ.), ನಿಹಾಲ್‌ ಉಳ್ಳಾಲ್‌ (ವಿ.ಕೀ.), ಶ್ರೇಯಸ್‌ ಗೋಪಾಲ್‌, ಕೆ. ಗೌತಮ್‌, ಜೆ. ಸುಚಿತ್‌, ಪ್ರವೀಣ್‌ ದುಬೆ, ಕೆ.ಸಿ. ಕರಿಯಪ್ಪ, ಎಂ. ಪ್ರಸಿದ್ಧ್ ಕೃಷ್ಣ, ಪ್ರತೀಕ್‌ ಜೈನ್‌, ವಿ. ವೈಶಾಕ್‌, ಎಂ.ಬಿ. ದರ್ಶನ್‌, ವಿದ್ಯಾಧರ ಪಾಟೀಲ್.

ಕರ್ನಾಟಕ ತಂಡದ ಪಂದ್ಯಗಳ ಪಟ್ಟಿ:

ಪಂದ್ಯ 1: ಕರ್ನಾಟಕ vs ಮುಂಬೈ ( ನವೆಂಬರ್‌ 4 )

ಪಂದ್ಯ 2: ಕರ್ನಾಟಕ vs ಛತ್ತೀಸ್ ಗಢ ( ನವೆಂಬರ್‌ 5 )

ಪಂದ್ಯ 3: ಕರ್ನಾಟಕ vs ಸರ್ವಿಸಸ್ ( ನವೆಂಬರ್‌ 6 )

ಪಂದ್ಯ 4: ಕರ್ನಾಟಕ vs ಬರೋಡಾ ( ನವೆಂಬರ್‌ 8 )

ಪಂದ್ಯ 5: ಕರ್ನಾಟಕ vs ಪ. ಬಂಗಾಳ ( ನವೆಂಬರ್‌ 9 )

Hardik Pandya: ಅಭ್ಯಾಸ ಪಂದ್ಯದಲ್ಲಿ ಒಂದು ಓವರ್ ಕೂಡ ಬೌಲಿಂಗ್ ಮಾಡದ ಹಾರ್ದಿಕ್ ಪಾಂಡ್ಯ: ರೋಹಿತ್ ಶರ್ಮಾ ಈ ಬಗ್ಗೆ ಏನಂದ್ರು?

T20 World Cup 2021: ಸಿಕ್ಸರ್ ಕಿಂಗ್ ದಾಖಲೆ ಮೇಲೆ ಹಿಟ್​ಮ್ಯಾನ್ ಕಣ್ಣು

(Manish Pandey has been named the captain of Karnataka 20-man squad for the Syed Mushtaq Ali Trophy 2021-22)

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ