T20 World Cup 2021: ಇಂದು ಬಿ ಗುಂಪಿನ ಕೊನೆಯ ಸುತ್ತಿನ ಪಂದ್ಯ: ಸೂಪರ್-12 ಹಂತಕ್ಕೇರಲು 4 ತಂಡಗಳ ಪೈಪೋಟಿ

Scotland vs PNG and Oman vs Bangladesh: ಮಸ್ಕಟ್​ನ ಅಲ್ ಅಮೇರಾತ್​ನಲ್ಲಿ ಮಧ್ಯಾಹ್ನ 3:30ಕ್ಕೆ ಪ್ರಾರಂಭವಾಗುವ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ಮತ್ತು ಪಪುವಾ ನ್ಯೂಗಿನಿಯಾ ಮಧ್ಯೆ ಹಣಾಹಣಿ ಇದೆ. ಸಂಜೆ 7:30ಕ್ಕೆ ಓಮನ್ ಮತ್ತು ಸ್ಕಾಟ್ಲೆಂಡ್ ತಂಡಗಳು ಮುಖಾಮುಖಿಯಾಗಲಿವೆ.

T20 World Cup 2021: ಇಂದು ಬಿ ಗುಂಪಿನ ಕೊನೆಯ ಸುತ್ತಿನ ಪಂದ್ಯ: ಸೂಪರ್-12 ಹಂತಕ್ಕೇರಲು 4 ತಂಡಗಳ ಪೈಪೋಟಿ
T20 World Cup
Follow us
TV9 Web
| Updated By: Vinay Bhat

Updated on: Oct 21, 2021 | 9:03 AM

ಐಸಿಸಿ ಟಿ20 ವಿಶ್ವಕಪ್​ನ (T20 World Cup) ಮೊದಲ ಸುತ್ತಿನ ಪಂದ್ಯ ಅಂತಿಮ ಹಂತಕ್ಕೆ ಬಂದಿದ್ದು, ಸಾಕಷ್ಟು ರೋಚಕತೆ ಸೃಷ್ಟಿಸುತ್ತಿದೆ. ಇಂದು ಬಿ ಗುಂಪಿನ ಕೊನೆಯ ಸುತ್ತಿನ ಪಂದ್ಯಗಳು ನಡೆಯಲಿವೆ. ಮಸ್ಕಟ್​ನ ಅಲ್ ಅಮೇರಾತ್​ನಲ್ಲಿ ಮಧ್ಯಾಹ್ನ 3:30ಕ್ಕೆ ಪ್ರಾರಂಭವಾಗುವ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ಮತ್ತು ಪಪುವಾ ನ್ಯೂಗಿನಿಯಾ (Bangladesh vs Papua New Guinea) ಮಧ್ಯೆ ಹಣಾಹಣಿ ಇದೆ. ಸಂಜೆ 7:30ಕ್ಕೆ ಓಮನ್ ಮತ್ತು ಸ್ಕಾಟ್ಲೆಂಡ್ (Oman vs Scotland) ತಂಡಗಳು ಮುಖಾಮುಖಿಯಾಗಲಿವೆ. ಈ ಗುಂಪಿನಲ್ಲಿ ಪಿಎನ್​ಜಿ ತಂಡ ಈಗಾಗಲೇ ವಿಶ್ವಕಪ್​ನಿಂದ ಹೊರಬೀಳುವುದು ಖಚಿತವಾಗಿದೆ. ಸ್ಕಾಟ್ಲೆಂಡ್, ಓಮನ್ ಮತ್ತು ಬಾಂಗ್ಲಾದೇಶ ಮಧ್ಯೆ ಸೂಪರ್-12 ಹಂತ ಪ್ರವೇಶಿಸಲು ಪೈಪೋಟಿ ಇದೆ.

ಆಡಿರುವ ಎರಡೂ ಪಂದ್ಯವನ್ನು ಸೋತು ಬಹುತೇಕ ಟೂರ್ನಿಯಿಂದ ಹೊರಬಿದ್ದಿರುವ ಪಪುವಾ ನ್ಯೂಗಿನಿಗೆ ಇದು ಔಪಚಾರಿಕ ಪಂದ್ಯ ಎನ್ನಬಹುದು. ಹೀಗಾಗಿ ಅಸಾದ್ ವಾಲ ನಾಯಕನಾಗಿ ಜವಾಬ್ದಾರಿಯಿಂದ ಆಡಿ, ಟೋನಿ ಉರಾ, ಲೆಗಾ ಸೈಕಾ, ಚಾರ್ಲೆಸ್ ಅಮಿನಿ ಇವರಿಗೆ ಸಾತ್ ನೀಡಿ ಬಾಂಗ್ಲಾಕ್ಕೆ ಶಾಕ್ ಕೊಟ್ಟರೆ ಅಚ್ಚರಿಯಿಲ್ಲ.

ಯಾಕಂದ್ರೆ ಬಾಂಗ್ಲಾದೇಶಕ್ಕೆ ಈ ಪಂದ್ಯ ಗೆಲ್ಲಲೇ ಬೇಕಿದೆ. ಆಡಿದ ಎರಡು ಪಂದ್ಯಗಳಲ್ಲಿ ಒಂದು ಗೆಲುವು-ಸೋಲು ಕಂಡಿದೆ. ತಂಡದಲ್ಲಿ ಸ್ಟಾರ್ ಆಟಗಾರರಿದ್ದರೂ ಸಂಘಟಿತ ಪ್ರದರ್ಶನ ನೀಡಲು ಎಡವುತ್ತಿದೆ. ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದರಿಂದ ಶಕಿಬ್ ಅಲ್ ಹಸನ್, ಲಿಟನ್ ದಾಸ್, ಮೆಹದಿ ಹಸನ್, ಮೊಹಮ್ಮದುಲ್ಲ ಹಾಗೂ ಮುಶ್ಫೀಕರ್ ರಹೀಂ ಮೇಲೆ ಸಾಕಷ್ಟು ಒತ್ತಡವಿದೆ.

ಇನ್ನು ಓಮನ್ ಮತ್ತು ಸ್ಕಾಟ್ಲೆಂಡ್ ತಂಡಗಳ ಮುಖಾಮುಖಿಯಲ್ಲಿ ಸ್ಕಾಟ್ಲೆಂಡ್ ಸೂಪರ್ 12 ಹಂತಕ್ಕೇರುವ ಸನಿಹದಲ್ಲಿದೆ. ಇಂದಿನ ಪಂದ್ಯ ಗೆದ್ದರೆ ಅದು ಖಚಿತವಾಗಿದೆ. ಕ್ರಿಸ್ ಗ್ರೀಸ್ ಆಲ್ರೌಂಡರ್ ಪ್ರದರ್ಶನ ತಂಡದ ದೊಡ್ಡ ಪ್ಲಸ್ ಪಾಯಿಂಟ್ ಆಗಿದೆ. ಮುನ್ಸೆ ಕೂಡ ಉತ್ತಮ ಲಯದಲ್ಲಿದ್ದಾರೆ. ಉಳಿದ ಆಟಗಾರರು ಕೂಡ ತಂಡಕ್ಕೆ ಉತ್ತಮ ಕೊಡುಗೆ ನೀಡುತ್ತಿದ್ದಾರೆ.

ಇತ್ತ ಓಮನ್​ಗೆ ಕೂಡ ಈ ಪಂದ್ಯ ಮುಖ್ಯವಾಗಿದೆ. ಗೆದ್ದರಷ್ಟೆ ಉಳಿಗಾಲ. ಮೊದಲ ಪಂದ್ಯದಲ್ಲಿ 10 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿ ಎರಡನೇ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ ಸೋತ ಓಮನ್​ಗೆ ಗೆಲುವೊಂದೆ ಮಾರ್ಗವಾಗಿದೆ. ಓಪನರ್​ಗಳಾದ ಅಕಿಬ್ ಇಲ್ಯಾಸ್ ಮತ್ತು ಜಿತೇಂದರ್ ಸಿಂಗ್ ಫಾರ್ಮ್​ನಲ್ಲಿರುವುದು ತಂಡಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ಇವರಿಗೆ ಇತರೆ ಆಟಗಾರರು ಸಾಥ್ ನೀಡಬೇಕಿದೆ. ಹೀಗಾಗಿ ಇವರಿಬ್ಬರ ನಡುವಣ ಕಾಳಗ ಸಾಕಷ್ಟು ಕುತೂಹಲ ಕೆರಳಿಸಿದೆ.

Manish Pandey: ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿಗೆ ಕರ್ನಾಟಕದ ಬಲಿಷ್ಠ ತಂಡ ಘೋಷಣೆ: ನಾಯಕ ಯಾರು ಗೊತ್ತಾ?

Hardik Pandya: ಅಭ್ಯಾಸ ಪಂದ್ಯದಲ್ಲಿ ಒಂದು ಓವರ್ ಕೂಡ ಬೌಲಿಂಗ್ ಮಾಡದ ಹಾರ್ದಿಕ್ ಪಾಂಡ್ಯ: ರೋಹಿತ್ ಶರ್ಮಾ ಈ ಬಗ್ಗೆ ಏನಂದ್ರು?

(T20 World Cup 2021 Scotland vs PNG and Oman vs Bangladesh Stats Review)

ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ