Sachin Tendulkar: ವಿಶ್ವದ ಮೆಚ್ಚಿನ ಕ್ರೀಡಾಪಟು ಸಮೀಕ್ಷೆ: ಸಚಿನ್ ತೆಂಡೂಲ್ಕರ್​ಗೆ ಮೂರನೇ ಸ್ಥಾನ

| Updated By: Vinay Bhat

Updated on: Dec 18, 2021 | 9:39 AM

World's Most Admired Sportsperson of 2021: ಕ್ರೀಡಾಪಟುಗಳ ಪೈಕಿ ಫುಟ್ಬಾಲ್ ದಿಗ್ಗಜರಾದ ಪೂರ್ಚುಗಲ್‌ನ ಕ್ರಿಸ್ಟಿಯಾನೋ ರೊನಾಲ್ಡೋ ಹಾಗೂ ಅರ್ಜಿಂಟೀನಾದ ಲಿಯೋನೆಲ್‌ ಮೆಸ್ಸಿ ಮೊದಲೆರಡು ಸ್ಥಾನದಲ್ಲಿದ್ದು, ಸಚಿನ್‌ ತೆಂಡೂಲ್ಕರ್ ಮೂರನೇ ಸ್ಥಾನದಲ್ಲಿದ್ದಾರೆ.

Sachin Tendulkar: ವಿಶ್ವದ ಮೆಚ್ಚಿನ ಕ್ರೀಡಾಪಟು ಸಮೀಕ್ಷೆ: ಸಚಿನ್ ತೆಂಡೂಲ್ಕರ್​ಗೆ ಮೂರನೇ ಸ್ಥಾನ
Sachin Tendulkar
Follow us on

ಇಂಟರ್ನೆಟ್ ಆಧಾರಿತ ಮಾರುಕಟ್ಟೆ ಸಂಶೋಧನೆ ಮತ್ತು ಡೇಟಾ ಅನಾಲಿಟಿಕ್ಸ್ ಸಂಸ್ಥೆಯಾದ YouGov ನಡೆಸಿದ ಸಮೀಕ್ಷೆಯ ಪ್ರಕಾರ ಲೆಜೆಂಡರಿ ಸಚಿನ್ ತೆಂಡೂಲ್ಕರ್ (Sachin Tendulkar) ಅವರು ವಿಶ್ವದ 12ನೇ ‘ಅತ್ಯಂತ ಮೆಚ್ಚುಗೆ ಪಡೆದ ವ್ಯಕ್ತಿ’ ಎಂದು ಗುರುತಿಸಲ್ಪಟ್ಟಿದ್ದಾರೆ. ಈ ಮೂಲಕ ಇಡೀ ಕ್ರಿಕೆಟ್ ಜಗತ್ತು ಆರಾಧಿಸುವ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ಸೇರ್ಪಡೆಯಾಗಿದೆ. ಯೂಗೋವ್ ಎನ್ನುವ ಅಂತರ್ಜಾಲ ಆಧಾರಿತ ಮಾರ್ಕೆಟ್ ರಿಸರ್ಚ್‌ ಮತ್ತು ಡೇಟಾ ಅನಾಲಿಟಿಕ್ಸ್ ಸಂಸ್ಥೆಯು 42 ಸಾವಿರ ಜನರ ಅಭಿಪ್ರಾಯ ಸಂಗ್ರಹಿಸಿ ಈ ಪಟ್ಟಿ ಮಾಡಿದ್ದು, ಜಗತ್ತಿನ ಅಚ್ಚುಮೆಚ್ಚಿನ ವ್ಯಕ್ತಿಗಳ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ 12ನೇ ಸ್ಥಾನ ಪಡೆದಿದ್ದಾರೆ.ಇದೇ ಪಟ್ಟಿಯಲ್ಲಿ ಫುಟ್‌ಬಾಲ್ ತಾರೆಯರಾದ ಲಯೊನೆಲ್ ಮೆಸ್ಸಿ (Lionel Messi) ಮತ್ತು  ಕ್ರಿಸ್ಟಿಯಾನೊ ರೊನಾಲ್ಡೊ  (Cristiano Ronaldo) ಸ್ಥಾನ ಪಡೆದಿರುವ ಮೊದಲ ಇಬ್ಬರು ಕ್ರೀಡಾಪಟುಗಳಾಗಿದ್ದಾರೆ.

ಕ್ರೀಡಾಪಟುಗಳ ಪೈಕಿ ಫುಟ್ಬಾಲ್ ದಿಗ್ಗಜರಾದ ಪೂರ್ಚುಗಲ್‌ನ ಕ್ರಿಸ್ಟಿಯಾನೋ ರೊನಾಲ್ಡೋ ಹಾಗೂ ಅರ್ಜಿಂಟೀನಾದ ಲಿಯೋನೆಲ್‌ ಮೆಸ್ಸಿ ಮೊದಲೆರಡು ಸ್ಥಾನದಲ್ಲಿದ್ದು, ಸಚಿನ್‌ ತೆಂಡೂಲ್ಕರ್ ಮೂರನೇ ಸ್ಥಾನದಲ್ಲಿದ್ದಾರೆ. ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ ಬಳಿಕ ತೆಂಡೂಲ್ಕರ್, 2013ರಿಂದ ಯುನಿಸೆಫ್‌ನಲ್ಲಿ ದಕ್ಷಿಣ ಏಷ್ಯಾದ ರಾಯಭಾರಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಮಕ್ಕಳ ಆರೋಗ್ಯ, ಶಿಕ್ಷಣ ಹಾಗೂ ಕ್ರೀಡೆಯ ಕುರಿತಂತೆ ಜಾಗೃತಿ ಮೂಡಿಸುತ್ತಾ ಬಂದಿದ್ದಾರೆ. ಬೇರೆ ಬೇರೆ ರಾಜ್ಯಗಳ ಗ್ರಾಮೀಣ ಮತ್ತು ಪಟ್ಟಣ ಪ್ರದೇಶಗಳಲ್ಲಿ ಸಮಾಜಕಾರ್ಯ ಕೈಗೊಂಡಿದ್ದಾರೆ. ಇವು ಅವರ ಕುರಿತು ಮೆಚ್ಚುಗೆಗೆ ಕಾರಣವಾಗಿವೆ.

ಇನ್ನು ಜಗತ್ತಿನ ಟಾಪ್ 10 ಅಚ್ಚುಮೆಚ್ಚಿನ ವ್ಯಕ್ತಿಗಳ ಪಟ್ಟಿಯಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಮೊದಲ ಸ್ಥಾನದಲ್ಲಿದ್ದಾರೆ. ಇದಾದ ಬಳಿಕ ಖ್ಯಾತ ಉಧ್ಯಮಿ ಬಿಲ್‌ ಗೇಟ್ಸ್‌, ಚೀನಾದ ಪ್ರಧಾನಿ ಕ್ಸಿ ಜಿನ್‌ಪಿಂಗ್, ಕ್ರಿಸ್ಟಿಯಾನೋ ರೊನಾಲ್ಡೋ, ಜಾಕಿ ಚಾನ್ ಮೊದಲ ಐದು ವ್ಯಕ್ತಿಗಳಾಗಿ ಕಾಣಿಸಿಕೊಂಡಿದ್ದಾರೆ.

ಇನ್ನುಳಿದಂತೆ ಎಲಾನ್ ಮಸ್ಕ್‌, ಲಿಯೋನೆಲ್ ಮೆಸ್ಸಿ ಬಳಿಕ ಭಾರತ ಪ್ರಧಾನಿ ನರೇಂದ್ರ ಮೋದಿ ಎಂಟನೇ ಸ್ಥಾನ ಪಡೆದಿದ್ದಾರೆ. ಇದಾದ ಬಳಿಕ ವ್ಲಾಡಿಮಿರ್ ಪುಟಿನ್ ಹಾಗೂ ಜಾಕ್ ಮಾ ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದ ಇತರೆ ಪ್ರಭಾವಿ ವ್ಯಕ್ತಿಗಳಾಗಿದ್ದಾರೆ. ಬಾಲಿವುಡ್ ನಟ ಶಾರುಖ್ ಖಾನ್(14), ಅಮಿತಾಬ್ ಬಚ್ಚನ್(15), ವಿರಾಟ್ ಕೊಹ್ಲಿ(18) ಟಾಪ್ 20 ಪಟ್ಟಿಯಲ್ಲಿ ಸ್ಥಾನ ಪಡೆದ ಇತರೇ ಭಾರತೀಯರೆನಿಸಿದ್ದಾರೆ. ಮಹಿಳೆಯರ ವಿಭಾಗದಲ್ಲಿ ಪ್ರಿಯಾಂಕ ಚೋಪ್ರಾ(10), ಐಶ್ವರ್ಯ ರೈ ಬಚ್ಚನ್(13), ಸುಧಾಮೂರ್ತಿ(14) ಕೂಡಾ ಸ್ಥಾನ ಪಡೆದಿದ್ದಾರೆ.

Virat Kohli: ನಾವಿನ್ನು ಎರಡು ವರ್ಷಗಳ ಹಿಂದಿನ ವಿರಾಟ್ ಕೊಹ್ಲಿಯನ್ನು ನೋಡಬಹುದು ಎಂದ ಸುನೀಲ್ ಗವಾಸ್ಕರ್

(Master Blaster Sachin Tendulkar among Worlds top-3 most-admired sportsperson alongside Lionel Messi Cristiano Ronaldo)