AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹರ್ಭಜನ್​​ ಸಿಂಗ್​ ಎಸೆತಕ್ಕೆ ಬೌಂಡರಿ ಬಾರಿಸಿದ ಅಮಿತಾಭ್​ ಬಚ್ಚನ್​; ಇರ್ಫಾನ್​ ಪಠಾಣ್ ಕಾಮೆಂಟರಿ

Kaun Banega Crorepati: ಹರ್ಭಜನ್​ ಅವರ ಎಸೆತಕ್ಕೆ ಅಮಿತಾಭ್​ ಬಚ್ಚನ್​ ಅವರು ಸಿಕ್ಸ್​, ಫೋರ್​ ಬಾರಿಸಿ ಎಲ್ಲರಿಂದ ಚಪ್ಪಾಳೆ ಗಿಟ್ಟಿಸಿಕೊಂಡರು. ಅವರನ್ನು ಔಟ್​ ಮಾಡಲು ಹರ್ಭಜನ್​ ಸಿಂಗ್​ಗೆ ಸಾಧ್ಯವಾಗಲಿಲ್ಲ.

ಹರ್ಭಜನ್​​ ಸಿಂಗ್​ ಎಸೆತಕ್ಕೆ ಬೌಂಡರಿ ಬಾರಿಸಿದ ಅಮಿತಾಭ್​ ಬಚ್ಚನ್​; ಇರ್ಫಾನ್​ ಪಠಾಣ್ ಕಾಮೆಂಟರಿ
ಇರ್ಫಾನ್​ ಪಠಾಣ್​, ಹರ್ಭಜನ್​ ಸಿಂಗ್​, ಅಮಿತಾಭ್​ ಬಚ್ಚನ್
TV9 Web
| Updated By: ಮದನ್​ ಕುಮಾರ್​|

Updated on:Dec 18, 2021 | 2:15 PM

Share

ಸಿನಿಮಾ ಮತ್ತು ಕ್ರಿಕೆಟ್​ ನಡುವೆ ಒಳ್ಳೆಯ ನಂಟು ಇದೆ. ಈ ಎರಡೂ ಕ್ಷೇತ್ರದ ಸೆಲೆಬ್ರಿಟಿಗಳು ಪರಸ್ಪರ ಬಾಂಧವ್ಯ ಹೊಂದಿದ್ದಾರೆ. ಅಮಿತಾಭ್​ ಬಚ್ಚನ್​ (Amitabh Bachchan) ನಡೆಸಿಕೊಡುತ್ತಿರುವ ‘ಕೌನ್​ ಬನೇಗಾ ಕರೋಡ್​ಪತಿ’ (Kaun Banega Crorepati) ಕಾರ್ಯಕ್ರಮಕ್ಕೆ ಇತ್ತೀಚೆಗೆ ಕ್ರಿಕೆಟ್​ ಆಟಗಾರರಾದ ಹರ್ಭಜನ್​ ಸಿಂಗ್​ (Harbhajan Singh) ಮತ್ತು ಇರ್ಫಾನ್​ ಪಠಾಣ್​​ (Irfan Pathan) ಅವರು ಅತಿಥಿಗಳಾಗಿ ಆಗಮಿಸಿದ್ದರು. ಈ ವೇಳೆ ಅದೇ ವೇದಿಕೆಯಲ್ಲಿ ಈ ಮೂವರೂ ಸೇರಿಕೊಂಡು ಕ್ರಿಕೆಟ್​ ಆಡಿದ್ದಾರೆ. ಹರ್ಭಜನ್​ ಸಿಂಗ್​ ಬೌಲಿಂಗ್​ ಮಾಡಿದರೆ, ಅಮಿತಾಭ್​ ಬಚ್ಚನ್​ ಅತ್ಯುತ್ತಮವಾಗಿ ಬ್ಯಾಟಿಂಗ್​ ಮಾಡಿದ್ದಾರೆ. ಅವರಿಬ್ಬರ ಆಟವನ್ನು ತಮ್ಮ ಕಾಮೆಂಟರಿ ಮೂಲಕ ಇರ್ಫಾನ್​ ಪಠಾಣ್​ ಅವರು ಸೊಗಸಾಗಿ ವಿವರಿಸಿದ್ದಾರೆ.

ಅಮಿತಾಭ್​ ಬಚ್ಚನ್​ ಅವರಿಗೆ ಕ್ರಿಕೆಟ್​ ಬಗ್ಗೆ ಸಖತ್​ ಆಸಕ್ತಿ ಇದೆ. ಅಂತಾರಾಷ್ಟ್ರೀಯ ಪಂದ್ಯಗಳನ್ನು ವೀಕ್ಷಿಸಿದ ಬಳಿಕ ಅವರು ತಮ್ಮ ಅಭಿಪ್ರಾಯಗಳನ್ನು ಸೋಶಿಯಲ್​ ಮೀಡಿಯಾ ಮೂಲಕ ಹಂಚಿಕೊಳ್ಳುತ್ತಾರೆ. ಅನೇಕ ಕ್ರಿಕೆಟ್​ ಪಟುಗಳು ಅವರ ‘ಕೌನ್​ ಬನೇಗಾ ಕರೋಡ್​ಪತಿ’ ಕಾರ್ಯಕ್ರಮಕ್ಕೆ ಬಂದುಹೋಗಿದ್ದಾರೆ. ಈಗ ಇರ್ಫಾನ್​ ಪಠಾಣ್​ ಮತ್ತು ಹರ್ಭಜನ್​ ಸಿಂಗ್​ ಅವರು ಆಗಮಿಸಿದ್ದಾರೆ.

‘ನಾವು ಮಹಾನ್​ ಲೆಜೆಂಡ್​ಗಳ ಜತೆ ಕ್ರಿಕೆಟ್​ ಆಡಿದ್ದೇವೆ. ಆದರೆ ಒಬ್ಬ ಲೆಜೆಂಡ್​ ಬಾಕಿ ಉಳಿದಿದ್ದಾರೆ’ ಎನ್ನುವ ಮೂಲಕ ಅಮಿತಾಭ್​ ಜತೆ ತಾವು ಕ್ರಿಕೆಟ್​ ಆಡಬೇಕು ಎಂದು ಇರ್ಫಾನ್​ ಪಠಾಣ್​ ಆಸೆ ವ್ಯಕ್ತಪಡಿಸಿದರು. ಅವರ ಆಸೆ ಕೇಳಿ ಅಮಿತಾಭ್​ ಒಂದು ಕ್ಷಣ ಅಚ್ಚರಿಪಟ್ಟರು. ಮರುಕ್ಷಣವೇ ಅವರು ಕ್ರಿಕೆಟ್​ ಆಡಲು ಸಜ್ಜಾದರು. ಕೌನ್​ ಬನೇಗಾ ಕರೋಡ್​ಪತಿ ವೇದಿಕೆಯೇ ಕ್ರಿಕೆಟ್​ ಮೈದಾನವಾಗಿ ಬದಲಾಯಿತು. ಹರ್ಭಜನ್​ ಸಿಂಗ್​ ಚೆಂಡು ಹಿಡಿದು ಸಜ್ಜಾದರು. ಇರ್ಫಾನ್​ ಪಠಾಣ್ ಕಾಮೆಂಟರಿ ಆರಂಭಿಸಿದರು.

ಹರ್ಭಜನ್​ ಅವರ ಎಸೆತಕ್ಕೆ ಅಮಿತಾಭ್​ ಬಚ್ಚನ್​ ಅವರು ಸಿಕ್ಸ್​, ಫೋರ್​ ಬಾರಿಸಿ ಎಲ್ಲರಿಂದ ಚಪ್ಪಾಳೆ ಗಿಟ್ಟಿಸಿಕೊಂಡರು. ಅವರನ್ನು ಔಟ್​ ಮಾಡಲು ಹರ್ಭಜನ್​ ಸಿಂಗ್​ಗೆ ಸಾಧ್ಯವಾಗಲಿಲ್ಲ. ‘ಅನೇಕ ಘಟಾನುಘಟಿ ಆಟಗಾರರ ವಿಕೆಟ್​ ಪಡೆದಿದ್ದೇನೆ. ನಿಮ್ಮನ್ನು ಕೂಡ ಔಟ್​ ಮಾಡಿದ್ದರೆ ನನ್ನ ನಿವೃತ್ತಿ ಜೀವನ ಅದ್ಭುತವಾಗಿ ಇರುತ್ತದೆ ಅಂತ ಭಾವಿಸಿದ್ದೆ’ ಎಂದಿದ್ದಾರೆ ಹರ್ಭಜನ್​ ಸಿಂಗ್​.

ಕಳೆದ 21 ವರ್ಷಗಳಿಂದ ಈ ಶೋ ನಡೆದುಕೊಂಡು ಬಂದಿದೆ. ಈಗ 13ನೇ ಸೀಸನ್​ ನಡೆಯುತ್ತಿದೆ. ಈ ಸೀಸನ್​ನಲ್ಲಿ ವೀರೇಂದ್ರ ಸೆಹ್ವಾಗ್​ ಮತ್ತು ಸೌರವ್​ ಗಂಗೂಲಿ ಕೂಡ ಪಾಲ್ಗೊಂಡಿದ್ದರು. ಪ್ರತಿ ಶುಕ್ರವಾರ ಬೇರೆ ಬೇರೆ ಕ್ಷೇತ್ರದ ಗಣ್ಯರು ಹಾಟ್​ ಸೀಟ್​ನಲ್ಲಿ ಕೂತು ಆಟ ಆಡುತ್ತಾರೆ.

ಇದನ್ನೂ ಓದಿ:

‘ಕೌನ್​ ಬನೇಗಾ ಕರೋಡ್​​ಪತಿ’ ಶೋನಲ್ಲಿ ಕನ್ನಡ ಸಿನಿಮಾ ಮಾತು; ಅಮಿತಾಭ್​ ಕಡೆಯಿಂದ ಶುಭ ಹಾರೈಕೆ

‘ಕೌನ್​ ಬನೇಗಾ ಕರೋಡ್​ಪತಿ’ 1000ನೇ ಎಪಿಸೋಡ್​; ಮಗಳ ಎದುರು ಕಣ್ಣೀರು ಹಾಕಿದ ಅಮಿತಾಭ್​ ಬಚ್ಚನ್​

Published On - 11:47 am, Sat, 18 December 21

ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಧ್ರುವಂತ್ ಮೇಲೆ ಬುಕ್ ಬರೆಯುತ್ತಾರಂತೆ ಗಿಲ್ಲಿ: ಸೀರಿಯಸ್ ಪ್ರಶ್ನೆಗೆ ಕಾಮಿಡಿ
ಧ್ರುವಂತ್ ಮೇಲೆ ಬುಕ್ ಬರೆಯುತ್ತಾರಂತೆ ಗಿಲ್ಲಿ: ಸೀರಿಯಸ್ ಪ್ರಶ್ನೆಗೆ ಕಾಮಿಡಿ