ಇಂಡಿಯನ್ ಪ್ರೀಮಿಯರ್ ಲೀಗ್ 2022 ರಲ್ಲಿ ಭಾನುವಾರ ನಡೆದ ಮೊದಲ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧವೂ ಚೆನ್ನೈ ಸೂಪರ್ ಕಿಂಗ್ಸ್ (CSK vs GT) ತಂಡ ಸೋಲು ಕಂಡಿತು. ಹಾರ್ದಿಕ್ (Hardik Pandya) ಪಡೆಯ ಕಠಿಣ ಬೌಲಿಂಗ್ ಮುಂದೆ ಸಿಎಸ್‌ಕೆ ಬ್ಯಾಟರ್ಗಳು ರನ್ ಗಳಿಸಲು ಪರದಾಡಿದರು. ಬ್ಯಾಟಿಂಗ್ನಲ್ಲೂ ಮಿಂಚಿದ ಜಿಟಿ 7 ವಿಕೆಟ್ಗಳ ಅಮೋಘ ಗೆಲುವಿನೊಂದಿಗೆ ಬರೋಬ್ಬರಿ 20 ಪಾಯಿಂಟ್ ಕಲೆಹಾಕಿದೆ. ಗುಜರಾತ್ ಈ ಪಂದ್ಯವನ್ನು ಗೆದ್ದರೂ ಒಂದು ಕ್ಷಣ ಚೆನ್ನೈ ಬೌಲಿಂಗ್ ದಾಳಿಗೆ ಹೆದರಿದ್ದು ಸುಳ್ಳಲ್ಲ. ಮುಖ್ಯವಾಗಿ ಅದು ಜೂನಿಯರ್ ಮಾಲಿಂಗ ಎಂದೇ ಕರೆಯಲ್ಪಡುವ ಶ್ರೀಲಂಕಾದ ಯುವ ವೇಗಿ ಮಥೀಶಾ ಪತಿರಾನಾ (Matheesha Pathirana) ಅವರ ಬೌಲಿಂಗ್ನಲ್ಲಿ. ಹೌದು, ಗುಜರಾತ್ ವಿರುದ್ಧ ಕಣಕ್ಕಿಳಿಯುವ ಮೂಲಕ ಪತಿರಾನಾ ಸಿಎಸ್‌ಕೆ ಪರ ಐಪಿಎಲ್ ಟೂರ್ನಿಗೆ ಪದಾರ್ಪಣೆ ಮಾಡಿದರು. ವಿಶೇಷ ಎಂದರೆ ಇವರು ತಮ್ಮ ಚೊಚ್ಚಲ ಪಂದ್ಯದ, ಮೊದಲ ಓವರ್ನ ಮೊದಲ ಎಸೆತದಲ್ಲೇ ವಿಕೆಟ್ ಕಿತ್ತು ಮಿಂಚಿದರು.
ಲಂಕಾ ದಿಗ್ಗಜ ಲಸಿತ್ ಮಾಲಿಂಗ ಅವರಂತೆಯೇ ಸ್ಲಿಂಗ್ಲಿಂಗ್ ಬೌಲಿಂಗ್ ಶೈಲಿಗೆ ಹೆಸರುವಾಸಿಯಾಗಿರುವ ಪತಿರಾನಾ 8ನೇ ಓವರ್ ಬೌಲಿಂಗ್ ಮಾಡಲು ಬಂದರು. ಇವರ ಈ ವಿಶೇಷ ಬೌಲಿಂಗ್ ಶೈಲಿಯನ್ನು ಅರಿಯದ ಶುಭ್ಮನ್ ಗಿಲ್ ಎಲ್ಬಿ ಬಲೆಗೆ ಸಿಲುಕಿದರು. ಗಿಲ್ ರಿವ್ಯೂ ತೆಗೆದುಕೊಂಡರೂ ಪ್ರಯೋಜನಕ್ಕೆ ಬರಲಿಲ್ಲ. ಈ ಮೂಲಕ ಪತಿರಾನಾ ತಮ್ಮ ಮೊದಲ ಐಪಿಎಲ್ ಪಂದ್ಯದಲ್ಲೇ ವಿಕೆಟ್ ಪಡೆದರು. ಒಟ್ಟು 3.1 ಓವರ್ ಬೌಲಿಂಗ್ ಮಾಡಿದ ಇವರು 24 ರನ್ ನೀಡಿ 2 ವಿಕೆಟ್ ಕಿತ್ತರು.
A dream debut for Matheesha Pathirana ?#MatheeshaPathirana #CSKvsGT #IPL2022 pic.twitter.com/D0bZn42fo5
— Ranjeet – Wear Mask? (@ranjeetsaini7) May 15, 2022
First ball of his over in IPL debut. We really have got a junior Malinga at our ranks. Pathirana ??
— Giri (@giri_leo10) May 15, 2022
2020 ಮತ್ತು 2022ರ ಅಂಡರ್ 19 ವಿಶ್ವಕಪ್ ನಲ್ಲಿ ಶ್ರೀಲಂಕಾ ತಂಡವನ್ನು ಪ್ರತಿನಿಧಿಸಿದ್ದ 19 ವರ್ಷದ ಯುವ ವೇಗಿ ಮಥೀಶಾ ಪತಿರಾನಾ ಅವರನ್ನು ಆ್ಯಡಂ ಮಿಲ್ನೆ ಜಾಗಕ್ಕೆ ಆಯ್ಕೆ ಮಾಡಲಾಗಿತ್ತು. 2022 ರ 19 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ, ಅವರು ನಾಲ್ಕು ಪಂದ್ಯಗಳಲ್ಲಿ 27.28 ಸರಾಸರಿಯಲ್ಲಿ ಏಳು ವಿಕೆಟ್‌ಗಳನ್ನು ಪಡೆದು ಮಿಂಚಿದ್ದರು. ಅಲ್ಲದೆ ಅವರ ಎಕನಾಮಿ ರೇಟ್ ಕೇವಲ 6.16 ಆಗಿತ್ತು. ಮಥೀಶಾ ಕೇವಲ ಒಂದು ಲಿಸ್ಟ್ ಎ ಮತ್ತು 2 ಟಿ 20 ಪಂದ್ಯಗಳನ್ನಾಡಿದ್ದಾರೆ. ಬಲಗೈ ಮಧ್ಯಮ ವೇಗಿ ಪತಿರಾನಾ ಅವರ ಬೌಲಿಂಗ್ ಶೈಲಿಯು ಲಸಿತ್ ಮಾಲಿಂಗ ಅವರನ್ನು ಹೋಲುತ್ತದೆ. ಹೀಗಾಗಿ ಮಥೀಶಾ ಜೂನಿಯರ್ ಮಾಲಿಂಗ ಎಂದೇ ಖ್ಯಾತಿ ಪಡೆದಿದ್ದಾರೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಆರಂಭಿಸಿದ ಸಿಎಸ್‌ಕೆ ಆರಂಭದಲ್ಲೇ ಡ್ವೇನ್ ಕಾನ್ವೆ(5) ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ಬಳಿಕ ಜೊತೆಯಾದ ಮೊಯಿನ್ ಅಲಿ(21) ಹಾಗೂ ರುತುರಾಜ್ ಗಾಯಕ್ವಾಡ್(53) 2ನೇ ವಿಕೆಟ್‌ಗೆ 57 ರನ್‌ಗಳ ಉತ್ತಮ ಜೊತೆಯಾಟದಿಂದ ಚೇತರಿಕೆ ನೀಡಿದರು. ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ ರುತುರಾಜ್, ಅರ್ಧಶತಕ ಸಿಡಿಸಿ ತಂಡಕ್ಕೆ ನೆರವಾದರು. ನಂತರ ಬಂದ ಎನ್. ಜಗದೀಸನ್(39*) ಸಹ ಉತ್ತಮ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ತಂಡದ ಮೊತ್ತ ಹೆಚ್ಚಿಸಿದರು. ಆದರೆ ಇವರಿಬ್ಬರ ವಿಕೆಟ್ ಪತನದ ಬಳಿಕ ಶಿವಂ ದುಬೆ(0) ಹಾಗೂ ನಾಯಕ ಎಂ.ಎಸ್.ಧೋನಿ(7) ನಿರೀಕ್ಷಿತ ರನ್ ಕಲೆಹಾಕುವಲ್ಲಿ ವಿಫಲವಾದರು. ಪರಿಣಾಮ ಸಿಎಸ್‌ಕೆ 20 ಓವರ್‌ಗಳಲ್ಲಿ 135 ರನ್‌ಗಳಿಸಲಷ್ಟೇ ಶಕ್ತವಾಯಿತು.
ಗುರಿಯನ್ನು ಬೆನ್ನು ಹತ್ತಿದ ಗುಜರಾತ್ ತಂಡ ವೃದ್ಧಿಮಾನ್ ಸಹಾ ಅಜೇಯ ಅರ್ಧಶತಕದ (67*) ನೆರವಿನಿಂದ 19.1 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಸಹಾ ಹಾಗೂ ಶುಭಮನ್ ಗಿಲ್ (18) ಮೊದಲ ವಿಕೆಟ್‌ಗೆ 59 ರನ್ ಒಟ್ಟು ಸೇರಿಸಿದರು. ಮ್ಯಾಥ್ಯೂ ವೇಡ್ 20 ರನ್‌ಗಳ ಕಾಣಿಕೆ ನೀಡಿದರು. ಅತ್ತ ಆಕರ್ಷಕ ಇನ್ನಿಂಗ್ಸ್ ಕಟ್ಟಿದ ಸಹಾ ಅರ್ಧಶತಕ ಸಾಧನೆ ಮಾಡಿದರು. 57 ಎಸೆತಗಳನ್ನು ಎದುರಿಸಿದ ಸಹಾ 67 ರನ್ (8 ಬೌಂಡರಿ, 1 ಸಿಕ್ಸರ್) ಗಳಿಸಿ ಅಜೇಯರಾಗಿ ಉಳಿದರು.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:32 am, Mon, 16 May 22