
ಪಂಜಾಬ್‌ನ ಮುಲ್ಲನ್‌ಪುರದ ಮಹಾರಾಜ ಯದ್ವಿಂದರ್ ಸಿಂಗ್ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಐಪಿಎಲ್ 2024 ರ 33 ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್, ಪಂಜಾಬ್ ಕಿಂಗ್ಸ್ ತಂಡವನ್ನು 9 ರನ್‌ಗಳಿಂದ ಸೋಲಿಸುವಲ್ಲಿ ಯಶಸ್ವಿಯಾಗಿದೆ. ಗೆಲುವಿಗಾಗಿ ಕೊನೆಯವರೆಗೂ ಹೋರಾಡಿದ ಪಂಜಾಬ್ ವೀರೋಚಿತ ಸೋಲು ಕಂಡಿದೆ. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 192 ರನ್ ಗಳಿಸಿತು, ಉತ್ತರವಾಗಿ ಪಂಜಾಬ್ ಕಿಂಗ್ಸ್ 19.1 ಓವರ್‌ಗಳಲ್ಲಿ 183 ರನ್ ಕಲೆಹಾಕಲಷ್ಟೇ ಶಕ್ತವಾಗಿ ಆಲೌಟ್ ಆಯಿತು. 4 ಓವರ್‌ಗಳಲ್ಲಿ ಕೇವಲ 21 ರನ್ ನೀಡಿ 3 ವಿಕೆಟ್ ಕಬಳಿಸಿದ ಜಸ್ಪ್ರೀತ್ ಬುಮ್ರಾ ಮುಂಬೈ ಗೆಲುವಿನ ಹೀರೋ ಎನಿಸಿಕೊಂಡರು. ಅವರೊಂದಿಗೆ ಜೆರಾಲ್ಡ್ ಕೊಟ್ಜಿಯಾ ಕೂಡ 32 ರನ್ ನೀಡಿ 3 ವಿಕೆಟ್ ಪಡೆದರು. ಈ ಸೀಸನ್ನಲ್ಲಿ ಮುಂಬೈ ಇಂಡಿಯನ್ಸ್ ಆಡಿರುವ 7 ಪಂದ್ಯಗಳಲ್ಲಿ ಇದು ಮೂರನೇ ಗೆಲುವಾಗಿದ್ದರೆ, ಪಂಜಾಬ್ ಕಿಂಗ್ಸ್ 7 ಪಂದ್ಯಗಳಲ್ಲಿ 5 ರಲ್ಲಿ ಸೋತಿದೆ.
ಮುಂಬೈ ನೀಡಿದ 192 ರನ್ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ತಂಡ ಕೊನೆಯವರೆಗೂ ಗೆಲುವಿಗಾಗಿ ಹೋರಾಡಿ 9 ರನ್‌ಗಳಿಂದ ಸೋಲೊಪ್ಪಿಕೊಂಡಿತು. ತಂಡ 19.1 ಓವರ್‌ಗಳಲ್ಲಿ ಆಲೌಟ್ ಆಗುವ ಮೂಲಕ ಮುಂಬೈಗೆ ಶರಣಾಯಿತು. ತಂಡದ ಪರ ಏಕಾಂಗಿ ಹೋರಾಟ ನೀಡಿದ ಅಶುತೋಷ್ 28 ಎಸೆತಗಳಲ್ಲಿ 61 ರನ್ ಬಾರಿಸಿದರು.
ಅಶುತೋಷ್ ಶರ್ಮಾರ ಏಕಾಂಗಿ ಹೋರಾಟ ಅಂತ್ಯಗೊಂಡಿದೆ. ಜೆರಾಲ್ಡ್ ಕೊಯೆಟ್ಜಿ ತಮ್ಮ ಕೊನೆಯ ಓವರ್‌ನ ಮೊದಲ ಎಸೆತದಲ್ಲಿ ಶರ್ಮಾ ಅವರನ್ನು ಔಟ್ ಮಾಡಿದರು. 200 ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್‌ನಲ್ಲಿ 61 ರನ್ ಗಳಿಸಿದ ಶರ್ಮಾ ಅವರ ಬ್ಯಾಟ್‌ನಿಂದ ಎರಡು ಬೌಂಡರಿ ಹಾಗೂ ಏಳು ಸಿಕ್ಸರ್‌ಗಳು ಬಂದವು. ತಂಡದ ಗೆಲುವಿಗೆ 13 ಎಸೆತಗಳಲ್ಲಿ 23 ರನ್‌ಗಳ ಅಗತ್ಯವಿದೆ.
ಪಂಜಾಬ್ ಪರ ಏಕಾಂಗಿ ಹೋರಾಟ ನಡೆಸುತ್ತಿರುವ ಅಶುತೋಷ್ ಕೇವಲ 22 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದಾರೆ.
ಜಿತೇಶ್ ಶರ್ಮಾ ರೂಪದಲ್ಲಿ ಪಂಜಾಬ್ ಆರನೇ ವಿಕೆಟ್ ಕಳೆದುಕೊಂಡಿದೆ. ಅಶುತೋಷ್ ಶರ್ಮಾ ಎಂಟನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದಾರೆ. 10 ಓವರ್‌ಗಳ ನಂತರ ತಂಡದ ಸ್ಕೋರ್ 87/6.
ಪವರ್‌ಪ್ಲೇ ಮುಗಿದಿದೆ. ಆರು ಓವರ್‌ಗಳ ನಂತರ ತಂಡದ ಸ್ಕೋರ್ 40/4. ಹರ್ ಪ್ರೀತ್ ಸಿಂಗ್ 12 ರನ್ ಹಾಗೂ ಶಶಾಂಕ್ ಸಿಂಗ್ 12 ರನ್ ಗಳಿಸಿ ಅಜೇಯರಾಗಿ ಆಡುತ್ತಿದ್ದಾರೆ. ತಂಡದ ಗೆಲುವಿಗೆ 83 ಎಸೆತಗಳಲ್ಲಿ 147 ರನ್‌ಗಳ ಅಗತ್ಯವಿದೆ.
ಪಂಜಾಬ್‌ನ ಅಗ್ರ ಕ್ರಮಾಂಕ ತರಗೆಲೆಯಂತೆ ಉದುರಿ ಹೋಗಿದೆ. ಈಗಾಗಲೇ ತಂಡದ ನಾಲ್ಕನೇ ವಿಕೆಟ್ ಪತನವಾಗಿದ್ದು, ಜೆರಾಲ್ಡ್ ಕೊಯೆಟ್ಜಿ, ಲಿಯಾಮ್ ಲಿವಿಂಗ್ಸ್ಟೋನ್ ಅವರನ್ನು ಔಟ್ ಮಾಡಿದರು.
ಇನಿಂಗ್ಸ್‌ನ ಎರಡನೇ ಓವರ್ ಬೌಲ್ ಮಾಡಲು ಬಂದ ಜಸ್ಪ್ರೀತ್ ಬುಮ್ರಾ ಈ ಓವರ್‌ನಲ್ಲಿ 2 ವಿಕೆಟ್ ಉರುಳಿಸಿದರು. ಮೊದಲು ರಿಲೆ ರೂಸೋ ಅವರನ್ನು ಬೌಲ್ಡ್ ಮಾಡಿದ ಬುಮ್ರಾ, ಓವರ್‌ನ ಕೊನೆಯ ಎಸೆತದಲ್ಲಿ ನಾಯಕ ಸ್ಯಾಮ್ ಕರನ್ರನ್ನು ಪೆವಿಲಿಯನ್ಗಟ್ಟಿದರು.
ಮೊದಲ ಓವರ್‌ನಲ್ಲಿ ಪಂಜಾಬ್ ಮೊದಲ ವಿಕೆಟ್ ಕಳೆದುಕೊಂಡಿದೆ. ಗೆರಾಲ್ಡ್ ಕೊಯೆಟ್ಜಿ ಎಸೆದ ಮೊದಲ ಓವರ್‌ನಲ್ಲಿ ಪ್ರಭಾಸಿಮ್ರಾನ್ ಸಿಂಗ್ ಖಾತೆ ತೆರೆಯದೆ ಪೆವಿಲಿಯನ್‌ಗೆ ಮರಳಿದರು. ರಿಲೆ ರೂಸೋ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದಾರೆ. ಒಂದು ಓವರ್ ನಂತರ ತಂಡದ ಸ್ಕೋರ್ 12/1.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡ ಪಂಜಾಬ್‌ಗೆ 193 ರನ್‌ಗಳ ಗುರಿ ನೀಡಿದೆ. ತಂಡದ ಪರ ಸೂರ್ಯ ಅರ್ಧಶತಕ ಸಿಡಿಸದರೆ, ರೋಹಿತ್ ಶರ್ಮಾ, ತಿಲಕ್ ವರ್ಮಾ 36 ಹಾಗೂ 34 ರನ್‌ಗಳ ಕಾಣಿಕೆ ನೀಡಿದರು.
ಹರ್ಷಲ್ ಪಟೇಲ್ ಮುಂಬೈಗೆ ನಾಲ್ಕನೇ ಹೊಡೆತ ನೀಡಿದ್ದಾರೆ. ಅವರು 18ನೇ ಓವರ್‌ನ ಕೊನೆಯ ಎಸೆತದಲ್ಲಿ ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ಔಟ್ ಮಾಡಿದರು. ಟಿಮ್ ಡೇವಿಡ್ ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದಾರೆ. 18 ಓವರ್‌ಗಳ ನಂತರ ತಂಡದ ಸ್ಕೋರ್ 167/4.
ಸೂರ್ಯಕುಮಾರ್ ಯಾದವ್ ರೂಪದಲ್ಲಿ ಮುಂಬೈಗೆ ಮೂರನೇ ವಿಕೆಟ್ ಕಳೆದುಕೊಂಡಿದೆ. ಸ್ಯಾಮ್ ಕರ್ರನ್ ಎಸೆತದಲ್ಲಿ 78 ರನ್ ಗಳಿಸಿದ್ದ ಸೂರ್ಯ ಔಟಾದರು. ಹಾರ್ದಿಕ್ ಪಾಂಡ್ಯ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದಾರೆ.
250ನೇ ಐಪಿಎಲ್ ಪಂದ್ಯ ಆಡುತ್ತಿದ್ದ ರೋಹಿತ್ 25 ಎಸೆತಗಳಲ್ಲಿ 2 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 36 ರನ್ ಕಲೆಹಾಕಿ ವಿಕೆಟ್ ಒಪ್ಪಿಸಿದರು.
ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದ ಸೂರ್ಯ ಕೇವಲ 34 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದ್ದಾರೆ.
ಪವರ್‌ಪ್ಲೇ ಮುಕ್ತಾಯಕ್ಕೆ ಮುಂಬೈ ಇಂಡಿಯನ್ಸ್ ತಂಡ 1 ವಿಕೆಟ್ ನಷ್ಟಕ್ಕೆ 54 ರನ್ ಗಳಿಸಿದೆ. ರೋಹಿತ್ ಶರ್ಮಾ 24 ರನ್ ಹಾಗೂ ಸೂರ್ಯಕುಮಾರ್ ಯಾದವ್ 22 ರನ್ ಗಳಿಸಿ ಆಡುತ್ತಿದ್ದಾರೆ. ಸದ್ಯ 9ರ ರನ್ ರೇಟ್‌ನೊಂದಿಗೆ ತಂಡ ಆಡುತ್ತಿದೆ.
ನಾಲ್ಕು ಓವರ್‌ಗಳ ಆಟ ಮುಗಿದಿದೆ. ಸೂರ್ಯ ಮತ್ತು ರೋಹಿತ್ ನಡುವೆ ಉತ್ತಮ ಜೊತೆಯಾಟ ಕಂಡು ಬರುತ್ತಿದೆ. ತಂಡದ ಸ್ಕೋರ್ 36/1.
ಮುಂಬೈ ಆರಂಭಿಕ ಇಶಾನ್ ಕಿಶನ್ ಮೂರನೇ ಓವರ್ ಮೊದಲ ಎಸೆತದಲ್ಲಿ ಕ್ಯಾಚಿತ್ತು ಔಟಾದರು. ಕಿಶನ್ 8 ರನ್ ಕಲೆಹಾಕಲಷ್ಟೇ ಶಕ್ತರಾದರು.
ರೋಹಿತ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ಮೊಹಮ್ಮದ್ ನಬಿ, ಜೆರಾಲ್ಡ್ ಕೋಟ್ಜಿ, ಶ್ರೇಯಸ್ ಗೋಪಾಲ್, ಜಸ್ಪ್ರೀತ್ ಬುಮ್ರಾ.
ರಿಲೆ ರೂಸೋ, ಪ್ರಭಾಸಿಮ್ರಾನ್ ಸಿಂಗ್, ಸ್ಯಾಮ್ ಕರನ್ (ನಾಯಕ), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಲಿಯಾಮ್ ಲಿವಿಂಗ್ಸ್ಟೋನ್, ಶಶಾಂಕ್ ಸಿಂಗ್, ಅಶುತೋಷ್ ಶರ್ಮಾ, ಹರ್ಪ್ರೀತ್ ಬ್ರಾರ್, ಹರ್ಷಲ್ ಪಟೇಲ್, ಕಗಿಸೊ ರಬಾಡ, ಅರ್ಶ್ದೀಪ್ ಸಿಂಗ್.
ಟಾಸ್ ಗೆದ್ದ ಪಂಜಾಬ್ ನಾಯಕ ಸ್ಯಾಮ್ ಕರನ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.
Published On - 6:47 pm, Thu, 18 April 24