MI vs RCB: ಮೈದಾನದಲ್ಲಿ ಕೀಟಲೆ ಮಾಡಿದ ಕೊಹ್ಲಿಗೆ ರೋಹಿತ್ ಏನು ಮಾಡಿದರು ನೋಡಿ!

|

Updated on: Apr 12, 2024 | 12:17 PM

ರೋಹಿತ್ ಶರ್ಮಾ ನಾನ್ ಸ್ಟ್ರೈಕರ್ ಎಂಡ್ ಕಡೆ ಬರುತ್ತಿದ್ದಾಗ ಅಲ್ಲೇ ಹಿಂದಿನಿಂದ ಬಂದ ಕೊಹ್ಲಿ ಮೆಲ್ಲನೆ ಹಿಂಭಾಗದಿಂದ ಹಿಟ್​ಮ್ಯಾನ್ ಬೆನ್ನು ತಟ್ಟಿ ಮುಂದಕ್ಕೆ ಹೋಗಿದ್ದಾರೆ. ತಿರುಗಿ ನೋಡಿದ ರೋಹಿತ್ ವಿರಾಟ್​​ಗೆ ಹೆಬ್ಬೆರಳು ತೋರಿ ಮುಗುಳ್ನಕ್ಕಿದ್ದಾರೆ. ಕೊಹ್ಲಿಯೂ ನಗಾಡುತ್ತಾ ಮುಂದೆ ಸಾಗಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ.

MI vs RCB: ಮೈದಾನದಲ್ಲಿ ಕೀಟಲೆ ಮಾಡಿದ ಕೊಹ್ಲಿಗೆ ರೋಹಿತ್ ಏನು ಮಾಡಿದರು ನೋಡಿ!
ಮೈದಾನದಲ್ಲಿ ಕೀಟಲೆ ಮಾಡಿದ ಕೊಹ್ಲಿಗೆ ರೋಹಿತ್ ಏನು ಮಾಡಿದರು ನೋಡಿ!
Follow us on

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್​ (MI vs RCB) ತಂಡದ ಮಧ್ಯೆ ಗುರುವಾರ ರಾತ್ರಿ ಮುಂಬೈಯ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ (IPL 2024) ಪಂದ್ಯ ಹಲವು ಸ್ವಾರಸ್ಯಕರ ಸನ್ನಿವೇಶಗಳಿಗೂ ಸಾಕ್ಷಿಯಾಯಿತು. ಎಂಐ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ ಹೀನಾಯವಾಗಿ ಸೋಲನುಭವಿಸಿದೆ. ಆದಾಗ್ಯೂ, ದಿನೇಶ್ ಕಾರ್ತಿಕ್ ಅವರ ಅಬ್ಬರದ ಬ್ಯಾಟಿಂಗ್, ಇಶಾನ್ ಕಿಶನ್ ಹಾಗೂ ಸೂರ್ಯ ಕುಮಾರ್ ಯಾದವ್ ಚುರುಕಿನ ಅರ್ಧಶತಕ ಅಭಿಮಾನಿಗಳ ಮನ ರಂಜಿಸಿದೆ. ಈ ಮಧ್ಯೆ, ಮಾಜಿ ಕ್ಯಾಪ್ಟನ್ ರೋಹಿತ್ ಶರ್ಮಾ (Rohit Sharma) ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಅವರಿಗೆ ಕಿಂಗ್ ಕೊಹ್ಲಿ (Virat Kohli) ಕೀಟಲೆ ಮಾಡಿರುವ ವಿಡಿಯೋ ಇದೀಗ ವೈರಲ್ ಆಗಿದೆ.

ರೋಹಿತ್ ಶರ್ಮಾ ನಾನ್ ಸ್ಟ್ರೈಕರ್ ಎಂಡ್ ಕಡೆ ಬರುತ್ತಿದ್ದಾಗ ಅಲ್ಲೇ ಹಿಂದಿನಿಂದ ಬಂದ ಕೊಹ್ಲಿ ಮೆಲ್ಲನೆ ಹಿಂಭಾಗದಿಂದ ಹಿಟ್​ಮ್ಯಾನ್ ಬೆನ್ನು ತಟ್ಟಿ ಮುಂದಕ್ಕೆ ಹೋಗಿದ್ದಾರೆ. ತಿರುಗಿ ನೋಡಿದ ರೋಹಿತ್ ವಿರಾಟ್​​ಗೆ ಹೆಬ್ಬೆರಳು ತೋರಿ ಮುಗುಳ್ನಕ್ಕಿದ್ದಾರೆ. ಕೊಹ್ಲಿಯೂ ನಗಾಡುತ್ತಾ ಮುಂದೆ ಸಾಗಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ.

ಕೊಹ್ಲಿ ಕೀಟಲೆಯ ವಿಡಿಯೋ

ರೋಹಿತ್ ನಾಯಕತ್ವಕ್ಕೆ ಶಹಬ್ಬಾಸ್ ಎಂದ ಕೊಹ್ಲಿ

ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ, ರೋಹಿತ್ ಶರ್ಮಾ ಮತ್ತು ತಮ್ಮ ನಡುವಣ ವರ್ಷಗಳ ಬಾಂಧವ್ಯದ ಬಗ್ಗೆಯೂ ಕೊಹ್ಲಿ ಮನಬಿಚ್ಚಿ ಮಾತನಾಡಿದ್ದಾರೆ. ನಾವು (ನಾನು ಮತ್ತು ರೋಹಿತ್ ಶರ್ಮಾ) ಕಳೆದ 15-16 ವರ್ಷಗಳಿಂದ ಒಟ್ಟಿಗೆ ಕ್ರಿಕೆಟ್ ಆಡುತ್ತಿದ್ದೇವೆ. ನಮ್ಮದು ಜತೆಯಾಗಿ ಅದ್ಭುತ ಪಯಣವಾಗಿದೆ. 2-3 ಹಿರಿಯ ಆಟಗಾರರ ಜತೆ ನಾವಿರಬಹುದು ಎಂದು ನಾವು ಎಂದಿಗೂ ಊಹಿಸಿರಲಿಲ್ಲ. ಜತೆಯಾಗಿ ನಮ್ಮದು ಇದೊಂದು ಅದ್ಭುತ ಪಯಣ ಎಂದು ಕೊಹ್ಲಿ ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಕೊಹ್ಲಿ ಕೂಡ ರೋಹಿತ್ ಶರ್ಮಾರ ನಾಯಕತ್ವದ ಕೌಶಲವನ್ನು ಶ್ಲಾಘಿಸಿದ್ದಾರೆ. ಒಬ್ಬ ಆಟಗಾರನಾಗಿ ರೋಹಿತ್ ಶರ್ಮಾ ಅವರ ಬೆಳವಣಿಗೆ ಮತ್ತು ಅವರ ವೃತ್ತಿಜೀವನದ ಸಾಧನೆಗಳನ್ನು ನಾನು ಹತ್ತಿರದಿಂದ ನೋಡಿದ್ದೇನೆ. ಈಗ ಅವರು ಭಾರತ ತಂಡವನ್ನು ಮುನ್ನಡೆಸುತ್ತಿರುವುದು ಅದ್ಭುತವಾಗಿದೆ ಎಂದು ಕೊಹ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ.

ಇದಕ್ಕೂ ಮುನ್ನ ಮೈದಾನದಲ್ಲಿ ಅವರು, ಮುಂಬೈ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಅವರನ್ನು ತೆಗಳಿದವರಿಂದಲೇ ಚಿಯರ್ ಅಪ್ ಮಾಡಿಸಿ ಗಮನ ಸೆಳೆದಿದ್ದರು.

ಇದನ್ನೂ ಓದಿ: ವಾಂಖೇಡೆಯಲ್ಲಿ ಪಾಂಡ್ಯನ ತೆಗಳಿದವರ ಬಾಯಲ್ಲೇ ಚಿಯರ್​ಅಪ್ ಮಾಡಿಸಿದ ಕೊಹ್ಲಿ

ಮುಂಬೈ ತಂಡವು ಬೆಂಕಿ ಬ್ಯಾಟಿಂಗ್ ಪ್ರದರ್ಶನದಿಂದಾಗಿ ಆರ್‌ಸಿಬಿ ವಿರುದ್ಧ ಏಕಪಕ್ಷೀಯವಾಗಿ ಏಳು ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಗೆಲುವಿಗಾಗಿ 198 ರನ್ ಬೆನ್ನಟ್ಟಿದ ಮಂಬೈ ಪರ ಇಶಾನ್ ಕಿಶನ್ 34 ಎಸೆತಗಳಲ್ಲಿ 69 ರನ್ ಗಳಿಸಿದರು ಮತ್ತು ನಂತರ ಸೂರ್ಯಕುಮಾರ್ ಯಾದವ್ ಕೇವಲ 19 ಎಸೆತಗಳಲ್ಲಿ 52 ರನ್ ಗಳಿಸಿದರು. ಆ ಮೂಲಕ ಮುಂಬೈ 15.3 ಓವರ್‌ಗಳಲ್ಲಿ ಗೆಲುವಿದನ ದಡ ಸೇರಿತು. ಆರ್​​ಸಿಬಿ ಪರ ದಿನೇಶ್ ಕಾರ್ತಿಕ್ 26 ಎಸೆತಗಳಲ್ಲಿ ಔಟಾಗದೆ 53 ರನ್ ಗಳಿಸುವುದರೊಂದಿಗೆ ಬೆಂಗಳೂರು 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 196 ಗಳಿಸಿತ್ತು.

ಐಪಿಎಲ್ ಸಂಬಂಧಿತ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:46 am, Fri, 12 April 24