MI vs SRH Highlights, IPL 2024: ಸೂರ್ಯ ಶತಕ; ಮುಂಬೈಗೆ 4ನೇ ಗಲುವು

|

Updated on:May 06, 2024 | 11:20 PM

Mumbai Indians Vs Sunrisers Hyderabad Highlights in Kannada: ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಸನ್​ರೈಸರ್ಸ್​ ವಿರುದ್ಧದ ಪಂದ್ಯವನ್ನು 7 ವಿಕೆಟ್​ಗಳಿಂದ ಗೆದ್ದುಕೊಳ್ಳುವಲ್ಲಿ ಮುಂಬೈ ತಂಡ ಯಶಸ್ವಿಯಾಗಿದೆ. ಈ ಗೆಲುವಿನೊಂದಿಗೆ ಮುಂಬೈ ಪಾಯಿಂಟ್​ ಪಟ್ಟಿಯಲ್ಲಿ ಒಂದು ಸ್ಥಾನ ಮೇಲೇರಿ 9ನೇ ಸ್ಥಾನಕ್ಕೆ ಬಂದು ಕುಳಿತಿದೆ.

MI vs SRH Highlights, IPL 2024: ಸೂರ್ಯ ಶತಕ; ಮುಂಬೈಗೆ 4ನೇ ಗಲುವು

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಸನ್​ರೈಸರ್ಸ್​ ವಿರುದ್ಧದ ಪಂದ್ಯವನ್ನು 7 ವಿಕೆಟ್​ಗಳಿಂದ ಗೆದ್ದುಕೊಳ್ಳುವಲ್ಲಿ ಮುಂಬೈ ತಂಡ ಯಶಸ್ವಿಯಾಗಿದೆ. ಈ ಗೆಲುವಿನೊಂದಿಗೆ ಮುಂಬೈ ಪಾಯಿಂಟ್​ ಪಟ್ಟಿಯಲ್ಲಿ ಒಂದು ಸ್ಥಾನ ಮೇಲೇರಿ 9ನೇ ಸ್ಥಾನಕ್ಕೆ ಬಂದು ಕುಳಿತಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ ತಂಡ ಮುಂಬೈನ ಕರಾರುವಕ್ಕಾದ ದಾಳಿಗೆ ನಲುಗಿ 173 ರನ್​ಗಳಿಗೆ ತನ್ನ ಇನ್ನಿಂಗ್ಸ್ ಮುಗಿಸಿತು. ಈ ಗುರಿ ಬೆನ್ನಟ್ಟಿದ ಮುಂಬೈ ಆರಂಭದಲ್ಲೇ ಪ್ರಮುಖ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಇಲ್ಲಿಂದ ಜೊತೆಯಾದ ತಿಲಕ್ ವರ್ಮಾ ಹಾಗೂ ಸೂರ್ಯಕುಮಾರ್ ಯಾದವ್ 143 ರನ್​ಗಳ ಜೊತೆಯಾಟ ಆಡಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಈ ಹಂತದಲ್ಲಿ ಸೂರ್ಯಕುಮಾರ್ ಶತಕ ಸಿಡಿಸಿ ಮಿಂಚಿದರೆ, ತಿಲಕ್ 37 ರನ್​​ಗಳ ಕೊಡುಗೆ ನೀಡಿದರು.

LIVE NEWS & UPDATES

The liveblog has ended.
  • 06 May 2024 11:15 PM (IST)

    ಮುಂಬೈಗೆ 7 ವಿಕೆಟ್ ಜಯ

    ಹೈದರಾಬಾದ್ ನೀಡಿದ 173 ರನ್​​ಗಳ ಗುರಿಯನ್ನು ಮುಂಬೈ 17.2 ಓವರ್​ಗಳಲ್ಲಿ ಬೆನ್ನಟ್ಟಿತು. ತಂಡದ ಪರ ಸೂರ್ಯ ಶತಕ ಸಿಡಿಸಿ ಗೆಲುವಿನ ರೂವಾರಿ ಎನಿಸಿಕೊಂಡರು.

  • 06 May 2024 11:11 PM (IST)

    ಸೂರ್ಯ ಅಬ್ಬರದ ಬ್ಯಾಟಿಂಗ್

    ಸೂರ್ಯಕುಮಾರ್ ಯಾದವ್ ಸ್ಫೋಟಕ ಬ್ಯಾಟಿಂಗ್ ಮೂಲಕ ಇಲ್ಲಿಯವರೆಗೆ 76 ರನ್ ಗಳಿಸಿದ್ದಾರೆ. 15 ಓವರ್‌ಗಳಲ್ಲಿ ಮುಂಬೈ ತಂಡ 139 ರನ್ ಗಳಿಸಿದೆ.

  • 06 May 2024 10:49 PM (IST)

    ಸೂರ್ಯ ಅರ್ಧಶತಕ

    ಸೂರ್ಯಕುಮಾರ್ ಯಾದವ್ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಉತ್ತಮ ಬ್ಯಾಟಿಂಗ್ ಮಾಡುತ್ತಿದ್ದು, ಅರ್ಧಶತಕ ಪೂರೈಸಿರುವ ಅವರು 52 ರನ್ ಗಳಿಸಿ ಆಡುತ್ತಿದ್ದಾರೆ.

  • 06 May 2024 10:33 PM (IST)

    ಸೂರ್ಯ-ತಿಲಕ್ ಜೊತೆಯಾಟ

    31 ರನ್ ಗಳಿಸುವಷ್ಟರಲ್ಲಿ ಮೂರು ವಿಕೆಟ್ ಕಳೆದುಕೊಂಡಿದ್ದ ಮುಂಬೈಗೆ ಸೂರ್ಯಕುಮಾರ್ ಯಾದವ್ ಮತ್ತು ತಿಲಕ್ ವರ್ಮಾ ಆಸರೆಯಾಗಿದ್ದಾರೆ. ಇವರಿಬ್ಬರ ನಡುವೆ 23 ಎಸೆತಗಳಲ್ಲಿ 48 ರನ್‌ಗಳ ಜೊತೆಯಾಟವಿದೆ. ಸೂರ್ಯ 32 ರನ್ ಹಾಗೂ ತಿಲಕ್ 15 ರನ್ ಗಳಿಸಿ ಅಜೇಯರಾಗಿ ಆಡುತ್ತಿದ್ದಾರೆ. ಎಂಟು ಓವರ್‌ಗಳ ನಂತರ ತಂಡದ ಸ್ಕೋರ್ 79/3. ತಂಡದ ಗೆಲುವಿಗೆ 72 ಎಸೆತಗಳಲ್ಲಿ 95 ರನ್‌ಗಳ ಅಗತ್ಯವಿದೆ.

  • 06 May 2024 10:28 PM (IST)

    ಪವರ್ ಪ್ಲೇ ಅಂತ್ಯ

    6 ಓವರ್‌ಗಳಲ್ಲಿ ಮುಂಬೈ ಇಂಡಿಯನ್ಸ್ 3 ವಿಕೆಟ್ ನಷ್ಟಕ್ಕೆ 52 ರನ್ ಗಳಿಸಿದೆ. ತಿಲಕ್ ವರ್ಮಾ 9 ರನ್ ಮತ್ತು ಸೂರ್ಯಕುಮಾರ್ ಯಾದವ್ 11 ರನ್ ಗಳಿಸಿದ್ದಾರೆ.

  • 06 May 2024 10:07 PM (IST)

    ಭುವನೇಶ್ವರ್​ಗೆ ವಿಕೆಟ್

    ಭುವನೇಶ್ವರ್ ಕುಮಾರ್ ನಮನ್ ಧೀರ್ ಅವರ ವಿಕೆಟ್ ಉರುಳಿಸಿದ್ದಾರೆ. ನಮನ್ ಧೀರ್ ಅವರ ಖಾತೆ ತೆರೆಯಲೂ ಸಾಧ್ಯವಾಗಲಿಲ್ಲ.

  • 06 May 2024 10:03 PM (IST)

    ರೋಹಿತ್ ಶರ್ಮಾ ಪೆವಿಲಿಯನ್‌ಗೆ

    ಹೈದರಾಬಾದ್ ನಾಯಕ ಪ್ಯಾಟ್ ಕಮಿನ್ಸ್ ಎಸೆತದಲ್ಲಿ ರೋಹಿತ್ ಶರ್ಮಾ ಹೆನ್ರಿಚ್ ಕ್ಲಾಸೆನ್​ಗೆ ಕ್ಯಾಚಿತ್ತು ನಿರ್ಗಮಿಸಿದರು.

  • 06 May 2024 10:02 PM (IST)

    ಕಿಶನ್ ಔಟ್

    ಇಶಾನ್ ಕಿಶನ್ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಕೇವಲ 9 ರನ್ ಗಳಿಸಲಷ್ಟೇ ಶಕ್ತರಾದರು. ಮುಂಬೈ ಇಂಡಿಯನ್ಸ್ 3 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 31 ರನ್ ಗಳಿಸಿದೆ. ರೋಹಿತ್ ಶರ್ಮಾ 4 ರನ್ ಮತ್ತು ನಮನ್ ಧೀರ್ ಕ್ರೀಸ್‌ನಲ್ಲಿದ್ದಾರೆ.

  • 06 May 2024 09:30 PM (IST)

    173 ರನ್ ಟಾರ್ಗೆಟ್

    ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 173 ರನ್ ಗಳಿಸಿತು. ಮುಂಬೈ ಪರ ಹಾರ್ದಿಕ್ ಪಾಂಡ್ಯ ಮತ್ತು ಪಿಯೂಷ್ ಚಾವ್ಲಾ ತಲಾ ಮೂರು ವಿಕೆಟ್ ಪಡೆದರು. ಆದರೆ, ಅನ್ಶುಲ್ ಕಾಂಬೋಜ್ ಮತ್ತು ಜಸ್ಪ್ರೀತ್ ಬುಮ್ರಾ ತಲಾ ಒಂದು ವಿಕೆಟ್ ಪಡೆದರು.

  • 06 May 2024 09:15 PM (IST)

    ಒಂದೇ ಓವರ್‌ನಲ್ಲಿ ಎರಡು ವಿಕೆಟ್

    ಹಾರ್ದಿಕ್ ಪಾಂಡ್ಯ ಒಂದೇ ಓವರ್‌ನಲ್ಲಿ ಎರಡು ವಿಕೆಟ್ ಪಡೆದರು. ಅವರು ಶಹಬಾಜ್ ಅಹ್ಮದ್ ಮತ್ತು ಮಾರ್ಕೊ ಯಾನ್ಸನ್ ಅವರ ವಿಕೆಟ್ ಪಡೆದರು. ಹೈದರಾಬಾದ್ 16 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 125 ರನ್ ಗಳಿಸಿದೆ.

  • 06 May 2024 09:00 PM (IST)

    ಆರನೇ ವಿಕೆಟ್

    ಸನ್ ರೈಸರ್ಸ್ ಹೈದರಾಬಾದ್ ಆರನೇ ವಿಕೆಟ್ ಕಳೆದುಕೊಂಡಿದೆ. ಶಹಬಾಜ್ ಅಹ್ಮದ್ ಕೇವಲ 10 ರನ್​ಗಳಿಗೆ ವಿಕೆಟ್ ಮುಗಿಸಿದ್ದಾರೆ. ಅಬ್ದುಲ್ ಸಮದ್ ಎಂಟನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದಾರೆ.

  • 06 May 2024 08:39 PM (IST)

    ನಿತೀಶ್ ವಿಕೆಟ್

    12ನೇ ಓವರ್​ನಲ್ಲಿ ಹೈದರಾಬಾದ್ ನಾಲ್ಕನೇ ವಿಕೆಟ್ ಕಳೆದುಕೊಂಡಿದೆ. ಹಾರ್ದಿಕ್ ಪಾಂಡ್ಯ ನಿತೀಶ್ ರೆಡ್ಡಿಗೆ ಪೆವಿಲಿಯನ್ ಹಾದಿ ತೋರಿಸಿದ್ದಾರೆ. ಮಾರ್ಕೊ ಜಾನ್ಸನ್ ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದಾರೆ. 12 ಓವರ್‌ಗಳ ನಂತರ ತಂಡದ ಸ್ಕೋರ್ 96/4.

  • 06 May 2024 08:38 PM (IST)

    ಹೆಡ್ ಔಟ್

    ಹೈದರಾಬಾದ್‌ ಮೂರನೇ ವಿಕೆಟ್ ಕಳೆದುಕೊಂಡಿದೆ. ಅರ್ಧಶತಕದ ಸನಿಹದಲ್ಲಿದ್ದ ಟ್ರಾವಿಸ್ ಹೆಡ್ ವಿಕೆಟ್ ಒಪ್ಪಿಸಿದ್ದಾರೆ. ಹೆನ್ರಿಕ್ ಕ್ಲಾಸೆನ್ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದಾರೆ. 11 ಓವರ್‌ಗಳ ನಂತರ ತಂಡದ ಸ್ಕೋರ್ 92/3.

  • 06 May 2024 08:25 PM (IST)

    ಮಯಾಂಕ್ ಔಟ್

    ಅನ್ಶುಲ್ ತಮ್ಮ ಮೂರನೇ ಓವರ್‌ನಲ್ಲಿ ಮಯಾಂಕ್ ಅಗರ್ವಾಲ್ ಅವರನ್ನು ಬೌಲ್ಡ್ ಮಾಡಿದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಮಯಾಂಕ್ ಐದು ರನ್ ಗಳಿಸಲಷ್ಟೇ ಶಕ್ತರಾದರು. ನಿತೀಶ್ ಕುಮಾರ್ ರೆಡ್ಡಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದಾರೆ. ಎಂಟು ಓವರ್‌ಗಳ ನಂತರ ತಂಡದ ಸ್ಕೋರ್ 71/2.

  • 06 May 2024 08:16 PM (IST)

    ಅಭಿಷೇಕ್ ಶರ್ಮಾ ಔಟ್

    ಮುಂಬೈ ಇಂಡಿಯನ್ಸ್ ವಿರುದ್ಧ ಅಭಿಷೇಕ್ ಶರ್ಮಾ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದರೂ ಅವರಿಗೆ ದೊಡ್ಡ ಇನ್ನಿಂಗ್ಸ್ ಆಡಲು ಸಾಧ್ಯವಾಗಲಿಲ್ಲ. ಕೊನೆಗೆ ಬುಮ್ರಾಗೆ ಬಲಿಯಾಗಿದ್ದಾರೆ.

  • 06 May 2024 07:59 PM (IST)

    3 ಓವರ್‌ ಮುಕ್ತಾಯ

    ಸನ್‌ರೈಸರ್ಸ್ ಹೈದರಾಬಾದ್ ತಂಡ ಮೂರು ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 28 ರನ್ ಗಳಿಸಿದೆ. ಟ್ರಾವಿಸ್ ಹೆಡ್ 14 ರನ್ ಮತ್ತು ಅಭಿಷೇಕ್ ಶರ್ಮಾ 9 ರನ್‌ಗಳೊಂದಿಗೆ ಕ್ರೀಸ್‌ನಲ್ಲಿದ್ದಾರೆ.

  • 06 May 2024 07:46 PM (IST)

    ಹೈದರಾಬಾದ್ ಇನ್ನಿಂಗ್ಸ್ ಆರಂಭ

    ಹೈದರಾಬಾದ್ ಇನ್ನಿಂಗ್ಸ್ ಆರಂಭವಾಗಿದೆ. ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಇನ್ನಿಂಗ್ಸ್‌ ಆರಂಭಿಸಿದ್ದಾರೆ.

  • 06 May 2024 07:21 PM (IST)

    ಸನ್‌ರೈಸರ್ಸ್ ಹೈದರಾಬಾದ್

    ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್, ಮಯಾಂಕ್ ಅಗರ್ವಾಲ್, ನಿತೀಶ್ ರೆಡ್ಡಿ, ಹೆನ್ರಿಚ್ ಕ್ಲಾಸೆನ್, ಅಬ್ದುಲ್ ಸಮದ್, ಶಹಬಾಜ್ ಅಹ್ಮದ್, ಮಾರ್ಕೊ ಯಾನ್ಸನ್, ಪ್ಯಾಟ್ ಕಮಿನ್ಸ್ (ನಾಯಕ), ಭುವನೇಶ್ವರ್ ಕುಮಾರ್, ಟಿ ನಟರಾಜನ್.

    ಇಂಪ್ಯಾಕ್ಟ್ ಪ್ಲೇಯರ್: ಮಯಾಂಕ್ ಮಾರ್ಕಾಂಡೆ, ಗ್ಲೆನ್ ಫಿಲಿಪ್ಸ್, ಸನ್ವೀರ್ ಸಿಂಗ್, ಜಯದೇವ್ ಉನದ್ಕತ್, ಉಮ್ರಾನ್ ಮಲಿಕ್.

  • 06 May 2024 07:20 PM (IST)

    ಮುಂಬೈ ಇಂಡಿಯನ್ಸ್

    ಇಶಾನ್ ಕಿಶನ್ (ವಿಕೆಟ್ ಕೀಪರ್), ರೋಹಿತ್ ಶರ್ಮಾ, ನಮನ್ ಧೀರ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ಟಿಮ್ ಡೇವಿಡ್, ಅನ್ಶುಲ್ ಕಾಂಬೋಜ್, ಪಿಯೂಷ್ ಚಾವ್ಲಾ, ಜಸ್ಪ್ರೀತ್ ಬುಮ್ರಾ, ನುವಾನ್ ತುಷಾರ.

    ಇಂಪ್ಯಾಕ್ಟ್ ಪ್ಲೇಯರ್: ನೆಹಾಲ್ ವಾಧೇರಾ, ಶಮ್ಸ್ ಮುಲಾನಿ, ಶಿವಾಲಿಕ್ ಶರ್ಮಾ, ಡೆವಾಲ್ಡ್ ಬ್ರೂಯಿಸ್, ರೊಮಾರಿಯೋ ಶೆಫರ್ಡ್.

  • 06 May 2024 07:01 PM (IST)

    ಟಾಸ್ ಗೆದ್ದ ಮುಂಬೈ

    ಟಾಸ್ ಗೆದ್ದ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

Published On - May 06,2024 7:00 PM

Follow us
ಅಸ್ಸಾಂನಲ್ಲಿ ಭೀಕರ ಪ್ರವಾಹ; ಪ್ರಾಣ ಒತ್ತೆಯಿಟ್ಟು ಕರುವನ್ನು ಕಾಪಾಡಿದ ಜನ
ಅಸ್ಸಾಂನಲ್ಲಿ ಭೀಕರ ಪ್ರವಾಹ; ಪ್ರಾಣ ಒತ್ತೆಯಿಟ್ಟು ಕರುವನ್ನು ಕಾಪಾಡಿದ ಜನ
ದರ್ಶನ್​ ಮಾಡಿದ್ದೇ ಸರಿ ಎನ್ನುವ ಅಭಿಮಾನಿಗಳಿಗೆ ಕಿವಿಮಾತು ಹೇಳಿದ ಸುಮಲತಾ
ದರ್ಶನ್​ ಮಾಡಿದ್ದೇ ಸರಿ ಎನ್ನುವ ಅಭಿಮಾನಿಗಳಿಗೆ ಕಿವಿಮಾತು ಹೇಳಿದ ಸುಮಲತಾ
ಟೀಂ ಇಂಡಿಯಾ ವಿಜಯೋತ್ಸವದಲ್ಲಿ ಅಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಟ್ಟ ಫ್ಯಾನ್ಸ್
ಟೀಂ ಇಂಡಿಯಾ ವಿಜಯೋತ್ಸವದಲ್ಲಿ ಅಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಟ್ಟ ಫ್ಯಾನ್ಸ್
ಬ್ರಹ್ಮಾವರ ತಾಲ್ಲೂಕಿನ ಮಡಿಸಾಲು ಹಳ್ಳ ಉಕ್ಕಿ ತಗ್ಗುಪ್ರದೇಶಗಳು ಜಲಾವೃತ
ಬ್ರಹ್ಮಾವರ ತಾಲ್ಲೂಕಿನ ಮಡಿಸಾಲು ಹಳ್ಳ ಉಕ್ಕಿ ತಗ್ಗುಪ್ರದೇಶಗಳು ಜಲಾವೃತ
ಮುಂಬೈ ಏರ್‌ಪೋರ್ಟ್‌ನಲ್ಲಿ ಟೀಂ ಇಂಡಿಯಾದ ಆಟಗಾರರಿಗೆ ವಾಟರ್ ಸೆಲ್ಯೂಟ್‌
ಮುಂಬೈ ಏರ್‌ಪೋರ್ಟ್‌ನಲ್ಲಿ ಟೀಂ ಇಂಡಿಯಾದ ಆಟಗಾರರಿಗೆ ವಾಟರ್ ಸೆಲ್ಯೂಟ್‌
ದರ್ಶನ್ ಹಾಗೆ ಮಾಡಿರಲು ಸಾಧ್ಯವಿಲ್ಲ: ಸುಮಲತಾ ಅಂಬರೀಶ್
ದರ್ಶನ್ ಹಾಗೆ ಮಾಡಿರಲು ಸಾಧ್ಯವಿಲ್ಲ: ಸುಮಲತಾ ಅಂಬರೀಶ್
ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ಮುಂಬೈ ಬಂದ ಟೀಮ್ ಇಂಡಿಯಾಗೆ ಭವ್ಯ ಸ್ವಾಗತ
ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ಮುಂಬೈ ಬಂದ ಟೀಮ್ ಇಂಡಿಯಾಗೆ ಭವ್ಯ ಸ್ವಾಗತ
ಟೀಂ ಇಂಡಿಯಾ ವಿಜಯೋತ್ಸವಕ್ಕೆ ಕಡಲ ಕಿನಾರೆಯಲ್ಲಿ ಜನ ಸಾಗರ: ವಿಹಂಗಮ ನೋಟ
ಟೀಂ ಇಂಡಿಯಾ ವಿಜಯೋತ್ಸವಕ್ಕೆ ಕಡಲ ಕಿನಾರೆಯಲ್ಲಿ ಜನ ಸಾಗರ: ವಿಹಂಗಮ ನೋಟ
ದರ್ಶನ್ ಕುಟುಂಬ  ಜೊತೆ ನಿರಂತರವಾಗಿ ಸಂಪರ್ಕದಲ್ಲಿರುವೆ: ಸುಮಲತಾ ಅಂಬರೀಶ್
ದರ್ಶನ್ ಕುಟುಂಬ  ಜೊತೆ ನಿರಂತರವಾಗಿ ಸಂಪರ್ಕದಲ್ಲಿರುವೆ: ಸುಮಲತಾ ಅಂಬರೀಶ್
ಶ್ರೀರಾಮ ಮಂದಿರ ಮೇಲ್ಚಾವಣಿ ಸೋರಿಕೆಗೆ ಪೇಜಾವರಶ್ರೀ ಸ್ಪಷ್ಟನೆ
ಶ್ರೀರಾಮ ಮಂದಿರ ಮೇಲ್ಚಾವಣಿ ಸೋರಿಕೆಗೆ ಪೇಜಾವರಶ್ರೀ ಸ್ಪಷ್ಟನೆ