ಟಿ20 ಕ್ರಿಕೆಟ್ನಲ್ಲಿ ಹಲವು ಬೌಲರ್ಗಳು ಹ್ಯಾಟ್ರಿಕ್ ವಿಕೆಟ್‌ಗಳನ್ನು ಪಡೆದಿದ್ದಾರೆ. ಆದರೆ ಇದುವರೆಗೆ ಯಾವುದೇ ಬೌಲರ್ ತನ್ನ ಮೊದಲ ಓವರ್ನಲ್ಲೇ 3 ವಿಕೆಟ್ ಉರುಳಿಸಿದ ನಿದರ್ಶನವಿಲ್ಲ. ಆದರೀಗ ತಾನೆಸೆದ ಮೊದಲ ಓವರ್ನಲ್ಲೇ 3 ವಿಕೆಟ್ ಪಡೆಯುವ ಮೂಲಕ ನ್ಯೂಜಿಲೆಂಡ್ನ ಯುವ ಆಲ್ರೌಂಡರ್ ಮೈಕೆಲ್ ಬ್ರೇಸ್‌ವೆಲ್ ಹೊಸ ಇತಿಹಾಸ ಬರೆದಿದ್ದಾರೆ. ಐರ್ಲೆಂಡ್ ವಿರುದ್ದ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡವು 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 179 ರನ್ ಕಲೆಹಾಕಿತು. ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಐರ್ಲೆಂಡ್ ತಂಡವು ಹಂತದಲ್ಲಿ ಉತ್ತಮ ಸ್ಥಿತಿಯಲ್ಲೇ ಇತ್ತು.
ಆದರೆ ಯಾವಾಗ ಮೈಕೆಲ್ ಬ್ರೇಸ್‌ವೆಲ್ ಚೆಂಡನ್ನು ಕೈಗೆತ್ತಿಕೊಂಡರೋ, ಇಡೀ ಪಂದ್ಯದ ಚಿತ್ರಣ ಬದಲಿಸಿದರು. ತಮ್ಮ ವೃತ್ತಿಜೀವನದ ಎರಡನೇ ಟಿ20 ಪಂದ್ಯವಾಡುತ್ತಿರುವ ಬ್ರೇಸ್‌ವೆಲ್ 14ನೇ ಓವರ್ ಎಸೆಯಲು ಬಂದರು.
ತಮ್ಮ ವೃತ್ತಿಜೀವನ ಮೊದಲ ಓವರ್‌ನ ಮೊದಲ ಎಸೆತದಲ್ಲಿ ಬೌಂಡರಿ ನೀಡಿದರು. ನಂತರ ಎರಡನೇ ಎಸೆತದಲ್ಲಿ ರನ್ ಓಡಿದರು. ಮೂರನೇ ಎಸೆತದಲ್ಲಿ ಡೀಪ್ ಮಿಡ್‌ವಿಕೆಟ್‌ನಲ್ಲಿ ಫಿಲಿಪ್‌ಗೆ ಕ್ಯಾಚಿತ್ತು ಮಾರ್ಕ್ ಆಡೈರ್ ಹೊರನಡೆದರು. ಮುಂದಿನ ಎಸೆತದಲ್ಲಿ ಮ್ಯಾಗರ್ತಿ ಕೂಡ ಫಿಲಿಪ್ ಕೈಗೆ ಕ್ಯಾಚ್ ನೀಡಿದರು. ಇನ್ನು 5ನೇ ಎಸೆತದಲ್ಲಿ ಕ್ರೇಗ್ ಯಂಗ್ ಇಶ್ ಸೋಧಿಗೆ ಕ್ಯಾಚ್ ನೀಡುವ ಮೂಲಕ ಹೊರನಡೆದರು.
ಇದರೊಂದಿಗೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಮೊದಲ ಓವರ್ನಲ್ಲೇ ಹ್ಯಾಟ್ರಿಕ್ ವಿಕೆಟ್ ಉರುಳಿಸಿದ ಮೊದಲ ಬೌಲರ್ ಎಂಬ ವಿಶ್ವ ದಾಖಲೆ ಮೈಕೆಲ್ ಬ್ರೇಸ್‌ವೆಲ್ ಪಾಲಾಯಿತು. ಹಾಗೆಯೇ ಬ್ರೇಸ್‌ವೆಲ್ ಅವರು T20I ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಮೂರನೇ ನ್ಯೂಜಿಲೆಂಡ್ ಬೌಲರ್ ಆಗಿ ಗುರುತಿಸಿಕೊಂಡಿದ್ದಾರೆ. ಈ ಹಿಂದೆ ಜೇಕಬ್ ಓರಮ್ ಮತ್ತು ಟಿಮ್ ಸೌಥಿ ಈ ಸಾಧನೆ ಮಾಡಿದ್ದರು. ತಮ್ಮ ಮೊದಲ ಓವರ್‌ನ 5 ಎಸೆತಗಳಲ್ಲಿ 3 ವಿಕೆಟ್‌ಗಳನ್ನು ಕಬಳಿಸುವ ಮೈಕೆಲ್ ಬ್ರೇಸ್‌ವೆಲ್ ನ್ಯೂಜಿಲೆಂಡ್ ತಂಡಕ್ಕೆ 88 ರನ್‌ಗಳ ಬೃಹತ್ ಮೊತ್ತದ ಗೆಲುವನ್ನು ತಂದುಕೊಟ್ಟರು.
Michael Bracewell can’t Do anything Wrong
Hat-trick in his First Over of T20 Internationals is just amazing and Unbelievable ?pic.twitter.com/nIPmvgCmjM— ⚡ (@Visharad_KW22) July 20, 2022
ಇದಕ್ಕೂ ಮುನ್ನ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ಪರ ಡೇನ್ ಕ್ಲೀವರ್ ಅಜೇಯ 78 ರನ್ ಗಳಿಸಿ ಮಿಂಚಿದ್ದರು. 55 ಎಸೆತಗಳನ್ನು ಎದುರಿಸಿದ್ದ ಕ್ಲೀವರ್ 5 ಬೌಂಡರಿ ಹಾಗೂ 4 ಸಿಕ್ಸರ್ ಬಾರಿಸಿದ್ದರು. ಇದಲ್ಲದೇ ಫಿನ್ ಅಲೆನ್ ಕೂಡ 20 ಎಸೆತಗಳಲ್ಲಿ 35 ರನ್ ಗಳಿಸಿದರು. ಪರಿಣಾಮ ನ್ಯೂಜಿಲೆಂಡ್ 4 ವಿಕೆಟ್ ನಷ್ಟಕ್ಕೆ 179 ರನ್ ಕಲೆಹಾಕಿತು. ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಐರ್ಲೆಂಡ್ ತಂಡವು ಕೇವಲ 91 ರನ್ಗಳಿಗೆ ಆಲೌಟ್ ಆಗಿ ಹೀನಾಯವಾಗಿ ಸೋಲೊಪ್ಪಿಕೊಂಡಿತು.