MLC 2023: ಪಾರ್ನೆಲ್ ಮಿಂಚಿನ ದಾಳಿಗೆ TSK ಠುಸ್..!

Seattle Orcas vs Texas Super Kings: ಸಿಯಾಟಲ್ ಓರ್ಕಾಸ್ ಪರ ಮಿಂಚಿನ ದಾಳಿ ಸಂಘಟಿಸಿದ ವೇಯ್ನ್ ಪಾರ್ನೆಲ್ 4 ಓವರ್​ಗಳಲ್ಲಿ ಕೇವಲ 20 ರನ್ ನೀಡಿ 5 ವಿಕೆಟ್ ಕಬಳಿಸಿ ಮಿಂಚಿದರು.

MLC 2023: ಪಾರ್ನೆಲ್ ಮಿಂಚಿನ ದಾಳಿಗೆ TSK ಠುಸ್..!
Wayne Parnell
Edited By:

Updated on: Jul 22, 2023 | 4:13 PM

MLC 2023: ಅಮೆರಿಕದಲ್ಲಿ ನಡೆಯುತ್ತಿರುವ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯ 10ನೇ ಪಂದ್ಯದಲ್ಲಿ ಟೆಕ್ಸಾಸ್ ಸೂಪರ್ ಕಿಂಗ್ಸ್ ವಿರುದ್ಧ ಸಿಯಾಟಲ್ ಓರ್ಕಾಸ್ ತಂಡವು ಭರ್ಜರಿ ಗೆಲುವು ಸಾಧಿಸಿದೆ. ಈ ಗೆಲುವಿನ ರೂವಾರಿ ಸಿಯಾಟಲ್ ಓರ್ಕಾಸ್ ತಂಡದ ನಾಯಕ ವೇಯ್ನ್ ಪಾರ್ನೆಲ್. ಈ ಪಂದ್ಯದಲ್ಲಿ ಟಾಸ್ ಗೆದ್ದ ಸಿಯಾಟಲ್ ಓರ್ಕಾಸ್ ತಂಡವು ಬೌಲಿಂಗ್ ಆಯ್ಕೆ ಮಾಡಿಕೊಂಡಿತು.
ಅದರಂತೆ ಮೊದಲು ಬ್ಯಾಟ್ ಮಾಡಿದ ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡವು ಆರಂಭಿಕ ವೈಫಲ್ಯಕ್ಕೊಳಗಾಯಿತು. ಮೊದಲ ಓವರ್​ನ ಮೊದಲ ಎಸೆತದಲ್ಲೇ ಇಮಾದ್ ವಾಸಿಂ ಆರಂಭಿಕ ಆಟಗಾರ ಡೆವೊನ್ ಕಾನ್ವೆಯ (0) ವಿಕೆಟ್ ಪಡೆದರು. ಇದರ ಬೆನ್ನಲ್ಲೇ ಫಾಫ್ ಡುಪ್ಲೆಸಿಸ್ (13) ​ಗೆ ಆಂಡ್ರ್ಯೂ ಟೈ ಎಸೆತಕ್ಕೆ ಔಟಾದರು.

ಇದಾದ ಬಳಿಕ ವೇಯ್ನ್ ಪಾರ್ನೆಲ್ ಬಿಗಿ ದಾಳಿ ಆರಂಭವಾಯಿತು. ಅತ್ಯುತ್ತಮ ಲೈನ್ ಲೆಂಗ್ತ್​ನಲ್ಲಿ ಬೌಲಿಂಗ್ ಮಾಡಿದ ಪಾರ್ನೆಲ್, ಕೋಡಿ ಚೆಟ್ಟಿ (22), ಡೇವಿಡ್ ಮಿಲ್ಲರ್ (8), ಮಿಲಿಂದ್ ಕುಮಾರ್ (1), ಡ್ವೇನ್ ಬ್ರಾವೊ (39), ಜಿಯಾ ಉಲ್ ಹಕ್ (0) ಗೆ ಪೆವಿಲಿಯನ್ ಹಾದಿ ತೋರಿಸಿದರು.

ಪರಿಣಾಮ ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡವು ಕೇವಲ 127 ರನ್​ಗಳಿಗೆ ಆಲೌಟ್ ಆಯಿತು. ಸಿಯಾಟಲ್ ಓರ್ಕಾಸ್ ಪರ ಮಿಂಚಿನ ದಾಳಿ ಸಂಘಟಿಸಿದ ವೇಯ್ನ್ ಪಾರ್ನೆಲ್ 4 ಓವರ್​ಗಳಲ್ಲಿ ಕೇವಲ 20 ರನ್ ನೀಡಿ 5 ವಿಕೆಟ್ ಕಬಳಿಸಿ ಮಿಂಚಿದರು.

ಇನ್ನು 128 ರನ್​ಗಳ ಸುಲಭ ಗುರಿ ಬೆನ್ನತ್ತಿದ ಸಿಯಾಟಲ್ ಓರ್ಕಾಸ್ ಪರ ಆರಂಭಿಕ ಆಟಗಾರ ಕ್ವಿಂಟನ್ ಡಿಕಾಕ್ ಅಬ್ಬರಿಸಿದರು. ಕೇವಲ 36 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 3 ಫೋರ್​ಗಳೊಂದಿಗೆ ಡಿಕಾಕ್ 53 ರನ್ ಬಾರಿಸಿದರೆ, ನೌಮಾನ್ ಅನ್ವರ್ 19 ರನ್​ಗಳನ್ನು ಕಲೆಹಾಕಿದರು.

ಆರಂಭಿಕರ ಪತನದ ಬಳಿಕ ಕಣಕ್ಕಿಳಿದ ಹೆನ್ರಿಕ್ ಕ್ಲಾಸೆನ್ 21 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 4 ಫೋರ್​ಗಳೊಂದಿಗೆ ಅಜೇಯ 42 ರನ್​ ಬಾರಿಸುವ ಮೂಲಕ 16 ಓವರ್​ಗಳಲ್ಲಿ 2 ವಿಕೆಟ್ ನಷ್ಟಕ್ಕೆ ತಂಡವನ್ನು 128 ರನ್​ಗಳ ಗುರಿ ಮುಟ್ಟಿಸಿದರು. ಈ ಮೂಲಕ ಸಿಯಾಟಲ್ ಓರ್ಕಾಸ್ ತಂಡವು 8 ವಿಕೆಟ್​ಗಳ ಭರ್ಜರಿ ಜಯ ತನ್ನದಾಗಿಸಿಕೊಂಡಿತು. ಇನ್ನು ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ ವೇಯ್ನ್ ಪಾರ್ನೆಲ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಟೆಕ್ಸಾಸ್ ಸೂಪರ್ ಕಿಂಗ್ಸ್ ಪ್ಲೇಯಿಂಗ್ 11: ಡೆವೊನ್ ಕಾನ್ವೇ (ವಿಕೆಟ್ ಕೀಪರ್) , ಫಾಫ್ ಡು ಪ್ಲೆಸಿಸ್ (ನಾಯಕ) , ಕೋಡಿ ಚೆಟ್ಟಿ , ಡೇವಿಡ್ ಮಿಲ್ಲರ್ , ಮಿಚೆಲ್ ಸ್ಯಾಂಟ್ನರ್ , ಡ್ವೇನ್ ಬ್ರಾವೋ , ಡೇನಿಯಲ್ ಸ್ಯಾಮ್ಸ್ , ಮಿಲಿಂದ್ ಕುಮಾರ್ , ಮೊಹಮ್ಮದ್ ಮೊಹ್ಸಿನ್ , ರಸ್ಟಿ ಥರಾನ್ , ಜಿಯಾ-ಉಲ್-ಹಕ್.

ಇದನ್ನೂ ಓದಿ: Team India: ಒಟ್ಟು 47 ಪ್ಲೇಯರ್ಸ್​: ಟೀಮ್ ಇಂಡಿಯಾದಿಂದ 32 ಆಟಗಾರರು ಔಟ್..!

ಸಿಯಾಟಲ್ ಓರ್ಕಾಸ್ ಪ್ಲೇಯಿಂಗ್ 11: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್) , ನೌಮನ್ ಅನ್ವರ್ , ಶೆಹನ್ ಜಯಸೂರ್ಯ , ಹೆನ್ರಿಕ್ ಕ್ಲಾಸೆನ್ , ದಾಸುನ್ ಶನಕ , ಶುಭಂ ರಂಜನೆ , ಇಮಾದ್ ವಾಸಿಮ್ , ಕ್ಯಾಮೆರಾನ್ ಗ್ಯಾನನ್ , ವೇಯ್ನ್ ಪಾರ್ನೆಲ್ (ನಾಯಕ) , ಹರ್ಮೀತ್ ಸಿಂಗ್ , ಆಂಡ್ರ್ಯೂ ಟೈ.