ದುಬೈನಲ್ಲಿ ನಡೆದ ಟಿ20 ವಿಶ್ವಕಪ್ನ ಮೊದಲ ಪಂದ್ಯದಲ್ಲಿ ಭಾರತ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ್ ವಿರುದ್ದ ಮುಗ್ಗರಿಸಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ಕೇವಲ 151 ರನ್ಗಳಿಸಲಷ್ಟೇ ಶಕ್ತರಾಗಿದ್ದರು. ಇನ್ನು ಟೀಮ್ ಇಂಡಿಯಾ ಬೌಲರುಗಳು ಇಬ್ಬನಿಯಿಂದಾಗಿ ಆರಂಭದಿಂದಲೇ ಲಯ ತಪ್ಪಿದ್ದರು. ಪರಿಣಾಮ 17.5 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 152 ರನ್ ಗಳಿಸಿ ಪಂದ್ಯವನ್ನು ಗೆದ್ದುಕೊಂಡಿತು. ಈ ಸೋಲಿನ ಬೆನ್ನಲ್ಲೇ ಭಾರತ ತಂಡದ ಪ್ರದರ್ಶನದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಆಕ್ರೋಶಗಳು ವ್ಯಕ್ತವಾಗಿದ್ದವು. ಅದರಲ್ಲೂ 3.5 ಓವರ್‌ಗಳಲ್ಲಿ 43 ರನ್ ನೀಡಿದ ಭಾರತೀಯ ವೇಗಿ ಮೊಹಮ್ಮದ್ ಶಮಿ ಮೇಲೆ ಜನಾಂಗೀಯ ನಿಂದೆನೆ ಮಾಡಿದ್ದರು. ಇನ್ನೂ ಕೆಲವರು ಅತಿರೇಕಕ್ಕೆ ಹೋಗಿ ಪಾಕಿಸ್ತಾನದವ…ಎಂದೆಲ್ಲಾ ಮೂದಲಿಸಿದ್ದರು. ಸೋಷಿಯಲ್ ಮೀಡಿಯಾಗಳಲ್ಲಿ ಶಮಿ ವಿರುದ್ದದ ದಾಳಿ ಅತಿರೇಕಕ್ಕೆ ಹೋಗುತ್ತಿದ್ದಂತೆ ಇತ್ತ ಟೀಮ್ ಇಂಡಿಯಾದ ಕೆಲ ಆಟಗಾರರು ಧ್ವನಿಯೆತ್ತಿದ್ದಾರೆ. ಭಾರತ ತಂಡ ಆಟಗಾರನ ಪರವಾಗಿ ನಿಂತಿದ್ದಾರೆ.
ಟೀಮ್ ಇಂಡಿಯಾದ ಮಾಜಿ ಓಪನರ್ ವೀರೇಂದ್ರ ಸೆಹ್ವಾಗ್, ಆಕಾಶ್ ಚೋಪ್ರಾ ಮತ್ತು ಇರ್ಫಾನ್ ಪಠಾಣ್ ಸೇರಿದಂತೆ ಅನೇಕ ಕ್ರಿಕೆಟಿಗರು ವೇಗಿ ಮೊಹಮ್ಮದ್ ಶಮಿಯನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸೆಹ್ವಾಗ್, ಮೊಹಮ್ಮದ್ ಶಮಿ ಮೇಲಿನ ಆನ್‌ಲೈನ್ ದಾಳಿ ಆಘಾತಕಾರಿಯಾದದ್ದು. ನಾವು ಶಮಿ ಪರವಾಗಿ ನಿಲ್ಲುತ್ತೇವೆ. ಅವರು ಚಾಂಪಿಯನ್ ಆಗಿದ್ದಾರೆ. ಭಾರತದ ಕ್ಯಾಪ್ ಧರಿಸುವ ಯಾರೇ ಆಗಲಿ, ಅವರು ಸೋಷಿಯಲ್ ಮೀಡಿಯಾದಲ್ಲಿ ದ್ವೇಷ ಕಾರುವವರಿಗಿಂತ ಹೆಚ್ಚಿನ ಮಟ್ಟದಲ್ಲಿ ಭಾರತವನ್ನು ತಮ್ಮ ಹೃದಯದಲ್ಲಿಟ್ಟುಕೊಂಡಿರುತ್ತಾರೆ. ನಿನ್ನೊಂದಿಗಿದ್ದೇನೆ ಶಮಿ, ಮುಂದಿನ ಪಂದ್ಯದಲ್ಲಿ ನಿಮ್ಮ ಪರಾಕ್ರಮ ತೋರಿಸಿ” ಎಂದು ಸೆಹ್ವಾಗ್ ಬರೆದಿದ್ದಾರೆ.
The online attack on Mohammad Shami is shocking and we stand by him. He is a champion and Anyone who wears the India cap has India in their hearts far more than any online mob. With you Shami. Agle match mein dikado jalwa.
— Virender Sehwag (@virendersehwag) October 25, 2021
ಇನ್ನು ಆಕಾಶ್ ಚೋಪ್ರಾ ಟ್ವೀಟ್ ಮಾಡಿ, “ಈ ಹಿಂದೆ ಆಟಗಾರರ ಮನೆಗೆ ಬಣ್ಣ ಮತ್ತು ಕಲ್ಲು ಎಸೆಯುತ್ತಿದ್ದ, ಪ್ರತಿಕೃತಿಗಳನ್ನು ಸುಟ್ಟುಹಾಕುತ್ತಿದ್ದವರೇ ಇಂದು ಆನ್‌ಲೈನ್ ಟ್ರೋಲ್ ಮಾಡುತ್ತಿದ್ದಾರೆ… ಒಂದು ಪ್ರೊಫೈಲ್ ಫೋಟೋಗಳನ್ನು ಹಾಕಲು ಕೂಡ ಯೋಗ್ಯತೆ ಇಲ್ಲದವರು ಎನ್ನುವ ಮೂಲಕ ಚೋಪ್ರಾ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
“ನಾನು ಕೂಡ ಪಾಕಿಸ್ತಾನದ ಎದುರು ಸೋತ ಕೆಲ ಪಂದ್ಯಗಳ ಭಾಗವಾಗಿದ್ದೇನೆ. ಆದರೆ ಆಗ ನನಗೆ ಯಾರೂ ಪಾಕಿಸ್ತಾನಕ್ಕೆ ಹೋಗು ಎಂದು ಹೇಳಿರಲಿಲ್ಲ. ನಾನು ಕೆಲ ವರ್ಷಗಳ ಹಿಂದಿನ ಭಾರತದ ಬಗ್ಗೆ ಮಾತನಾಡುತ್ತಿದ್ದೇನೆ ಮತ್ತು ಈ ದುಷ್ಕರ್ಮಿಗಳನ್ನು ತಡೆಯಬೇಕಿದೆ” ಟೀಮ್ ಇಂಡಿಯಾ ಮಾಜಿ ಆಲ್ರೌಂಡರ್ ಇರ್ಫಾನ್ ಪಠಾಣ್ ಟ್ವೀಟ್ ಮಾಡಿದ್ದಾರೆ.
Even I was part of #IndvsPak battles on the field where we have lost but never been told to go to Pakistan! I’m talking about ?? of few years back. THIS CRAP NEEDS TO STOP. #Shami
— Irfan Pathan (@IrfanPathan) October 25, 2021
ಇನ್ನು ಹರ್ಭಜನ್ ಸಿಂಗ್ ಟ್ವಿಟ್ಟರ್‌ನಲ್ಲಿ “ನಾವು ನಿಮ್ಮನ್ನು ಪ್ರೀತಿಸುತ್ತೇವೆ ಮೊಹಮ್ಮದ್ ಶಮಿ” ಎಂದು ಬರೆದು ಒಂದೇ ವಾಕ್ಯದಲ್ಲಿ ಎಲ್ಲವನ್ನು ಹೇಳಿ ಮುಗಿಸಿದ್ದಾರೆ. ಹಾಗೆಯೇ ಟೀಮ್ ಇಂಡಿಯಾ ಕ್ರಿಕೆಟಿಗ ಯುಜ್ವೇಂದ್ರ ಚಹಲ್ “ನಿಮ್ಮ ಬಗ್ಗೆ ನಮಗೆ ತುಂಬಾ ಹೆಮ್ಮೆ ಇದೆ ಮೊಹಮ್ಮದ್ ಶಮಿ” ಎಂದು ಬರೆದುಕೊಂಡು ಬೆಂಬಲ ವ್ಯಕ್ತಪಡಿಸಿದ್ದಾರೆ.
We love you @MdShami11 ?? #Shami
— Harbhajan Turbanator (@harbhajan_singh) October 25, 2021
We are so proud of you @MdShami11 bhaiya ??
— Yuzvendra Chahal (@yuzi_chahal) October 25, 2021
ಭಾರತದ ಮಾಜಿ ವೇಗದ ಬೌಲರ್ ಆರ್‌ಪಿ ಸಿಂಗ್ ಟ್ವೀಟ್ ಮಾಡಿ, “ಮೊಹಮ್ಮದ್ ಶಮಿ ಭಾರತೀಯ ಕ್ರಿಕೆಟಿಗ ಮತ್ತು ನಾವು ಅವರ ಬಗ್ಗೆ ಹೆಮ್ಮೆಪಡುತ್ತೇವೆ. ಪಾಕಿಸ್ತಾನ ವಿರುದ್ಧದ ಸೋಲಿನ ನಂತರ ಅವರನ್ನು ಗುರಿಯಾಗಿಸುವುದು ಖಂಡನೀಯ ಎಂದು ತಿಳಿಸಿದ್ದಾರೆ.
ಇನ್ನು ಅಮನ್ ಶರ್ಮಾ 2019ರ ವಿಶ್ವಕಪ್ ಪಂದ್ಯದ ವಿಡಿಯೋವನ್ನು ಹಂಚಿಕೊಂಡು ಶಮಿಗೆ ಬೆಂಬಲ ಸೂಚಿಸಿದ್ದಾರೆ. ಭಾರತ – ಅಫ್ಘಾನಿಸ್ತಾನ್ ನಡುವಣ ಪಂದ್ಯದ ಕೊನೆಯ ಓವರ್‌ನಲ್ಲಿ ಗೆಲ್ಲಲು ಅಫ್ಘಾನ್ಗೆ 16 ರನ್ ಗಳಿಸಬೇಕಿತ್ತು. ಒತ್ತಡದ ಸನ್ನಿವೇಶದಲ್ಲಿ ಬೌಲ್ ಮಾಡಿದ ಶಮಿ ಕೇವಲ ನಾಲ್ಕು ರನ್ ನೀಡಿ ಹ್ಯಾಟ್ರಿಕ್ ವಿಕೆಟ್ ಉರುಳಿಸಿ ಭಾರತಕ್ಕೆ ಗೆಲುವು ತಂದುಕೊಟ್ಟಿದ್ದರು. ಆಗ ಇಡೀ ದೇಶವೇ ಶಮಿಯವರನ್ನು ಕೊಂಡಾಡಿತ್ತು. ಈ ವೀಡಿಯೋವನ್ನು ಹಂಚಿಕೊಂಡಿದ್ದು ನೀವು ನಮ್ಮ ಹೆಮ್ಮೆ ಎಂದು ಅಮನ್ ಶರ್ಮಾ ತಿಳಿಸಿದ್ದಾರೆ.
Mohammad Shami — ??’s Pridepic.twitter.com/JKZDK4QMYb
— Aman Sharma (@AmanKayamHai_) October 25, 2021
ಹಾಗೆಯೇ ವಿನಯ್ ಕುಮಾರ್ ಎಂಬುವವರು ಬ್ಲಾಕ್ ಲೈವ್ಸ್ ಮ್ಯಾಟರ್ಗೆ ಗೌರವ ಸಲ್ಲಿಸಲು ಮಂಡಿಯೂರಿದ ಎಷ್ಟು ಆಟಗಾರರು ಶಮಿ ಪರವಾಗಿ ನಿಂತರು ಎಂದು ಪ್ರಶ್ನಿಸಿದ್ದಾರೆ. ಒಟ್ಟಿನಲ್ಲಿ ಪಂದ್ಯದ ಸೋಲಿಗೆ ಶಮಿಯನ್ನು ಟಾರ್ಗೆಟ್ ಮಾಡಿದವರ ವಿರುದ್ದ ಇದೀಗ ಕ್ರಿಕೆಟ್ ಪ್ರೇಮಿಗಳಿಂದ ಆಕ್ರೋಶ ವ್ಯಕ್ತವಾಗುತ್ತಿದೆ.
How many of these #TeamIndia players will stand for #Shami ? pic.twitter.com/x2t9gGKCDm
— Vinay Kumar Dokania (@VinayDokania) October 25, 2021
ಇದನ್ನೂ ಓದಿ: ಪಂದ್ಯ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾ ಆಟಗಾರರು ಮಂಡಿಯೂರಿದ್ದು ಯಾಕೆ ಗೊತ್ತಾ?
ಇದನ್ನೂ ಓದಿ: Virat Kohli: ಸೋತರೂ ಟಿ20 ವಿಶ್ವಕಪ್ನಲ್ಲಿ ವಿಶ್ವ ದಾಖಲೆ ಬರೆದ ವಿರಾಟ್ ಕೊಹ್ಲಿ
ಇದನ್ನೂ ಓದಿ: T20 World Cup 2021: ಟಿ20 ರ್ಯಾಂಕಿಂಗ್ನಲ್ಲಿ ನಂಬರ್ 1 ತಂಡ ಯಾವುದು ಗೊತ್ತಾ?
(Mohammed Shami faces vicious online abuse after India’s loss to Pakistan)