AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Salman Butt: ಪಾಕಿಸ್ತಾನದ ಬೀದಿಯಲ್ಲಿ ಮಕ್ಕಳು ವರುಣ್ ಚಕ್ರವರ್ತಿ ರೀತಿಯ ಬೌಲಿಂಗ್​ಗೆ ಚೆನ್ನಾಗಿ ಆಡುತ್ತಾರೆ: ಪಾಕ್ ಮಾಜಿ ನಾಯಕ

Varun Chakaravarthy: ವರುಣ್ ಚಕ್ರವರ್ತಿ ಅವರನ್ನು ಮುಂದಿನ ದಿನಗಳಲ್ಲಿ ಪಾಕಿಸ್ತಾನ ವಿರುದ್ಧ ಆಡಿಸುವುದು ಕೆಟ್ಟ ನಿರ್ಧಾರ. ಹಾಗೇನಾದರು ಕಣಕ್ಕಿಳಿಸಿದರೆ ಗೆಲುವು ನಮ್ಮದೇ ಆಗಿರುತ್ತದೆ ಎಂದು ಸಲ್ಮಾನ್ ಬಟ್ ಹೇಳಿದ್ದಾರೆ.

Salman Butt: ಪಾಕಿಸ್ತಾನದ ಬೀದಿಯಲ್ಲಿ ಮಕ್ಕಳು ವರುಣ್ ಚಕ್ರವರ್ತಿ ರೀತಿಯ ಬೌಲಿಂಗ್​ಗೆ ಚೆನ್ನಾಗಿ ಆಡುತ್ತಾರೆ: ಪಾಕ್ ಮಾಜಿ ನಾಯಕ
Varun Chakaravarthy and Salman Butt
TV9 Web
| Updated By: Vinay Bhat|

Updated on: Oct 26, 2021 | 8:20 AM

Share

ಟಿ20 ವಿಶ್ವಕಪ್​ನ (T20 World Cup) ಮೊದಲ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನ (India vs Pakistan) ವಿರುದ್ಧ ಸೋತ ಬಗ್ಗೆ ಸಾಕಷ್ಟು ಮಾತುಗಳು ಕೇಳಿಬರುತ್ತಿವೆ. ವಿಶ್ವಕಪ್ ಮಹಾ ಸಮರದಲ್ಲಿ ಟೀಮ್ ಇಂಡಿಯಾ (Team India) ಇದೇ ಮೊದಲ ಬಾರಿಗೆ ಪಾಕ್ ವಿರುದ್ಧ ಸೋಲು ಕಂಡಿತು. ಬ್ಯಾಟಿಂಗ್- ಬೌಲಿಂಗ್​ನಲ್ಲಿ ವಿರಾಟ್ ಕೊಹ್ಲಿ (Virat Kohli) ಪಡೆಗೆ ಕಮ್​ಬ್ಯಾಕ್ ಮಾಡಲು ಸಾಧ್ಯವಾಗಲೇ ಇಲ್ಲ. ಇತ್ತ ಪಾಕ್ 29 ವರ್ಷಗಳ ಬಳಿಕ ಭಾರತ (India) ವಿರುದ್ಧ ಗೆದ್ದ ಐತಿಹಾಸಿಕ ಸಾಧನೆ ಮಾಡಿತು. ಭಾರತೀಯ ಬೌಲರ್​ಗಳು ಎದುರಾಳಿಯ ಒಂದು ವಿಕೆಟ್ ಕೂಡ ಕೀಳಲಾರದೆ ಹೀನಾಯ ಸೋಲು ಕಂಡರು. ಭಾರತದ ಮಿಸ್ಟ್ರಿ ಸ್ಪಿನ್ನರ್ ಎಂದೇ ಖ್ಯಾತಿ ಪಡೆದಿರುವ ವರುಣ್ ಚಕ್ರವರ್ತಿ (Varun Chakaravarthy) ಸ್ಪಿನ್ ಜಾದುಕೂಡ ನಡೆಯಲಿಲ್ಲ. ಈ ಬಗ್ಗೆ ಪಾಕಿಸ್ತಾನ ತಂಡದ ಮಾಜಿ ನಾಯಕ ಸಲ್ಮಾನ್ ಬಟ್ (Salman Butt) ಮಾತನಾಡಿದ್ದಾರೆ.

ವರುಣ್ ಚಕ್ರವರ್ತಿ ಮಿಸ್ಟ್ರಿ ಸ್ಪಿನ್ನರ್ ಆಗಿರಬಹುದು. ಆದರೆ, ಅವರ ಬೌಲಿಂಗ್​ನಲ್ಲಿ ಯಾವುದೇ ಅಚ್ಚರಿ ಇರಲಿಲ್ಲ ಎಂದು ಸಲ್ಮಾನ್ ಬಟ್ ಹೇಳಿದ್ದಾರೆ. ಐಪಿಎಲ್ 2021 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಆಡಿದ ವರುಣ್ ಎದುರಾಳಿಯ ಮೈಚಳಿಬಿಡಿಸಿದ್ದರು. ಇದೇ ಪ್ರದರ್ಶನದಿಂದ ಇವರನ್ನು ಐಸಿಸಿ ಟಿ20 ವಿಶ್ವಕಪ್​​ಗೂ ಆಯ್ಕೆ ಮಾಡಲಾಯಿತು. ಮೊದಲ ಪಾಕ್ ವಿರುದ್ಧದ ಪಂದ್ಯದಲ್ಲಿ ಆರ್. ಅಶ್ವಿನ್ ಬದಲು ಸ್ಥಾನವನ್ನೂ ನೀಡಲಾಯಿತು. ಆದರೆ, ನೀರಸ ಪ್ರದರ್ಶನ ತೋರಿದರು. 4 ಓವರ್ ಬೌಲಿಂಗ್ ಮಾಡಿ 33 ರನ್ ನೀಡಿ ಯಾವುದೇ ವಿಕೆಟ್ ಕೀಳಲಿಲ್ಲ.

ಈ ಕುರಿತು ಮಾತನಾಡಿದ ಸಲ್ಮಾನ್ ಬಟ್, ‘ವರುಣ್ ಚಕ್ರವರ್ತಿ ಮಿಸ್ಟ್ರಿ ಸ್ಪಿನ್ನರ್ ಆಗಿರಬಹುದು. ಆದರೆ, ಅವರ ಬೌಲಿಂಗ್​ನಲ್ಲಿ ನಮಗೆ ಯಾವುದೇ ರೀತಿಯ ಅಚ್ಚರಿ ಕಾಣಲಿಲ್ಲ. ಪಾಕಿಸ್ತಾನದಲ್ಲಿ ಮಕ್ಕಳು ಸಾಕಷ್ಟು ಟ್ಯಾಪ್ ಬಾಲ್ ಕ್ರಿಕೆಟ್ ಆಡುತ್ತಾರೆ. ಪಾಕಿಸ್ತಾನದ ಬೀದಿಗಳಲ್ಲಿ ಈರೀತಿಯ ಬೌಲಿಂಗ್ ಅನ್ನು ಎಲ್ಲರೂ ಎದುರಿಸುತ್ತಾರೆ’ ಎಂದು ಹೇಳಿದ್ದಾರೆ.

ಚಕ್ರವರ್ತಿ ಅವರನ್ನು ಮಿಸ್ಟರ್ ಸ್ಪಿನ್ನರ್ ಎಂದೇ ಖ್ಯಾತಿ ಪಡೆದಿದ್ದ ಶ್ರೀಲಂಕಾದ ಸ್ಪಿನ್ನರ್ ಅಜಂತಾ ಮೆಂಡಿಸ್​ಗೆ ಬಟ್ ಅವರು ಹೋಲಿಸಿದ್ದಾರೆ. ‘ಮೆಂಡಿಸ್ ತಮ್ಮ ಕ್ರಿಕೆಟ್ ಜೀವನದ ಆರಂಭದಲ್ಲಿ ಮಿಸ್ಟರ್ ಸ್ಪಿನ್ನರ್ ಎಂದೇ ಹೆಸರುವಾಸಿಯಾಗಿದ್ದರು. ಆದರೆ, ಅವರ ಆಟ ಪಾಕಿಸ್ತಾನ ವಿರುದ್ಧ ನಡೆಯಲಿಲ್ಲ. ಹೀಗಾಗಿ ಅವರನ್ನು ಪಾಕ್ ವಿರುದ್ಧ ಮುಂದಿನ ಪಂದ್ಯಗಳಲ್ಲಿ ಆಡಿಸಲಿಲ್ಲ. ಮಿಸ್ಟರ್ ಸ್ಪಿನ್ನರ್​ ಅನ್ನು ಎದುರಿಸುವುದು ಪಾಕ್ ಆಟಗಾರರಿಗೆ ಸುಲಭ.’

‘ಚಕ್ರವರ್ತಿ ಅವರನ್ನು ಮುಂದಿನ ದಿನಗಳಲ್ಲಿ ಪಾಕಿಸ್ತಾನ ವಿರುದ್ಧ ಆಡಿಸುವುದು ಕೆಟ್ಟ ನಿರ್ಧಾರ. ಹಾಗೇನಾದರು ಕಣಕ್ಕಿಳಿಸಿದರೆ ಗೆಲುವು ನಮ್ಮದೇ ಆಗಿರುತ್ತದೆ’ ಎಂದು ಸಲ್ಮಾನ್ ಬಟ್ ಹೇಳಿದ್ದಾರೆ.

Mujeeb Ur Rahman: ಸ್ಕಾಟ್ಲೆಂಡ್​ vs ಅಫ್ಘಾನಿಸ್ತಾನ್ ಪಂದ್ಯದಲ್ಲಿ ಯಾರಿಗೆ ಜಯ?: ಪಂದ್ಯಶ್ರೇಷ್ಠ ಯಾರು?

(Salman Butt saying Varun Chakaravarthy may be a mystery bowler but he was no surprise after ind vs pak match)