PAK vs NZ, T20 World Cup: ಪಾಕಿಸ್ತಾನಕ್ಕೆ ಸೇಡಿನ ಪಂದ್ಯ: ಬಾಬರ್-ಕೇನ್ ನಡುವಣ ಕಾದಾಟದ ಮೇಲೆ ಎಲ್ಲರ ಕಣ್ಣು

Pakistan vs New Zealand: ಈವರೆಗೂ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್‌ ತಂಡ ಒಟ್ಟು 24 ಮುಖಾಮುಖಿಯಾಗಿದ್ದು ಪಾಕಿಸ್ತಾನ 14 ಪಂದ್ಯಗಳಲ್ಲಿ ಜಯ ಸಾಧಿಸಿದ್ದರೆ ನ್ಯೂಜಿಲೆಂಡ್‌ 10 ಪಂದ್ಯಗಳಲ್ಲಿ ಗೆದ್ದ ಇತಿಹಾಸವಿದೆ.

PAK vs NZ, T20 World Cup: ಪಾಕಿಸ್ತಾನಕ್ಕೆ ಸೇಡಿನ ಪಂದ್ಯ: ಬಾಬರ್-ಕೇನ್ ನಡುವಣ ಕಾದಾಟದ ಮೇಲೆ ಎಲ್ಲರ ಕಣ್ಣು
Pakistan vs New Zealand
Follow us
TV9 Web
| Updated By: Vinay Bhat

Updated on: Oct 26, 2021 | 10:02 AM

ಟಿ20 ವಿಶ್ವಕಪ್​ನಲ್ಲಿಂದು (ICC T20 World Cup) ನಡೆಯಲಿರುವ ಎರಡನೇ ಪಂದ್ಯದಲ್ಲಿ ಬಾಬರ್ ಅಜಾಮ್ (Babar Azam) ನಾಯಕತ್ವದ ಪಾಕಿಸ್ತಾನ ಮತ್ತು ಕೇನ್ ವಿಲಿಯಮ್ಸನ್ (Kane Williamson) ನೇತೃತ್ವದ ನ್ಯೂಜಿಲೆಂಡ್  (Pakistan vs New Zealand) ತಂಡಗಳು ಮುಖಾಮುಖಿ ಆಗುತ್ತಿವೆ. ಕಿವೀಸ್​ಗೆ ಇದು ಮೊದಲ ಪಂದ್ಯವಾದರೆ ಪಾಕ್​ಗೆ ಎರಡನೇಯದ್ದು. ಮೊದಲ ಪಂದ್ಯದಲ್ಲಿ ಭಾರತ ವಿರುದ್ಧ 10 ವಿಕೆಟ್​ಗಳ ಅಮೋಘ ಗೆಲುವು ಸಾಧಿಸಿತ್ತು. ಮಾಜಿ ಚಾಂಪಿಯನ್‌ ಪಾಕಿಸ್ತಾನ, ಯುಎಇಯಲ್ಲಿ ಅತ್ಯುತ್ತಮ ದಾಖಲೆ ಹೊಂದಿದ್ದು, ಕಿವೀಸ್‌ ವಿರುದ್ಧವೂ ಗೆದ್ದು ಅಗ್ರಸ್ಥಾನ ಭದ್ರಪಡಿಸುವ ಯೋಚನೆಯಲ್ಲಿದೆ. ಈ ಪಂದ್ಯ ಗೆದ್ದರೆ ಪಾಕಿಸ್ತಾನ (Pakistan) ಸೆಮಿಫೈನಲ್‌ ಪ್ರವೇಶಿಸುವುದು ಬಹುತೇಕ ಖಚಿತ ಎನಿಸಲಿದೆ.

ಇದರ ಜೊತೆಗೆ ಪಾಕಿಸ್ತಾನಕ್ಕೆ ಇದು ಸೇಡಿನ ಪಂದ್ಯಕೂಡ ಆಗಿದೆ. ಯಾಕಂದ್ರೆ, ಒಂದು ತಿಂಗಳ ಹಿಂದಷ್ಟೇ ಸರಣಿಯನ್ನಾಡಲು ಪಾಕ್​ಗೆ ಬಂದಿದ್ದ, ನ್ಯೂಜಿಲೆಂಡ್​ ಸುರಕ್ಷತೆಯ ಕಾರಣ ನೀಡಿ ವಾಪಸ್​ ಆಗಿತ್ತು. ಇದು ವಿಶ್ವ ಕ್ರಿಕೆಟ್​​ ಲೋಕದಲ್ಲೇ ಪಾಕಿಸ್ತಾನ ತಲೆ ತಗ್ಗಿಸುವಂತೆ ಮಾಡಿತ್ತು. ಇದೀಗ ಆ ಅವಮಾನ ಸೇಡು ತೀರಿಸಿಕೊಳ್ಳಲು ಪಾಕ್​ ಪಡೆ ಸಜ್ಜಾಗಿದೆ.

ಎಲ್ಲಾ ವಿಭಾಗಗಳಲ್ಲಿ ಬಾಬರ್ ಪಡೆ ಬಲಿಷ್ಠವಾಗಿದೆ. ಮೊಹಮದ್‌ ರಿಜ್ವಾನ್‌ ಮತ್ತು ಬಾಬರ್ ಪಾಕ್‌ ತಂಡದ ಪ್ರಮುಖ ಬ್ಯಾಟಿಂಗ್‌ ಬಲವಾಗಿದ್ದಾರೆ. ಅನುಭವಿಗಳಾದ ಶೋಯಿಬ್‌ ಮಲಿಕ್‌, ಮೊಹಮದ್‌ ಹಫೀಜ್‌, ಫಖರ್‌ ಜಮಾನ್‌ ಸೇರಿದಂತೆ ಹಲವು ಬ್ಯಾಟಿಂಗ್‌ ತಾರೆಗಳು ತಂಡದಲ್ಲಿದ್ದಾರೆ. ಕಳೆದ ಪಂದ್ಯದಲ್ಲಿ ತಮ್ಮ ಅತ್ಯುತ್ತಮ ಬೌಲಿಂಗ್‌ ಮೂಲಕ ಭಾರತದ ಬ್ಯಾಟರ್‌ಗಳ ಬೆವರಿಳಿಸಿದ ಶಾಹೀನ್‌ ಅಫ್ರಿದಿ ಕಿವೀಸ್‌ಗೂ ಕಂಟಕವಾಗಿ ಪರಿಣಮಿಸುವ ಸಾಧ್ಯತೆ ಇದೆ. ಇವರ ಜೊತೆ ಹ್ಯಾರಿಸ್‌ ರೌಫ್‌, ಇಮಾದ್‌ ವಸೀಂ, ಶದಾಬ್‌ ಖಾನ್‌ ತಮ್ಮ ಬೌಲಿಂಗ್‌ ಅಸ್ತ್ರವನ್ನು ಪ್ರಯೋಗಿಸಲು ಕಾತರಿಸುತ್ತಿದ್ದಾರೆ.

ಇತ್ತ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಫಿಟ್ನೆಸ್ ಸಮಸ್ಯೆ ಇನ್ನು ಬಗೆ ಹರಿದಿಲ್ಲ. ಇಂಗ್ಲೆಂಡ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ವಿಲಿಯಮ್ಸನ್ ಬ್ಯಾಟಿಂಗ್ ಮಾಡಿರಲಿಲ್ಲ. ವಿಶ್ವ ದರ್ಜೆಯ ಬೌಲಿಂಗ್‌ ಪಡೆಯನ್ನು ಹೊಂದಿದ್ದರೂ ಬ್ಯಾಟಿಂಗ್‌ನಲ್ಲಿ ಸ್ಥಿರತೆ ಇಲ್ಲದಿರುವುದು ಕಿವೀಸ್‌ಗೆ ತಲೆನೋವಾಗಿ ಪರಿಣಮಿಸಿದೆ. ಟ್ರೆಂಟ್ ಬೌಲ್ಡ್, ಲಾಕಿ ಫರ್ಗ್ಯುಸನ್, ಟಿಮ್ ಸೌಥಿರಂಥ ಬಲಿಷ್ಠ ಬೌಲಿಂಗ್ ಪಡೆ ಹೊಂದಿರುವ ಕಿವೀಸ್ ತಂಡ ಪಾಕ್ ಬ್ಯಾಟರ್‌ಗಳಿಗೆ ಕಡಿವಾಣ ಹಾಕುವ ಸಾಮರ್ಥ್ಯ ಹೊಂದಿದೆ.

ಈವರೆಗೂ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್‌ ತಂಡ ಒಟ್ಟು 24 ಮುಖಾಮುಖಿಯಾಗಿದ್ದು ಪಾಕಿಸ್ತಾನ 14 ಪಂದ್ಯಗಳಲ್ಲಿ ಜಯ ಸಾಧಿಸಿದ್ದರೆ ನ್ಯೂಜಿಲೆಂಡ್‌ 10 ಪಂದ್ಯಗಳಲ್ಲಿ ಗೆದ್ದ ಇತಿಹಾಸವಿದೆ.

SA vs WI, T20 World Cup: ಟಿ20 ವಿಶ್ವಕಪ್​ನಲ್ಲಿಂದು ಸೋತವರ ಕಾಳಗ: ಚೊಚ್ಚಲ ಗೆಲುವಿಗೆ ದಕ್ಷಿಣ ಆಫ್ರಿಕಾ-ವೆಸ್ಟ್ ಇಂಡೀಸ್ ಹೋರಾಟ

Salman Butt: ಪಾಕಿಸ್ತಾನದ ಬೀದಿಯಲ್ಲಿ ಮಕ್ಕಳು ವರುಣ್ ಚಕ್ರವರ್ತಿ ರೀತಿಯ ಬೌಲಿಂಗ್​ಗೆ ಚೆನ್ನಾಗಿ ಆಡುತ್ತಾರೆ: ಪಾಕ್ ಮಾಜಿ ನಾಯಕ

(New Zealand will kick-start their ICC T20 World Cup 2021 campaign against a highly confident Pakistan side)