SA vs WI, T20 World Cup: ಟಿ20 ವಿಶ್ವಕಪ್​ನಲ್ಲಿಂದು ಸೋತವರ ಕಾಳಗ: ಚೊಚ್ಚಲ ಗೆಲುವಿಗೆ ದಕ್ಷಿಣ ಆಫ್ರಿಕಾ-ವೆಸ್ಟ್ ಇಂಡೀಸ್ ಹೋರಾಟ

South Africa vs West Indies: ಉಭಯ ತಂಡಗಳು ಈವರೆಗೆ ಟಿ20 ಕ್ರಿಕೆಟ್​ನಲ್ಲಿ ಒಟ್ಟು 15 ಬಾರಿ ಮುಖಾಮುಖಿ ಆಗಿವೆ. ಇದರಲ್ಲಿ ವೆಸ್ಟ್​ ಇಂಡೀಸ್ 6 ಪಂದ್ಯಗಳಲ್ಲಿ ಮತ್ತು ದಕ್ಷಿಣ ಆಫ್ರಿಕಾ 9 ಪಂದ್ಯಗಳಲ್ಲಿ ಗೆದ್ದ ಇತಿಹಾಸವಿದೆ.

SA vs WI, T20 World Cup: ಟಿ20 ವಿಶ್ವಕಪ್​ನಲ್ಲಿಂದು ಸೋತವರ ಕಾಳಗ: ಚೊಚ್ಚಲ ಗೆಲುವಿಗೆ ದಕ್ಷಿಣ ಆಫ್ರಿಕಾ-ವೆಸ್ಟ್ ಇಂಡೀಸ್ ಹೋರಾಟ
South Africa vs West Indies
Follow us
TV9 Web
| Updated By: Vinay Bhat

Updated on: Oct 26, 2021 | 9:13 AM

ಐಸಿಸಿ ಟಿ20 ವಿಶ್ವಕಪ್​ನಲ್ಲಿಂದು (T20 World Cup) ಎರಡು ಪಂದ್ಯಗಳು ನಡೆಯಲಿವೆ. ಮಧ್ಯಾಹ್ನ ಆರಂಭವಾಗುವ ಮೊದಲ ಕದನದಲ್ಲಿ ತೆಂಬಾ ಬವುಮಾ (Temba Bavuma) ನಾಯಕತ್ವದ ದಕ್ಷಿಣ ಆಫ್ರಿಕಾ ಮತ್ತು ಕೀರೊನ್ ಪೊಲಾರ್ಡ್ (Kieron Pollard) ನೇತೃತ್ವದ ವೆಸ್ಟ್ ಇಂಡೀಸ್ (South Africa vs West Indies) ತಂಡಗಳು ಮುಖಾಮುಖಿ ಆಗುತ್ತಿವೆ. ಮೊದಲ ಪಂದ್ಯದಲ್ಲಿ ಉಭಯ ತಂಡಗಳು ಹೀನಾಯ ಸೋಲು ಕಂಡ ಕಾರಣ ಇಂದಿನ ಪಂದ್ಯ ಗೆಲ್ಲಲೇ ಬೇಕಾಗಿದೆ. ಹೀಗಾಗಿ ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ (Dubai International Cricket Stadium) ಹೈವೋಲ್ಟೇಜ್ ಪಂದ್ಯ ನಿರೀಕ್ಷಿಸಲಾಗಿದೆ.

ಹಾಲಿ ಚಾಂಪಿಯನ್ ಪಟ್ಟ ಹೊಂದಿದ್ದರೂ ವೆಸ್ಟ್ ಇಂಡೀಸ್, ತನ್ನ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಎದುರು ಹೀನಾಯವಾಗಿ ಸೋಲು ಕಂಡಿತ್ತು. ಕೇವಲ 55 ರನ್‌ಗಳಿಗೆ ಸರ್ವಪತನ ಕಂಡಿತ್ತು. ಮತ್ತೊಂದೆಡೆ, ಆಸ್ಟ್ರೇಲಿಯಾ ಎದುರು ದಕ್ಷಿಣ ಆಫ್ರಿಕಾ ತಂಡ 20 ಓವರ್ ಪೂರ್ತಿ ಆಡಿದ್ದರೂ 118 ರನ್ ಕಲೆಹಾಕಲಷ್ಟೇ ಶಕ್ತವಾಗಿತ್ತು. ಉಭಯ ತಂಡಗಳಿಗೂ ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ವಿಭಾಗವೇ ಕೈಕೊಟ್ಟ ಪರಿಣಾಮ ಹೀನಾಯ ಸೋಲು ಕಂಡಿದ್ದವು. ಹೀಗಾಗಿ ಉಭಯ ತಂಡಗಳಲ್ಲಿ ಇಂದಿನ ಪಂದ್ಯಕ್ಕೆ ಕೆಲವು ಬದಲಾವಣೆ ನಿರೀಕ್ಷಿಸಲಾಗಿದೆ.

ವಿಂಡೀಸ್ ಪರ ಸ್ವತಃ ನಾಯಕನೇ ಫಾರ್ಮ್ ವೈಫಲ್ಯ ಅನುಭವಿಸುತ್ತಿದ್ದಾರೆ. ಸತತ ಕಳಪೆ ಬ್ಯಾಟಿಂಗ್‌ ಪ್ರದರ್ಶಿಸುತ್ತಿರುವ ಕೀರನ್‌ ಪೊಲಾರ್ಡ್‌ ಈ ಪಂದ್ಯದಲ್ಲಾದರೂ ಅಸಲಿ ಬ್ಯಾಟಿಂಗ್‌ ಶಕ್ತಿಯನ್ನು ಪ್ರದರ್ಶಿದಬೇಕಿದೆ. ಕಳೆದ ಪಂದ್ಯದಲ್ಲಿ ಕ್ರಿಸ್‌ ಗೇಲ್‌ ಹೊರತುಪಡಿಸಿ ಉಳಿದ ಬ್ಯಾಟರ್​ಗಳ ಮೊತ್ತ ಎರಡಂಕಿ ದಾಟಲಿಲ್ಲ. ಲೆಂಡ್ಲ್‌ ಸಿಮನ್ಸ್‌, ಎವಿನ್‌ ಲೆವಿಸ್‌, ನಿಕೋಲಸ್‌ ಪೂರನ್‌, ಹೆಟ್ಮೇಯರ್‌ರಂತಹ ಘಟಾನುಘಟಿ ಬ್ಯಾಟರ್‌ಗಳು ಮಿಂಚಿದರೆ ಮಾತ್ರ ತಂಡಕ್ಕೆ ಗೆಲುವು ದಕ್ಕಲಿದೆ. ಜೊತೆಗೆ, ಅನನುಭವಿ ಬೌಲಿಂಗ್‌ ಪಡೆಯೂ ಉತ್ತಮ ಪ್ರದರ್ಶನ ನೀಡಬೇಕಾದ ಅಗತ್ಯವಿದೆ.

ಇತ್ತ ಇತ್ತೀಚಿನ ಕೆಲವು ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾದ ಆರಂಭಿಕ ಬ್ಯಾಟರ್‌ಗಳು ಸತತ ವೈಫಲ್ಯ ಅನುಭವಿಸಿದ್ದಾರೆ. ಡೇವಿಡ್‌ ಮಿಲ್ಲರ್ ಒಳಗೊಂಡ ಮಧ್ಯಮ ಕ್ರಮಾಂಕವೂ ನಿರೀಕ್ಷೆಗೆ ತಕ್ಕ ಸಾಮರ್ಥ್ಯ ತೋರುತ್ತಿಲ್ಲ. ಡು ಪ್ಲೆಸಿ ಅನುಪಸ್ಥಿತಿ ತಂಡವನ್ನು ಕಾಡುತ್ತಿದ್ದು, ಕ್ವಿಂಟನ್‌ ಡಿ ಕಾಕ್‌, ಡೇವಿಡ್‌ ಮಿಲ್ಲರ್‌, ವ್ಯಾನ್‌ ಡರ್‌ ಡುಸೆನ್‌ ಹೆಚ್ಚಿನ ಜವಾಬ್ದಾರಿ ವಹಿಸಿಕೊಳ್ಳಬೇಕಿದೆ.

ಆಫ್ರಿಕಾ ತಂಡದ ಬೌಲಿಂಗ್ ವಿಭಾಗ ಬಲಿಷ್ಠವಾಗಿದೆ. ಕಗಿಸೊ ರಬಾಡ, ಆ್ಯನ್ರಿಚ್ ನಾರ್ಕಿಯಾ, ತಬ್ರೇಜ್ ಸಂಶಿ ಮತ್ತು ಕೇಶವ್ ಮಹಾರಾಜ್ ಅವರ ಬೌಲಿಂಗ್‌ನಲ್ಲಿ ಯಾವುದೇ ತಂಡದ ಬ್ಯಾಟರ್‌ಗಳನ್ನು ಕಟ್ಟಿಹಾಕುವಷ್ಟು ಬಲ ಹೊಂದಿದ್ದಾರೆ.

ಉಭಯ ತಂಡಗಳು ಈವರೆಗೆ ಟಿ20 ಕ್ರಿಕೆಟ್​ನಲ್ಲಿ ಒಟ್ಟು 15 ಬಾರಿ ಮುಖಾಮುಖಿ ಆಗಿವೆ. ಇದರಲ್ಲಿ ವೆಸ್ಟ್​ ಇಂಡೀಸ್ 6 ಪಂದ್ಯಗಳಲ್ಲಿ ಮತ್ತು ದಕ್ಷಿಣ ಆಫ್ರಿಕಾ 9 ಪಂದ್ಯಗಳಲ್ಲಿ ಗೆದ್ದ ಇತಿಹಾಸವಿದೆ.

ಪಂದ್ಯ ಆರಂಭ: ಮಧ್ಯಾಹ್ನ 3.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

Salman Butt: ಪಾಕಿಸ್ತಾನದ ಬೀದಿಯಲ್ಲಿ ಮಕ್ಕಳು ವರುಣ್ ಚಕ್ರವರ್ತಿ ರೀತಿಯ ಬೌಲಿಂಗ್​ಗೆ ಚೆನ್ನಾಗಿ ಆಡುತ್ತಾರೆ: ಪಾಕ್ ಮಾಜಿ ನಾಯಕ

Mujeeb Ur Rahman: ಸ್ಕಾಟ್ಲೆಂಡ್​ vs ಅಫ್ಘಾನಿಸ್ತಾನ್ ಪಂದ್ಯದಲ್ಲಿ ಯಾರಿಗೆ ಜಯ?: ಪಂದ್ಯಶ್ರೇಷ್ಠ ಯಾರು?

(West Indies will face South Africa in its second T20 World Cup 2021 Super 12 Group 1 match in Dubai)

ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ