Hardik Pandya: ವಿರಾಟ್ ಪಡೆಗೆ ಬಂತು ಆನೆಬಲ: ಎರಡನೇ ಪಂದ್ಯಕ್ಕೂ ಮುನ್ನ ಸಿಕ್ತು ಭರ್ಜರಿ ಗುಡ್ ನ್ಯೂಸ್
India vs New Zealand, T20 World Cup: ಪಾಕಿಸ್ತಾನ ವಿರುದ್ಧದ ಪಂದ್ಯದ ವೇಳೆ ಹಾರ್ದಿಕ್ ಪಾಂಡ್ಯ ಬಲ ಭುಜದ ಗಾಯಕ್ಕೆ ತುತ್ತಾಗಿದ್ದರು. ಸದ್ಯ ಸ್ಕ್ಯಾನ್ ವರದಿ ಬಂದಿದ್ದು, ಹಾರ್ದಿಕ್ ಸಂಪೂರ್ಣ ಫಿಟ್ ಆಗಿದ್ದಾರೆ. ಮುಂದಿನ ಪಂದ್ಯಗಳಿಗೆ ಅವರ ಲಭ್ಯತೆ ಇರಲಿದೆ ಎಂದು ಎಎನ್ಐಗೆ ಬಿಸಿಸಿಐ ಮೂಲಗಳು ತಿಳಿಸಿವೆ.
ಟಿ20 ವಿಶ್ವಕಪ್ನ (T20 World Cup) ಮೊದಲ ಪಂದ್ಯದಲ್ಲೇ ಪಾಕಿಸ್ತಾನ ವಿರುದ್ಧ ಸೋಲು ಕಂಡಿದ್ದ ಭಾರತಕ್ಕೆ (India vs Pakistan) ಅದೇದಿನ ಮತ್ತೊಂದು ಆಘಾತ ಉಂಟಾಗಿತ್ತು. ತಂಡದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya Injury) ಇಂಜುರಿಗೆ ತುತ್ತಾಗಿ ಎರಡನೇ ಇನ್ನಿಂಗ್ಸ್ನಲ್ಲಿ ಕಣಕ್ಕಿಳಿಯಲಿಲ್ಲ. ಇದರಿಂದ ಸಾಕಷ್ಟು ಆತಂಕಕ್ಕೀಡಾಗಿದ್ದ ವಿರಾಟ್ ಕೊಹ್ಲಿ (Virat Kohli) ಪಡೆಗೆ ಈಗ ನಿರಾಳವಾಗಿದೆ. ಪಾಂಡ್ಯ ಮುಂದಿನ ನ್ಯೂಜಿಲೆಂಡ್ (India vs New Zealand) ವಿರುದ್ಧದ ಪಂದ್ಯದ ಹೊತ್ತಿಗೆ ಸಂಪೂರ್ಣ ಗುಣಮುಖರಾಗಲಿದ್ದು, ಆಡುವ ಬಳಗಕ್ಕೆ ಲಭ್ಯರಾಗಲಿದ್ದಾರೆ ಎಂದು ವರದಿಯಾಗಿದೆ. ಪಾಕಿಸ್ತಾನ ವಿರುದ್ಧದ ಪಂದ್ಯದ ವೇಳೆ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಮಾಡುವಾಗ ಬಲ ಭುಜದ ಗಾಯಕ್ಕೆ ತುತ್ತಾಗಿದ್ದರು.
ಪಾಂಡ್ಯ ಹಲವಾರು ದಿನಗಳಿಂದ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದಕ್ಕಾಗಿ ಇವರು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿಯೂ ಕೆಲ ಪಂದ್ಯಗಳಲ್ಲಿ ಕಣಕ್ಕಿಳಿದಿರಲಿಲ್ಲ. ಅಷ್ಟೇ ಅಲ್ಲದೆ ಆಡಿದ ಯಾವುದೇ ಐಪಿಎಲ್ ಪಂದ್ಯಗದಲ್ಲಿಯೂ ಬೌಲಿಂಗ್ ಮಾಡಲಿಲ್ಲ. ಪಾಕಿಸ್ತಾನ ವಿರುದ್ಧ ಆಡುವ ಬಳಗದಲ್ಲಿ ಸ್ಥಾನ ಪಡೆದುಕೊಂಡ ಹಾರ್ದಿಕ್ ಅಂತಿಮ ಹಂತದಲ್ಲಿ ಬ್ಯಾಟಿಂಗ್ ಮಾಡಲು ಬಂದರು. ಆದರೆ, 8 ಎಸೆತಗಳಲ್ಲಿ 11 ರನ್ ಬಾರಿಸಿ ಬಾಬರ್ಗೆ ಕ್ಯಾಚಿತ್ತು ನಿರ್ಗಮಿಸಿದರು. ಇದೇವೇಳೆ ಅವರು ಮತ್ತೊಮ್ಮೆ ಇಂಜುರಿಗೆ ತುತ್ತಾದರು.
ಬಳಿಕ ಇವರನ್ನು ಮುನ್ನೆಚ್ಚರಿಕೆಯಾಗಿ ಸ್ಕ್ಯಾನ್ ಮಾಡಲು ಕರೆದೊಯ್ಯಲಾಗಿತ್ತು. ಹೀಗಾಗಿ ಪಾಕ್ ವಿರುದ್ಧ ಫೀಲ್ಡಿಂಗ್ ಮಾಡಲು ಇವರ ಬದಲು ಇಶಾನ್ ಕಿಶನ್ ಮೈದಾನ ಪ್ರವೇಶಿಸಬೇಕಾಗಿ ಬಂತು. ಸದ್ಯ ಸ್ಕ್ಯಾನ್ ವರದಿ ಬಂದಿದ್ದು, ಹಾರ್ದಿಕ್ ಸಂಪೂರ್ಣ ಫಿಟ್ ಆಗಿದ್ದಾರೆ. ಮುಂದಿನ ಪಂದ್ಯಗಳಿಗೆ ಅವರ ಲಭ್ಯತೆ ಇರಲಿದೆ ಎಂದು ಎಎನ್ಐಗೆ ಬಿಸಿಸಿಐ ಮೂಲಗಳು ತಿಳಿಸಿವೆ.
ಪಾಂಡ್ಯ ಬೌಲಿಂಗ್ ಮಾಡಲು ಅಸಾಧ್ಯ:
ಹೌದು, ಪಾಂಡ್ಯ ಬೌಲಿಂಗ್ ಮಾಡಲು ಅಸಾಧ್ಯ ಎಂಬುದನ್ನು ಬಹಿರಂಗ ಪಡಿಸಿದ್ದರು. ಟಿ20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಹಂತದ ಸನಿಹದ ಪಂದ್ಯಗಳಲ್ಲಿ ಬೌಲಿಂಗ್ ಮಾಡುವ ವಿಶ್ವಾಸವನ್ನು ವ್ಯಕ್ತಪಡಿಸಿದರು. ಇನ್ನೂ ಸಹ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಹಾರ್ದಿಕ್ ಪಾಂಡ್ಯ ಮುಂದಿನ ಪಂದ್ಯಗಳಲ್ಲಿ ಬೌಲಿಂಗ್ ಮಾಡಬಹುದು ಎಂಬ ಸಲಹೆಯನ್ನು ತಮ್ಮ ವೈದ್ಯಕೀಯ ತಂಡ ನೀಡಿದ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಿದ್ದಾರಂತೆ.
ಭಾನುವಾರ ನಡೆದ ಟಿ-20 ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನದ ಎದುರು ಭಾರತ ತಂಡವು ಹೀನಾಯ ಸೋಲು ಕಂಡಿತು. ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡವನ್ನು ಬಾಬರ್ ಅಜಾಮ್ ಪಡೆ 10 ವಿಕೆಟ್‌ಗಳಿಂದ ಸೋಲಿಸಿತು. ಈ ಹೀನಾಯ ಸೋಲಿನೊಂದಿಗೆ ಟೀಮ್ ಇಂಡಿಯಾಗೆ ಸಂಕಷ್ಟ ಹೆಚ್ಚಾಗಿದೆ. ಭಾರತದ ಮುಂದಿನ ಪಂದ್ಯ ಅ.31 ರಂದು ನ್ಯೂಜಿಲೆಂಡ್ ವಿರುದ್ಧ ಆಡಲಿದೆ. ಈ ಪಂದ್ಯದಲ್ಲೂ ಭಾರತ ಸೋತರೆ ಟೂರ್ನಿಯಿಂದ ಹೊರಬೀಳುವ ಭೀತಿ ಉಂಟಾಗಲಿದೆ.
PAK vs NZ, T20 World Cup: ಪಾಕಿಸ್ತಾನಕ್ಕೆ ಸೇಡಿನ ಪಂದ್ಯ: ಬಾಬರ್-ಕೇನ್ ನಡುವಣ ಕಾದಾಟದ ಮೇಲೆ ಎಲ್ಲರ ಕಣ್ಣು
(Hardik Pandya fit to face New Zealand in its next match its good news for Virat Kohli Team India)