South Africa vs West Indies, T20 World Cup 2021: ವಿಂಡೀಸ್ ವಿರುದ್ದ ದಕ್ಷಿಣ ಆಫ್ರಿಕಾಗೆ ಭರ್ಜರಿ ಜಯ

TV9 Web
| Updated By: ಝಾಹಿರ್ ಯೂಸುಫ್

Updated on:Oct 26, 2021 | 7:13 PM

South Africa vs West Indies in Kannada: ಟಿ20 ಕ್ರಿಕೆಟ್​ನಲ್ಲಿ ಉಭಯ ತಂಡಗಳು ಇದುವರೆಗೆ ಒಟ್ಟು 16 ಬಾರಿ ಮುಖಾಮುಖಿ ಆಗಿವೆ. ಇದರಲ್ಲಿ ವೆಸ್ಟ್​ ಇಂಡೀಸ್ 6 ಪಂದ್ಯಗಳಲ್ಲಿ ಗೆದ್ದರೆ,  ದಕ್ಷಿಣ ಆಫ್ರಿಕಾ 10 ಪಂದ್ಯಗಳಲ್ಲಿ ಜಯ ಸಾಧಿಸಿದೆ.

South Africa vs West Indies, T20 World Cup 2021: ವಿಂಡೀಸ್ ವಿರುದ್ದ ದಕ್ಷಿಣ ಆಫ್ರಿಕಾಗೆ ಭರ್ಜರಿ ಜಯ
South Africa vs West Indies live score

ದುಬೈನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್​ನ (T20 World Cup) 18ನೇ ಪಂದ್ಯದಲ್ಲಿ ತೆಂಬಾ ಬವುಮಾ (Temba Bavuma) ನಾಯಕತ್ವದ ದಕ್ಷಿಣ ಆಫ್ರಿಕಾ ತಂಡ ಕೀರನ್ ಪೊಲಾರ್ಡ್ (Kieron Pollard) ನೇತೃತ್ವದ ವೆಸ್ಟ್ ಇಂಡೀಸ್ (South Africa vs West Indies) ವಿರುದ್ದ ಭರ್ಜರಿ ಜಯ ಸಾಧಿಸಿದೆ. ಇದಕ್ಕೂ ಮುನ್ನ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ನಾಯಕ ಬವುಮಾ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡವು ಎವಿನ್ ಲೂಯಿಸ್ ಅವರ ಅರ್ಧಶತಕದ ನೆರವಿನಿಂದ 20 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 143 ರನ್​ ಕಲೆಹಾಕಿತು. ಈ ಸಾಧಾರಣ ಸವಾಲನ್ನು ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡವು ಏಡೆನ್ ಮಾರ್ಕ್ರಾಮ್ ಅವರ ಆಕರ್ಷಕ ಅರ್ಧಶತಕದ ನೆರವಿನಿಂದ 18.2 ಓವರ್​​ನಲ್ಲಿ 2 ವಿಕೆಟ್ ಕಳೆದುಕೊಂಡು 144 ರನ್​ಗಳಿಸಿ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು. ಈ ಸೋಲಿನೊಂದಿಗೆ ವೆಸ್ಟ್ ಇಂಡೀಸ್​ ಸತತ 2 ಪಂದ್ಯಗಳಲ್ಲಿ ಪರಾಜಯಗೊಂಡಂತಾಗಿದೆ.

ಟಿ20 ಕ್ರಿಕೆಟ್​ನಲ್ಲಿ ಉಭಯ ತಂಡಗಳು ಇದುವರೆಗೆ ಒಟ್ಟು 16 ಬಾರಿ ಮುಖಾಮುಖಿ ಆಗಿವೆ. ಇದರಲ್ಲಿ ವೆಸ್ಟ್​ ಇಂಡೀಸ್ 6 ಪಂದ್ಯಗಳಲ್ಲಿ ಗೆದ್ದರೆ,  ದಕ್ಷಿಣ ಆಫ್ರಿಕಾ 10 ಪಂದ್ಯಗಳಲ್ಲಿ ಜಯ ಸಾಧಿಸಿದೆ.

ಪಂದ್ಯ ಶ್ರೇಷ್ಠ: ಅನ್ರಿಕ್ ನೋಕಿಯಾ

ದಕ್ಷಿಣ ಆಫ್ರಿಕಾ (ಪ್ಲೇಯಿಂಗ್ 11): ತೆಂಬಾ ಬವುಮಾ (ನಾಯಕ), ರೀಜಾ ಹೆಂಡ್ರಿಕ್ಸ್, ರಾಸ್ಸಿ ವ್ಯಾನ್ ಡೆರ್ ಡುಸೆನ್, ಏಡೆನ್ ಮಾರ್ಕ್ರಾಮ್, ಹೆನ್ರಿಕ್ ಕ್ಲಾಸೆನ್ (ವಿಕೆಟ್ ಕೀಪರ್), ಡೇವಿಡ್ ಮಿಲ್ಲರ್, ಡ್ವೈನ್ ಪ್ರಿಟೋರಿಯಸ್, ಕೇಶವ್ ಮಹಾರಾಜ್, ಕಗಿಸೊ ರಬಾಡ, ಅನ್ರಿಕ್ ನೋಕಿಯಾ, ತಬ್ರೇಜ್ ಶಮ್ಸಿ

ವೆಸ್ಟ್ ಇಂಡೀಸ್ (ಪ್ಲೇಯಿಂಗ್ 11): ಲೆಂಡ್ಲ್ ಸಿಮನ್ಸ್, ಎವಿನ್ ಲೂಯಿಸ್, ಕ್ರಿಸ್ ಗೇಲ್, ಶಿಮ್ರಾನ್ ಹೆಟ್ಮೆಯರ್, ನಿಕೋಲಸ್ ಪೂರನ್ (ವಿಕೆಟ್ ಕೀಪರ್), ಕೀರನ್ ಪೊಲಾರ್ಡ್ (ನಾಯಕ), ಆಂಡ್ರೆ ರಸೆಲ್, ಡ್ವೇನ್ ಬ್ರಾವೋ, ಅಖೀಲ್ ಹೊಸೈನ್, ಹೇಡನ್ ವಾಲ್ಷ್, ರವಿ ರಾಂಪಾಲ್

LIVE NEWS & UPDATES

The liveblog has ended.
  • 26 Oct 2021 07:02 PM (IST)

    ದಕ್ಷಿಣ ಆಫ್ರಿಕಾ 8 ವಿಕೆಟ್​ಗಳ ಜಯ

    WI 143/8 (20)

    RSA 144/2 (18.2)

     

  • 26 Oct 2021 07:01 PM (IST)

    ಬಿಗ್ ಸಿಕ್ಸ್

    ರಸೆಲ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿ ಅರ್ಧಶತಕ ಪೂರೈಸಿದ ಮಾರ್ಕ್ರಾಮ್

  • 26 Oct 2021 06:59 PM (IST)

    ಕ್ರೀಸ್​ನಲ್ಲಿ ಡುಸ್ಸೆನ್-ಮಾರ್ಕ್ರಾಮ್ ಬ್ಯಾಟಿಂಗ್

    ಗೆಲ್ಲಲು 2 ಓವರ್​ನಲ್ಲಿ 7 ರನ್​ಗಳ ಅವಶ್ಯಕತೆ

    WI 143/8 (20)

    RSA 137/2 (18)

     

  • 26 Oct 2021 06:54 PM (IST)

    ಕೇವಲ 11 ರನ್​ಗಳ ಅವಶ್ಯಕತೆ

    WI 143/8 (20)

    RSA 133/2 (17)

     

  • 26 Oct 2021 06:50 PM (IST)

    ಕ್ರೀಸ್​ನಲ್ಲಿ ಡುಸ್ಸೆನ್-ಮಾರ್ಕ್ರಾಮ್ ಬ್ಯಾಟಿಂಗ್

    WI 143/8 (20)

    RSA 122/2 (16.1)

     

  • 26 Oct 2021 06:50 PM (IST)

    24 ರನ್​ಗಳ ಅವಶ್ಯಕತೆ

    ಕೊನೆಯ 4 ಓವರ್​ನಲ್ಲಿ ದಕ್ಷಿಣ ಆಫ್ರಿಕಾಗೆ 24 ರನ್​ಗಳ ಅವಶ್ಯಕತೆ

  • 26 Oct 2021 06:45 PM (IST)

    ಬ್ಯಾಕ್ ಟು ಬ್ಯಾಕ್ ಬೌಂಡರಿ

    ಬ್ರಾವೊ ಎಸೆತದಲ್ಲಿ ಸ್ಟ್ರೈಟ್ ಹಿಟ್​ ಮೂಲಕ ಮತ್ತೊಂದು ಬಾರಿಸಿದ ಡುಸ್ಸೆನ್

    RSA 119/2 (15.2)

     

  • 26 Oct 2021 06:44 PM (IST)

    ಆಕರ್ಷಕ ಬೌಂಡರಿ

    ಬ್ರಾವೊ ಎಸೆತದಲ್ಲಿ ಲೆಗ್ ಸೈಡ್​ನತ್ತ ಆಕರ್ಷಕ ಬೌಂಡರಿ ಬಾರಿಸಿದ ರಾಸ್ಸಿ ಡುಸ್ಸೆನ್

    RSA 115/2 (15.1)

     

  • 26 Oct 2021 06:40 PM (IST)

    ಮಾರ್ಕ್ರಾಮ್ ಮಾರ್ಕ್​

    ರವಿರಾಂಪಾಲ್ ಎಸೆತದಲ್ಲಿ ಭರ್ಜರಿ ಸಿಕ್ಸ್​ ಸಿಡಿಸಿದ ಏಡೆನ್ ಮಾರ್ಕ್ರಾಮ್

    RSA 108/2 (14.3)

  • 26 Oct 2021 06:36 PM (IST)

    100 ರನ್ ಪೂರೈಸಿದ ದಕ್ಷಿಣ ಆಫ್ರಿಕಾ

    RSA 100/2 (14)

     

    ಗೆಲ್ಲಲು 6 ಓವರ್​ನಲ್ಲಿ 44 ರನ್​ಗಳ ಅವಶ್ಯಕತೆ

  • 26 Oct 2021 06:32 PM (IST)

    RSA 98/2 (13)

    ಕ್ರೀಸ್​ನಲ್ಲಿ ಡುಸ್ಸೆನ್ ಹಾಗೂ ಮಾರ್ಕ್ರಾಮ್ ಬ್ಯಾಟಿಂಗ್

  • 26 Oct 2021 06:27 PM (IST)

    ಮಾರ್ಕ್ರಾಮ್ ಅಬ್ಬರ

    ಪೊಲಾರ್ಡ್​ ಎಸೆತದಲ್ಲಿ ಲೆಗ್​ ಸೈಡ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಏಡೆನ್ ಮಾರ್ಕ್ರಾಮ್

    RSA 91/2 (12)

     

  • 26 Oct 2021 06:23 PM (IST)

    ಬಿಗ್ ಸಿಕ್ಸ್

    ವಾಲ್ಷ್ ಎಸೆತದಲ್ಲಿ ಬಿಗ್ ಸಿಕ್ಸ್ ಸಿಡಿಸಿದ ಏಡೆನ್ ಮಾರ್ಕ್ರಾಮ್

    RSA 82/2 (11)

     

  • 26 Oct 2021 06:17 PM (IST)

    10 ಓವರ್ ಮುಕ್ತಾಯ

    RSA 66/2 (10)

     

    ಕ್ರೀಸ್​ನಲ್ಲಿ ರಾಸ್ಸಿ ವ್ಯಾನ್ ಡೆರ್ ಡುಸೆನ್ – ಏಡೆನ್ ಮಾರ್ಕ್ರಾಮ್ ಬ್ಯಾಟಿಂಗ್

  • 26 Oct 2021 06:13 PM (IST)

    ಹೆಂಡ್ರಿಕ್ಸ್ ಔಟ್

    ಅಖಿಲ್ ಹೊಸೈನ್ ಎಸೆತದಲ್ಲಿ  ಹೆಟ್ಮೆಯರ್​ಗೆ ಕ್ಯಾಚ್ ನೀಡಿ ಹೊರನಡೆದ ಹೆಟ್ಮೆಯರ್ (39)

    RSA 61/2 (9.2)

     

  • 26 Oct 2021 06:04 PM (IST)

    ಆಕರ್ಷಕ ಬೌಂಡರಿ

    ಬ್ರಾವೊ ಎಸೆತದಲ್ಲಿ ಆಕರ್ಷಕ ಬೌಂಡರಿ ಬಾರಿಸಿದ ಹೆಂಡ್ರಿಕ್ಸ್​

    RSA 55/1 (8)

     

  • 26 Oct 2021 05:56 PM (IST)

    ಪವರ್​ಪ್ಲೇ ಮುಕ್ತಾಯ

    RSA 42/1 (6)

     ಕ್ರೀಸ್​ನಲ್ಲಿ ಹೆಂಡ್ರಿಕ್ಸ್-ಡುಸ್ಸೆನ್ ಬ್ಯಾಟಿಂಗ್

  • 26 Oct 2021 05:51 PM (IST)

    5 ಓವರ್ ಮುಕ್ತಾಯ

    WI 143/8 (20)

    RSA 36/1 (5)

     

    ಆಂಡ್ರೆ ರಸೆಲ್ ಉತ್ತಮ ಫೀಲ್ಡಿಂಗ್ ರನೌಟ್ ಆಗಿ ಹೊರನಡೆದ ತೆಂಬಾ ಬವುಮಾ
  • 26 Oct 2021 05:18 PM (IST)

    ದಕ್ಷಿಣ ಆಫ್ರಿಕಾಗೆ 144 ರನ್​ಗಳ ಟಾರ್ಗೆಟ್​

    WI 143/8 (20)

    ವೆಸ್ಟ್​ ಇಂಡೀಸ್ ಪರ ಎವಿನ್ ಲೂಯಿಸ್ 56 ರನ್​

    ದಕ್ಷಿಣ ಆಫ್ರಿಕಾ ಪರ 3 ವಿಕೆಟ್ ಪಡೆದ ಡ್ವೈನ್ ಪ್ರಿಟೋರಿಯಸ್

  • 26 Oct 2021 05:14 PM (IST)

    ವೆಸ್ಟ್ ಇಂಡೀಸ್ ಇನಿಂಗ್ಸ್ ಅಂತ್ಯ

    WI 143/8 (20)

     

  • 26 Oct 2021 05:13 PM (IST)

    ಬ್ರಾವೊ ಬೌಂಡರಿ

    ಆಫ್​ ಸೈಡ್​ನತ್ತ ಭರ್ಜರಿ ಬೌಂಡರಿ ಬಾರಿಸಿದ ಡ್ವೇನ್ ಬ್ರಾವೊ

    WI 141/8 (19.5)

     

  • 26 Oct 2021 05:12 PM (IST)

    ಹೇಡನ್ ವಾಲ್ಷ್ ಔಟ್

    ಮೊದಲ ಎಸೆತದಲ್ಲೇ ಕ್ಯಾಚ್ ನೀಡಿ ಹೊರನಡೆ ಹೇಡನ್ ವಾಲ್ಷ್ (0)

    WI 137/8 (19.3)

     

  • 26 Oct 2021 05:11 PM (IST)

    ಪೊಲಾರ್ಡ್ ಔಟ್

    ಕ್ಯಾಚ್ ನೀಡಿ ಹೊರನಡೆದ ಕೀರನ್ ಪೊಲಾರ್ಡ್​ (4)

    WI 137/7 (19.2)

     

  • 26 Oct 2021 05:03 PM (IST)

    ರನೌಟ್

    ಡೇವಿಡ್ ಮಿಲ್ಲರ್ ಉತ್ತಮ ಫೀಲ್ಡಿಂಗ್..ಶಿಮ್ರಾನ್ ಹೆಟ್ಮೆಯರ್ (1) ರನೌಟ್

    WI 133/6 (18.4)

      

  • 26 Oct 2021 04:58 PM (IST)

    ರಸೆಲ್ ಕ್ಲೀನ್ ಬೌಲ್ಡ್

    ಅನ್ರಿಕ್ ನೋಕಿಯಾ ಎಸೆತದಲ್ಲಿ ಆಂಡ್ರೆ ರಸೆಲ್ ಕ್ಲೀನ್ ಬೌಲ್ಡ್

    WI 132/5 (18.2)

      

  • 26 Oct 2021 04:54 PM (IST)

    ಸ್ಟ್ರೈಟ್ ಹಿಟ್

    ಕೀರನ್ ಪೊಲಾರ್ಡ್ ಬ್ಯಾಟ್​ನಿಂದ ಸ್ಟ್ರೈಟ್ ಹಿಟ್ ಬೌಂಡರಿ

    WI 131/4 (18)

      

  • 26 Oct 2021 04:52 PM (IST)

    ಗೇಲ್ ಔಟ್

    ಪ್ರೆಟೊರಿಸ್ ಎಸೆತದಲ್ಲಿ ಕೀಪರ್​ಗೆ ಕ್ಯಾಚ್ ನೀಡಿದ ಕ್ರಿಸ್ ಗೇಲ್ (12)

    WI 121/4 (17.1)

     

  • 26 Oct 2021 04:46 PM (IST)

    ಪೊಲ್ಲಿ ಹಿಟ್

    ರಬಾಡ ಎಸೆತದಲ್ಲಿ ಭರ್ಜರಿ ಹೊಡೆತ ಬಾರಿಸಿದ ಕೀರನ್ ಪೊಲಾರ್ಡ್​…ಫೋರ್

    WI 117/3 (16.2)

      

  • 26 Oct 2021 04:42 PM (IST)

    ಯುನಿವರ್ಸ್ ಬಾಸ್

    ಶಮ್ಸಿ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಕ್ರಿಸ್ ಗೇಲ್

  • 26 Oct 2021 04:41 PM (IST)

    ಪೊಲಾರ್ಡ್ ಪವರ್

    ಕೀರನ್ ಪೊಲಾರ್ಡ್ ಭರ್ಜರಿ ಹೊಡೆತ…ಶಮ್ಸಿ ಎಸೆತದಲ್ಲಿ ಸಿಕ್ಸ್

    WI 101/3 (15.2)

      

  • 26 Oct 2021 04:39 PM (IST)

    15 ಓವರ್ ಮುಕ್ತಾಯ

    WI 95/3 (15)

      

  • 26 Oct 2021 04:30 PM (IST)

    ಸಿಮನ್ಸ್ ಬೌಲ್ಡ್

    ಕಗಿಸೊ ರಬಾಡ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆಗಿ ಹೊರನಡೆದ ಲಿಂಡ್ಲ್ ಸಿಮನ್ಸ್ (16)

    WI 89/3 (13.2)

      

  • 26 Oct 2021 04:28 PM (IST)

    WI 89/2 (13)

    ಕ್ರೀಸ್​ನಲ್ಲಿ ಕ್ರಿಸ್ ಗೇಲ್-ಲಿಂಡ್ಲ್ ಸಿಮನ್ಸ್ ಬ್ಯಾಟಿಂಗ್

  • 26 Oct 2021 04:24 PM (IST)

    ವಾಟ್ ಎ ಕ್ಯಾಚ್

    ಕೇಶವ್ ಮಹರಾಜ್​ ಎಸೆತದಲ್ಲಿ ಭರ್ಜರಿ ಹೊಡೆತ…ಬೌಂಡರಿ ಲೈನ್​ನಲ್ಲಿ ಡೇವಿಡ್ ಮಿಲ್ಲರ್ ಸೂಪರ್ ಕ್ಯಾಚ್…ಪೂರನ್ (12) ಔಟ್

    WI 87/2 (12.2)

     

  • 26 Oct 2021 04:20 PM (IST)

    ಪೂರನ್ ಪವರ್

    ಶಮ್ಸಿ ಎಸೆತದಲ್ಲಿ ಆಫ್​ ಸೈಡ್​ನತ್ತ ಆಕರ್ಷಕ ಬೌಂಡರಿ ಬಾರಿಸಿದ ನಿಕೋಲಸ್ ಪೂರನ್

  • 26 Oct 2021 04:17 PM (IST)

    ಲೂಯಿಸ್ ಔಟ್

    ಕೇಶವ್ ಮಹರಾಜ್ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಪ್ರಯತ್ನ…ಬೌಂಡರಿ ಲೈನ್​ನಲ್ಲಿ ಕ್ಯಾಚ್…ಎವಿನ್ ಲೂಯಿಸ್ (56) ಔಟ್.

    WI 73/1 (10.3)

     

  • 26 Oct 2021 04:15 PM (IST)

    ಲೂಯಿ-ಸಿಕ್ಸ್​

    ಕೇಶವ್ ಮಹರಾಜ್ ಎಸೆತದಲ್ಲಿ ಸಖತ್ ಸಿಕ್ಸ್ ಸಿಡಿಸಿದ ಎವಿನ್ ಲೂಯಿಸ್…ಭರ್ಜರಿ ಬ್ಯಾಟಿಂಗ್ ಮುಂದುವರೆಸಿದ ವಿಂಡೀಸ್ ಆರಂಭಿಕ

  • 26 Oct 2021 04:11 PM (IST)

    ಲೂಯಿಸ್ ಅರ್ಧಶತಕ

    ತಬ್ರೇಜ್ ಶಮ್ಸಿ ಎಸೆತದಲ್ಲಿ ಭರ್ಜರಿ ಸಿಕ್ಸ್​ ಸಿಡಿಸಿ 32 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಎವಿನ್ ಲೂಯಿಸ್

    WI 65/0 (10)

     

  • 26 Oct 2021 04:07 PM (IST)

    ಲೂಯಿಸ್ ಪವರ್ ಹಿಟ್

    ಕೇಶವ್ ಮಹರಾಜ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಎವಿನ್ ಲೂಯಿಸ್

    WI 56/0 (9)

     

  • 26 Oct 2021 03:59 PM (IST)

    WI 46/0 (7)

    ಕ್ರೀಸ್​ನಲ್ಲಿ ಲಿಂಡ್ಲ್ ಸಿಮನ್ಸ್ ಹಾಗೂ ಎವಿನ್ ಲೂಯಿಸ್ ಬ್ಯಾಟಿಂಗ್

  • 26 Oct 2021 03:56 PM (IST)

    ಪವರ್​ಪ್ಲೇ ಮುಕ್ತಾಯ

    ಮೊದಲ 6 ಓವರ್​ನಲ್ಲಿ 43 ರನ್​ ಕಲೆಹಾಕಿದ ವೆಸ್ಟ್ ಇಂಡೀಸ್ ಆರಂಭಿಕರಾದ ಲಿಂಡ್ಲ್ ಸಿಮನ್ಸ್ ಹಾಗೂ ಎವಿನ್ ಲೂಯಿಸ್

    WI 43/0 (6)

     

  • 26 Oct 2021 03:53 PM (IST)

    ಲೂಯಿಸ್ ಅಬ್ಬರ

    ಅನ್ರಿಕ್ ನೋಕಿಯಾ ಎಸೆತದಲ್ಲಿ ಭರ್ಜರಿ ಹೊಡೆತ…ಚೆಂಡು ಒಂದು ಪಿಚ್ ಆಗಿ ಬೌಂಡರಿಗೆ…ಫೋರ್

  • 26 Oct 2021 03:50 PM (IST)

    ಬ್ಯಾಕ್ ಟು ಬ್ಯಾಕ್ ಸಿಕ್ಸ್

    ಲೂಯಿಸ್ ಅಬ್ಬರ ಶುರು…ಮಾರ್ಕ್ರಮ್ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಸಿಕ್ಸ್ ಸಿಡಿಸಿದ ಎವಿನ್ ಲೂಯಿಸ್…ಕೊನೆಯ ಎಸೆತದಲ್ಲಿ ಮತ್ತೊಂದು ಬೌಂಡರಿ.

    WI 36/0 (5)

     

  • 26 Oct 2021 03:49 PM (IST)

    ವಾಟ್ ಎ ಶಾಟ್

    ಎವಿನ್ ಲೂಯಿಸ್ ಅಬ್ಬರ…ಮಾರ್ಕ್ರಾಮ್ ಎಸೆತದಲ್ಲಿ ಲೆಗ್ ಸೈಡ್​ನತ್ತ ಬಿಗ್ ಸಿಕ್ಸ್​ ಸಿಡಿಸಿದ ಲೂಯಿಸ್

  • 26 Oct 2021 03:46 PM (IST)

    ಭರ್ಜರಿ ಸಿಕ್ಸ್​

    ರಬಾಡ ಎಸೆತದಲ್ಲಿ ಸ್ಟ್ರೈಟ್ ಹಿಟ್ ಸಿಕ್ಸ್​ ಸಿಡಿಸಿದ ಎವಿನ್ ಲೂಯಿಸ್

    WI- 18/0 (4)

     

  • 26 Oct 2021 03:45 PM (IST)

    ಮೊದಲ ಬೌಂಡರಿ

    ರಬಾಡ ಎಸೆತದಲ್ಲಿ ಆಫ್​ ಸೈಡ್​ನತ್ತ ಭರ್ಜರಿ ಬೌಂಡರಿ ಬಾರಿಸಿದ ಎಡಗೈ ದಾಂಡಿಗ ಎವಿನ್ ಲೂಯಿಸ್

  • 26 Oct 2021 03:41 PM (IST)

    3 ಓವರ್ ಮುಕ್ತಾಯ

    ಕ್ರೀಸ್​ನಲ್ಲಿ ಲಿಂಡ್ಲ್ ಸಿಮನ್ಸ್ ಹಾಗೂ ಎವಿನ್ ಲೂಯಿಸ್ ಬ್ಯಾಟಿಂಗ್

    WI- 6/0 (3)

     

  • 26 Oct 2021 03:34 PM (IST)

    ಮೊದಲ ಓವರ್ ಮುಕ್ತಾಯ

    WI 4/0 (1)

  • 26 Oct 2021 03:32 PM (IST)

    ವೆಸ್ಟ್ ಇಂಡೀಸ್ ಇನಿಂಗ್ಸ್​ ಆರಂಭ

    ಆರಂಭಿಕರು: ಲಿಂಡ್ಲ್​ ಸಿಮನ್ಸ್, ಎವಿನ್ ಲೂಯಿಸ್

    ಮೊದಲ ಓವರ್: ಏಡೇನ್ ಮಾರ್ಕ್ರಾಮ್

  • 26 Oct 2021 03:08 PM (IST)

    ವೆಸ್ಟ್ ಇಂಡೀಸ್ ಪ್ಲೇಯಿಂಗ್ ಇಲೆವೆನ್

    ವೆಸ್ಟ್ ಇಂಡೀಸ್ (ಪ್ಲೇಯಿಂಗ್ 11): ಲೆಂಡ್ಲ್ ಸಿಮನ್ಸ್, ಎವಿನ್ ಲೂಯಿಸ್, ಕ್ರಿಸ್ ಗೇಲ್, ಶಿಮ್ರಾನ್ ಹೆಟ್ಮೆಯರ್, ನಿಕೋಲಸ್ ಪೂರನ್ (ವಿಕೆಟ್ ಕೀಪರ್), ಕೀರನ್ ಪೊಲಾರ್ಡ್ (ನಾಯಕ), ಆಂಡ್ರೆ ರಸೆಲ್, ಡ್ವೇನ್ ಬ್ರಾವೋ, ಅಖೀಲ್ ಹೊಸೈನ್, ಹೇಡನ್ ವಾಲ್ಷ್, ರವಿ ರಾಂಪಾಲ್

  • 26 Oct 2021 03:07 PM (IST)

    ದಕ್ಷಿಣ ಆಫ್ರಿಕಾ ಪ್ಲೇಯಿಂಗ್ ಇಲೆವೆನ್

    ದಕ್ಷಿಣ ಆಫ್ರಿಕಾ (ಪ್ಲೇಯಿಂಗ್ 11): ತೆಂಬಾ ಬವುಮಾ (ನಾಯಕ), ರೀಜಾ ಹೆಂಡ್ರಿಕ್ಸ್, ರಾಸ್ಸಿ ವ್ಯಾನ್ ಡೆರ್ ಡುಸೆನ್, ಏಡೆನ್ ಮಾರ್ಕ್ರಾಮ್, ಹೆನ್ರಿಕ್ ಕ್ಲಾಸೆನ್ (ವಿಕೆಟ್ ಕೀಪರ್), ಡೇವಿಡ್ ಮಿಲ್ಲರ್, ಡ್ವೈನ್ ಪ್ರಿಟೋರಿಯಸ್, ಕೇಶವ್ ಮಹಾರಾಜ್, ಕಗಿಸೊ ರಬಾಡ, ಅನ್ರಿಕ್ ನೋಕಿಯಾ, ತಬ್ರೇಜ್ ಶಮ್ಸಿ

    – ಕ್ವಿಂಟನ್ ಡಿಕಾಕ್ ಬದಲಿಗೆ ರೀಜಾ ಹೆಂಡ್ರಿಕ್ಸ್​ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ.

  • 26 Oct 2021 03:03 PM (IST)

    ಟಾಸ್ ಗೆದ್ದ ದಕ್ಷಿಣ ಆಫ್ರಿಕಾ

    ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ನಾಯಕ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

  • 26 Oct 2021 02:50 PM (IST)

    ದಕ್ಷಿಣ ಆಫ್ರಿಕಾ-ವೆಸ್ಟ್​ ಇಂಡೀಸ್ ಮುಖಾಮುಖಿ

    ಟಿ20 ಕ್ರಿಕೆಟ್​ನಲ್ಲಿ ಉಭಯ ತಂಡಗಳು ಇದುವರೆಗೆ ಒಟ್ಟು 15 ಬಾರಿ ಮುಖಾಮುಖಿ ಆಗಿವೆ. ಇದರಲ್ಲಿ ವೆಸ್ಟ್​ ಇಂಡೀಸ್ 6 ಪಂದ್ಯಗಳಲ್ಲಿ ಗೆದ್ದರೆ,  ದಕ್ಷಿಣ ಆಫ್ರಿಕಾ 9 ಪಂದ್ಯಗಳಲ್ಲಿ ಜಯ ಸಾಧಿಸಿದೆ.

  • 26 Oct 2021 02:48 PM (IST)

    ಡಬಲ್ ಹೆಡ್ಡರ್: ಎರಡನೇ ಪಂದ್ಯ

    2ನೇ ಪಂದ್ಯದಲ್ಲಿ ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ್ ಮುಖಾಮುಖಿಯಾಗಲಿದೆ. ಈ ಪಂದ್ಯವು ಸಂಜೆ 7.30ಕ್ಕೆ ಶುರುವಾಗಲಿದೆ.

  • 26 Oct 2021 02:47 PM (IST)

    ಡಬಲ್ ಹೆಡ್ಡರ್: ಮೊದಲ ಪಂದ್ಯ

    ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ-ವೆಸ್ಟ್​ ಇಂಡೀಸ್ ಮುಖಾಮುಖಿಯಾಗಲಿದೆ. ಈ ಪಂದ್ಯ 3.30 ಕ್ಕೆ ಶುರುವಾಗಲಿದೆ.

  • 26 Oct 2021 02:45 PM (IST)

    ಟಿ20 ವಿಶ್ವಕಪ್​ನಲ್ಲಿ ಇಂದು ಡಬಲ್ ಹೆಡ್ಡರ್

  • Published On - Oct 26,2021 2:41 PM

    Follow us
    ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
    ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
    ‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
    ‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
    ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
    ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
    ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
    ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
    ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
    ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
    ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
    ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
    ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
    ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
    ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
    ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
    ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
    ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
    ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
    ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು