T20 world cup 2021: ನ್ಯೂಜಿಲೆಂಡ್ ವಿರುದ್ದ ಪಾಕ್ ಗೆದ್ದರೆ ಭಾರತಕ್ಕೆ ಹೆಚ್ಚಿನ ಲಾಭ..!
Team India: ಪಾಕಿಸ್ತಾನ ತಂಡ ಇಂದು ನ್ಯೂಜಿಲೆಂಡ್ ತಂಡವನ್ನು ಸೋಲಿಸಿದರೆ ಕಿವೀಸ್ ತಂಡಕ್ಕೆ ದೊಡ್ಡ ಹೊಡೆತ ಬೀಳಲಿದೆ. ಏಕೆಂದರೆ ನಮೀಬಿಯಾ ಹಾಗೂ ಸ್ಕಾಟ್ಲೆಂಡ್ ತಂಡಗಳ ವಿರುದ್ದ ಪಾಕ್ ತಂಡದ ಗೆಲುವನ್ನು ನಿರೀಕ್ಷಿಸಬಹುದು.
ಟಿ20 ವಿಶ್ವಕಪ್ನ (T20 world cup 2021) 19ನೇ ಪಂದ್ಯದಲ್ಲಿ ಪಾಕಿಸ್ತಾನ್ ತಂಡವು ನ್ಯೂಜಿಲೆಂಡ್ ಅನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಪಾಕಿಸ್ತಾನ್ ತಂಡವು ಗೆದ್ದರೆ ಟೀಮ್ ಇಂಡಿಯಾಗೆ (Team India) ಹೆಚ್ಚಿನ ಪ್ರಯೋಜನವಾಗಲಿದೆ. ಏಕೆಂದರೆ ಭಾರತ, ನ್ಯೂಜಿಲೆಂಡ್, ಪಾಕಿಸ್ತಾನ್, ಅಫ್ಘಾನಿಸ್ತಾನ್, ನಮೀಬಿಯಾ ಹಾಗೂ ಸ್ಕಾಟ್ಲೆಂಡ್ ತಂಡಗಳು ಗ್ರೂಪ್ 2 ನಲ್ಲಿದೆ. ಈ ಗ್ರೂಪ್ನಿಂದ 2 ತಂಡಗಳು ಸೆಮಿ ಫೈನಲ್ಗೇರಲಿದೆ. ಅಂದರೆ ಗ್ರೂಪ್-2ನ ಬಲಿಷ್ಠ ತಂಡಗಳೆಂದರೆ ಭಾರತ, ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ್. ಹೀಗಾಗಿ ಅಗ್ರಸ್ಥಾನಕ್ಕೇರಲು ಈ ಮೂರು ತಂಡಗಳಲ್ಲೇ ಹೆಚ್ಚಿನ ಪೈಪೋಟಿ ಇರಲಿದೆ. ಈಗಾಗಲೇ ಪಾಕಿಸ್ತಾನ್ ವಿರುದ್ದ ಭಾರತ ತಂಡ ಸೋಲನುಭವಿಸಿದೆ. ಇತ್ತ ನ್ಯೂಜಿಲೆಂಡ್ ಮೊದಲ ಪಂದ್ಯವನ್ನು ಪಾಕ್ ವಿರುದ್ದ ಆಡುತ್ತಿರುವುದು ವಿಶೇಷ.
ಅಂದರೆ ಗ್ರೂಪ್-2 ನಿಂದ ಯಾವುದೇ ಒಂದು ತಂಡವು ಗರಿಷ್ಠ 10 ಅಂಕಗಳನ್ನು ಗಳಿಸಬಹುದು. ಪಾಕಿಸ್ತಾನ್ ಮತ್ತು ನ್ಯೂಜಿಲೆಂಡ್‌ಗೆ ಇನ್ನೂ 10 ಅಂಕ ತಲುಪುವ ಅವಕಾಶವಿದೆ. ಇದಕ್ಕಾಗಿ ತಮ್ಮ ಎಲ್ಲಾ ಪಂದ್ಯಗಳನ್ನು ಗೆಲ್ಲಬೇಕು. ಆದರೆ ಮೊದಲ ಪಂದ್ಯದಲ್ಲಿ ಸೋತಿರುವ ಭಾರತಕ್ಕೆ 10 ಅಂಕ ಗಳಿಸಲು ಸಾಧ್ಯವಿಲ್ಲ. ಈಗಾಗಲೇ ಪಾಕ್ ವಿರುದ್ದ ಭಾರತ ಸೋತಿರುವ ಕಾರಣ, ಪಾಕಿಸ್ತಾನ್ 10 ಅಂಕಗಳಿಸುವುದು ಟೀಮ್ ಇಂಡಿಯಾ ಸೆಮಿ ಫೈನಲ್ ರೇಸ್ಗೆ ಉತ್ತಮ.
ಏಕೆಂದರೆ ಪಾಕಿಸ್ತಾನ್ ತಂಡ ಕೇನ್ ವಿಲಿಯಮ್ಸನ್ ಪಡೆಯನ್ನು ಸೋಲಿಸಿದರೆ, ನ್ಯೂಜಿಲೆಂಡ್ ತಂಡಕ್ಕೂ 10 ಅಂಕಗಳಿಸಲು ಸಾಧ್ಯವಾಗುವುದಿಲ್ಲ. ಹಾಗಾದ್ರೆ ಭಾರತ ಮತ್ತು ನ್ಯೂಜಿಲೆಂಡ್ ಎರಡೂ ತಂಡಗಳು ಗರಿಷ್ಠ 8-8 ಅಂಕಗಳ ಗುರಿ ಹೊಂದಲಿದೆ. ಹೀಗಾಗಿ ಗ್ರೂಪ್-2 ನಲ್ಲಿ ಒಂದು ತಂಡ 10 ಅಂಕ ಗಳಿಸಿದರೂ 8 ಅಂಕಗಳೊಂದಿಗೆ 2ನೇ ಸ್ಥಾನ ಪಡೆಯುವ ಅವಕಾಶ ಟೀಮ್ ಇಂಡಿಯಾ ಹಾಗೂ ನ್ಯೂಜಿಲೆಂಡ್‌ಗೆ ಲಭಿಸಲಿದೆ. ಅದರಲ್ಲೂ ಭಾರತದ ಮುಂದಿನ ಪಂದ್ಯ ನ್ಯೂಜಿಲೆಂಡ್ ವಿರುದ್ದ. ಅದರಲ್ಲಿ ನ್ಯೂಜಿಲೆಂಡ್‌ಗೆ ಟೀಮ್ ಇಂಡಿಯಾ ಸೋಲುಣಿಸಿದರೆ ಮುಂದಿನ ಹಾದಿ ಇನ್ನಷ್ಟು ಸುಲಭವಾಗಲಿದೆ.
ಪಾಕಿಸ್ತಾನ ತಂಡ ಇಂದು ನ್ಯೂಜಿಲೆಂಡ್ ತಂಡವನ್ನು ಸೋಲಿಸಿದರೆ ಕಿವೀಸ್ ತಂಡಕ್ಕೆ ದೊಡ್ಡ ಹೊಡೆತ ಬೀಳಲಿದೆ. ಏಕೆಂದರೆ ನಮೀಬಿಯಾ ಹಾಗೂ ಸ್ಕಾಟ್ಲೆಂಡ್ ತಂಡಗಳ ವಿರುದ್ದ ಪಾಕ್ ತಂಡದ ಗೆಲುವನ್ನು ನಿರೀಕ್ಷಿಸಬಹುದು. ಇಂದು ನ್ಯೂಜಿಲೆಂಡ್ ವಿರುದ್ದ ಗೆದ್ದರೆ ಪಾಕಿಸ್ತಾನ್ ಸೆಮಿಫೈನಲ್ಗೇರುವ ಸಾಧ್ಯತೆ ಹೆಚ್ಚಿದೆ. ಹಾಗೆಯೇ ನ್ಯೂಜಿಲೆಂಡ್ ವಿರುದ್ದ ಭಾರತ ಕೂಡ ಗೆದ್ದು, ಉಳಿದ ಎಲ್ಲಾ ಪಂದ್ಯಗಳಲ್ಲಿ ಜಯ ಸಾಧಿಸಿದರೆ ಟೀಮ್ ಇಂಡಿಯಾ 8 ಅಂಕ ಪಡೆಯಲಿದೆ. ಇತ್ತ ಪಾಕ್ ಹಾಗೂ ಟೀಮ್ ಇಂಡಿಯಾ ವಿರುದ್ದ ನ್ಯೂಜಿಲೆಂಡ್ ಸೋತರೆ ಅಂತಿಮವಾಗಿ 6 ಅಂಕಗಳನ್ನು ಮಾತ್ರ ಪಡೆಯಲು ಸಾಧ್ಯವಾಗಲಿದೆ. ಇದರಿಂದ ಗ್ರೂಪ್-2 ನಲ್ಲಿ ನ್ಯೂಜಿಲೆಂಡ್ 2ನೇ ಸ್ಥಾನ ಪಡೆಯಲು ಸಾಧ್ಯವಾಗುವುದಿಲ್ಲ. ಹೀಗಾಗಿ ನ್ಯೂಜಿಲೆಂಡ್ ವಿರುದ್ದ ಪಾಕಿಸ್ತಾನ್ ಗೆದ್ದರೆ ಸೆಮಿ ಫೈನಲ್ ಹಂತ ಪ್ರವೇಶಿಸಲು ಟೀಮ್ ಇಂಡಿಯಾಗೆ ಸುಲಭವಾಗಲಿದೆ.
ಇದನ್ನೂ ಓದಿ: ಪಂದ್ಯ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾ ಆಟಗಾರರು ಮಂಡಿಯೂರಿದ್ದು ಯಾಕೆ ಗೊತ್ತಾ?
ಇದನ್ನೂ ಓದಿ: Virat Kohli: ಸೋತರೂ ಟಿ20 ವಿಶ್ವಕಪ್ನಲ್ಲಿ ವಿಶ್ವ ದಾಖಲೆ ಬರೆದ ವಿರಾಟ್ ಕೊಹ್ಲಿ
ಇದನ್ನೂ ಓದಿ: T20 World Cup 2021: ಟಿ20 ರ್ಯಾಂಕಿಂಗ್ನಲ್ಲಿ ನಂಬರ್ 1 ತಂಡ ಯಾವುದು ಗೊತ್ತಾ?
(T20 world cup 2021: indian fans may support pakistan against new zealand)