Mujeeb Ur Rahman: ಸ್ಕಾಟ್ಲೆಂಡ್​ vs ಅಫ್ಘಾನಿಸ್ತಾನ್ ಪಂದ್ಯದಲ್ಲಿ ಯಾರಿಗೆ ಜಯ?: ಪಂದ್ಯಶ್ರೇಷ್ಠ ಯಾರು?

Afghanistan vs Scotland, T20 World Cup: 191 ರನ್‌ಗಳ ಗೆಲುವಿನ ಗುರಿಬೆನ್ನತ್ತಿದ ಸ್ಕಾಟ್ಲೆಂಡ್ 60 ರನ್‌ಗಳಿಗೆ ಆಲೌಟಾಯಿತು. 20 ರನ್‌ಗಳಿಗೆ ಐದು ವಿಕೆಟ್ ಉರುಳಿಸಿದ ಮುಜೀಬ್ ಉರ್ ರೆಹಮಾನ್ ಸ್ಕಾಟ್ಲೆಂಡ್ ಇನಿಂಗ್ಸ್‌ಗೆ ಅಂತ್ಯ ಹಾಡಿದರು.

Mujeeb Ur Rahman: ಸ್ಕಾಟ್ಲೆಂಡ್​ vs ಅಫ್ಘಾನಿಸ್ತಾನ್ ಪಂದ್ಯದಲ್ಲಿ ಯಾರಿಗೆ ಜಯ?: ಪಂದ್ಯಶ್ರೇಷ್ಠ ಯಾರು?
Afghanistan vs Scotland
Follow us
TV9 Web
| Updated By: Vinay Bhat

Updated on:Oct 26, 2021 | 7:13 AM

ಐಸಿಸಿ ಟ್ವೆಂಟಿ-20 ವಿಶ್ವಕಪ್ (ICC T20 World Cup) ಟೂರ್ನಿಯಲ್ಲಿ ಸೋಮವಾರ ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಸೂಪರ್-12 (Supr 12) ಹಂತದ ಎರಡನೇ ಗುಂಪಿನ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ಧ ಅಫ್ಘಾನಿಸ್ತಾನ್ (Afghanistan vs Scotland) ತಂಡ 130 ರನ್ ಅಂತರದ ದೊಡ್ಡ ಗೆಲುವು ದಾಖಲಿಸಿದೆ. ಅಫ್ಘಾನ್​ನ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಅಮೋಘ ಆಟ ಬಳಿಕ ಬೌಲರ್‌ಗಳ ಬಿಗು ದಾಳಿಯಿಂದ ಸ್ಕಾಟ್ಲೆಂಡ್‌ ನೆಲಕಚ್ಚಿ ಹೋಯಿತು. ಈ ಮೂಲಕ ಅಭ್ಯಾಸ ಪಂದ್ಯದಲ್ಲಿ ಅಬ್ಬರಿಸಿದ್ದ ಸ್ಕಾಟ್ಲೆಂಡ್ ಸೂಪರ್ 12 ಹಂತದ ಮೊದಲ ಪಂದ್ಯದಲ್ಲೇ ಹೀನಾಯ ಪ್ರದರ್ಶನ ತೋರಿದೆ. ಇತ್ತ ನಬಿ ಪಡೆ ಬೊಂಬಾಟ್ ಆಗಿ ಶುಭಾರಂಭ ಮಾಡಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ನಡೆಸಿದ ಅಫ್ಘಾನಿಸ್ಥಾನ 4 ವಿಕೆಟಿಗೆ 190 ರನ್‌ ಪೇರಿಸಿತು. ಬಳಿಕ ಗುರಿ ಬೆನ್ನತ್ತಿದ ಸ್ಕಾಟ್ಲೆಂಡ್‌ ಮುಜೀಬ್‌ ಉರ್‌ ರೆಹಮಾನ್‌ ಮತ್ತು ರಶೀದ್‌ ಖಾನ್‌ ಸ್ಪಿನ್‌ ದಾಳಿಗೆ ತತ್ತರಿಸಿ 10.2 ಓವರ್‌ಗಳಲ್ಲಿ 60 ರನ್‌ಗಳಿಗೆ ಸರ್ವಪತನ ಕಂಡಿತು. ಚುಟುಕು ಕ್ರಿಕೆಟ್‌ನಲ್ಲಿ ಜೀವನಶ್ರೇಷ್ಠ ಬೌಲಿಂಗ್ ಸಾಧನೆ ಮಾಡಿದ ಮುಜೀಬ್ ಉರ್ ರೆಹಮಾನ್ ಎದುರಾಳಿಗೆ ಕಂಟಕವಾಗಿ ಪರಿಣಮಿಸಿದರು.

ಹಜ್ರತುಲ್ಲ ಜಜಾಯ್‌ (44) ಮತ್ತು ಕೀಪರ್‌ ಮೊಹಮ್ಮದ್‌ ಶಾಜಾದ್‌ (22) ಅಫ್ಘಾನಿಸ್ಥಾನಕ್ಕೆ ಬಿರುಸಿನ ಆರಂಭವಿತ್ತರು. ಪವರ್‌ ಪ್ಲೇಯಲ್ಲಿ ಮುನ್ನುಗ್ಗಿ ಬಾರಿಸಿದರು. 5.5 ಓವರ್‌ಗಳಿಂದ ಮೊದಲ ವಿಕೆಟಿಗೆ 54 ರನ್‌ ಒಟ್ಟುಗೂಡಿತು. ಸಫ್ಯಾನ್‌ ಶರೀಫ್ ಸ್ಕಾಟ್ಲೆಂಡ್‌ಗೆ ಮೊದಲ ಬ್ರೇಕ್‌ ಒದಗಿಸಿದರು. ಆಗ ಶಾಜಾದ್‌ ವಿಕೆಟ್‌ ಉರುಳಿತು. ಇನ್ನೊಂದೆಡೆ ಜಜಾಯ್‌ ಬಿರುಸಿನ ಆಟ ಮುಂದುವರಿಸಿ 30 ಎಸೆತಗಳಿಂದ 44 ರನ್‌ ಚಚ್ಚಿದರು. ಸಿಡಿಸಿದ್ದು 3 ಸಿಕ್ಸರ್‌ ಹಾಗೂ 3 ಬೌಂಡರಿ.

ನಂತರ ಗುರ್ಬಾಜ್ ಮತ್ತು ಜದ್ರಾನ್ ಜೋಡಿ ಸ್ಫೋಟಕ ಬ್ಯಾಟಿಂಗ್ ಮೂಲಕ ಬೌಲರ್‌ಗಳನ್ನು ಕಂಗೆಡಿದರು. ಮೂರನೇ ವಿಕೆಟ್‌ಗೆ ಇವರಿಬ್ಬರು 87 ರನ್ ಕಲೆ ಹಾಕಿದರು. ಕೊನೆಯ ಓವರ್‌ಗಳಲ್ಲಿ ಜದ್ರಾನ್ ಮತ್ತಷ್ಟು ಆಕ್ರಮಣಕಾರಿಯಾದರು. ಐದು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳು ಅವರ ಬ್ಯಾಟಿನಿಂದ ಹರಿದು ಬಂದವು. ಇನಿಂಗ್ಸ್‌ನ ಕೊನೆಯ ಎಸೆತದಲ್ಲಿ ಜದ್ರಾನ್ ಔಟಾದರು.

191 ರನ್‌ಗಳ ಗೆಲುವಿನ ಗುರಿಬೆನ್ನತ್ತಿದ ಸ್ಕಾಟ್ಲೆಂಡ್ 60 ರನ್‌ಗಳಿಗೆ ಆಲೌಟಾಯಿತು. 20 ರನ್‌ಗಳಿಗೆ ಐದು ವಿಕೆಟ್ ಉರುಳಿಸಿದ ಮುಜೀಬ್ ಮತ್ತು ಒಂಬತ್ತಕ್ಕೆ ನಾಲ್ಕು ವಿಕೆಟ್ ಕಬಳಿಸಿದ ರಶೀದ್ ಖಾನ್ 10.2 ಓವರ್‌ಗಳಲ್ಲಿ ಸ್ಕಾಟ್ಲೆಂಡ್ ಇನಿಂಗ್ಸ್‌ಗೆ ಅಂತ್ಯ ಹಾಡಿದರು. ಐದು ಮಂದಿ ಬ್ಯಾಟರ್‌ಗಳು ಶೂನ್ಯಕ್ಕೆ ಔಟಾದರೆ, ಮೂವರು ಮಾತ್ರ ಎರಡಂಕಿ ಮೊತ್ತ ದಾಟಿದರು.

ಸತತ ಎರಡು ಎಸೆತಗಳಲ್ಲಿ ಎರಡು ವಿಕೆಟ್ ಸೇರಿದಂತೆ ಒಂದೇ ಓವರ್‌ನಲ್ಲಿ ಮೂರು ವಿಕೆಟ್ ಉರುಳಿಸಿದ ಮುಜೀಬ್ ತಂಡಕ್ಕೆ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಅತಿ ದೊಡ್ಡ ಅಂತರದ ಜಯದ ಕೊಡುಗೆ ನೀಡಿದರು.+

ಪಂದ್ಯಶ್ರೇಷ್ಠ: ಮುಜೀಬ್ ಉರ್ ರೆಹಮಾನ್

ಸಂಕ್ಷಿಪ್ತ ಸ್ಕೋರ್‌:

ಅಫ್ಘಾನಿಸ್ಥಾನ್: 190/4 (ಜದ್ರಾನ್‌ 59, ಗುರ್ಬಜ್‌ 46, ಜಜಾಯ್‌ 44, ಶರೀಫ್ 33ಕ್ಕೆ 2)

ಸ್ಕಾಟ್ಲೆಂಡ್‌ 60/10 (10.2 ಓವರ್‌ಗಳಲ್ಲಿ) (ಜಾರ್ಜ್‌ ಮುನ್ಸಿ 25, ಮುಜೀಬ್‌ 20ಕ್ಕೆ 5, ರಶೀದ್‌ 9ಕ್ಕೆ 4)

T20 World Cup 2021: ವಿ ಲವ್ ಯೂ ಶಮಿ ಎಂದ ಟೀಮ್ ಇಂಡಿಯಾ ಕ್ರಿಕೆಟಿಗರು: ಕಾರಣವೇನು ಗೊತ್ತಾ?

(Mujeeb Ur Rahman career-best bowling figures helps Afghanistan 130-run victory over Scotland)

Published On - 7:11 am, Tue, 26 October 21

ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ