Mohammed Shami: 2019ರ ಸೆಮಿಫೈನಲ್​ನಲ್ಲಿ ನನ್ನನ್ನೇಕೆ ಕೂರಿಸಿದ್ರು ಅಂತ ಈಗಲೂ ಗೊತ್ತಿಲ್ಲ..!

Mohammed Shami: ಏಕದಿನ ವಿಶ್ವಕಪ್ 2023 ವೇಳೆ ಗಾಯಗೊಂಡಿದ್ದ ಮೊಹಮ್ಮದ್ ಶಮಿ ನೋವು ನಿವಾರಕ ಮಾತ್ರೆಗಳನ್ನು ಸೇವಿಸಿ ಟೂರ್ನಿಯಲ್ಲಿ ಕಣಕ್ಕಿಳಿದಿದ್ದರು. ಪರಿಣಾಮ ಅವರ ಪಾದದ ಗಾಯವು ಬಿಗಡಾಯಿಸಿತ್ತು. ಹೀಗಾಗಿ ಅವರು ಸರ್ಜರಿಗೆ ಒಳಗಾಗಿದ್ದರು. ಇದೇ ಕಾರಣದಿಂದಾಗಿ ಕಳೆದ ಕೆಲ ತಿಂಗಳಿಂದ ಮೊಹಮ್ಮದ್ ಶಮಿ ಭಾರತ ತಂಡದಲ್ಲಿ ಕಾಣಿಸಿಕೊಂಡಿಲ್ಲ.

Mohammed Shami: 2019ರ ಸೆಮಿಫೈನಲ್​ನಲ್ಲಿ ನನ್ನನ್ನೇಕೆ ಕೂರಿಸಿದ್ರು ಅಂತ ಈಗಲೂ ಗೊತ್ತಿಲ್ಲ..!
Mohammed Shami
Follow us
ಝಾಹಿರ್ ಯೂಸುಫ್
|

Updated on: Jul 20, 2024 | 3:09 PM

2019ರ ಏಕದಿನ ವಿಶ್ವಕಪ್​ನ ಮೊದಲ ಸೆಮಿಫೈನಲ್​ ಪಂದ್ಯ. ಈ ಪಂದ್ಯದಲ್ಲಿ ಭಾರತ ಮತ್ತು ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾಗಿದ್ದವು. ಮ್ಯಾಂಚೆಸ್ಟ್​ನ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಝಿಲೆಂಡ್ ತಂಡವು ಬ್ಯಾಟಿಂಗ್ ಆಯ್ದುಕೊಂಡಿತು. ಅದರಂತೆ ಕಣಕ್ಕಿಳಿದ ಟೀಮ್ ಇಂಡಿಯಾ ಪರ ಪ್ರಮುಖ ವೇಗಿ ಮೊಹಮ್ಮದ್ ಶಮಿ ಕಾಣಿಸಿಕೊಂಡಿರಲಿಲ್ಲ. ಅಂದರೆ ಶಮಿಗೆ ಆಡುವ ಬಳಗದಲ್ಲಿ ಚಾನ್ಸ್ ನೀಡಲಾಗಿರಲಿಲ್ಲ.

ಆದರೆ ಈ ಪಂದ್ಯಕ್ಕೂ ಮುನ್ನ ಮೊಹಮ್ಮದ್ ಶಮಿ ಉತ್ತಮ ಪ್ರದರ್ಶನ ನೀಡಿದ್ದರು. ಇದಾಗ್ಯೂ ಸೆಮಿಫೈನಲ್​ ಪಂದ್ಯದಿಂದ ನನ್ನನ್ನು ಯಾಕಾಗಿ ಕೈ ಬಿಟ್ಟಿದ್ದರು ಎಂಬುದು ಈಗಲೂ ಗೊತ್ತಿಲ್ಲ ಎಂದು ಶಮಿ ಹೇಳಿದ್ದಾರೆ.

ಶುಭಂಕರ್ ಮಿಶ್ರಾ ಅವರ ಪೋಡ್​ಕಾಸ್ಟ್​ನಲ್ಲಿ ಮಾತನಾಡಿದ ಮೊಹಮ್ಮದ್ ಶಮಿ, ಟೂರ್ನಮೆಂಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಹೊರತಾಗಿಯೂ 2019 ರಲ್ಲಿ ನ್ಯೂಝಿಲೆಂಡ್ ವಿರುದ್ಧದ ಏಕದಿನ ವಿಶ್ವಕಪ್ ಸೆಮಿಫೈನಲ್‌ಗೆ ನನ್ನನ್ನು ಬೆಂಚ್ ಕಾಯಿಸಿದ್ದರು. ಟೀಮ್ ಮ್ಯಾನೇಜ್ಮೆಂಟ್ ಇಂತಹ ನಿರ್ಧಾರ ಯಾಕೆ ತೆಗೆದುಕೊಂಡಿತು ಎಂಬದು ನನಗೆ ತಿಳಿದಿಲ್ಲ.

ಏಕೆಂದರೆ ಇದಕ್ಕೂ ಮುನ್ನ ನಾನು ಆಡಿದ 4 ಪಂದ್ಯಗಳಿಂದ 14 ವಿಕೆಟ್ ಕಬಳಿಸಿದ್ದೆ. ಅದರಲ್ಲೂ ಅಫ್ಘಾನಿಸ್ತಾನ್ ವಿರುದ್ಧದ ನಿರ್ಣಾಯಕ ಹಂತದಲ್ಲಿ ಪಡೆದ ಹ್ಯಾಟ್ರಿಕ್ ಕೂಡ ಸೇರಿದೆ. ಈ ಹ್ಯಾಟ್ರಿಕ್​ನಿಂದ ಅಂದು ಭಾರತ ತಂಡವು ಅಫ್ಘಾನ್ ವಿರುದ್ಧ ಜಯ ಸಾಧಿಸಿತ್ತು.

ಅಲ್ಲದೆ ಕೇವಲ ನಾಲ್ಕು ಪಂದ್ಯಗಳಲ್ಲಿ ಸಿಕ್ಕ ಅವಕಾಶವನ್ನು ನಾನು ಬಳಸಿಕೊಂಡಿದ್ದೆ. ಪ್ರತಿ ಓವರ್‌ಗೆ 5.48 ರನ್ ನೀಡುವ ಮೂಲಕ ಒಟ್ಟು 14 ವಿಕೆಟ್​ಗಳನ್ನು ಸಹ ಪಡೆದಿದ್ದೆ. ಆದರೆ ಭಾರತದ ಪಾಲಿಗೆ ನಿರ್ಣಾಯಕವಾಗಿದ್ದ ಸೆಮಿಫೈನಲ್​ ಪಂದ್ಯದಲ್ಲಿ ನನ್ನನ್ನು ಪ್ಲೇಯಿಂಗ್ ಇಲೆವೆನ್​ನಿಂದ ಕೈ ಬಿಡಲಾಯಿತು. ಅದರ ಹಿಂದಿನ ಕಾರಣವನ್ನು ಇಂದಿಗೂ ಕಂಡುಹಿಡಿಯಲು ಸಾಧ್ಯವಾಗಿಲ್ಲ ಎಂದು ಶಮಿ ಬೇಸರ ವ್ಯಕ್ತಪಡಿಸಿದ್ದಾರೆ.

ಹೀಗೆ ಬೇಸರ ವ್ಯಕ್ತಪಡಿಸಲು ಮುಖ್ಯ ಕಾರಣ, 2019 ರಲ್ಲಿ ಭಾರತ ತಂಡವು ಸೆಮಿಫೈನಲ್​ನಲ್ಲೇ ಸೋತಿರುವುದು. ನಾನು ಆಶ್ಚರ್ಯ ಪಡುವ ಒಂದು ವಿಷಯವೆಂದರೆ ಪ್ರತಿ ತಂಡಕ್ಕೂ ಉತ್ತಮ ಪ್ರದರ್ಶನ ನೀಡುವ ಆಟಗಾರರ ಅಗತ್ಯವಿದೆ. ನಾನು ಮೂರು ಪಂದ್ಯಗಳಲ್ಲಿ 13 ವಿಕೆಟ್ ಪಡೆದಿದ್ದೇನೆ. ನೀವು ನನ್ನಿಂದ ಇನ್ನೇನು ನಿರೀಕ್ಷಿಸುತ್ತೀರಿ? ಎಂದು ಮೊಹಮ್ಮದ್ ಶಮಿ ಪ್ರಶ್ನಿಸಿದ್ದಾರೆ.

ನನ್ನಲ್ಲಿ ಪ್ರಶ್ನೆಗಳಿಲ್ಲ ಅಥವಾ ನನ್ನ ಬಳಿ ಉತ್ತರಗಳಿಲ್ಲ. ನಾನು ನನ್ನನ್ನು ಸಾಬೀತುಪಡಿಸಬಲ್ಲೆ. ನೀವು ನನಗೆ ಅವಕಾಶ ನೀಡಿದ್ದೀರಿ, ಆಗ ನಾನು ನಾಲ್ಕು ಪಂದ್ಯಗಳಲ್ಲಿ 14 ವಿಕೆಟ್ ಪಡೆದೆ. ಇದಾಗ್ಯೂ ನನ್ನನ್ನು ಸೆಮಿಫೈನಲ್​​ನಲ್ಲಿ ಬೆಂಚ್​ನಲ್ಲಿ ಕೂರಿಸಿದ್ದೇಕೆ ಎಂದು ಮೊಹಮ್ಮದ್ ಶಮಿ ಟೀಮ್ ಮ್ಯಾನೇಜ್ಮೆಂಟ್ ನಡೆಯನ್ನು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: RCB… ಅದೊಂದು ತಂಡವೇ ಅಲ್ಲ: ಮಾಜಿ ಆಟಗಾರ ಕಿಡಿ

2023 ರ ವಿಶ್ವಕಪ್​ನಲ್ಲೂ ಮೊದಲ ಕೆಲ ಪಂದ್ಯಗಳವರೆಗೆ ಮೊಹಮ್ಮದ್ ಶಮಿಯನ್ನು ಬೆಂಚ್ ಕಾಯಿಸಿದ್ದರು. ಅಲ್ಲದೆ ಹಾರ್ದಿಕ್ ಪಾಂಡ್ಯ ಗಾಯಗೊಂಡ ಕಾರಣ ಶಮಿಗೆ ಅವಕಾಶ ನೀಡಲಾಯಿತು. ಅದರಂತೆ ಕೊನೆಯ 7 ಪಂದ್ಯಗಳ ಮೂಲಕ ಮೊಹಮ್ಮದ್ ಶಮಿ 24 ವಿಕೆಟ್ ಕಬಳಿಸಿದ್ದರು. ಈ ಮೂಲಕ ಭಾರತ ತಂಡ ಫೈನಲ್ ತಲುಪುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.