
2025 ರ ಚಾಂಪಿಯನ್ಸ್ ಟ್ರೋಫಿಯಲ್ಲಿ (Champions Trophy 2025) ಫೈನಲ್ ತಲುಪಿರುವ ಟೀಂ ಇಂಡಿಯಾ ಇದೀಗ ಭಾನುವಾರ ನಡೆಯಲ್ಲಿರುವ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸಲು ಸಕಲ ತಯಾರಿ ನಡೆಸುತ್ತಿದೆ. ಇಡೀ ಟೂರ್ನಿಯಲ್ಲಿ ಟೀಂ ಇಂಡಿಯಾ ಸಾಂಘಿಕ ಪ್ರದರ್ಶನ ನೀಡುವ ಮೂಲಕ ಅಜೇಯವಾಗಿ ಫೈನಲ್ ಪ್ರವೇಶಿದೆ. ಅದರಲ್ಲೂ ರಂಜಾನ್ ತಿಂಗಳಲ್ಲೂ ತನ್ನ ಉಪವಾಸ ಆಚರಣೆಗೆ ಬ್ರೇಕ್ ಹಾಕಿ ದೇಶಕ್ಕಾಗಿ ಆಡುತ್ತಿರುವ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ (Mohammed Shami) ಅವರ ಬಗ್ಗೆ ಇಡೀ ದೇಶವೇ ಮೆಚ್ಚುಗೆಯ ಮಾತುಗಳನ್ನಾಡುತ್ತಿದೆ. ಆದರೀಗ ಅವರದ್ದೇ ಧರ್ಮದ ಮೌಲಾನಾರೊಬ್ಬರು ಉಪವಾಸ ಆಚರಿಸದ ಶಮಿಯನ್ನು ಕ್ರಿಮಿನಲ್ ಎಂದು ಜರಿದಿದ್ದಾರೆ.
ವಾಸ್ತವವಾಗಿ ದುಬೈನಲ್ಲಿ ನಡೆದ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಕಣಕ್ಕಿಳಿದಿದ್ದ ಶಮಿ ಬೌಲಿಂಗ್ ಮಾಡಿ ಸುಸ್ತಾಗಿದ್ದರಿಂದ ಬೌಂಡರಿ ಲೈನ್ ಬಳಿ ನಿಂತು ಎನರ್ಜಿ ಡ್ರಿಂಕ್ ಕುಡಿದಿದ್ದರು. ಶಮಿ ಅವರ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿತ್ತು. ಉಪವಾಸ ನಿಯಮವನ್ನು ರದ್ದುಗೊಳಿಸಿ ದೇಶಕ್ಕಾಗಿ ಶಮಿ ತೆಗೆದುಕೊಂಡಿದ್ದ ನಿರ್ಧಾರಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿತ್ತು.
#WATCH | Bareilly, UP: President of All India Muslim Jamaat, Maulana Shahabuddin Razvi Bareilvi says, "…One of the compulsory duties is 'Roza' (fasting)…If any healthy man or woman doesn't observe 'Roza', they will be a big criminal…A famous cricket personality of India,… pic.twitter.com/RE9C93Izl2
— ANI (@ANI) March 6, 2025
ಆದರೀಗ ರಂಜಾನ್ ತಿಂಗಳಂದು ಉಪವಾಸ ಆಚರಿಸದ ಶಮಿಯನ್ನು ಅಖಿಲ ಭಾರತೀಯ ಮುಸ್ಲಿಂ ಜಮಾತ್ ಅಧ್ಯಕ್ಷ ಶಹಬುದ್ದಿನ್ ರಜ್ವಿ ಬರೇಲ್ವಿ ಕ್ರಿಮಿನಲ್ ಎಂದು ಜರಿದಿದ್ದಾರೆ. ಒಬ್ಬ ವ್ಯಕ್ತಿಯು ಉದ್ದೇಶಪೂರ್ವಕವಾಗಿ ಉಪವಾಸ ಮಾಡದಿದ್ದರೆ ಅವನು ಪಾಪಿ. ಮೊಹಮ್ಮದ್ ಶಮಿ ಇಸ್ಲಾಮಿಕ್ ಷರಿಯಾ ನಿಯಮಗಳನ್ನು ಪಾಲಿಸಲಿಲ್ಲ ಮತ್ತು ಉಪವಾಸವನ್ನು ಆಚರಿಸಲಿಲ್ಲ, ಅದು ಅವರಿಗೆ ಕಡ್ಡಾಯವಾಗಿತ್ತು. ಈ ನಿಯಮವನ್ನು ಪಾಲಿಸದಿರುವುದು ಶರಿಯಾ ದೃಷ್ಟಿಯಲ್ಲಿ ದೊಡ್ಡ ಪಾಪ. ಮೊಹಮ್ಮದ್ ಶಮಿ ಇಸ್ಲಾಮಿಕ್ ಜವಾಬ್ದಾರಿಗಳನ್ನು ಗಂಭೀರವಾಗಿ ಪರಿಗಣಿಸಿ ಅದಕ್ಕೆ ತಕ್ಕಂತೆ ವರ್ತಿಸಬೇಕು ಎಂದು ಮೌಲಾನಾ ಹೇಳಿದ್ದಾರೆ.
ಇದನ್ನೂ ಓದಿ: IND vs BAN: ಭಾರತವನ್ನು ಸೋಲಿನಿಂದ ಪಾರು ಮಾಡಿದ ಶಮಿ, ಗಿಲ್, ರಾಹುಲ್; ಗೆಲುವಿನ ಶುಭಾರಂಭ
ಇಸ್ಲಾಮಿಕ್ ಸಲಹೆಗಳನ್ನು ಪಾಲಿಸದ ಶಮಿಗೆ ಸಲಹೆ ನೀಡಿರುವ ಮೌಲಾನಾ, ‘ಕ್ರಿಕೆಟ್ ಆಡುವುದು ತಪ್ಪಲ್ಲ ಆದರೆ ಇಸ್ಲಾಂನ ಕರ್ತವ್ಯಗಳು ಮತ್ತು ಬಾಧ್ಯತೆಗಳನ್ನು ಪಾಲಿಸುವುದು ಮುಖ್ಯ. ಪ್ರತಿಯೊಬ್ಬ ವ್ಯಕ್ತಿಯು ಇಸ್ಲಾಂನ ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ ಮತ್ತು ಮೊಹಮ್ಮದ್ ಶಮಿ ಕೂಡ ಇದರ ಬಗ್ಗೆ ಗಮನ ಹರಿಸಬೇಕು ಎಂದು ಹೇಳಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:42 pm, Thu, 6 March 25