Ranji Trophy 2024: ಸ್ಪರ್ಧಾತ್ಮಕ ಕ್ರಿಕೆಟ್​ಗೆ ಮೊಹಮ್ಮದ್ ಶಮಿ ಸಹೋದರ ಎಂಟ್ರಿ..!

| Updated By: ಝಾಹಿರ್ ಯೂಸುಫ್

Updated on: Dec 30, 2023 | 11:53 AM

Ranji Trophy 2024: ಈ ಬಾರಿಯ ರಣಜಿ ಟೂರ್ನಿಗೆ ಕರ್ನಾಟಕ ತಂಡವನ್ನು ಕೂಡ ಘೋಷಿಸಲಾಗಿದೆ. 16 ಸದಸ್ಯರ ಈ ತಂಡವನ್ನು ಮಯಾಂಕ್ ಅಗರ್ವಾಲ್ ಮುನ್ನಡೆಸಲಿದ್ದಾರೆ. ಇನ್ನು ಉಪನಾಯಕನಾಗಿ ಯುವ ಬ್ಯಾಟರ್ ನಿಕಿನ್ ಜೋಸ್ ಕಾಣಿಸಿಕೊಳ್ಳಲಿದ್ದಾರೆ.

Ranji Trophy 2024: ಸ್ಪರ್ಧಾತ್ಮಕ ಕ್ರಿಕೆಟ್​ಗೆ ಮೊಹಮ್ಮದ್ ಶಮಿ ಸಹೋದರ ಎಂಟ್ರಿ..!
Kaif - Shami
Follow us on

ಜನವರಿ 5 ರಿಂದ ಶುರುವಾಗಲಿರುವ ರಣಜಿ ಟೂರ್ನಿಗಾಗಿ (Ranji Trophy 2024) ಬಂಗಾಳ ತಂಡವನ್ನು ಪ್ರಕಟಿಸಲಾಗಿದೆ. 18 ಸದಸ್ಯರ ಈ ತಂಡವನ್ನು ಪಶ್ಚಿಮ ಬಂಗಾಳದ ಕ್ರೀಡಾ ಸಚಿವ / ಆಟಗಾರ ಮನೋಜ್ ತಿವಾರಿ ಮುನ್ನಡೆಸಲಿದ್ದಾರೆ. ವಿಶೇಷ ಎಂದರೆ ಇದು ದೇಶೀಯ ಅಂಗಳದಲ್ಲಿ ತಿವಾರಿ ಅವರ ಕೊನೆಯ ಟೂರ್ನಿ. ಈ ಬಾರಿಯ ರಣಜಿ ಟ್ರೋಫಿಯೊಂದಿಗೆ ಕ್ರಿಕೆಟ್​ ಬದುಕಿಗೆ ವಿದಾಯ ಹೇಳಲು ಮನೋಜ್ ತಿವಾರಿ ನಿರ್ಧರಿಸಿದ್ದಾರೆ.

ಇನ್ನು ಈ ಬಾರಿಯ ಹದಿನೆಂಟು ಸದಸ್ಯರ ಬಳಗದಲ್ಲಿ ಮೊಹಮ್ಮದ್ ಶಮಿ ಅವರ ಸಹೋದರ ಮೊಹಮ್ಮದ್ ಕೈಫ್​ಗೆ ಸ್ಥಾನ ಲಭಿಸಿದೆ. 2021 ರಲ್ಲೇ ಮುಷ್ತಾಕ್ ಅಲಿ ಟೂರ್ನಿಯ ಮೂಲಕ ದೇಶೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ್ದ ಕೈಫ್​ ಇದೇ ಮೊದಲ ಬಾರಿ ರಣಜಿ ತಂಡಕ್ಕೆ ಆಯ್ಕೆಯಾಗಿದ್ದಾರೆ.

ವಿಶೇಷ ಎಂದರೆ ಮೊಹಮ್ಮದ್ ಶಮಿಯಂತೆ ಮೊಹಮ್ಮದ್ ಕೈಫ್ ಕೂಡ ವೇಗದ ಬೌಲರ್​. ಈಗಾಗಲೇ ಲೀಸ್ಟ್ ಎ ಕ್ರಿಕೆಟ್​ನಲ್ಲಿ 7 ಪಂದ್ಯಗಳಿಂದ 12 ವಿಕೆಟ್ ಕಬಳಿಸಿದ್ದಾರೆ. ಇದೀಗ ರಣಜಿ ಟೂರ್ನಿಯ ಮೂಲಕ ಎಲ್ಲರ ಗಮನ ಸೆಳೆಯುವ ವಿಶ್ವಾಸದಲ್ಲಿದ್ದಾರೆ ಕೈಫ್.

ರಣಜಿ ಟ್ರೋಫಿಗೆ ಬಂಗಾಳ ತಂಡ: ಮನೋಜ್ ತಿವಾರಿ (ನಾಯಕ), ಅನುಸ್ತುಪ್ ಮಜುಂದಾರ್, ಸುದೀಪ್ ಘರಾಮಿ, ಅಭಿಷೇಕ್ ಪೊರೆಲ್ (ವಿಕೆಟ್ ಕೀಪರ್), ಸೌರವ್ ಪಾಲ್ (ವಿಕೆಟ್ ಕೀಪರ್), ಶ್ರೇಯಾಂಶ್ ಘೋಷ್, ರಂಜೋತ್ ಸಿಂಗ್ ಖೈರಾ, ಸುಭಮ್ ಚಟರ್ಜಿ, ಆಕಾಶ್ ದೀಪ್, ಇಶಾನ್ ಪೊರೆಲ್, ಪ್ರದೀಪ್ತ ಪ್ರಮಾಣಿಕ್, ಕರಣ್ ಲಾಲ್, ಕೌಶಿಕ್ ಮೈತಿ, ಮೊಹಮ್ಮದ್ ಕೈಫ್, ಅಂಕಿತ್ ಮಿಶ್ರಾ, ಪ್ರಯಾಸ್ ರೇ ಬರ್ಮನ್, ಸೂರಜ್ ಸಿಂಧು ಜೈಸ್ವಾಲ್, ಸುಮನ್ ದಾಸ್.

ಇದನ್ನೂ ಓದಿ: IPL 2024: ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಸುರೇಶ್ ರೈನಾ..?

ರಣಜಿ ಟೂರ್ನಿಗೆ ಕರ್ನಾಟಕ ತಂಡದ ಘೋಷಣೆ:

ಈ ಬಾರಿಯ ರಣಜಿ ಟೂರ್ನಿಗೆ ಕರ್ನಾಟಕ ತಂಡವನ್ನು ಕೂಡ ಘೋಷಿಸಲಾಗಿದೆ. 16 ಸದಸ್ಯರ ಈ ತಂಡವನ್ನು ಮಯಾಂಕ್ ಅಗರ್ವಾಲ್ ಮುನ್ನಡೆಸಲಿದ್ದಾರೆ. ಇನ್ನು ಉಪನಾಯಕನಾಗಿ ಯುವ ಬ್ಯಾಟರ್ ನಿಕಿನ್ ಜೋಸ್ ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ  ಯುವ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಸುಜಯ್​ಗೆ ಈ ಬಾರಿ ತಂಡದಲ್ಲಿ ಅವಕಾಶ ಲಭಿಸಿದೆ.

ಕರ್ನಾಟಕ ತಂಡ: ಮಯಾಂಕ್ ಅಗರ್ವಾಲ್ (ನಾಯಕ), ಆರ್. ಸಮರ್ಥ್, ದೇವದತ್ ಪಡಿಕ್ಕಲ್, ನಿಕಿನ್ ಜೋಸ್ (ಉಪನಾಯಕ), ಮನೀಶ್ ಪಾಂಡೆ, ಶುಭಾಂಗ್ ಹೆಗ್ಡೆ, ಶರತ್ ಶ್ರೀನಿವಾಸ್, ವಿಯಕುಮಾರ್ ವೈಶಾಕ್, ವಿ. ಕೌಶಿಕ್, ವಿದ್ವತ್ ಕಾವೇರಪ್ಪ, ಕೆ.ಶಶಿಕುಮಾರ್, ಸುಜಯ್ ಸಾತೇರಿ, ಡಿ.ನಿಶ್ಚಲ್ , ಎಂ.ವೆಂಕಟೇಶ್, ಕಿಶನ್ ಬೇಡರೆ, ರೋಹಿತ್ ಕುಮಾರ್.