ಟ್ರಾವಿಸ್​ ಹೆಡ್​ಗೆ ದಾಟು ಎಂದ ಮೊಹಮ್ಮದ್ ಸಿರಾಜ್: ಟೀಮ್ ಇಂಡಿಯಾ ವೇಗಿಗೆ ವಾರ್ನಿಂಗ್..!

ಟ್ರಾವಿಸ್​ ಹೆಡ್​ಗೆ ದಾಟು ಎಂದ ಮೊಹಮ್ಮದ್ ಸಿರಾಜ್: ಟೀಮ್ ಇಂಡಿಯಾ ವೇಗಿಗೆ ವಾರ್ನಿಂಗ್..!

ಝಾಹಿರ್ ಯೂಸುಫ್
|

Updated on:Dec 07, 2024 | 2:49 PM

Mohammed Siraj - Travis Head: ಅಡಿಲೇಡ್​ನ ಓವಲ್ ಮೈದಾನದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್​​ನಲ್ಲಿ ಮೊಹಮ್ಮದ್ ಸಿರಾಜ್ 4 ವಿಕೆಟ್ ಕಬಳಿಸಿದ್ದಾರೆ. ಈ ವಿಕೆಟ್​​ನೊಂದಿಗೆ ಟ್ರಾವಿಸ್ ಹೆಡ್ ಅವರ ಜೊತೆ ಮಾತಿನ ಚಕಮಕಿ ಕೂಡ ನಡೆಸಿದರು.

ಅಡಿಲೇಡ್​ನ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಪಿಂಕ್ ಬಾಲ್ ಟೆಸ್ಟ್ ಪಂದ್ಯವು ರಣರೋಚಕ ಪೈಪೋಟಿಗೆ ಸಾಕ್ಷಿಯಾಗುತ್ತಿದೆ. ಈ ಪಂದ್ಯದ ದ್ವಿತೀಯ ಇನಿಂಗ್ಸ್​ ವೇಳೆ ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ಹಾಗೂ ಆಸ್ಟ್ರೇಲಿಯಾ ಬ್ಯಾಟರ್ ಟ್ರಾವಿಸ್ ಹೆಡ್ ನಡುವೆ ಮಾತಿನ ಚಕಮಕಿ ನಡೆದಿದೆ. ಇದಕ್ಕೂ ಮುನ್ನ  ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಕೇವಲ 180 ರನ್​​ಗಳಿಗೆ ಆಲೌಟ್ ಆಗಿತ್ತು. ಇದರ ಬೆನ್ನಲ್ಲೇ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡವು ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದೆ.

ಅದರಲ್ಲೂ ದ್ವಿತೀಯ ದಿನದಾಟದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಮಾರ್ನಸ್ ಲಾಬುಶೇನ್ 64 ರನ್​​ಗಳಿಸಿದರು. ಇನ್ನು ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಟ್ರಾವಿಸ್ ಹೆಡ್ ವಿಸ್ಪೋಟಕ ಬ್ಯಾಟಿಂಗ್​​ನೊಂದಿಗೆ ಅಬ್ಬರಿಸಿದರು.

ಭಾರತೀಯ ಬೌಲರ್​​ಗಳನ್ನು ಹಿಗ್ಗಾಮುಗ್ಗಾ ದಂಡಿಸಿದ ಹೆಡ್ ಕೇವಲ 111 ಎಸೆತಗಳಲ್ಲಿ ಶತಕ ಪೂರೈಸಿದರು. ಶತಕದ ಬಳಿಕ ಕೂಡ ಟ್ರಾವಿಸ್ ಅಬ್ಬರ ಮುಂದುವರೆಯಿತು. ಅದರಲ್ಲೂ ಸಿರಾಜ್ ಎಸೆದ 82ನೇ ಓವರ್​​ನ ಮೊದಲ ಎಸೆತದಲ್ಲಿ ಹೆಡ್ ಫೋರ್ ಬಾರಿಸಿದರು. ಅಲ್ಲದೆ ಮೂರನೇ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದರು.

ನಾಲ್ಕನೇ ಎಸೆತದಲ್ಲಿ ಟ್ರಾವಿಸ್ ಹೆಡ್​ (140) ಮೊಹಮ್ಮದ್ ಸಿರಾಜ್ ಕ್ಲೀನ್ ಬೌಲ್ಡ್ ಮಾಡಿದರು. ಅತ್ತ ಬೌಲ್ಡ್ ಆಗುತ್ತಿದ್ದಂತೆ ಹೆಡ್ ಅದೇನೋ ಗೊಣಗಿದ್ದಾರೆ. ಇದರಿಂದ ಕುಪಿತಗೊಂಡ ಮೊಹಮ್ಮದ್ ಸಿರಾಜ್ ಕೂಡ ವಾಗ್ದಾಳಿಗೆ ಇಳಿದಿದ್ದಾರೆ. ಇದರ ನಡುವೆ ಸಿರಾಜ್ ಹೋಗಲೋ ಎನ್ನುವಂತೆ ಕೈ ಸನ್ನೇ ಮಾಡಿದ್ದಾರೆ.
ಇದನ್ನು ಗಂಭೀರವಾಗಿ ಪರಿಗಣಿಸಿರುವ ಅಂಪೈರ್​ಗಳು ಮೊಹಮ್ಮದ್ ಸಿರಾಜ್ ಅವರಿಗೆ ವಾರ್ನಿಂಗ್ ನೀಡಿದ್ದಾರೆ. ಇದೀಗ ಟ್ರಾವಿಸ್ ಹೆಡ್ ಹಾಗೂ ಮೊಹಮ್ಮದ್ ಸಿರಾಜ್ ನಡುವಣ ಮಾತಿನ ಚಕಮಕಿಯ ವಿಡಿಯೋ ವೈರಲ್ ಆಗಿದೆ.

ಇನ್ನು ಈ ಪಂದ್ಯದ ದ್ವಿತೀಯ ಇನಿಂಗ್ಸ್​ನಲ್ಲಿ ಆಸ್ಟ್ರೇಲಿಯಾ ತಂಡವು 337 ರನ್​​ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಮೊದಲ ಇನಿಂಗ್ಸ್​​ನಲ್ಲಿ 157 ರನ್​​ಗಳ ಮುನ್ನಡೆದುಕೊಂಡಿದೆ. ಟೀಮ್ ಇಂಡಿಯಾ ಪರ ಮೊಹಮ್ಮದ್ ಸಿರಾಜ್ ಹಾಗೂ ಜಸ್​ಪ್ರೀತ್ ಬುಮ್ರಾ ತಲಾ 4 ವಿಕೆಟ್ ಕಬಳಿಸಿದ್ದಾರೆ.

 

Published on: Dec 07, 2024 02:46 PM