IND vs ENG: ‘ಭಾಝ್ ಬಾಲ್ ಕ್ರಿಕೆಟ್ ಆಡಿ, ನಾನು ನೋಡ್ಬೇಕು’; ಆಂಗ್ಲ ಆಟಗಾರರ ಕಾಲೆಳೆದ ಸಿರಾಜ್
Mohammed Siraj sledging: ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ತನ್ನ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಯನ್ನು ಬದಿಗೊತ್ತಿ ನಿಧಾನವಾಗಿ ಆಡಿದ್ದು, ಮೊಹಮ್ಮದ್ ಸಿರಾಜ್ ಅವರ ಸ್ಲೆಡ್ಜಿಂಗ್‌ಗೆ ಕಾರಣವಾಯಿತು. ಸಿರಾಜ್ ಮತ್ತು ಬುಮ್ರಾ ಅವರ ಮಾರಕ ದಾಳಿಯಿಂದ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳು ರನ್ ಕಲೆಹಾಕಲು ಪರದಾಡುತ್ತಿದ್ದಾರೆ. ನಿಧಾನಗತಿಯ ಆಟದಿಂದ ಇಂಗ್ಲೆಂಡ್ ತನ್ನ ಸಾಮಾನ್ಯ ಆಟದ ಶೈಲಿಯಿಂದ ವಿಚಲನಗೊಂಡಿದೆ ಎಂಬುದು ಸ್ಪಷ್ಟವಾಗಿದೆ.

ನ್ಯೂಜಿಲೆಂಡ್ ತಂಡದ ಸ್ಫೋಟಕ ಬ್ಯಾಟ್ಸ್‌ಮನ್ ಬ್ರೆಂಡನ್ ಮೆಕಲಮ್ (Brendon McCullum) ಇಂಗ್ಲೆಂಡ್ ಟೆಸ್ಟ್ ತಂಡದ ಮುಖ್ಯ ಕೋಚ್ ಆದ ಬಳಿಕ ಟೆಸ್ಟ್ ಕ್ರಿಕೆಟ್ನ ದಿಕ್ಕೇ ಬದಲಾಗಿದೆ. ಬ್ಯಾಟ್ಸ್ಮನ್ಗಳ ತಾಳ್ಮೆಯನ್ನೇ ಹೆಚ್ಚಾಗಿ ಕೇಳುವ ಈ ಆಟದ ದಿಕ್ಕನ್ನೇ ಬದಲಿಸಿರುವ ಮೆಕಲಮ್, ಟೆಸ್ಟ್ ಕ್ರಿಕೆಟ್ನಲ್ಲೂ ಹೊಡಿಬಡಿ ಆಟವನ್ನು ಪರಿಚಯಿಸಿದ್ದಾರೆ. ಮೆಕಲಮ್ ತರಬೇತಿಯಂತೆ ತಮ್ಮ ಬ್ಯಾಟಿಂಗ್ ಶೈಲಿಯನ್ನು ಬದಲಿಸಿಕೊಂಡಿರುವ ಇಂಗ್ಲೆಂಡ್ ಆಟಗಾರರು ಪ್ರತಿ ಪಂದ್ಯದಲ್ಲೂ ಆಕ್ರಮಣಕಾರಿ ವರ್ತನೆಯನ್ನು ತೋರಿಸುತ್ತಾ ಬರುತ್ತಿದ್ದಾರೆ. ಆದರೆ ಟೀಂ ಇಂಡಿಯಾ ವಿರುದ್ಧದ ಲಾರ್ಡ್ಸ್ ಟೆಸ್ಟ್ನಲ್ಲಿ (Lord’s Test) ಮಾತ್ರ ಇಂಗ್ಲೆಂಡ್ ಆಟಗಾರರು ತಮ್ಮ ಆಟದ ಶೈಲಿಯನ್ನು ಬದಲಿಸಿದ್ದರು. ಆಂಗ್ಲರ ಈ ಆಮೆಗತಿಯ ಆಟವನ್ನು ನೋಡಿದ ಮೊಹಮ್ಮದ್ ಸಿರಾಜ್ (Mohammed Siraj) ಕೂಡ ಪ್ಲೀಸ್ ಭಾಝ್ ಬಾಲ್ ಕ್ರಿಕೆಟ್ ಆಡಿ ನಾನು ನೋಡಬೇಕು ಎಂದು ಸ್ಲೆಡ್ಜಿಂಗ್ ಮಾಡಿದ ಪ್ರಸಂಗವೂ ನಡೆಯಿತು.
ಸ್ಲೆಡ್ಜಿಂಗ್ ಮಾಡಿದ ಸಿರಾಜ್
ಇಂಗ್ಲೆಂಡ್ ತಂಡ ಭಾಝ್ ಬಾಲ್ ಕ್ರಿಕೆಟ್ ಆಡಲು ಶುರು ಮಾಡಿದ ಬಳಿಕ ಇದುವರೆಗೆ ಒಟ್ಟು 72 ಬಾರಿ ಮೊದಲು ಬ್ಯಾಟಿಂಗ್ ಮಾಡಡಿದೆ. ಇದರಲ್ಲಿ ಇಂಗ್ಲಿಷ್ ತಂಡವು ಮೊದಲ 40 ಓವರ್‌ಗಳಲ್ಲಿ 3 ಕ್ಕಿಂತ ಕಡಿಮೆ ನೆಟ್ ರನ್ ರೇಟ್ನೊಂದಿಗೆ ಆಡಿದ್ದು ಇದು ಎರಡನೇ ಬಾರಿ. ಕೊನೆಯ ಬಾರಿಗೆ 2022 ರಲ್ಲಿ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದ ನಾಲ್ಕನೇ ಇನ್ನಿಂಗ್ಸ್‌ನಲ್ಲಿ ತಂಡ ಇಷ್ಟು ನಿಧಾನವಾಗಿ ಆಡಿತ್ತು. ಆದರೀಗೆ ಟೀಂ ಇಂಡಿಯಾ ವೇಗಿಗಳ ಕರಾರುವಕ್ಕಾದ ದಾಳಿಗೆ ಬೆದರಿರುವ ಆಂಗ್ಲ ಆಟಗಾರರು ಭಾಝ್ ಬಾಲ್ ಕ್ರಿಕೆಟ್ ಅನ್ನು ಬದಿಗಿಟ್ಟು, ನೈಜ ಟೆಸ್ಟ್ ಕ್ರಿಕೆಟ್ ಆಡುತ್ತಿದ್ದಾರೆ.
England are crawling at a run rate of under 3! 🐢#ENGvsIND #England #India #JoeRoot #MohammedSiraj pic.twitter.com/hb4MQKrfwQ
— CRICKETNMORE (@cricketnmore) July 10, 2025
ಇದನ್ನು ನೋಡಿದ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್, ಇಂಗ್ಲೆಂಡ್ ಮಾಜಿ ನಾಯಕ ಜೋ ರೂಟ್ ಪದೇ ಪದೇ ಬಾಲ್ ಅನ್ನು ಬಿಡುವುದನ್ನು ನೋಡಿ ‘ಭಾಝ್, ಭಾಝ್, ಭಾಝ್ ಬಾಲ್. ಭಾಝ್ ಬಾಲ್ ಕ್ರಿಕೆಟ್ ಆಡಿ. ನಾನು ನೋಡಬೇಕು’ ಎಂದು ಸ್ಲೆಡ್ಜ್ ಮಾಡಿದರು. ಆದರೆ ಸಿರಾಜ್ ಸ್ಲೆಡ್ಜಿಂಗ್ ನಂತರವೂ ರೂಟ್ ನಿಧಾನವಾಗಿ ಬ್ಯಾಟಿಂಗ್ ಮಾಡವುದನ್ನು ಮುಂದುವರೆಸಿದರು.
IND vs ENG 3rd Test: ಲಾರ್ಡ್ಸ್ ಟೆಸ್ಟ್ ಪಂದ್ಯದ ಆರಂಭದಲ್ಲಿ ಟೀಮ್ ಇಂಡಿಯಾಗೆ ಕೆಟ್ಟ ಸುದ್ದಿ
ಸಿರಾಜ್-ಬುಮ್ರಾ ಮಾರಕ ದಾಳಿ
ಆಕ್ರಮಣಕಾರಿ ಬ್ಯಾಟಿಂಗ್‌ಗೆ ಹೆಸರುವಾಸಿಯಾದ ಇಂಗ್ಲಿಷ್ ಬ್ಯಾಟ್ಸ್‌ಮನ್‌ಗಳು ಈ ಪಂದ್ಯದಲ್ಲಿ ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡುತ್ತಿದ್ದಾರೆ. ಮೊದಲ ನಾಲ್ವರು ಬ್ಯಾಟ್ಸ್‌ಮನ್‌ಗಳಲ್ಲಿ ಮೂವರು 50 ಕ್ಕಿಂತ ಕಡಿಮೆ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಅದೇ ಸಮಯದಲ್ಲಿ, ನಾಲ್ಕನೇ ಬ್ಯಾಟ್ಸ್‌ಮನ್‌ನ ಸ್ಟ್ರೈಕ್ ರೇಟ್ ಕೂಡ 60 ಕ್ಕಿಂತ ಕಡಿಮೆಯಿದೆ. ಅದೇ ಸಮಯದಲ್ಲಿ ಜಸ್ಪ್ರೀತ್ ಬುಮ್ರಾ 13 ಓವರ್‌ಗಳಲ್ಲಿ ಕೇವಲ 21 ರನ್‌ಗಳನ್ನು ಮಾತ್ರ ನೀಡಿದ್ದರೆ, ಸಿರಾಜ್ 11 ಓವರ್‌ಗಳಲ್ಲಿ ಕೇವಲ 25 ರನ್‌ಗಳನ್ನು ಮಾತ್ರ ನೀಡಿದ್ದಾರೆ. ನಿತೀಶ್ ಕುಮಾರ್ ರೆಡ್ಡಿ ಮತ್ತು ಆಕಾಶ್‌ದೀಪ್ ಕೂಡ ಬ್ಯಾಟ್ಸ್‌ಮನ್‌ಗಳನ್ನು ನಿಧಾನವಾಗಿ ಆಡುವಂತೆ ಮಾಡಿದ್ದಾರೆ. ಸುದ್ದಿ ಬರೆಯುವ ಹೊತ್ತಿಗೆ, ಇಂಗ್ಲೆಂಡ್ ತಂಡವು 4 ವಿಕೆಟ್‌ಗಳ ನಷ್ಟಕ್ಕೆ 196 ರನ್‌ಗಳನ್ನು ಗಳಿಸಿದೆ.
Published On - 9:41 pm, Thu, 10 July 25
