IND vs SA: ಬಾಯಿಯಲ್ಲಿ ಬ್ಯಾಟ್ ಮಾಡುವುದನ್ನು ನಿಲ್ಲಿಸಿ! ಪಂತ್​ಗೆ ಮಾತಿನ ಚಡಿ ಏಟು ಕೊಟ್ಟ ಆಫ್ರಿಕಾದ ಮಾಜಿ ಬೌಲರ್

| Updated By: ಪೃಥ್ವಿಶಂಕರ

Updated on: Jan 07, 2022 | 7:50 PM

IND vs SA: ಪಂತ್ ಬ್ಯಾಟ್​ನಿಂದ ಸ್ಕೋರ್ ಮಾಡದೆ ವಿಕೆಟ್ ಕೀಪಿಂಗ್​ನಲ್ಲಿ ಯಾವಾಗಲೂ ಹಿಂದಿನಿಂದ ನಿರಂತರವಾಗಿ ಮಾತನಾಡುತ್ತಾ, ಬ್ಯಾಟರ್​ಗಳಿಗೆ ಕಿರಿಕಿರಿ ಉಂಟು ಮಾಡುತ್ತಾರೆ. ಅದು ಅವರನ್ನು ತೊಂದರೆಗೆ ಸಿಲುಕಿಸಬಹುದು ಎಂದು ಮಾಜಿ ವೇಗದ ಬೌಲರ್ ಹೇಳಿದ್ದಾರೆ. ಪಂತ್ ಬಾಯಿಯ ಬದಲು ಬ್ಯಾಟ್‌ನಿಂದ ಮಾತನಾಡಬೇಕು ಎಂದು ಮೊರ್ಕೆಲ್ ಹೇಳಿದ್ದಾರೆ.

IND vs SA: ಬಾಯಿಯಲ್ಲಿ ಬ್ಯಾಟ್ ಮಾಡುವುದನ್ನು ನಿಲ್ಲಿಸಿ! ಪಂತ್​ಗೆ ಮಾತಿನ ಚಡಿ ಏಟು ಕೊಟ್ಟ ಆಫ್ರಿಕಾದ ಮಾಜಿ ಬೌಲರ್
ರಿಷಬ್ ಪಂತ್
Follow us on

ಭಾರತದ ಯುವ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ರಿಷಬ್ ಪಂತ್ ಈ ಬಾರಿ ಟೀಕಾಕಾರರ ಗುರಿಯಾಗಿದ್ದಾರೆ. ಇದಕ್ಕೆ ಕಾರಣ ಅವರ ಬ್ಯಾಟಿಂಗ್. ಕಳೆದ ಕೆಲವು ಪಂದ್ಯಗಳಲ್ಲಿ ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗಿರಲಿಲ್ಲ. ಇದೆಲ್ಲದರ ನಡುವೆ ಜೋಹಾನ್ಸ್ ಬರ್ಗ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಪಂತ್ ಔಟಾದ ರೀತಿ ಪಂತ್ ವಿರುದ್ಧದ ಸುದ್ದಿಗೆ ತುಪ್ಪ ಸುರಿಯುವ ಕೆಲಸ ಮಾಡಿದ್ದಾರೆ. ದಕ್ಷಿಣ ಆಫ್ರಿಕಾದ ಆಟಗಾರರ ಜತೆಗಿನ ವಾಗ್ವಾದದಿಂದಾಗಿ ಕೋಪಗೊಂಡ ಅವರು ಕೆಟ್ಟ ಹೊಡೆತ ಆಡಿ ತಮ್ಮ ವಿಕೆಟ್ ಕಳೆದುಕೊಂಡರು. ಇದು ಈಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈಗ ಈ ವಿಚಾರಕ್ಕೆ ಸಂಬಂಧಪಟ್ಟಂತೆ ದಕ್ಷಿಣ ಆಫ್ರಿಕಾದ ಮಾಜಿ ವೇಗದ ಬೌಲರ್ ಮೋರ್ನೆ ಮೊರ್ಕೆಲ್ ಪಂತ್ ಬಗ್ಗೆ ಹೇಳಿಕೆ ನೀಡಿದ್ದಾರೆ.

ಈ ಪಂದ್ಯದಲ್ಲಿ ಪಂತ್, ದಕ್ಷಿಣ ಆಫ್ರಿಕಾದ ಬ್ಯಾಟಿಂಗ್ ಸಮಯದಲ್ಲಿ ಬ್ಯಾಟ್ಸ್‌ಮನ್ ರಾಸಿ ವ್ಯಾನ್ ಡೆರ್ ಡಸ್ಸೆನ್ ಅವರನ್ನು ತೊಂದರೆಗೊಳಿಸಿದರು. ವಿಕೆಟ್ ಹಿಂದಿನಿಂದ ನಿರಂತರವಾಗಿ ಮಾತನಾಡುತ್ತ ಅವರನ್ನು ಕೆಣಕಲು ಪ್ರಯತ್ನಿಸಿದರು. ಇದನ್ನು ಗಮನಿಸಿದ ಮೋರ್ಕೆಲ್, ಮೈದಾನದಲ್ಲಿ ಸ್ಲೆಡ್ಜಿಂಗ್ ಮತ್ತು ತಮಾಷೆ ಮಾಡುವುದು ಸಹಜವಾಗಿ ನಡೆಯುವ ಕ್ರಿಯೆಯಾಗಿದೆ. ಆದರೆ ಪಂತ್ ಬ್ಯಾಟ್​ನಿಂದ ಸ್ಕೋರ್ ಮಾಡದೆ ವಿಕೆಟ್ ಕೀಪಿಂಗ್​ನಲ್ಲಿ ಯಾವಾಗಲೂ ಹಿಂದಿನಿಂದ ನಿರಂತರವಾಗಿ ಮಾತನಾಡುತ್ತಾ, ಬ್ಯಾಟರ್​ಗಳಿಗೆ ಕಿರಿಕಿರಿ ಉಂಟು ಮಾಡುತ್ತಾರೆ. ಅದು ಅವರನ್ನು ತೊಂದರೆಗೆ ಸಿಲುಕಿಸಬಹುದು ಎಂದು ಮಾಜಿ ವೇಗದ ಬೌಲರ್ ಹೇಳಿದ್ದಾರೆ. ಪಂತ್ ಬಾಯಿಯ ಬದಲು ಬ್ಯಾಟ್‌ನಿಂದ ಮಾತನಾಡಬೇಕು ಎಂದು ಮೊರ್ಕೆಲ್ ಹೇಳಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಪಂತ್ ಮೊದಲ ಇನ್ನಿಂಗ್ಸ್‌ನಲ್ಲಿ 17 ರನ್ ಗಳಿಸಿದ್ದರು ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಖಾತೆ ತೆರೆಯಲು ಸಹ ಸಾಧ್ಯವಾಗಲಿಲ್ಲ. ಮೊದಲ ಪಂದ್ಯದಲ್ಲಿ ಮೊದಲ ಇನಿಂಗ್ಸ್‌ನಲ್ಲಿ ಎಂಟು ರನ್ ಗಳಿಸಿದ್ದ ಅವರು ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 34 ರನ್ ಗಳಿಸಲಷ್ಟೇ ಶಕ್ತರಾಗಿದ್ದರು.

ಬ್ಯಾಟ್ನೊಂದಿಗೆ ಮಾತನಾಡಿ
ಸ್ಟಾರ್ ಸ್ಪೋರ್ಟ್ಸ್‌ ಜೊತೆ ಮಾತನಾಡಿದ ಮೋರ್ಕೆಲ್, ಪಂತ್ ಒಬ್ಬ ಉತ್ತಮ ಆಟಗಾರ, ಆದರೆ ಈ ಸಮಯದಲ್ಲಿ ನಾನು ಅವರ ಸ್ಥಾನದಲ್ಲಿದ್ದರೆ, ಸ್ಟಂಪ್‌ಗಳ ಹಿಂದಿನಿಂದ ಮಾತನಾಡುವ ಬದಲು ಬ್ಯಾಟ್‌ನೊಂದಿಗೆ ಮಾತನಾಡಲು ಆದ್ಯತೆ ನೀಡುತ್ತಿದ್ದೆ ಎಂದಿದ್ದಾರೆ. ಅಲ್ಲದೆ, ಕೆಲವು ಕಡಿಮೆ ಸ್ಕೋರಿಂಗ್ ಇನ್ನಿಂಗ್ಸ್​ಗಳು ಪಂತ್ ವೃತ್ತಿ ಬದುಕಿಗೆ ತೊಂದರೆ ಒಡ್ಡಬಹುದು. ನಂತರ ಅವರಿಗೆ ತಂಡದಲ್ಲಿ ತನ್ನ ಸ್ಥಾನವನ್ನು ಪಡೆಯಲು ಕಷ್ಟವಾಗಬಹುದು ಎಂದಿದ್ದಾರೆ.

ಬುಮ್ರಾ ಮತ್ತು ಯಾನ್ಸನ್ ನಡುವಿನ ವಿವಾದ
ಎರಡನೇ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಮತ್ತು ದಕ್ಷಿಣ ಆಫ್ರಿಕಾದ ಮಾರ್ಕೊ ಯಾನ್ಸನ್ ನಡುವೆ ತೀವ್ರ ವಾಗ್ವಾದ ನಡೆಯಿತು. ಈ ಇಬ್ಬರೂ ಆಟಗಾರರು ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಜೊತೆ ಆಡಿದ್ದಾರೆ. ಇವರಿಬ್ಬರ ನಡುವೆ ಜಗಳ ಹೆಚ್ಚಾಗಿದ್ದು, ಅಂಪೈರ್ ಮಾರಿಯಸ್ ಎರಾಸ್ಮಸ್ ನೆರವಿಗೆ ಬರಬೇಕಾಯಿತು. ಈ ವಿಷಯದ ಕುರಿತು ಮೊರ್ಕೆಲ್, ಬುಮ್ರಾ ಅವರ ಪ್ರತಿಕ್ರಿಯೆಯು ನನಗೆ ಆಸಕ್ತಿದಾಯಕವಾಗಿತ್ತು. ನನಗೆ ಇದು ವೇಗದ ಬೌಲರ್‌ಗೆ ಕ್ಷಣದ ಬಿಸಿಯಂತಿದೆ. ಇದು ಬುಮ್ರಾ ಅವರು ಇಂಗ್ಲೆಂಡ್‌ನ ಜೇಮ್ಸ್ ಆಂಡರ್ಸನ್‌ಗೆ ನೀಡಿದ ಅದೇ ಪ್ರತಿಕ್ರಿಯೆಯಾಗಿದೆ ಎಂದಿದ್ದಾರೆ.