AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ashes 2021: ಸೋಲಿನ ಸುಳಿಗೆ ಸಿಲುಕಿರುವ ಇಂಗ್ಲೆಂಡ್​ಗೆ ಆಘಾತ; ತಂಡದ ಮೂವರು ಬ್ಯಾಟರ್​ಗಳಿಗೆ ಇಂಜುರಿ!

Ashes 2021: ತಂಡದ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ ಮತ್ತು ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಸಿಡ್ನಿ ಟೆಸ್ಟ್‌ನಲ್ಲಿ ಗಾಯಗೊಂಡಿದ್ದಾರೆ. ಹೀಗಾಗಿ ಐದನೇ ಟೆಸ್ಟ್‌ನಲ್ಲಿ ಆಡುವ ಸಾಧ್ಯತೆ ತುಂಬಾ ಕಡಿಮೆಯಾಗಿದೆ. ಅದೇ ಸಮಯದಲ್ಲಿ, ಇತರ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಜಾನಿ ಬೈರ್‌ಸ್ಟೋವ್ ಸಹ ಬ್ಯಾಟಿಂಗ್‌ ವೇಳೆ ಕೈಗೆ ಗಾಯ ಮಾಡಿಕೊಂಡಿದ್ದಾರೆ.

Ashes 2021: ಸೋಲಿನ ಸುಳಿಗೆ ಸಿಲುಕಿರುವ ಇಂಗ್ಲೆಂಡ್​ಗೆ ಆಘಾತ; ತಂಡದ ಮೂವರು ಬ್ಯಾಟರ್​ಗಳಿಗೆ ಇಂಜುರಿ!
ಬಟ್ಲರ್, ಸ್ಟೋಕ್ಸ್
TV9 Web
| Edited By: |

Updated on: Jan 07, 2022 | 6:31 PM

Share

ಜೋ ರೂಟ್ ನಾಯಕತ್ವದ ಇಂಗ್ಲೆಂಡ್ ಕ್ರಿಕೆಟ್ ತಂಡಕ್ಕೆ ಪ್ರತಿ ದಿನ ಬದಲಾಗುತ್ತಿರುವ ಆಸ್ಟ್ರೇಲಿಯಾ ಪ್ರವಾಸವು ಕಷ್ಟಕರವಾಗಿದೆ. ಈಗಾಗಲೇ ಆಶಸ್ ಸರಣಿಯನ್ನು 0-3 ಅಂತರದಿಂದ ಕಳೆದುಕೊಂಡಿರುವ ಇಂಗ್ಲೆಂಡ್ ತಂಡ ಸಿಡ್ನಿಯಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್‌ನಲ್ಲೂ ದುರಂತವನ್ನು ಎದುರಿಸುತ್ತಿದೆ. ಈ ದುರಂತವು ಇಬ್ಬರು ದಿಗ್ಗಜ ಆಟಗಾರರ ಗಾಯದ ರೂಪದಲ್ಲಿ ಬಂದಿದೆ. ತಂಡದ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ ಮತ್ತು ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಸಿಡ್ನಿ ಟೆಸ್ಟ್‌ನಲ್ಲಿ ಗಾಯಗೊಂಡಿದ್ದಾರೆ. ಹೀಗಾಗಿ ಐದನೇ ಟೆಸ್ಟ್‌ನಲ್ಲಿ ಆಡುವ ಸಾಧ್ಯತೆ ತುಂಬಾ ಕಡಿಮೆಯಾಗಿದೆ. ಅದೇ ಸಮಯದಲ್ಲಿ, ಇತರ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಜಾನಿ ಬೈರ್‌ಸ್ಟೋವ್ ಸಹ ಬ್ಯಾಟಿಂಗ್‌ ವೇಳೆ ಕೈಗೆ ಗಾಯ ಮಾಡಿಕೊಂಡಿದ್ದಾರೆ. ಏಕಕಾಲದಲ್ಲಿ ಮೂವರು ಆಟಗಾರರು ಔಟಾಗುವ ಅಪಾಯದ ದೃಷ್ಟಿಯಿಂದ, ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯು ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಸ್ಯಾಮ್ ಬಿಲ್ಲಿಂಗ್ಸ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ.

ಬ್ರಿಟಿಷ್ ಪತ್ರಿಕೆಯ ಈವ್ನಿಂಗ್ ಸ್ಟ್ಯಾಂಡರ್ಡ್ ವರದಿಯ ಪ್ರಕಾರ, ಸಿಡ್ನಿ ಟೆಸ್ಟ್‌ನಲ್ಲಿ ಬಟ್ಲರ್ ಬೆರಳಿಗೆ ಗಾಯವಾಗಿದೆ ಇದರಿಂದಾಗಿ ಎರಡನೇ ಇನ್ನಿಂಗ್ಸ್‌ನಲ್ಲಿ ವಿಕೆಟ್ ಕೀಪಿಂಗ್ ಮಾಡುವುದು ಅವರಿಗೆ ಕಷ್ಟಕರವಾಗಿದೆ. ಆದಾಗ್ಯೂ, ಅವರು ತಂಡದ ಮೊದಲ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್‌ಗೆ ಬಂದರಾದರೂ ಖಾತೆ ತೆರೆಯದೆ ಔಟಾದರು. ಈ ವೇಳೆ ಬ್ಯಾಟ್ ಹಿಡಿಯಲು ಕೂಡ ತೊಂದರೆ ಎದುರಿಸುತ್ತಿದ್ದರು. ಮತ್ತೊಂದೆಡೆ, ಆಲ್‌ರೌಂಡರ್ ಸ್ಟೋಕ್ಸ್ ಕೂಡ ‘ಸೈಡ್ ಸ್ಟ್ರೈನ್’ನೊಂದಿಗೆ ಹೋರಾಡುತ್ತಿದ್ದಾರೆ. ಇದರ ಹೊರತಾಗಿಯೂ, ಮೂರನೇ ದಿನ ಬ್ಯಾಟಿಂಗ್ ಮಾಡಿ ಅವರು 66 ರನ್‌ಗಳ ಯುದ್ಧದ ಇನ್ನಿಂಗ್ಸ್ ಆಡುವ ಮೂಲಕ ತಂಡವನ್ನು ನಿಭಾಯಿಸಿದರು. ಆದಾಗ್ಯೂ, ಅವರು ಎರಡನೇ ಇನ್ನಿಂಗ್ಸ್‌ನಲ್ಲಿ ಬೌಲಿಂಗ್ ಮಾಡದಿರುವುದರ ಜೊತೆಗೆ ಬ್ಯಾಟಿಂಗ್ ಮಾಡುವ ಅವಕಾಶಗಳು ತುಂಬಾ ಕಡಿಮೆಯಾಗಿದೆ.

ಬೈರ್‌ಸ್ಟೋ ಗಾಯ ಸಮಸ್ಯೆಯಾಗಬಹುದೇ? ಟೆಸ್ಟ್ ಪಂದ್ಯದ ಮೂರನೇ ದಿನ, ಬ್ಯಾಟ್ಸ್‌ಮನ್ ಜಾನಿ ಬೈರ್‌ಸ್ಟೋವ್ ಕೂಡ ಕೈ ಇಂಜುರಿ ಸಮಸ್ಯೆಯನ್ನು ಎದುರಿಸಬೇಕಾಯಿತು. ಬ್ಯಾಟಿಂಗ್ ವೇಳೆ ಅವರ ಕೈಗೆ ಚೆಂಡು ಬಿದ್ದಿತು, ಆದರೆ ಇದರ ಹೊರತಾಗಿಯೂ ಅವರು ತಮ್ಮ ಇನ್ನಿಂಗ್ಸ್ ಅನ್ನು ಮುಂದುವರೆಸಿದರು ಮತ್ತು ಅಮೋಘ ಶತಕವನ್ನು ಗಳಿಸಿದರು. ಕೇವಲ 36 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದ ಆಂಗ್ಲ ತಂಡವನ್ನು ಬೈರ್‌ಸ್ಟೋ ಮತ್ತು ಸ್ಟೋಕ್ಸ್ 128 ರನ್‌ಗಳ ಜೊತೆಯಾಟವಾಡಿದರು. ನಾಲ್ಕನೇ ದಿನವೂ ಬೈರ್‌ಸ್ಟೋ ಬ್ಯಾಟಿಂಗ್ ಮುಂದುವರಿಸಲಿದ್ದಾರೆ. ಬಟ್ಲರ್ ಅನುಪಸ್ಥಿತಿಯಲ್ಲಿ ಬೈರ್‌ಸ್ಟೋವ್ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ನಿರ್ವಹಿಸುತ್ತಾರೆ. ಆದರೆ ಅವರ ಗಾಯವು ಇಂಗ್ಲೆಂಡ್‌ಗೆ ವಿಪತ್ತು ಎಂದು ಸಾಬೀತುಪಡಿಸಬಹುದು.

ಬಿಲ್ಲಿಂಗ್ಸ್ ಟೆಸ್ಟ್‌ಗೆ ಪದಾರ್ಪಣೆ ಮಾಡುತ್ತಾರೆಯೇ? ಈ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಹೊಬರ್ಟ್‌ನಲ್ಲಿ ನಡೆಯಲಿರುವ ಐದನೇ ಹಾಗೂ ಕೊನೆಯ ಟೆಸ್ಟ್‌ನಲ್ಲಿ ಇಬ್ಬರೂ ಆಡುವುದು ಕಷ್ಟಕರವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಸ್ಯಾಮ್ ಬಿಲ್ಲಿಂಗ್ಸ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಆಕ್ರಮಣಕಾರಿ ಬಲಗೈ ಬ್ಯಾಟ್ಸ್‌ಮನ್ ಬಿಲ್ಲಿಂಗ್ಸ್ ಪ್ರಸ್ತುತ ಆಸ್ಟ್ರೇಲಿಯಾದಲ್ಲಿ ನಡೆದ ಬಿಗ್ ಬ್ಯಾಷ್ ಲೀಗ್‌ನಲ್ಲಿ ಸಿಡ್ನಿ ಥಂಡರ್ ಪರ ಆಡುತ್ತಿದ್ದರು. ಸಿಡ್ನಿಯೊಂದಿಗಿನ ಅವರ ಪ್ರಯಾಣ ಮುಗಿದು ದೇಶಕ್ಕೆ ಮರಳಲು ಸಿದ್ಧತೆ ನಡೆಸಿತ್ತು, ಆದರೆ ಈಗ ತಂಡವನ್ನು ಸೇರಿಕೊಂಡಿದ್ದಾರೆ. ಬಿಲ್ಲಿಂಗ್ಸ್ ಇನ್ನೂ ಟೆಸ್ಟ್‌ಗೆ ಪದಾರ್ಪಣೆ ಮಾಡಿಲ್ಲ. ಬಟ್ಲರ್ ಮತ್ತು ಬೈರ್‌ಸ್ಟೋವ್ ಹೋಬರ್ಟ್‌ನಲ್ಲಿ ಆಡದಿದ್ದರೆ, ಬಿಲ್ಲಿಂಗ್ಸ್‌ಗೆ ಅವಕಾಶ ಸಿಗಬಹುದು.