MS Dhoni: ಲವ್ ಗುರು ಧೋನಿ; ದೀಪಕ್ ಚಹರ್​ಗೆ ಈ ರೀತಿಯ ಪ್ರಪೋಸ್ ಐಡಿಯಾ ಕೊಟ್ಟಿದ್ದೆ ಧೋನಿಯಂತೆ

| Updated By: ಪೃಥ್ವಿಶಂಕರ

Updated on: Oct 08, 2021 | 4:53 PM

MS Dhoni: ಚಹರ್ ಪ್ಲಾನ್ ತಿಳಿದ ಧೋನಿಗೆ ಈ ಯೋಜನೆ ಇಷ್ಟವಾಗಲಿಲ್ಲ. ಕೂಡಲೇ ಪ್ಲಾನ್ ಬದಲಿಸಿದ ಧೋನಿ, ಲೀಗ್ ಪಂದ್ಯಗಳು ಮುಗಿದ ನಂತರ ತನ್ನ ಗೆಳತಿಗೆ ಪ್ರಪೋಸ್ ಮಾಡುವಂತೆ ಚಹರ್‌ಗೆ ಸಲಹೆ ನೀಡಿದರು.

MS Dhoni: ಲವ್ ಗುರು ಧೋನಿ; ದೀಪಕ್ ಚಹರ್​ಗೆ ಈ ರೀತಿಯ ಪ್ರಪೋಸ್ ಐಡಿಯಾ ಕೊಟ್ಟಿದ್ದೆ ಧೋನಿಯಂತೆ
ಗೆಳತಿಯೊಂದಿಗೆ ಚಹರ್, ಧೋನಿ
Follow us on

ಎಂಎಸ್ ಧೋನಿ ಕೇವಲ ಕ್ರಿಕೆಟ್ ಗುರು ಮಾತ್ರವಲ್ಲ. ಬದಲಿಗೆ ಮಹೀ ಪ್ರೀತಿಯ ಗುರು ಕೂಡ. ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದ ನಂತರ, ಚೆನ್ನೈ ಸೂಪರ್ ಕಿಂಗ್ಸ್ ಆಟಗಾರ ದೀಪಕ್ ಚಹರ್ ತನ್ನ ಗೆಳತಿಗೆ ಸಾರ್ವಜನಿಕವಾಗಿ ತೆರೆದ ಮೈದಾನದಲ್ಲಿ ಪ್ರಪೋಸ್ ಮಾಡಿದ್ದರು. ದೀಪಕ್ ಚಹಾರ್ ತನ್ನ ಗೆಳತಿಗೆ ಪ್ರಪೋಸ್ ಮಾಡುವುದನ್ನು ಇಡೀ ಜಗತ್ತು ನೋಡಿದೆ. ಆದರೆ, ಇದರ ಹಿಂದಿನ ಎಲ್ಲಾ ಯೋಜನೆಗಳನ್ನು ಯಾರು ಮಾಡಿದ್ದಾರೆಂದು ನಿಮಗೆ ತಿಳಿದಿದೆಯೇ? ಹೌದು, ಇದಕ್ಕೆಲ್ಲ ಕಾರಣ ಮಹೇಂದ್ರ ಸಿಂಗ್ ಧೋನಿ. ವಾಸ್ತವವಾಗಿ, ದೀಪಕ್ ಅವರ ಯೋಜನೆ ಬೇರೆಯದೇ ಆಗಿತ್ತು. ಅವರ ನಾಯಕನ ಆಜ್ಞೆಯ ಮೇರೆಗೆ, ತಮ್ಮ ಮನಸ್ಸನ್ನು ಬದಲಾಯಿಸಿದರು. ಗುಂಪು ಹಂತದ ಕೊನೆಯ ಪಂದ್ಯದ ನಂತರ, ಕ್ಯಾಮೆರಾಗಳಿಂದ ತುಂಬಿದ ಕ್ರೀಡಾಂಗಣದಲ್ಲಿ ಚಹರ್ ತಮ್ಮ ಗೆಳತಿಗೆ ಪ್ರಪೋಸ್ ಮಾಡಿದರು.

ಧೋನಿ ದೀಪಕ್ ಚಹರ್ ಅವರ ಪ್ರೀತಿಗೆ ಗುರುವಾದದ್ದು ಹೇಗೆ? ಧೋನಿ ಚಹರ್ ಗೆಳತಿಗೆ ಪ್ರಪೋಸ್ ಮಾಡಲು ಹೇಗೆ ಸಹಾಯ ಮಾಡಿದರು? ಎಂಬುದಕ್ಕೆ ಇಲ್ಲಿದೆ ಉತ್ತರ. ಪ್ಲೇಆಫ್ ಪಂದ್ಯಗಳ ನಂತರ ಚಹರ್ ತನ್ನ ಗೆಳತಿಗೆ ಪ್ರಪೋಸ್ ಮಾಡಲು ಯೋಜಿಸಿದ್ದರು. ಆದರೆ ಅವರು ಈ ವಿಷಯವನ್ನು ತಮ್ಮ ನಾಯಕ ಧೋನಿಗೆ ತಿಳಿಸಿದರು. ಚಹರ್ ಪ್ಲಾನ್ ತಿಳಿದ ಧೋನಿಗೆ ಈ ಯೋಜನೆ ಇಷ್ಟವಾಗಲಿಲ್ಲ. ಕೂಡಲೇ ಪ್ಲಾನ್ ಬದಲಿಸಿದ ಧೋನಿ, ಲೀಗ್ ಪಂದ್ಯಗಳು ಮುಗಿದ ನಂತರ ತನ್ನ ಗೆಳತಿಗೆ ಪ್ರಪೋಸ್ ಮಾಡುವಂತೆ ಚಹರ್‌ಗೆ ಸಲಹೆ ನೀಡಿದರು.

ವರದಿಯ ಪ್ರಕಾರ, ದೀಪಕ್ ಚಹರ್ ತಂದೆ ಕೂಡ ಧೋನಿಯ ಯೋಜನೆಯನ್ನು ದೃಢಪಡಿಸಿದ್ದಾರೆ. ಪ್ಲೇಆಫ್ ಪಂದ್ಯಗಳ ಬದಲಾಗಿ ಲೀಗ್ ಪಂದ್ಯ ಮುಗಿದ ನಂತರ ಚಹರ್ ತನ್ನ ಗೆಳತಿಗೆ ಪ್ರಪೋಸ್ ಮಾಡಿದ್ದು ಧೋನಿಯ ಇಚ್ಛೆಯ ಮೇರೆಗೆ ಎಂದು ಅವರು ಹೇಳಿದರು. ಈ ಬಗ್ಗೆ ಮಾತನಾಡಿದ ಚಹರ್ ತಂದೆ, 180 ದೇಶಗಳು ತಮ್ಮ ಮಗನ ಪ್ರಪೋಸ್ ಸಮಾರಂಭವನ್ನು ನೋಡಿದೆ ಎಂದರು. ಈಗ ಶೀಘ್ರದಲ್ಲೇ ಎರಡೂ ಕುಟುಂಬಗಳು ಕುಳಿತು ಮದುವೆಯ ದಿನಾಂಕವನ್ನು ದೃಢೀಕರಿಸುತ್ತವೆ ಎಂದಿದ್ದಾರೆ.

ತಂಡ ಸೋತರೂ ದೀಪಕ್ ಚಹರ್ ಸಂತೋಷಕ್ಕಿಲ್ಲ ಅಡ್ಡಿ
ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ದೊಡ್ಡ ಸೋಲನ್ನು ಎದುರಿಸಬೇಕಾಯಿತು. ಚೆನ್ನೈ 42 ಎಸೆತಗಳ ಜೊತೆಗೆ 6 ವಿಕೆಟ್​ಗಳಿಂದ ಸೋತಿತು, ಇದು ಹಳದಿ ಜರ್ಸಿಯೊಂದಿಗೆ ತಂಡದ ರನ್ ರೇಟ್ ಮೇಲೆ ಪರಿಣಾಮ ಬೀರಿತು. ಆದರೆ, ಸೋಲಿನ ಈ ನಿರಾಶೆಯ ನಡುವೆ, ಮೈದಾನದಲ್ಲಿ ಧೋನಿಯ ತಂಡಕ್ಕೆ ಚಹರ್ ಮನರಂಜನೆ ನೀಡಿದರು.

Published On - 4:51 pm, Fri, 8 October 21