MS Dhoni: ಮನೆಗೆ ಬಂದ ಹೊಸ ಅತಿಥಿಗಳನ್ನು ಪರಿಚಯಿಸಿದ ಧೋನಿ ಪತ್ನಿ ಸಾಕ್ಷಿ..!

| Updated By: ಝಾಹಿರ್ ಯೂಸುಫ್

Updated on: Jun 13, 2022 | 3:23 PM

MS Dhoni Viral Video: ಧೋನಿ ಮನೆಯಲ್ಲಿ 5 ನಾಯಿಗಳ ಹೊರತಾಗಿ 2 ಕುದುರೆಗಳೂ ಇವೆ. ಎಂಎಸ್ ತನ್ನ ಕುದುರೆಯೊಂದಿಗೆ ಓಡುತ್ತಿರುವ ವೀಡಿಯೊಗಳು ಕಳೆದ ವರ್ಷ ವೈರಲ್ ಆಗಿತ್ತು.

MS Dhoni: ಮನೆಗೆ ಬಂದ ಹೊಸ ಅತಿಥಿಗಳನ್ನು ಪರಿಚಯಿಸಿದ ಧೋನಿ ಪತ್ನಿ ಸಾಕ್ಷಿ..!
MS Dhoni
Follow us on

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಸಾಮಾಜಿಕ ಜಾಲತಾಣಗಳಿಂದ ಅಂತರ ಕಾಯ್ದುಕೊಂಡಿದ್ದಾರೆ. ಆದರೆ ಪತ್ನಿ ಸಾಕ್ಷಿ ಸೋಷಿಯಲ್ ಮೀಡಿಯಾ ಮೂಲಕ ಹಲವು ವಿಚಾರಗಳನ್ನು ಬಹಿರಂಗಪಡಿಸುತ್ತಿರುತ್ತಾರೆ. ಅದರಂತೆ ಇತ್ತೀಚೆಗೆ ತಮ್ಮ ಇನ್ಸ್ಟಾ ರೀಲ್ ಮೂಲಕ, ಮನೆಗೆ ಇಬ್ಬರು ಪುಟ್ಟ ಅತಿಥಿಗಳು ಬಂದಿದ್ದಾರೆ ಎಂದು ಅಭಿಮಾನಿಗಳಿಗೆ ತಿಳಿಸಿದ್ದರು. ಆ ಪುಟ್ಟ ಅತಿಥಿಗಳು ಬೇರೆ ಯಾರೂ ಅಲ್ಲ…ಎರಡು ಮೇಕೆಗಳು. ಧೋನಿ ಫಾರ್ಮ್​ ಹೌಸ್​ಗೆ ಬಂದಿರುವ ಮೇಕೆಗಳ ವಿಡಿಯೋವನ್ನು ಸಾಕ್ಷಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಆಗಿದ್ದು, ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.

ಎಂಎಸ್ ಧೋನಿ ಪ್ರಾಣಿಪ್ರಿಯ ಎಂಬುದು ಗೊತ್ತಿರುವ ವಿಚಾರ. ರಾಂಚಿಯಲ್ಲಿರುವ ತಮ್ಮ ಫಾರ್ಮ್ ಹೌಸ್ ನಲ್ಲಿ ಹಲವು ಪ್ರಾಣಿಗಳಿಗೆ ಆಶ್ರಯ ನೀಡಿದ್ದಾರೆ. ಇದೀಗ ಈ ಪಟ್ಟಿಗೆ ಎರಡು ಮೇಕೆಗಳೂ ಸೇರಿಕೊಂಡಿವೆ. ಸಾಕ್ಷಿ ಧೋನಿ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಎರಡು ಬಿಳಿ ಬಣ್ಣದ ಮೇಕೆಗಳಿದ್ದು, ಈ ಮೇಕೆ ಮರಿಗಳು ತುಂಬಾ ಮುದ್ದಾಗಿವೆ. ಒಂದು ಮೇಕೆ ಕ್ಯಾಮರಾ ಮುಂದೆ ಪೋಸ್ ನೀಡುತ್ತಿದ್ದರೆ ಇನ್ನೊಂದು ಮೇಕೆ ಹಿಂದೆ ನಿಂತು ಹುಲ್ಲು ತಿಂದು ಆನಂದಿಸುತ್ತಿದೆ.

ಇದನ್ನೂ ಓದಿ
KL Rahul: ಗಾಯ ಗಂಭೀರವಲ್ಲ..ಜಿಮ್​ನಲ್ಲಿ ಕಾಣಿಸಿಕೊಂಡ ಕೆಎಲ್ ರಾಹುಲ್..!
Yash Next Movie: ಯಶ್ ಮುಂದಿನ ಚಿತ್ರಕ್ಕೆ ಸೌತ್ ಸುಂದರಿ ನಾಯಕಿ..?
Hardik Pandya: ದಿನೇಶ್ ಕಾರ್ತಿಕ್ ವಿರುದ್ದ ಸೇಡು ತೀರಿಸಿಕೊಂಡ್ರಾ ಹಾರ್ದಿಕ್ ಪಾಂಡ್ಯ?
Dinesh Karthik: ಟೀಮ್ ಇಂಡಿಯಾ ಪರ ಯಾರೂ ಮಾಡದ ದಾಖಲೆ ಬರೆದ ದಿನೇಶ್ ಕಾರ್ತಿಕ್

ಇನ್ನು ರಾಂಚಿಯಲ್ಲಿರುವ ಧೋನಿ ಮನೆಯಲ್ಲಿ 5 ನಾಯಿಗಳ ಹೊರತಾಗಿ 2 ಕುದುರೆಗಳೂ ಇವೆ. ಎಂಎಸ್ ತನ್ನ ಕುದುರೆಯೊಂದಿಗೆ ಓಡುತ್ತಿರುವ ವೀಡಿಯೊಗಳು ಕಳೆದ ವರ್ಷ ವೈರಲ್ ಆಗಿತ್ತು. ಇದೀಗ ಮೇಕೆಯ ವಿಡಿಯೋ ಕೂಡ ವೈರಲ್ ಆಗಿದ್ದು, ಇದುವರೆಗೆ 10 ಲಕ್ಷಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ಇನ್ನು ಈ ವಿಡಿಯೋಗೆ ಅನೇಕರು ವಿಭಿನ್ನವಾಗಿ ಕಾಮೆಂಟಿಸುತ್ತಿರುವುದು ವಿಶೇಷ.

ಅದರಲ್ಲೂ ಕ್ರಿಕೆಟ್​ ಗಾಟ್ ಮನೆಗೆ GOAT (ಮೇಕೆ) ಬಂದಿದೆ’ ಎಂದು ಬರೆದಿದ್ದಾರೆ. ಸಾಮಾನ್ಯವಾಗಿ GOAT ಎಂದರೆ ಸಾರ್ವಕಾಲಿಕ ಶ್ರೇಷ್ಠ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿಯೇ ಎಂಎಸ್ ಧೋನಿಯನ್ನು ಅಭಿಮಾನಿಗಳು ಗಾಟ್ ಎಂದು ಕರೆಯುತ್ತಾರೆ. ಮಹೇಂದ್ರ ಸಿಂಗ್ ಧೋನಿ ಐಪಿಎಲ್ 2022 ರ ಬಳಿಕ ರಾಂಚಿಯಲ್ಲಿರುವ ತಮ್ಮ ಫಾರ್ಮ್‌ಹೌಸ್‌ನಲ್ಲಿ ಸಮಯ ಕಳೆಯುತ್ತಿದ್ದಾರೆ. ಇನ್ನು ಮತ್ತೆ ಧೋನಿಯ ಆಟವನ್ನು ಕಣ್ತುಂಬಿಕೊಳ್ಳಬೇಕಿದ್ದರೆ ಮುಂದಿನ ಸೀಸನ್ ಐಪಿಎಲ್​ವರೆಗೆ ಕಾಯಲೇಬೇಕು.

 

ಕ್ರಿಕೆಟ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

 

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.